Moreಮ್ಯಾಜಿಕ್ ತಾಣಗಳುವಿಂಗಡಿಸದ

ಬೀದರ್ ಗೆ ಭೇಟಿ ನೀಡಿದಾಗ ಈ ತಾಣಗಳಿಗೂ ಹೋಗಿ ಬನ್ನಿ.

ಡೆಕ್ಕನ್ ಪ್ರಸ್ಥಭೂಮಿಯ ಹೃದಯಭಾಗದಲ್ಲಿರುವ ಕರ್ನಾಟಕದ ರಾಜ್ಯಗಳಲ್ಲಿ ಒಂದಾದ ಬೀದರ್ ಜಿಲ್ಲೆಯು (Bidar District) ಐತಿಹಾಸಿಕ ಕಾಲದಿಂದಲೂ ಸಾಂಸ್ಕೃತಿಕ ಪ್ರಭಾವವನ್ನು ಹೊಂದಿರುವ ಸ್ಥಳವಾಗಿದೆ.

ಈ ಬೀದರ್ ಪ್ರದೇಶವನ್ನು ಕಾಕತೀಯರು, ತುಘಲಕರು, ಬಹಮನಿಗಳು, ಬರೀದ್ ಶಾಹಿಗಳು, ಆದಿಲ್ ಶಾಹಿಗಳು, ಮೊಘಲರು ಮತ್ತು ನಿಜಾಮರು ವಿವಿಧ ಅವಧಿಗಳಲ್ಲಿ ಆಳ್ವಿಕೆ ಮಾಡಿದ್ದಾರೆ.

ಈ ಪ್ರದೇಶದ ವಾಸ್ತುಶಿಲ್ಪವು ಹಿಂದೂ, ಟರ್ಕಿಶ್ ಮತ್ತು ಪರ್ಷಿಯನ್ ಶೈಲಿಗಳ ಸಮ್ಮಿಲನವನ್ನು ತೋರಿಸುತ್ತದೆ.

ಬೀದರ್ ಎಂಬ ಹೆಸರು ಹೇಗೆ ಬಂದಿತು?

ಬಿದ್ರಿವೇರ್ ಎಂದು ಕರೆಯಲ್ಪಡುವ ಬಿದಿರಿನ ಕರಕುಶಲ ಉತ್ಪನ್ನಗಳು ಇಲ್ಲಿ ಕಂಡು ಬಂದುದರಿಂದ ಈ ಪ್ರದೇಶಕ್ಕೆ ಬೀದರ್ ಎಂಬ ಹೆಸರು ಬಂದಿದೆ.

ಐತಿಹಾಸಿಕ ನಗರವಾದ ಬೀದರ್ ಗೆ ಭೇಟಿ ನೀಡಿದಾಗ ಈ ತಾಣಗಳಿಗೂ ಹೋಗಿ ಬನ್ನಿ

1.ಬಸವಕಲ್ಯಾಣ: (Basavakalyana)

ಒಂದು ಕಾಲದಲ್ಲಿ ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿದ್ದ ಬಸವಕಲ್ಯಾಣವು ಬೀದರ್ ನಿಂದ ಸುಮಾರು 80 ಕಿಮೀ ದೂರದಲ್ಲಿದೆ. ಇದು 12 ನೇ ಶತಮಾನದಲ್ಲಿ ದೊಡ್ಡ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ಕೇಂದ್ರ ಬಿಂದುವಾಗಿತ್ತು.

ಈ ತಾಣವನ್ನು 12 ನೇ ಶತಮಾನದ ಧಾರ್ಮಿಕ ಸುಧಾರಕರಾದ “ಬಸವೇಶ್ವರರ ಕರ್ಮಭೂಮಿ” ಎಂದು ಕರೆಯಲಾಗುತ್ತದೆ. ಇಲ್ಲಿ ನೀವು ಚಾಲುಕ್ಯರ ಕೋಟೆ, ಕೆಲವು ಗುಹೆಗಳು ಸಹ ವೀಕ್ಷಿಸಬಹುದು.

2. ಬೀದರ್ ಕೋಟೆ: (Bidar Fort)

ಪಟ್ಟಣದ ಪೂರ್ವ ಭಾಗದಲ್ಲಿ ನೆಲೆಗೊಂಡಿರುವ ಬೀದರ್ ಕೋಟೆಯು ಅಸಾಧಾರಣ ಕೋಟೆಗಳಲ್ಲಿ ಒಂದಾಗಿದೆ. ಕೋಟೆಯ ಒಳಭಾಗದಲ್ಲಿ ಅರಮನೆಗಳು, ಮಸೀದಿಗಳು ಮತ್ತು ಇತರ ಕಟ್ಟಡಗಳ ಅವಶೇಷಗಳನ್ನು ನೋಡಬಹುದು.

ಬೀದರ್ ಕೋಟೆಯು ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಕೋಟೆಯು ಮೂರು ಗೇಟ್‌ವೇಗಳನ್ನು ಹೊಂದಿದ್ದು, ಪ್ರವೇಶ ದ್ವಾರವು ಎತ್ತರದ ಗುಮ್ಮಟವನ್ನು ಹೊಂದಿದೆ.

3. ಝರಣಿ ನರಸಿಂಹ ಗುಹೆ ದೇವಾಲಯ:

ಬೀದರ್ ನ ಝರಣಿ ದೇವಾಲಯವು ರಾಜ್ಯದ ಏಕೈಕ ಜಲಾಂತರ್ಗತ ನರಸಿಂಹ ದೇವಾಲಯವಾಗಿದೆ. ಭಕ್ತರು ನರಸಿಂಹನ ದರ್ಶನಕ್ಕಾಗಿ ಎದೆಯ ಮಟ್ಟದ ನೀರಿನಲ್ಲಿ ನಡೆದು ಬರಬೇಕು.

4. ಬಹಮನಿ ಗೋರಿಗಳು: Bahamani Tombs

ಈಜಿಪ್ಟ್‌ನ ಗೋರಿಗಳಂತೆ ಇಲ್ಲಿ ಗೋರಿಗಳನ್ನು ಕಾಣಬಹುದು. ಬಹಮನಿ ಸುಲ್ತಾನರ ಸಾವಿನ ನಂತರ ಇಲ್ಲಿ ಅವರ ಹೆಸರಿನಲ್ಲಿ ಭವ್ಯವಾದ ಗೋರಿಗಳನ್ನು ನಿರ್ಮಿಸಲಾಗುತ್ತಿತ್ತು.

ಬೀದರ್ ನ ಅಷ್ಟೂರಿನಲ್ಲಿ ಹನ್ನೆರಡು ಭವ್ಯವಾದ ಸಮಾಧಿಗಳು ಇದ್ದು,ಇವುಗಳಲ್ಲಿ ಅಹಮದ್ ಷಾ ಮತ್ತು ಅಲಾವುದ್ದೀನ್ ಷಾ II ರ ಸಮಾಧಿಗಳು ಮುಖ್ಯವಾಗಿದೆ

5. ಮಹಲ್ ಗಳು:

ಕಲಾತ್ಮಕ ವೈಭವಗಳಿಂದ ನಿರ್ಮಿಸಲಾಗಿರುವ ಗಗನ್ ಮಹಲ್ (ಹೆವೆನ್ಲಿ ಪ್ಯಾಲೇಸ್), ತಖತ್ ಮಹಲ್ (ಸಿಂಹಾಸನ ಅರಮನೆ), ತರ್ಕಾಶ್ ಮಹಲ್, ರಂಗೀನ್ ಮಹಲ್ ಗಳು ಸುಲ್ತಾನರ ಕಾಲದಲ್ಲಿ ನಿರ್ಮಿಸಲಾದ ಅರಮನೆಗಳಾಗಿವೆ.

6. ಗುರುನಾನಕ್ ಜೀರಾ ಸಾಹಿಬ್:

ದಕ್ಷಿಣ ಭಾರತದ ಕೆಲವೇ ಸಿಖ್ ತೀರ್ಥಯಾತ್ರಾ ಕೇಂದ್ರಗಳಲ್ಲಿ ಒಂದಾದ ಗುರುನಾನಕ್ ಜೀರಾ ಸಾಹಿಬ್ ಭವ್ಯವಾದ ಗುರುದ್ವಾರವನ್ನು ಹೊಂದಿದೆ.

7. ದೇವ ದೇವ ವನ:

ಬೀದರ್‌ನಿಂದ ಸುಮಾರು 6 ಕಿಮೀ ದೂರದಲ್ಲಿ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುವ ಸಸ್ಯೋದ್ಯಾನವಿದು. ಇದು ಸುಮಾರು 200 ಔಷಧೀಯ ಸಸ್ಯಗಳಿಗೆ ನೆಲೆಯಾಗಿದೆ. ಇದನ್ನು 10 ಉದ್ಯಾನಗಳಾಗಿ ವಿಂಗಡಿಸಲಾಗಿದೆ.

ಬೀದರ್ ನಲ್ಲಿ ಇನ್ನೂ ಹಲವಾರು ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ತಾಣಗಳಿವೆ. ಅದರಲ್ಲಿ ಕೆಲವನ್ನು ಮಾತ್ರ ಇಲ್ಲಿ ತಿಳಿಸಲಾಗಿದೆ. ಬೀದರ್ ಗೆ ಭೇಟಿ ನೀಡಿದಾಗ ಈ ತಾಣಗಳಿಗೂ ಹೋಗಿ ಬನ್ನಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button