ಮ್ಯಾಜಿಕ್ ತಾಣಗಳುವಿಂಗಡಿಸದಸ್ಮರಣೀಯ ಜಾಗ

ಸ್ಥಳೀಯ ವಿಶೇಷತೆ ಕಾರಣಕ್ಕೆ ಬೇರೆ ಬೇರೆ ಹೆಸರಿನಿಂದ ಜನಪ್ರಿಯತೆ ಪಡೆದ ಜಿಲ್ಲೆಗಳು. ಭಾಗ -2

ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ವಿಶೇಷಗಳಿರುತ್ತವೆ. ಸ್ಥಳೀಯ ವಿಶೇಷತೆ ಕಾರಣಕ್ಕೆಅದೆಷ್ಟೋ ಬಾರಿ ಆ ಜಿಲ್ಲೆಗಳು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತವೆ. ಮತ್ತೆ ಕೆಲವೊಮ್ಮೆ ವಿಶೇಷ ಹೆಸರಿನಿಂದ ಗುರುತಿಸಿಕೊಳ್ಳುತ್ತವೆ.

( ಮುಂದುವರೆದ ಭಾಗ)

ಮಲೆನಾಡು ಹೆಬ್ಬಾಗಿಲು

ಮಲೆನಾಡಿನ ಹೆಬ್ಬಾಗಿಲು ಎಂದು ಶಿವಮೊಗ್ಗ ( Shivamogga)ಜಿಲ್ಲೆಯನ್ನು ಕರೆಯುತ್ತಾರೆ. ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವುದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವುದರಿಂದ ಈ ಜಿಲ್ಲೆಗೆ ಮಲೆನಾಡಿನ ಹೆಬ್ಬಾಗಿಲು ಎನ್ನುವ ಹೆಸರು ಬಂದಿದೆ.

Shivamogga

ಸಾಂಸ್ಕೃತಿಕ ನಗರಿ

ಮೈಸೂರು(Mysore )ಜಿಲ್ಲೆಯನ್ನು ಸಾಂಸ್ಕೃತಿಕ ನಗರಿ ಮತ್ತು ಅರಮನೆ ನಗರಿ ಎಂದು ಕರೆಯುತ್ತಾರೆ. ಈ ಜಿಲ್ಲೆಯನ್ನು ಅರಮನೆ ನಗರಿ ಎಂದು ಕರೆಯುವುದಕ್ಕೆ ಕಾರಣ ಏನು ಅನ್ನೋದು ನಿಮಗೆಲ್ಲ ಗೊತ್ತೇ ಇರುತ್ತದೆ ಬಿಡಿ. ಮೈಸೂರು ವಂಶಸ್ಥರು ಕಟ್ಟಿಸಿದ ಅಂಬಾ ವಿಲಾಸ ಅರಮನೆ ಕಾರಣಕ್ಕೆ ಅರಮನೆ ನಗರಿ ಎಂದು ಕರೆಯುತ್ತಾರೆ.

Mysore

ರಾಜರ ಕಾಲದ ಸ್ಮಾರಕಗಳು, ಇಂದಿಗೂ ಇಲ್ಲಿನ ಜನ ಅನುಸರಿಸಿಕೊಂಡು ಬಂದಿರುವ ಸಂಸ್ಕೃತಿ ಜೊತೆಗೆ ಅದ್ಧೂರಿ ದಸರಾದ ಕಾರಣಕ್ಕೆ ಈ ಜಿಲ್ಲೆಯನ್ನು ಸಾಂಸ್ಕೃತಿಕ ರಾಜಧಾನಿ ಅಥವಾ ಸಾಂಸ್ಕೃತಿಕ ನಗರಿ ಎನ್ನುತ್ತಾರೆ.

ಗಂಡು ಮೆಟ್ಟಿದ ನಾಡು

ಹುಬ್ಬಳ್ಳಿ ಜಿಲ್ಲೆಯನ್ನು ಗಂಡು ಮೆಟ್ಟಿದ ನಾಡು ಎಂದು ಕರೆಯುತ್ತಾರೆ. ಜನರು ದೈರ್ಯವಂತರು , ಕಷ್ಟಪಡುವ ಪ್ರವೃತ್ತಿಯವರು , ನೇರ ನುಡಿಯುಳ್ಳವರು . ಅವರ ಮಾತಿನಲ್ಲಿ ಕೂಡ ಬಹಳ ಒರಟುತನವಿದ್ದರೂ ಒಳ್ಳೆಯ ಮನಸ್ಸನ್ನು ಹೊಂದಿರುತ್ತಾರೆ ಎನ್ನುವ ಕಾರಣಕ್ಕೆ ಗಂಡು ಮೆಟ್ಟಿದ ನಾಡು ಎಂದು ಕರೆಯುತ್ತಾರೆ.

Hubballi

ಸಕ್ಕರೆ ನಾಡು

ಮಂಡ್ಯ(Mandya )ಜಿಲ್ಲೆಯನ್ನು ಕರ್ನಾಟಕದ ಸಕ್ಕರೆ ನಾಡು ಎಂದು ಕರೆಯುತ್ತಾರೆ. ಈ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಕಬ್ಬು ಬೆಳೆಯಲಾಗುತ್ತದೆ. ಮಾತ್ರವಲ್ಲದೆ ರಾಜ್ಯದ ಮೊದಲ ಸಕ್ಕರೆ ಕಾರ್ಖಾನೆಯು ಮಂಡ್ಯದಲ್ಲಿ 1933 ರಲ್ಲಿ ಪ್ರಾರಂಭವಾಯಿತು.. ಈ ಎಲ್ಲ ಕಾರಣಗಳಿಂದ ಈ ಜಿಲ್ಲೆಯನ್ನು ಸಕ್ಕರೆ ನಾಡು ಎಂದು ಕರೆಯುತ್ತಾರೆ.

ನೀವು ಇದನ್ನು ಇಷ್ಟ ಪಡಬಹುದು:ಸ್ಥಳೀಯ ವಿಶೇಷತೆಗಳಿಂದ ಈ ಜಿಲ್ಲೆಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ

Mandya

ರೇಷ್ಮೆ ನಗರಿ

ರಾಮನಗರ (Ramanagara)ಜಿಲ್ಲೆಯನ್ನು ರೇಷ್ಮೆ ನಗರಿ ಎಂದು ಕರೆಯುತ್ತಾರೆ. ಯಾಕಂದ್ರೆ ರಾಜ್ಯದಲ್ಲಿ ಈ ಜಿಲ್ಲೆಯಲ್ಲಿಯೇ ಅಧಿಕ ರೇಷ್ಮೆಯನ್ನು ಬೆಳೆಯುತ್ತಾರೆ. ಮಾತ್ರವಲ್ಲದೆ ರಾಮನಗರದ ರೇಷ್ಮೆ ಗೂಡಿನ ಮಾರುಕಟ್ಟೆಯು ಏಷ್ಯಾದಲ್ಲಿಯೇ ಅತಿ ದೊಡ್ಡ ರೇಷ್ಮೆ ಗೂಡು ಎನ್ನುವ ಹೆಗ್ಗಳಿಕೆಯನ್ನು ಪಡೆದಿದೆ.

Ramangara

ಚಿನ್ನದ ನಾಡು

ಕೋಲಾರವನ್ನು (Kolara )ಚಿನ್ನದ ನಾಡು ಎಂದು ಕರೆಯುತ್ತಾರೆ. ಯಾಕಂದ್ರೆ ರಾಜ್ಯದಲ್ಲಿ ಮೊದಲು ಚಿನ್ನ ಪತ್ತೆಯಾಗಿತ್ತು ಇದೆ ಜಿಲ್ಲೆಯಲ್ಲಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಚಿನ್ನದ ಅದಿರಿನ ಸಂಶೋಧನೆಯಲ್ಲಿ ನಿಲ್ಲಿಸಿದರು ಕೂಡ ಈ ಜಿಲ್ಲೆ ಚಿನ್ನದ ನಾಡು ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. 

Kolara

ಗೊಮ್ಮಟ ನಗರಿ

ವಿಜಯಪುರ(Vijayapura) ಜಿಲ್ಲೆಯನ್ನು ಗೊಮ್ಮಟ ನಗರಿ ಎಂದು ಕರೆಯುತ್ತಾರೆ. ಅದಕ್ಕೆ ಮೂಲ ಕಾರಣವೇ ಈ ಜಿಲ್ಲೆಯಲ್ಲಿರುವ ಗೋಲ್ ಗುಂಬಜ್. ಆದಿಲ್ ಶಾಹಿ ಈ ಗೋಲ್ ಗುಂಬಜ್ ನಿರ್ಮಿಸಿದ್ದಾನೆ. ಇದನ್ನು ‘ಪಿಸುಗುಟ್ಟುವ ಗ್ಯಾಲರಿ’ ಎಂದು ಕರೆಯುತ್ತಾರೆ.

Vijayapura

ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಹತ್ತು ಸಲ ಪ್ರತಿಧ್ವನಿಸುತ್ತದೆ. ಇದೇ ಕಾರಣಕ್ಕೆ ಗೋಲ್ ಗುಂಬಜ್ ಜಗತ್ತಿನಲ್ಲಿರುವ ಏಳು ಅದ್ಭುತಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯನ್ನು ಪಡೆದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button