Moreಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಪ್ರಾಣಿಪಕ್ಷಿಗಳ ಹೆಸರಿನಿಂದ ಪ್ರಸಿದ್ಧವಾಗಿವೆ ಭಾರತದ ಈ ತಾಣಗಳು:

ಅನೇಕ ಸ್ಥಳಗಳು ಸ್ಥಳೀಯ ಸಂಸ್ಕೃತಿ, ಭೌಗೋಳಿಕ ವೈಶಿಷ್ಟ್ಯತೆ, ಐತಿಹಾಸಿಕ ಘಟನೆಗಳು, ಪ್ರಸಿದ್ಧ ವ್ಯಕ್ತಿಗಳಿಂದಾಗಿ ತನ್ನ ಹೆಸರನ್ನು ಪಡೆದುಕೊಂಡಿರುತ್ತವೆ. ಅಂತೆಯೇ ಭಾರತದ ಕೆಲವು ಸ್ಥಳಗಳು ಪ್ರಾಣಿಗಳ ಹೆಸರಿಂದಾಗಿ ಪ್ರಸಿದ್ಧವಾಗಿವೆ.

ತನ್ನ ಆಕರ್ಷಕ ಹಿನ್ನಲೆಯಿಂದಾಗಿ ಪ್ರಾಣಿಗಳ ಹೆಸರು ಪಡೆದು ಕೊಂಡಿರುವ ಭಾರತದ ತಾಣಗಳ ಕುರಿತು ಇಲ್ಲಿದೆ.

1.ಡಾಲ್ಫಿನ್ ನೋಸ್, ತಮಿಳುನಾಡು (dolphin nose, Tamilnadu) :

ಇದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿರುವ ಟ್ರೆಕ್ಕಿಂಗ್ ತಾಣವಾಗಿದೆ. ಇದು ಕೂನೂರಿನಿಂದ 10 ಕಿಮೀ ದೂರದಲ್ಲಿದೆ.

ಸಮುದ್ರ ಮಟ್ಟದಿಂದ ಸುಮಾರು 6,600 ಅಡಿ ಎತ್ತರದಲ್ಲಿರುವ ಈ ತಾಣವು ನೀಲಗಿರಿ ಪರ್ವತಗಳು ಮತ್ತು ಹಚ್ಚ ಹಸಿರಿನ ಟೀ ಎಸ್ಟೇಟ್ ಗಳ ಆಕರ್ಷಕ ನೋಟವನ್ನು ನೀಡುತ್ತದೆ.

ಡಾಲ್ಫಿನ್ ನ ಮೂಗನ್ನು ಹೋಲುವ ಒಂದು ಚಪ್ಪಟೆಯ ಕಲ್ಲಿನಿಂದಾಗಿ ಇದಕ್ಕೆ ಡಾಲ್ಫಿನ್ ನೋಸ್ ಎಂಬ ಹೆಸರು ಬಂದಿದೆ.

2. ಕ್ಯಾಮೆಲ್ಸ್ ಬ್ಯಾಕ್ ರೋಡ್, ಮಸ್ಸೂರಿ: (camels back road mussoorie):

ಉತ್ತರಾಖಂಡ್‌ನ ಮಸ್ಸೂರಿಯಲ್ಲಿರುವ ಪ್ರಸಿದ್ಧ ರಸ್ತೆಯ ಹೆಸರಾಗಿದೆ. ಕುಲ್ರಿ ಬಜಾರ್‌ನಿಂದ ಲೈಬ್ರರಿ ಪಾಯಿಂಟ್‌ವರೆಗೆ ಇರುವ ಅಂಕುಡೊಂಕಾದ ಈ ರಸ್ತೆಯು ಸುಮಾರು 3 ಕಿ.ಮೀ ವರೆಗೆ ವಿಸ್ತರಿಸಿದೆ.

ಇಲ್ಲಿಯ ಸ್ಥಳೀಯರ ನೆಚ್ಚಿನ ವಾಕಿಂಗ್ ತಾಣವಿದು. ಈ ರಸ್ತೆಯ ಕೊನೆಯಲ್ಲಿರುವ ಒಂಟೆಯ ಗೂನು ಬೆನ್ನನ್ನು ಹೋಲುವ ನೈಸರ್ಗಿಕ ಬಂಡೆಯಿಂದಾಗಿ ಇದಕ್ಕೆ ಕ್ಯಾಮೆಲ್ಸ್ ಬ್ಯಾಕ್ ರೋಡ್ ಎಂಬ ಹೆಸರು ಬಂದಿದೆ.

3. ಎಲಿಫೆಂಟಾ ದ್ವೀಪ: (Elephanta Island, Mumbai)

ಭಾರತದ ಮುಂಬೈ ಬಂದರಿನಲ್ಲಿರುವ ಹಲವಾರು ದ್ವೀಪಗಳಲ್ಲಿ ಇದು ಒಂದು. ಓಮನ್ ಸಮುದ್ರದ ದ್ವೀಪದಲ್ಲಿರುವ ‘ಸಿಟಿ ಆಫ್ ಕೇವ್ಸ್’ ಶಿವನ ಆರಾಧನೆಗೆ ಸಂಬಂಧಿಸಿದ ರಾಕ್ ಕಲೆಯ ಸಂಗ್ರಹವನ್ನು ಒಳಗೊಂಡಿದೆ.

ಪ್ರಾಚೀನ ಕಾಲದಲ್ಲಿ ಘರಾಪುರಿ ( ‘ಗುಹೆಗಳ ಸ್ಥಳ’) ಎಂದು ಕರೆಯಲ್ಪಡುತ್ತಿದ್ದ, ಈ ದ್ವೀಪವನ್ನು 16 ನೇ ಶತಮಾನದಲ್ಲಿ ಪೋರ್ಚುಗೀಸ್ ಪರಿಶೋಧಕರು ಪ್ರವೇಶದ್ವಾರದ ಬಳಿ ಕಂಡುಬಂದ ಆನೆಯ ಏಕಶಿಲೆಯ ಬಸಾಲ್ಟ್ ಶಿಲ್ಪವನ್ನು ನೋಡಿದ ನಂತರ ಎಲಿಫೆಂಟಾ ದ್ವೀಪ ಎಂದು ಬದಲಾಯಿಸಿದರು.

4. ಚಿಡಿಯಾ ತಪು, ಅಂಡಮಾನ್ & ನಿಕೋಬಾರ್ ದ್ವೀಪ: (Chidiya Tapu, Andaman & Nicobar Island)

ಚಿಡಿಯಾ ಎಂದರೆ ಹಕ್ಕಿ. ಈ ದ್ವೀಪವು ಹಲವಾರು ಹಕ್ಕುಗಳಿಗೆ ವಾಸಸ್ಥಾನವಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಹಕ್ಕಿ ವೀಕ್ಷಣೆ ಮತ್ತು ಸೂರ್ಯಾಸ್ತದ ಸುಂದರ ನೋಟಕ್ಕೆ ಈ ತಾಣ ಪ್ರಸಿದ್ಧವಾಗಿದೆ.

5. ಈಗಲ್ಸ್ ನೆಸ್ಟ್ ವನ್ಯಜೀವಿ ಅಭಯಾರಣ್ಯ , ಅರುಣಾಚಲ ಪ್ರದೇಶ (Eagles nest Wildlife sanctuary)

ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿರುವ ಹಿಮಾಲಯದ ತಪ್ಪಲಿನಲ್ಲಿರುವ ಸಂರಕ್ಷಿತ ಪ್ರದೇಶವಾಗಿದೆ.

ಈ ವನ್ಯಜೀವಿ ಅಭಯಾರಣ್ಯವು ವರ್ಷಗಳ ಹಿಂದೆ ಅಲ್ಲಿ ನೆಲೆಗೊಂಡಿದ್ದ “ಈಗಲ್” ಎಂಬ ಭಾರತೀಯ ಸೇನಾ ರೆಜಿಮೆಂಟ್‌ನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button