ಸಿದ್ಧವಾಗುತ್ತಿದೆ ದೇಶದ ಮೊದಲ “ಜುರಾಸಿಕ್ ಪಾರ್ಕ್”; ಎಲ್ಲಿ? ಇಲ್ಲಿದೆ ಮಾಹಿತಿ
ಡೈನೋಸಾರ್ ಗಳ ರೋಮಾಂಚನಕಾರಿ ಪ್ರತಿಕೃತಿಯನ್ನು ವೀಕ್ಷಿಸಲು ನೀವು ಬಯಸಿದರೆ ದೇಶದ ಈ ನಗರಕ್ಕೆ ಭೇಟಿ ನೀಡಬೇಕು. ದೆಹಲಿಯಲ್ಲಿ ಶೀಘ್ರದಲ್ಲಿಯೇ ತೆರೆಯಲಿದೆ ದೇಶದ ಮೊದಲ “ಜುರಾಸಿಕ್ ಉದ್ಯಾನ” (Jurassic Park)
ಈ ಡೈನೋಸಾರ್ ಉದ್ಯಾನವು (dinosaur park) ಮಕ್ಕಳ ಮೋಜಿನ ತಾಣವಾಗಲಿದೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ ದೆಹಲಿಯ (Delhi) ಮುನ್ಸಿಪಲ್ ಕಾರ್ಪೊರೇಷನ್ ಸರಾಯ್ ಕಾಲೇ ಖಾನ್ನಲ್ಲಿ (Sarai Kale Khan) ಈ ಉದ್ಯಾನ ಸಾರ್ವಜನಿಕರಿಗೆ ತೆರೆಯಲಿದೆ.
ಈ ಉದ್ಯಾನವನವು 9 ರಿಂದ 65 ಅಡಿ ಎತ್ತರ ಮತ್ತು 54 ಅಡಿ ಉದ್ದದ 54 ಬೃಹತ್ ಡೈನೋಸಾರ್ ಪ್ರತಿಕೃತಿಗಳ ಸಂಗ್ರಹವನ್ನು ಹೊಂದಿರುತ್ತದೆ.
ಈ ಉದ್ಯಾನದ ವಿಶೇಷತೆ ಎಂದರೆ ಇಲ್ಲಿಯ ಪ್ರತಿಕೃತಿಗಳನ್ನು ಸಂಪೂರ್ಣವಾಗಿ ಸ್ಕ್ರ್ಯಾಪ್ ಮೆಟಲ್, ತಿರಸ್ಕರಿಸಿದ ಟೈರ್ಗಳು, ಕಾರುಗಳ ಅವಶೇಷಗಳು ಮತ್ತು ತೋಟಗಾರಿಕೆ ತ್ಯಾಜ್ಯದಿಂದ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಡೈನೋಸಾರ್ ಪ್ರತಿಕೃತಿಗಳು ಚಲನೆಯನ್ನು ಪ್ರದರ್ಶಿಸುವ ಜೊತೆಗೆ ಘರ್ಜಿಸುವುದು, ಬೆಂಕಿಯನ್ನು ಉಗುಳುವುದು ಸೇರಿದಂತೆ ಎಲ್ಲಾ ರೀತಿಯ ಪ್ರಭಾವಶಾಲಿ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ.
ಈ ಉದ್ಯಾನವು ಜುರಾಸಿಕ್ ಪಾರ್ಕ್ ಸಿನಿಮಾದಿಂದ ಪ್ರೇರಿತವಾಗಿದ್ದು, ಇಲ್ಲಿ ಬೆಳಕು ಮತ್ತು ಧ್ವನಿ ಪರಿಣಾಮಗಳನ್ನು ಸಂಯೋಜಿಸಲಾಗಿದೆ. ಡೈನೋಸಾರ್ಗಳು ವಾಹನಗಳನ್ನು ಪುಡಿಮಾಡುವಂತಹ ಚಲನಚಿತ್ರದ ಕೆಲವೊಂದು ಸಾಂಪ್ರದಾಯಿಕ ದೃಶ್ಯಗಳನ್ನು ಇಲ್ಲಿ ಮರುಸೃಷ್ಟಿಸಲಾಗಿದೆ.
ವರದಿಗಳ ಪ್ರಕಾರ, ಉದ್ಯಾನವು 80% ರಷ್ಟು ಪೂರ್ಣಗೊಂಡಿದೆ. ಉದ್ಯಾನದ ನಿರ್ಮಾಣಕ್ಕಾಗಿ 300 ಟನ್ ತ್ಯಾಜ್ಯ ವಸ್ತುಗಳನ್ನು ಬಳಸಲಾಗಿದೆ.
15 ಜಾತಿಯ ಡೈನೋಸಾರಸ್ ಪ್ರತಿಕೃತಿಗಳು:
ಉದ್ಯಾನವು ಕೋಲೋಫಿಸಿಸ್, ಬ್ರಾಂಟೊಸಾರಸ್, ವೆಲೋಸಿರಾಪ್ಟರ್, ಸಿಂಟಾಸಾರಸ್, ಡೀನೋಸುಚಸ್, ರಾಜಸಾರಸ್, ಪ್ರೆನೋಸೆಫೇಲ್, ಆಂಕೈಲೋಸಾರಸ್, ಟ್ರೈಸೆರಾಟೋಪ್ಸ್.
ಟೈರನೊಸಾರಸ್, ಅಮರ್ಗಸಾರಸ್, ಸ್ಟೈರಾನೋಸಾರಸ್, ಡಿಪ್ಲೋಸಾರಸ್, ಡೈನೋಸಾರಸ್, ಕೋಲೋಫಿಸಿಸ್ ಸೇರಿದಂತೆ 15 ಜಾತಿಯ ಡೈನೋಸಾರ್ಗಳನ್ನು (Dinosaurs) ಪ್ರತಿನಿಧಿಸುವ ಪ್ರತಿಕೃತಿಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.
ಮೂರು ಸ್ಟೆಗೊಸಾರಸ್ ಡೈನೋಸಾರ್ಗಳ ಪ್ರತಿಕೃತಿಗಳು ಪ್ರವೇಶದ್ವಾರದಲ್ಲಿದ್ದು, ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಉದ್ಯಾನವನವು ಸಣ್ಣ ಗರಿಗಳಿರುವ ವೆಲೋಸಿರಾಪ್ಟರ್ ಡೈನೋಸಾರ್ಗಳ ಗುಂಪನ್ನು ಹೊಂದಿದೆ.
ಜುರಾಸಿಕ್ ಪಾರ್ಕ್ ಫ್ರ್ಯಾಂಚೈಸ್ನ ಕುಖ್ಯಾತ ಟೈರನೊಸಾರಸ್ ರೆಕ್ಸ್ನ 53×50 ಅಡಿ ಪ್ರತಿಕೃತಿಯು ಇಲ್ಲಿದ್ದು, ಈ ಪ್ರತಿಕೃತಿಯು ಬೆಂಕಿಯನ್ನು ಉಗುಳುವುದು ಮತ್ತು ಕಣ್ಣುಗಳನ್ನು ಮಿಟುಕಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಮನರಂಜನಾ ಚಟುವಟಿಕೆಗಳು:
ವೇಸ್ಟ್-ಟು-ವಂಡರ್ ಪಾರ್ಕ್ನ ಪಕ್ಕದಲ್ಲಿ 3.5 ಎಕರೆಗಳಷ್ಟು ಡೈನೋಸಾರ್ ಪಾರ್ಕ್ ವ್ಯಾಪಿಸಿದ್ದು, ಇಲ್ಲಿ ಮಕ್ಕಳಿಗಾಗಿ ವಿವಿಧ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಮಕ್ಕಳಿಗೆ ಪ್ರತ್ಯೇಕವಾಗಿ ಸ್ಲೈಡ್ಗಳು, ಕ್ಲೈಂಬಿಂಗ್ ಹಗ್ಗಗಳು ಮತ್ತು ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಸ್ವಿಂಗ್ಗಳು ಇಲ್ಲಿ ಇರಲಿವೆ.
Qಈ ಉದ್ಯಾನವನವು 60-ಅಡಿ-ಅಗಲ, 25-ಅಡಿ-ಎತ್ತರದ ಸ್ಪಿನೋಸಾರಸ್ ಪ್ರತಿಕೃತಿಯನ್ನು ಹೊಂದಿದೆ. ಇಲ್ಲಿ ಇರುವ 65-ಅಡಿ ಎತ್ತರದ ಡಿಪ್ಲೋಡೋಕಸ್ (diplodocus) ಪ್ರತಿಕೃತಿಯು ಉದ್ಯಾನದ ಅತಿ ಎತ್ತರದ ಪ್ರತಿಕೃತಿಯಾಗಿದೆ.
ಇದರ ಬಾಲವು ಸ್ಲೈಡ್ ಆಗಿ ರೂಪಾಂತರಗೊಳ್ಳುವಂತೆ ರಚಿಸಲಾಗಿದೆ. ಈ ಉದ್ಯಾನದ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ನೈಜತೆಗೆ ಹತ್ತಿರಗೊಳಿಸಲು ಮರಗಳು, ಪೊದೆಗಳು ಮತ್ತು ಹುಲ್ಲಿನ ಆಯಕಟ್ಟನ್ನು ರಚಿಸಿ ಉದ್ಯಾನದ ಭೂದೃಶ್ಯವನ್ನು ಇನ್ನಷ್ಟು ಸುಂದರಗೊಳಿಸಲಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.