ವಿಂಗಡಿಸದ

ಮಧ್ಯಪ್ರದೇಶದಲ್ಲಿ ಆರಂಭಗೊಂಡ ಮೊದಲ ವಿಶ್ವ ದರ್ಜೆಯ ರೈಲು ನಿಲ್ದಾಣ

ಮಧ್ಯ ಪ್ರದೇಶ ದಲ್ಲಿ ವಿಶ್ವ ದರ್ಜೆಯ ರೈಲು ನಿಲ್ದಾಣ ಆರಂಭವಾಗಿದೆ. ರಾಣಿ ಕಮಲಾಪತಿ ಎನ್ನುವ ಹೆಸರಿನ ಈ ರೈಲು ನಿಲ್ದಾಣ ಅತ್ಯಾಧುನಿಕ ವಾಗಿ ನಿರ್ಮಾಣಗೊಂಡಿದೆ. 450ಕೋಟಿ ರೂ ವೆಚ್ಚದ ಈ ರೈಲು ನಿಲ್ದಾಣ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದೆ.

ನವ್ಯಶ್ರೀ ಶೆಟ್ಟಿ

ಮಧ್ಯಪ್ರದೇಶ ರಾಜ್ಯದಲ್ಲಿ ಮೊದಲ ವಿಶ್ವ ದರ್ಜೆಯ ರೈಲು ನಿಲ್ದಾಣ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಯಾಗಿದೆ. ಆಧುನಿಕ ವಿಮಾನ ನಿಲ್ದಾಣದಂತಹ ಸೌಕರ್ಯವನ್ನು ಈ ರೈಲು ನಿಲ್ದಾಣ ಹೊಂದಿದೆ. ಅತ್ಯಾಧುನಿಕ ಆಗಿರುವ ಈ ರೈಲು ನಿಲ್ದಾಣಕ್ಕೆ ರಾಣಿ ಕಮಲಾಪತಿ ಎಂದು ಹೆಸರಿಡಲಾಗಿದೆ.

World class train

ಈ ರೈಲು ನಿಲ್ದಾಣವನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ₹ 450 ಕೋಟಿ ವೆಚ್ಚದಲ್ಲಿ ಮರು ಅಭಿವೃದ್ದಿಗೊಂಡಿದೆ ಮೊದಲ ವಿಶ್ವ ದರ್ಜೆಯ ರೈಲು

ವಿಶ್ವದ ಮೊದಲ ದರ್ಜೆಯ ರೈಲು .

ರೈಲ್ವೇ ಇಲಾಖೆ ಆಧುನಿಕವಾಗಿ ನಿರ್ಮಾಣ ಆಗಿರುವ ರಾಣಿ ಕಮಲಪತಿ ರೈಲು ನಿಲ್ದಾಣವನ್ನು ಮಧ್ಯಪ್ರದೇಶದ ಮೊದಲ ವಿಶ್ವ ದರ್ಜೆಯ ರೈಲು ನಿಲ್ದಾಣ ಎಂದು ಗುರುತಿಸಿದೆ. ರಾಣಿ ಕಮಲಪತಿ ರೈಲು ನಿಲ್ದಾಣವನ್ನು ಹಸಿರು ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದೆ. ಅಂಗವಿಕಲರಿಗೆ ನೆರವಾಗುವ ರೀತಿಯಲ್ಲಿ ಈ ರೈಲು ನಿಲ್ದಾಣ ನಿರ್ಮಾಣ ಸಹಕಾರಿಯಾಗಿದೆ .

ಮಧ್ಯಪ್ರದೇಶದ ಹಬೀಬ್‌ಗಂಜ್‌ನಲ್ಲಿ ಈ ರೈಲು ನಿಲ್ದಾಣ ನಿರ್ಮಾಣವಾಗಿದೆ. ರಾಣಿ ಕಮಲಪತಿ ರೈಲು ನಿಲ್ದಾಣ ಎಂದು ಮರುನಾಮಕರಣಗೊಂಡ ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಆಧುನಿಕ ವಿಶ್ವ ದರ್ಜೆಯ ವೈಶಿಷ್ಟ್ಯಗಳೊಂದಿಗೆ ಮತ್ತು ಆಧುನಿಕ ಸೌಕರ್ಯಗಳೊಂದಿಗೆ ನಿರ್ಮಿಸಿರುವುದು ವಿಶೇಷ.

ಅತ್ಯಾಧುನಿಕ ಸೌಲಭ್ಯ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ನಿಲ್ದಾಣ ಹೊಂದಿದೆ. ಪ್ಲಾಟ್‌ಫಾರ್ಮ್‌ಗೆ ತಲುಪಲು ನಿಲ್ದಾಣದಲ್ಲಿ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳನ್ನು ಅಳವಡಿಸಲಾಗಿದೆ. ತೆರೆದ ಸಭಾಂಗಣದಲ್ಲಿ 700 ರಿಂದ 1,100 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ರೈಲುಗಳ ಸಂಚಾರದ ಮಾಹಿತಿಗಾಗಿ ನಿಲ್ದಾಣದಾದ್ಯಂತ ವಿವಿಧ ಭಾಷೆಯ ಡಿಸೋ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.

ನೀವು ಇದನ್ನು ಇಷ್ಟ ಪಡಬಹುದು:ದುಬೈನಲ್ಲಿ ನಿರ್ಮಾಣಗೊಂಡಿದೆ ಜಗತ್ತಿನ ಅತಿ ಆಳವಾದ ಈಜುಕೊಳ

Rani kamalapati railway station

ಈ ನಿಲ್ದಾಣವು ಫುಡ್ ಕೋರ್ಟ್‌ಗಳು,

ಈ ರೈಲು ನಿಲ್ದಾಣ ರೆಸ್ಟೋರೆಂಟ್‌ಗಳು, ಹವಾನಿಯಂತ್ರಿತ ಕಾಯುವ ಕೊಠಡಿಗಳು, ಡಾರ್ಮಿಟರಿ, ವಿಐಪಿ ಲಾಂಜ್‌ಗಳನ್ನು ಸಹ ಹೊಂದಿದೆ. ನಿಲ್ದಾಣದಲ್ಲಿ 160 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಪ್ರವಾಸೋದ್ಯಮ ಮತ್ತು ರಾಜ್ಯದ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಲು ಪ್ರವಾಸಿ ಮಾಹಿತಿ ಕೋಣೆಯನ್ನು ಕೂಡ ಇಲ್ಲಿ ಸ್ಥಾಪಿಸಲಾಗುತ್ತದೆ. ಮೊದಲ ಮಹಡಿಯ ನಿರೀಕ್ಷಣಾ ಹಾಲ್‌ನಲ್ಲಿ ದೊಡ್ಡ ಎಲ್‌ಇಡಿ ಪರದೆಯನ್ನು ಕೂಡ ಅಳವಡಿಸಲಾಗುತ್ತದೆ.

Food court

ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಾಹಿತ್ಯ, ಕಾಫಿ-ಟೇಬಲ್ ಪುಸ್ತಕಗಳು ಮತ್ತು ಕರಪತ್ರಗಳು ಹಬೀಬ್‌ಗಂಜ್ ನ ರಾಣಿ ಕಮಲಪತಿ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಸುಲಭವಾಗಿ ಸಿಗಲಿದೆ. ದೇಶದ ಪ್ರಧಾನಿಗಳಿಂದ ಮಹಾರಾಷ್ಟ್ರದಲ್ಲಿ ಉದ್ಘಾಟನೆಯಾದ ಮೊದಲ ವಿಶ್ವ ದರ್ಜೆಯ ಈ ರೈಲು ನಿಲ್ದಾಣ ಅತ್ಯಾಧುನಿಕವಾಗಿದ್ದು ,ಪ್ರವಾಸಿಗರಿಗೆ ನೆರವಾಗಲಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button