ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

ಕೋಟೇಶ್ವರದಲ್ಲಿ ಕೊಡಿ ಹಬ್ಬದ ಸಂಭ್ರಮ

ಕರಾವಳಿ ಕರ್ನಾಟಕದ ವಿಶಿಷ್ಟ ಹಬ್ಬವಿದು. ಕಬ್ಬು ಈ ಹಬ್ಬಕ್ಕೆ ಶ್ರೇಷ್ಟ. ನವ ದಂಪತಿಗಳು ಈ ಹಬ್ಬದ ಪ್ರಮುಖ ಆಕರ್ಷಣೆ . ಬಿದಿರಿನ ರಥವೇ ಈ ಹಬ್ಬದ ವಿಶಿಷ್ಟ . ಕರ್ನಾಟಕದಲ್ಲಿ ಬೇರೆಲ್ಲೂ ಇಲ್ಲದ ವಿಶೇಷ ಆಚರಣೆ ಹಾಗೂ ನಂಬಿಕೆಗೆ ಸಾಕ್ಷಿಯಾಗುವ ಹಬ್ಬವೇ ಕೊಡಿ ಹಬ್ಬ.

ನವ್ಯಶ್ರೀ ಶೆಟ್ಟಿ

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಒಂದು ಪ್ರಮುಖ ಊರು ಕೋಟೇಶ್ವರ. ಇಲ್ಲಿ ಕೋಟಿಲಿಂಗೇಶ್ವರ ಎನ್ನುವ ಪುರಾಣ ಪ್ರಸಿದ್ಧ ದೇವಾಲಯವಿದೆ. ಈ ದೇವಾಲಯದ ಪ್ರರು ವರ್ಷ ನಡೆಯುವ ಕೊಡಿ ಹಬ್ಬ ಜಾತ್ರೆ ಕರಾವಳಿಗರ ಕಾತುರದ ಜಾತ್ರೆಗಳಲ್ಲಿ ಒಂದು.

Kodi habba

ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಕೊಡಿ ಹಬ್ಬ ಆರಂಭವಾಗಿದೆ. ಹಿಂದೆ ದ್ವಜಪುರ ಎಂದು ಕರೆಯಲಾಗುತ್ತಿದ್ದ , ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನ ಪ್ರಾಚೀನ ದೇವಾಲಯ.ಇಲ್ಲಿನ ಕೋಟಿ ತೀರ್ಥ ಕರಾವಳಿ ಕರ್ನಾಟಕದ ಅತ್ಯಂತ ದೊಡ್ಡ ಪುಷ್ಕರಣಿ.ಇಲ್ಲಿ ನಡೆಯುವ ಕೊಡಿ ಹಬ್ಬ ಕರಾವಳಿಯ ವಿಶೇಷ ಹಾಗೂ ವಿಶಿಷ್ಟ ಹಬ್ಬ.

ಹಬ್ಬದ ಆಚರಣೆಗೆ ಒಂದು ಪುರಾಣ ಕಥೆ

Kotilingeshwara temple

ಈ ಹಬ್ಬದ ಆಚರಣೆಗೂ ಒಂದು ಪುರಾಣ ಕಥೆಯಿದೆ. ಪುರಾಣಗಳು ಹೇಳುವಂತೆ ಬಸ್ರೂರಿನ ಮಹಾರಾಜ ವಸು ಚಕ್ರವರ್ತಿಗೆ ಮದುವೆಯಾಗಿ ಬಹಳ ವರ್ಷಗಳ ಕಾಲ ಮಕ್ಕಳಿರಲಿಲ್ಲ. ಇದೇ ಕೊರಗಿನಲ್ಲಿ ರಾಜ, ತನಗೆ ಮಕ್ಕಳಾದರೆ ಕೋಟೇಶ್ವರದಲ್ಲಿ ದೇವಸ್ಥಾನ ನಿರ್ಮಿಸುತ್ತೇನೆ ಎಂದು ಹರಕೆ ಹೊರುತ್ತಾನೆ. ಹೊತ್ತ ಹರಕೆಯಂತೆ ರಾಜನಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ದೇವಾಲಯದ ನಿರ್ಮಾಣಕ್ಕೆ ಮುಂದಾಗುತ್ತಾನೆ.ಆದರೆ ಸಮಯಕ್ಕೆ ಸರಿಯಾಗಿ ಬ್ರಹ್ಮ ರಥ ತಯಾರಾಗುವುದಿಲ್ಲ. ಈ ವೇಳೆ ರಾಜ ಬಿದಿರು ಹಾಗೂ ಕಬ್ಬಿನ ಜಲ್ಲೆ ಬಳಸಿ ರಥ ನಿರ್ಮಿಸುತ್ತಾನೆ.ಆ ಕಾರಣಕ್ಕಾಗಿ ರಥೋತ್ಸವಕ್ಕೆ ಕೊಡಿ ಹಬ್ಬ ಎನ್ನುವ ಹೆಸರು ಬಂತು.

ಕೊಡಿ ತಿಂಗಳಿನಲ್ಲಿ ನಡೆಯುವ ಹಬ್ಬ

ಕುಂದಾಪುರದ ಆಡು ಭಾಷೆಯಲ್ಲಿ ಕೊಡಿ ತಿಂಗಳು ಎಂದು ಕರೆಯಲ್ಪಡುವ ಸಮಯದಲ್ಲಿ ಈ ಹಬ್ಬ ನಡೆಯುತ್ತದೆ.ಸಾಮನ್ಯವಾಗಿ ನವೆಂಬರ್ ತಿಂಗಳ ಅಂತ್ಯ ಅಥವಾ ಡಿಸೆಂಬರ್ ತಿಂಗಳ ಆರಂಭದ ವಾರದಲ್ಲಿ ಇದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ.ಈ ಹಬ್ಬಕ್ಕೆ ಬಂದ ಬಹುತೇಕರು ಕಬ್ಬು ತೆಗೆದುಕೊಳ್ಳದೆ ಮನೆಗೆ ಹಿಂದಿರುಗುವುದಿಲ್ಲ. ದಿನ ಕಾಲ ರಾತ್ರಿ ಹಗಲು ಅದ್ದೂರಿಯಾಗಿ ನಡೆಯುತ್ತದೆ ಹಬ್ಬ.ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯುತ್ತದೆ.

Lighting

ಕೋಟೇಶ್ವರದ ಪೇಟೆಗಳು ಬೆಳಕಿನ ಅಲಂಕಾರದಿಂದ ಕಂಗೊಳಿಸುತ್ತದೆ.ಪ್ರತಿ ದಿನ ಸಹಸ್ರಾರು ಜನ ಆಗಮಿಸುತ್ತಾರೆ. ವಿವಿಧ ಬಗ್ಗೆ ಸರ್ಕಸ್ ಆಟಗಳು ಕೂಡ ಇಲ್ಲಿನ ಪ್ರಮುಖ ಆಕರ್ಷಣೆ.

ನೀವು ಇದನ್ನು ಇಷ್ಟ ಪಡಬಹುದು:ಕುಂದಾಪುರದಲ್ಲಿದೆ ‘ಅಜ್ಜಿ’ ಎನ್ನುವ ವಿಶೇಷ ಆಚರಣೆ

Koteshwara

ಕಬ್ಬು, ಬಿದಿರಿನ ರಥಗಳ ವಿಶಿಷ್ಟತೆ ಜೊತೆಗೆ ಈ ಹಬ್ಬಕ್ಕೆ ಬರುವ ನವ ದಂಪತಿಗಳು ಕೋಟಿ ತೀರ್ಥ ಪುಷ್ಕರಣಿ ಹಾಗೂ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಕಬ್ಬು ಅಥವಾ ಕೊಡಿ ತೆಗೆದುಕೊಂಡು ಹೋದರೆ ವರ್ಷದೊಳಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಹೀಗೆ ಭಕ್ತಿ , ಸಂಪ್ರದಾಯಗಳ ಜೊತೆಗೆ ನಡೆಯುವ ಕೊಡಿ ಹಬ್ಬ ನೋಡಲು ರಾಜ್ಯದ ಮೂಲೆ ಮೂಲೆಯಿಂದ ಜನರು ಆಗಮಿಸುತ್ತಾರೆ .

ನಿನ್ನೆಯಿಂದ ಕೊಡಿ ಹಬ್ಬ ಆರಂಭವಾಗಿದ್ದು,ವಾರಗಳ ಕಾಲ ನಡೆಯಲಿದೆ. ನೀವು ಕೂಡ ಕುಂದಾಪುರದ ಕಡೆಗೆ ಹೋದಾಗ ಕೊಡಿ ಹಬ್ಬಕ್ಕೆ ಒಮ್ಮೆ ಹೋಗಿ ..

ನಾವೂಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button