ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಶುದ್ಧ ನದಿ ಉಮ್ಗೋಟ್; ಮೆಚ್ಚುಗೆ ಪಡೆದ ಜಲಶಕ್ತಿ ಸಚಿವಾಲಯದ ಟ್ವೀಟ್

ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ಒಂದು ನದಿಯ ಫೋಟೋವನ್ನು ಟ್ವೀಟ್ ಮಾಡಿದೆ. ಈ ನದಿಯನ್ನು ಅತ್ಯಂತ ಸ್ವಚ್ಚ ನದಿಯೆಂದು ಬಣ್ಣಿಸಿದೆ. ಈ ಸ್ವಚ್ಛ ಮತ್ತು ಸುಂದರವಾದ ನೀರು ಮೇಘಾಲಯದ ಉಮ್ಗೋಟ್ ನದಿಯದ್ದು. ಈ ನದಿಯು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ವಿಶ್ವದ ಅತ್ಯಂತ ಸ್ವಚ್ಛ ನದಿಗಳಲ್ಲಿ ಇದೂ ಕೂಡ ಒಂದು.

ನವ್ಯಶ್ರೀ ಶೆಟ್ಟಿ

ಕೇಂದ್ರ ಜಲಶಕ್ತಿ ಸಚಿವಾಲಯ ಮೇಘಾಲಯದ ಸದಿ ಫೋಟೋವೊಂದನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ,ಬಳಿಕ ಆ ಫೋಟೋ ಸಾಕಷ್ಟು ವೈರಲ್ ಆಗಿ ನೆಟ್ಟಿಗರ ಪ್ರಶಂಸೆಯನ್ನು ಕೂಡ ಪಡೆದುಕೊಂಡಿದೆ. ನೆಟ್ಟಿಗರ ಪ್ರಶಂಸೆಯನ್ನು ಪಡೆದುಕೊಂಡು ವೈರಲ್ ಆಗಿರುವ ಆ ನದಿಯೇ ಉಮ್ಗೋಟ್ . ಜಲಶಕ್ತಿ ಸಚಿವಾಲಯ ಈ ನದಿಯ ನೀರು ಅತ್ಯಂತ ಸ್ವಚ್ಚ ಹಾಗೂ ನೈರ್ಮಲ್ಯದಿಂದ ಕೂಡಿದೆ ಎಂದು ಬಣ್ಣಿಸಿದೆ. ಈ ನದಿ ಇರುವುದು ಮೇಘಾಲಯ ರಾಜ್ಯದಲ್ಲಿ .

Umnagot

ಮೇಘಾಲಯದ ಶಿಲ್ಲಾಂಗ್ ನಿಂದ 100ಕಿಮೀ ದೂರದಲ್ಲಿರುವ ಈ ನದಿ ವಿಶ್ವದ ಅತ್ಯಂತ ಸ್ವಚ್ಚ ನದಿಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.

ಜಲಶಕ್ತಿ ಸಚಿವಾಲಯ ಟ್ವೀಟ್

ಉಮ್ಗೋಟ್ ನದಿಯ ಬಗ್ಗೆ ಟ್ವೀಟ್ ಮಾಡಿರುವ ಜಲಶಕ್ತಿ ಸಚಿವಾಲಯ ನಮ್ಮ ದೇಶದ ಎಲ್ಲಾ ನದಿಗಳು ಇದರಂತೆ ಸ್ವಚ್ಛವಾಗಿರಲಿ ಎಂದು ಹಾರೈಸುತ್ತೇವೆ. ಮೇಘಾಲಯದ ಜನರಿಗೆ ಧನ್ಯವಾದ ಎಂದು ಟ್ವಿಟ್ ಮಾಡಿದೆ.

ನೀವು ಇದನ್ನು ಇಷ್ಟ ಪಡಬಹುದು:ಮೇಘಾಲಯದಲ್ಲಿ ಸಿಕ್ಕಿವೆ ಬೆಳಕು ಹೊಮ್ಮಿಸುವ ಟಾರ್ಚ್ ನಂಥಾ ಅಣಬೆಗಳು

Ministery of jalashakti

ಮೇಘಾಲಯದ ಈ ನದಿ ನೀರು ಸ್ವಚ್ಛ ಮತ್ತು ಪಾರದರ್ಶಕ. ನೀರಿನ ಆಳದಲ್ಲಿರುವ ಹಸಿರು ಮತ್ತು ಬಂಡೆಗಲ್ಲುಗಳು ಕೂಡ ಮೇಲಿನಿಂದ ಗೋಚರವಾಗುತ್ತಿದೆ. ಫೋಟೋದಲ್ಲಿ ಕಾಣುವಂತೆ ಸ್ವಚ್ಛ ನೀರಿನಲ್ಲಿ ದೋಣಿಯೊಂದು ಸಾಗುತ್ತಿದ್ದು, ಅದರಲ್ಲಿ ಜನರು ಕುಳಿತುಕೊಂಡಿದ್ದಾರೆ. ಇದನ್ನು ನೋಡಿದರೆ ದೋಣಿ ನೀರಿನಲ್ಲಿದೆಯೋ ಅಥವಾ ಗಾಳಿಯಲ್ಲಿ ತೇಲುತ್ತಿದೆಯೋ ಎಂದು ಭಾಸವಾಗುತ್ತದೆ. ಹಾಗೂ ಎಲ್ಲರಿಗೂ ನಾವೊಮ್ಮೆ ಈ ನದಿಯನ್ನು ನೋಡಬೇಕು ,ದೋಣಿ ವಿಹಾರ ಮಾಡಬೇಕು ಎನ್ನುವ ಆಸೆ ಮೂಡದೇ ಇರದು .

ಉಮ್ಗೋಟ್ ನ ಚೆಲುವು

ಈ ನದಿಯು ಪೂರ್ವ ಶಿಲ್ಲಾಂಗ್ ಶಿಖರದಿಂದ ಹುಟ್ಟುತ್ತದೆ, ಸಮುದ್ರ ಮಟ್ಟದಿಂದ 1,800 ಮೀ ಎತ್ತರದಲ್ಲಿದೆ. ಇದು ಡಬ್ಬಿ ಟೌನ್ ಬಳಿಯ ಒಂದು ಭಾಗದಲ್ಲಿ ಬಾಂಗ್ಲಾದೇಶದ ಬಯಲಿಗೆ ಹರಿಯುತ್ತದೆ, ಅಲ್ಲಿ ಸ್ಥಳೀಯ ಖಾಸಿ ನಿವಾಸಿಗಳು ಇದನ್ನು ಡವಿ ನದಿ ಎಂದು ಕರೆಯುತ್ತಾರೆ.ಈ ನದಿ ನದಿಯ ನೀರು ಎಷ್ಟು ಸ್ವಚ್ಚ ಮತ್ತು ನೈರ್ಮಲ್ಯದಿಂದ ಕೂಡಿದೆ ಎಂದರೆ ಅದರ ಮೇಲೆ ತೇಲುತ್ತಿರುವ ದೋಣಿಗಳು ಸ್ಪಟಿಕದ ಗಾಜಿನ ಮೇಲ್ಮೀಯಲ್ಲಿರುವಂತೆ ಕಾಣುತ್ತವೆ. ಪ್ರವಾಸಿಗರು ಇಲ್ಲಿಗೆ ನದಿಯಲ್ಲಿ ದೋಣಿ ವಿಹಾರ ಮತ್ತು ಸುತ್ತಮುತ್ತಲಿನ ಹಸಿರನ್ನು ವೀಕ್ಷಿಸಲು ಬರುತ್ತಾರೆ.ನದಿಯು ಹಿಮಾ ಖೈರಿಮ್ (ಖಾಸಿ ಬೆಟ್ಟಗಳ) ನೊಂದಿಗೆ ರಿ ಸ್ಟಾರ್ (ಜೈಂಟಿಯಾ ಹಿಲ್ಸ್) ನಡುವಿನ ನೈಸರ್ಗಿಕ ಗಡಿಯಾಗಿದ್ದು, ಅದರ ಮೇಲೆ ಒಂದೇ ಸ್ಪ್ಯಾನ್ ತೂಗು ಸೇತುವೆಯನ್ನು ತೂಗುಹಾಕಲಾಗಿದೆ. ಈ ನದಿ ಸುತ್ತಲಿನ ಮೀನುಗಾರರಿಗೆ ಪ್ರಮುಖ ಮೀನುಗಾರಿಕೆ ತಾಣ ಕೂಡ ಹೌದು.

Cleanest river

ಜಲಶಕ್ತಿ ಸಚಿವಾಲಯ ಈ ಸುಂದರ ನದಿಯ ಫೋಟೋವನ್ನು ಟ್ವೀಟ್ ಮೂಲಕ ಹಂಚಿಕೊಂಡ ಬಳಿಕ ಫೋಟೋ 19 ಸಾವಿರಕ್ಕೂ ಹೆಚ್ಚು ಲೈಕ್ ಪಡೆದುಕೊಂಡಿದೆ. 3 ಸಾವಿರಕ್ಕೂ ಅಧಿಕ ರೀಟ್ವಿಟ್ ಆಗಿದೆ.

ನೀವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ,

Related Articles

Leave a Reply

Your email address will not be published. Required fields are marked *

Back to top button