ದೇಶದ ಅತಿ ಉದ್ದನೆಯ ಕೇಬಲ್ ಸೇತುವೆ ಉದ್ಘಾಟಿಸಿದ ಮೋದಿ
ಗುಜರಾತ್‌ನ(Gujarat) ದ್ವಾರಕಾದಲ್ಲಿ (Dwarakà)ನಿರ್ಮಿಸಲಾಗಿರುವ ದೇಶದ ಅತಿ ಉದ್ದದ ಕೇಬಲ್ ಸೇತುವೆಯನ್ನು(Cable Stayed Bridge)ಪ್ರಧಾನಿ ನರೇಂದ್ರ ಮೋದಿ(PM Narendra Modi) ಭಾನುವಾರ ಉದ್ಘಾಟನೆ ಮಾಡಿದ್ದಾರೆ. 2.3 ಕಿಮೀ ಉದ್ದದ ಈ ಸೇತುವೆ, ಓಖಾ(Oka) ಮತ್ತು ಬೇಯ್ತ್ ದ್ವಾರಕಾ ದ್ವೀಪಗಳನ್ನು (Beaith Dwarakà Island)ಸಂಪರ್ಕಿಸುತ್ತದೆ.
ಓಖಾ ಮತ್ತು ಬೇಯ್ತ್ ದ್ವಾರಕಾ ದ್ವೀಪಗಳನ್ನು ಸಂಪರ್ಕಿಸುವ ಈ ‘ಸುದರ್ಶನ ಸೇತುವೆ'(Sudarshan Bridge)979 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದು, 2017ರ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಸುದರ್ಶನ ಸೇತು ವಿನ್ಯಾಸದಿಂದಲೂ ವಿಶಿಷ್ಟತೆಯನ್ನು ಹೊಂದಿದ್ದು ಇದರ ಎರಡೂ ಬದಿಗಳಲ್ಲಿನ ಪಾದಚಾರಿ ಮಾರ್ಗವನ್ನು ಭಗವದ್ಗೀತೆಯ ಶ್ಲೋಕಗಳು (Bhagavadgita Shloka)ಮತ್ತು ಶ್ರೀ ಕೃಷ್ಣನ ಚಿತ್ರಗಳಿಂದ ಅಲಂಕರಿಸಲಾಗಿದೆ.
ಸುದರ್ಶನ ಸೇತು(Sudarshan Setu)ಭಾರತದ ಅತಿ ಉದ್ದದ ಕೇಬಲ್ ಸೇತುವೆಯಾಗಿದ್ದು, ಫುಟ್‌ಪಾತ್‌ನ ಮೇಲಿನ ಭಾಗಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಾಗಿದೆ. ಇದು ಒಂದು ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸುತ್ತದೆ.ಮೂಲತಃ ‘ಸಿಗ್ನೇಚರ್ ಬ್ರಿಡ್ಜ್'(Signature Bridge)ಎಂದು ಕರೆಯಲ್ಪಡುವ ಈ ರಚನೆಯನ್ನು ‘ಸುದರ್ಶನ ಸೇತು’ ಅಥವಾ ಸುದರ್ಶನ ಸೇತುವೆ ಎಂದು ಮರುನಾಮಕರಣ ಮಾಡಲಾಗಿದೆ.
ಒಂದಕ್ಕಿಂತ ಹೆಚ್ಚು ಟವರ್‌ಗಳಿಗೆ ನೇರವಾಗಿ ಕೇಬಲ್‌ಗಳನ್ನು ಸಂಪರ್ಕಿಸುವ ಸ್ವರೂಪದ ಈ ಸೇತುವೆಯು, ನಾಲ್ಕು ಲೇನ್‌ನ ಕೇಬಲ್‌ಗಳನ್ನು ಹೊಂದಿದ್ದು, ಓಖಾ ಮುಖ್ಯಭೂಮಿ ಹಾಗೂ ಬೇಯ್ತ್ ದ್ವಾರಕಾ ದ್ವೀಪಗಳನ್ನು ಸಂಪರ್ಕಿಸುತ್ತದೆ.ಇದು ಎರಡೂ ದಿಕ್ಕುಗಳಲ್ಲಿ ಎರಡು ಲೇನ್‌ಗಳೊಂದಿಗೆ ಒಟ್ಟು 27.2 ಮೀಟರ್ (89 ಅಡಿ) ಅಗಲವಿದೆ.
ಸೇತುವೆಯ ಎರಡೂ ಬದಿಗಳಲ್ಲಿ 2.5 ಮೀಟರ್ (8 ಅಡಿ) ಅಗಲದ ಫುಟ್‌ಪಾತ್‌ಗಳಿವೆ. ವಿಶಿಷ್ಟ ಸಾಂಸ್ಕೃತಿಕ ಸ್ಪರ್ಶ ನೀಡಲಾಗಿದೆ.ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವುಳ್ಳ ಸೋಲಾರ್ ಪ್ಯಾನೆಲ್‌ಗಳನ್ನು ಪಾದಚಾರಿ ಮಾರ್ಗದ ಇಕ್ಕೆಲಗಳಲ್ಲಿ ಅಳವಡಿಸಲಾಗಿದೆ
ಭಕ್ತರು ಹಾಗೂ ಪ್ರವಾಸಿಗರ ಪ್ರಯಾಣದ ಸಮಯವನ್ನು ತಗ್ಗಿಸುವುದು ಸುದರ್ಶನ ಸೇತುವೆಯ ಗುರಿಯಾಗಿದ್ದು, ದ್ವಾರಕಾದಲ್ಲಿ ಇದು ಮತ್ತೊಂದು ಪ್ರಮುಖ ಪ್ರವಾಸಿ ತಾಣವಾಗಲಿದೆ. ಬೇಯ್ತ್ ದ್ವಾರಕಾ ದ್ವೀಪದಲ್ಲಿನ ಸುಮಾರು 8500 ನಿವಾಸಿಗಳಿಗೆ, ಈ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡುವ ಅಂದಾಜು 20 ಲಕ್ಷ ಯಾತ್ರಾರ್ಥಿಗಳಿಗೆ ಅನುಕೂಲತೆ ಕಲ್ಪಿಸಲಿದೆ.
ಬೇಟ್ ದ್ವಾರಕಾದಲ್ಲಿ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ್ ದೇವಸ್ಥಾನವಿದೆ. ಅಲ್ಲಿಯ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಹಗಲಿನಲ್ಲಿ ಮಾತ್ರ ದೋಣಿಯಲ್ಲಿ ಪ್ರಯಾಣಿಸಬಹುದಾಗಿತ್ತು. ಆದರೆ ಇದೀಗ ಹೊಸ ಸೇತುವೆಯ ನಿರ್ಮಾಣದಿಂದ ದಿನದ ಯಾವ ಸಮಯದಲ್ಲಿ ಬೇಕಿದ್ದರೂ ಸಂಚರಿಸಬಹುದು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.