ದೂರ ತೀರ ಯಾನವಂಡರ್ ಬಾಕ್ಸ್ವಿಂಗಡಿಸದ

ವಿದೇಶಗಳಿಗೆ ವಿದ್ಯಾಭ್ಯಾಸಕ್ಕೆ ಹೊರಟಿರುವ ವಿದ್ಯಾರ್ಥಿಗಳಿಗೆ ಅಲ್ಲಿನ ದೇಶಗಳು ವಿಧಿಸಿರುವ ನಿಯಮಗಳು ಇಲ್ಲಿದೆ.

ಭಾರತದ ಹಲವು ವಿದ್ಯಾರ್ಥಿಗಳು ಉನ್ನತ  ವಿದ್ಯಾಭ್ಯಾಸ ಕಾರಣದಿಂದ ವಿದೇಶಗಳಲ್ಲಿ ನೆಲೆಸಿದ್ದರು. ಆದರೆ ಕೊರೋನಾ ಕಾರಣದಿಂದ ಶಿಕ್ಷಣ ಸಂಸ್ಥೆಗಳು ಬಂದ್ ಆಗಿದ್ದವು. ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಭಾರತದಲ್ಲಿ ಉಳಿದುಕೊಳ್ಳುವಂತಾಯಿತು.

ಆದರೆ ವೈರಸ್ ಪ್ರಕರಣ ಸಂಖ್ಯೆ ಇಳಿಕೆ ಆಗುತ್ತಿರುವ ಕಾರಣದಿಂದ ವಿದೇಶಗಳಲ್ಲಿ  ಓದುತ್ತಿರುವ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲು ಸಿದ್ಧರಾಗಿದ್ದಾರೆ. ವಿವಿಧ ದೇಶಗಳು ತನ್ನ ದೇಶಕ್ಕೆ ಬರುವ ವಿದ್ಯಾರ್ಥಿಗಳಿಗೆ ವಿಧಿಸಿರುವ ನಿಯಮ ಇಲ್ಲಿದೆ .

  • ನವ್ಯಶ್ರೀ ಶೆಟ್ಟಿ

ಉನ್ನತ ವಿದ್ಯಾಭ್ಯಾಸ ಕಾರಣದಿಂದ ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯ ವಿದ್ಯಾರ್ಥಿಗಳು ಕೊರೋನಾ ಕಾರಣದಿಂದ ಹುಟ್ಟೂರಿಗೆ ಮರಳುವಂತೆ ಆಗಿತ್ತು. ಆದರೆ ಇದೀಗ ವೈರಸ್ ಇಳಿಕೆ ಕಾರಣದಿಂದ ಆಗಸ್ಟ್ ತಿಂಗಳಲ್ಲಿ ಆರಂಭವಾಗುವ ಭೌತಿಕ ತರಗತಿಗೆ ಹಾಜರಾಗಲು ಸಿದ್ಧರಾಗಿದ್ದಾರೆ. ವಿದೇಶ ಪ್ರಯಾಣ ಮಾಡುವ ವಿದ್ಯಾರ್ಥಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಯಿಂದ ಅನುಮತಿ ಪಡೆದ ಲಸಿಕೆಯನ್ನು ಕಡ್ಡಾಯ ಆಗಿ ಪಡೆದಿರಬೇಕು. ಜೊತೆಗೆ ಕೆಲವು ದೇಶ ತನ್ನ ದೇಶಕ್ಕೆ ಬರುವ ವಿದ್ಯಾರ್ಥಿಗಳಿಗೆ ನಿಯಮ ವಿಧಿಸಿದೆ.

ಯು.ಎಸ್. ಎ (U.S.A)

ಯು. ಎಸ್. ಎ ದೇಶವು ತನ್ನ ದೇಶಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳನಿಂದ ತನ್ನ ದೇಶಕ್ಕೆ ಬರಲು ಅನುಮತಿ ನೀಡಿದೆ. ಆಗಸ್ಟ್ ತಿಂಗಳಿಂದ ಭೌತಿಕ ತರಗತಿಗಳನ್ನು ಆರಂಭಿಸುವ ಬಗ್ಗೆ ಯು. ಎಸ್. ಎ ಸರಕಾರ ನಿರ್ಧರಿಸಿದ್ದು , ಲಸಿಕೆಯನ್ನು ಕಡ್ಡಾಯಗೊಳಿಸಿದೆ.

U.S.A Covid-19 Pandemic Higher Education Vaccination

ಭಾರತ ಈಗಾಗಲೇ ಯು. ಎಸ್. ಎ ದೇಶದ ಕೆಂಪು ಪಟ್ಟಿಯ ಸಾಲಿನಲ್ಲಿದೆ. ಆದರೆ ,  ಯು. ಎಸ್. ಎ ದೇಶ ಆದ್ಯತೆಯ ಮೇರೆಗೆ ವಿದ್ಯಾರ್ಥಿಗಳಿಗೆ ಅನುಮತಿ ನೀಡಿದೆ.  ಆಗಸ್ಟ್ ತಿಂಗಳಿನಿಂದ ಆರಂಭವಾಗುವ ತರಗತಿಗಳಿಗೆ 12-16 ವಾರಗಳ ಅಂತರದಲ್ಲಿ ಕೋವಿಡ್ ಶೀಲ್ಡ್  ಲಸಿಕೆ ಪಡೆದುಕೊಂಡಿರಬೇಕು.

ಫ್ರಾನ್ಸ್ (france)

ಫ್ರಾನ್ಸ್ ದೇಶವು , ಕೊರೋನಾ ಸಂಖ್ಯೆ ಕಡಿಮೆ ಇರುವ ದೇಶಗಳ ಪ್ರಯಾಣಿಕರಿಗೆ  ತನ್ನ ದೇಶಕ್ಕೆ ಬರಲು ಯಾವುದೇ ನಿರ್ಬಂಧಗಳಿಲ್ಲದೆ ಅನುಮತಿ ನೀಡಿದೆ. ಆದರೆ ಭಾರತ ಸರಕಾರವು ಫ್ರಾನ್ಸ್ ದೇಶವು ವಿಧಿಸಿರುವ ಹಸಿರು ಪಟ್ಟಿಯ ಸಾಲಿನಲ್ಲಿ ಇಲ್ಲ. ಈ ಕಾರಣದಿಂದ ಭಾರತದಿಂದ ಫ್ರಾನ್ಸ್ ದೇಶಕ್ಕೆ ಉನ್ನತ ವಿದ್ಯಾಭ್ಯಾಸಕ್ಕೆ ತೆರಳುವ  ವಿದ್ಯಾರ್ಥಿಗಳು ಅನುಮತಿ ಪಡೆದುಕೊಂಡು ಹೋಗಬೇಕು.

ಫ್ರಾನ್ಸ್ ದೇಶಕ್ಕೆ ಬರುವ ವಿದ್ಯಾರ್ಥಿಗಳು ಎರಡು ಡೋಸ್ ಲಸಿಕೆ ಪಡೆದುಕೊಂಡಿರಬೇಕು.  ಲಸಿಕೆ ಪಡೆದು 2 ವಾರಗಳ ನಂತರವೇ ಫ್ರಾನ್ಸ್ ದೇಶಕ್ಕೆ ಪ್ರವೇಶಕ್ಕೆ ಅನುಮತಿ.

France Covid-19 Pandemic Higher Education Vaccination

ಆಸ್ಟ್ರೇಲಿಯಾ (Austraila)

ಭಾರತದಲ್ಲಿ ವೈರಸ್  ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ  ಆಸ್ಟ್ರೇಲಿಯಾ ತನ್ನ ನಿರ್ಬಂಧಗಳನ್ನು ಮುಂದುವರೆಸಿದೆ. ಆದರೆ ವಿದ್ಯಾರ್ಥಿಗಳಿಗೆ ತಿಂಗಳ ಬ್ಯಾಚ್ ಆಧಾರದ ಮೇಲೆ ಭೌತಿಕ ತರಗತಿ ಆರಂಭ.

ಆಸ್ಟ್ರೇಲಿಯಾದ ಕೆಲವು ಸ್ಥಳಗಳಲ್ಲಿ ಈಗಾಗಲೇ ಭೌತಿಕ ತರಗತಿ ಆರಂಭಿಸಲು ನಿರ್ಧರಿಸಿದೆ. ಸರಾಸರಿ 800 ವಿದ್ಯಾರ್ಥಿಗಳಿಗೆ ಮೊದಲ ಬಾರಿ ಅನುಮತಿ. ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸುವ  ಸಿಮೀತ ವಿದ್ಯಾರ್ಥಿಗಳು  ತಿಂಗಳ ಕೊನೆಯ ವಾರದಲ್ಲಿ  ಆಸ್ಟ್ರೇಲಿಯಾ ದೇಶಕ್ಕೆ ಪ್ರಯಾಣ ಬೆಳೆಸಬಹುದು ಎನ್ನುವ ಅನುಮತಿ ನೀಡಿದೆ.

Austraila Covid-19 Pandemic Higher Education Vaccination

ಆಸ್ಟ್ರೇಲಿಯಾ ದೇಶದ ವಿಶ್ವ ವಿದ್ಯಾನಿಲಯವು ತನ್ನ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕೆಲವು ಯೋಜನೆಗಳನ್ನು ಕೂಡ ಹಾಕಿ ಕೊಂಡಿದೆ. ಆಸ್ಟ್ರೇಲಿಯಾದಲ್ಲಿ ಪೂರ್ಣ ಪ್ರಮಾಣದಲ್ಲಿ  ಎಲ್ಲ ಶಿಕ್ಷಣ ಸಂಸ್ಥೆಗಳು ಆರಂಭವಾಗಲು ಇನ್ನೂ 6-8 ತಿಂಗಳು ತಗಲಬಹುದು.

ಬ್ರಿಟನ್ (Britan)

ಬ್ರಿಟನ್ ದೇಶಕ್ಕೆ ವಿದ್ಯಾಭ್ಯಾಸಕ್ಕೆ ತೆರಳುವ ಪ್ರಯಾಣಿಕರಿಗೆ ಎಲ್ಲ ದಾಖಲೆಗಳನ್ನು ಹೊಂದಿರುವ ವೀಸಾ ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಗಳು  ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯ ಗೊಳಿಸಿಲ್ಲ ಅಲ್ಲಿನ ಸರಕಾರ.

England Covid-19 Pandemic Higher Education Vaccination

ಇಂಗ್ಲೆಂಡ್ ದೇಶದ ಕೆಂಪು ಪಟ್ಟಿಯ ಸಾಲಿನಲ್ಲಿ ಭಾರತ ದೇಶ ಕೂಡ ಇದೆ. ಕಾರಣ ಭಾರತದಲ್ಲಿ ವೈರಸ್ ಸಕ್ರಿಯ  ಪ್ರಕರಣ ಸಂಖ್ಯೆ ಹೆಚ್ಚಿದೆ. ಇಂಗ್ಲೆಂಡ್ ದೇಶಕ್ಕೆ ತೆರಳುವ ವಿದ್ಯಾರ್ಥಿಗಳು 10ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಆಗಿರಬೇಕು. ಈ 10 ದಿನಗಳ ಕಾಲ ವಿದ್ಯಾರ್ಥಿಗಳ ಆರೋಗ್ಯದ ಕಡೆ ನಿಗಾ ವಹಿಸಿ, ಆರೋಗ್ಯ ತಪಾಸಣೆ  ಮಾಡಲಾಗುತ್ತದೆ. ವಿದ್ಯಾರ್ಥಿಗಳು ಕ್ಯಾಂಪಸ್ ಗಳಲ್ಲಿ ಲಸಿಕಾ ಶಿಬಿರಗಳಲ್ಲಿ ತಮ್ಮ ಹೆಸರುಗಳನ್ನು ಲಸಿಕೆ ಪಡೆದುಕೊಳ್ಳಲು ನೊಂದಾಯಿಸಿಕೊಳ್ಳಬಹುದು.

ನೀವುಇದನ್ನುಇಷ್ಟಪಡಬಹುದು: ನೀವು ವಿದೇಶಕ್ಕೆ ಹೋಗುವವರಾದರೆ, ಪಾಸ್ ಪೋರ್ಟಿಗೆ ಲಸಿಕೆ ಪ್ರಮಾಣ ಪತ್ರವನ್ನು ನೀವೇ ಲಿಂಕ್ ಮಾಡಿ.

ಚೀನಾ (china)

ಚೀನಾ ದೇಶದಲ್ಲಿ ಭಾರತದ ಸರಿ ಸುಮಾರು 25, 000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ . ಆದರೆ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ   2020ರ ಫೆಬ್ರವರಿ ಗೆ ಬಂದ್ ಆಗಿದೆ. ಇದರ ಜೊತೆಗೆ ಭಾರತ ದೇಶಕ್ಕೆ ಚೀನಾ ದೇಶವು ವಿಧಿಸಿರುವ ನಿರ್ಬಂಧಗಳನ್ನು ಮುಂದುವರೆಸಿದೆ. ಭಾರತದಲ್ಲಿ ವ್ಯಾಕ್ಸೀನ್ ಪೂರ್ಣ ಪ್ರಮಾಣದಲ್ಲಿ ಹಂಚಿಕೆ ಆಗುವ ತನಕ ಮುಂದುವರೆದಿದೆ.

ಒಂದು ಮೂಲಗಳ ಪ್ರಕಾರ ಭಾರತೀಯ ವಿದ್ಯಾರ್ಥಿಗಳು ಬಾಹ್ಯ ವ್ಯವಹಾರಗಳ ಸಚಿವಾಲಯಕ್ಕೆ (Ministary of external affairs) ಹಸ್ತಕ್ಷೇಪಕ್ಕಾಗಿ ಮನವಿ ಮಾಡಿಕೊಂಡಿದೆ. ಈ ಕಾರಣದಿಂದ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಿಂದಿರುಗುವಂತಾಗಿದೆ.

China Covid-19 Pandemic Higher Education Vaccination

ಅಂತಿಮ ವರ್ಷದ ಪದವಿಯಲ್ಲಿ ಓದುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಓದು ಮುಗಿದ ಬಳಿಕ 52 ವಾರಗಳ ಕಾಲ ಇಂಟರ್ನ್ಶಿಪ್ ಮುಗಿಸಬೇಕು. ದಕ್ಷಿಣ ಕೊರಿಯಾ ಸೇರಿದಂತೆ ಕೆಲವು ದೇಶಗಳ ವಿದ್ಯಾರ್ಥಿಗಳು ಚೀನಾ ದೇಶಗಳ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ಗೆ ಮರಳಬಹುದು. ಆದರೆ ಭಾರತೀಯ ವಿದ್ಯಾರ್ಥಿಗಳಿಗೆ ಅನುಮತಿಯಿಲ್ಲ.

ಕೆನಡಾ (canada)

ಕೆನಡಾ ದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ವೀಸಾ ದ ನಿಯಮಗಳ ಜುಲೈ 14ರಿಂದ ಆರಂಭವಾಗಲಿದೆ. ಕೋವ್ಯಾಕ್ಸಿನ್ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಕೆನಡಾ ದೇಶಕ್ಕೆ ಹೋಗಲು ಅನುಮತಿ ಯಿಲ್ಲ. ಭಾರತದ ministary of external affairs ಸಚಿವಾಲಯ  ವಿದ್ಯಾರ್ಥಿಗಳಿಗೆ overseas Indian affairs ನಿಂದ ವಿದೇಶಗಳಲ್ಲಿ ಭೌತಿಕ ತರಗತಿಗೆ ಹಾಜರಾಗಲಿರುವ ಸಮಸ್ಯೆಗಳ ಬಗ್ಗೆ ಹೇಳಿ ನೆರವು ಪಡೆದುಕೊಳ್ಳಿ ಎಂದಿದೆ.

Canada Covid-19 Pandemic Higher Education Vaccination

ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇನ್ನೇನೂ ಕೆಲವೇ ದಿನದಲ್ಲಿ ಅಲ್ಲಿನ ದೇಶಗಳು ವಿಧಿಸಿರುವ ನಿಯಮ ಪಾಲಿಸಿ ಭೌತಿಕ ತರಗತಿಗೆ ಹಾಜರಾಗಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button