ವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ಆಗಸದಲ್ಲಿ ಹಾರಾಟ ಆರಂಭಿಸಿದ ವಿಶ್ವದ ಮೊದಲ ಏರ್ ಕಾರ್.

ತಂತ್ರಜ್ಞಾನಗಳು ಮುಂದುವರೆದಂತೆ ಆವಿಷ್ಕಾರಗಳ ಪಟ್ಟಿ ಬೆಳೆಯುತ್ತಲೇ ಹೋಯಿತು.  ಹೊಸ ಹೊಸ ಆವಿಷ್ಕಾರ  ನಮಗೆಲ್ಲ ಅತ್ಯಾಪ್ತವಾಗಿ ಬಿಟ್ಟಿದೆ. ಮುಂದುವರೆದ ಜಗತ್ತಿನ ದ್ಯೋತಕ ತಂತ್ರಜ್ಞಾನ ಲೋಕದ ಹೊಸ ಪ್ರಯೋಗ, ಆವಿಷ್ಕಾರಗಳು.

ಇದೀಗ ಅಂತಹದೇ ಹೊಸ ಪ್ರಯೋಗಾತ್ಮಕ ಆವಿಷ್ಕಾರ ಸುದ್ದಿ ಮಾಡುತ್ತಿದೆ. ಅದು ಹಾರುವ ಕಾರಿನ ಆವಿಷ್ಕಾರ.  ಆಗಸದಲ್ಲೂ ಹಾರಬಲ್ಲ, ರಸ್ತೆಯಲ್ಲಿ ಚಲಿಸಬಲ್ಲ  ಈ ಅತ್ಯಾಧುನಿಕ ಕಾರು ಹಲವು ವಿಶೇಷತೆಗಳನ್ನು ಒಳಗೊಂಡಿದೆ.

  • ನವ್ಯಶ್ರೀ ಶೆಟ್ಟಿ

ನಾವು ಹಾರುವ ಕಾರಿನ (flying car) ಫೋಟೋ ನೋಡಿರುತ್ತೇವೆ. ಸಿನಿಮಾ ಅಥವಾ ಜಾಲತಾಣಗಳಲ್ಲಿ ವಿಡಿಯೋ ಕೂಡ ನೋಡಿರುತ್ತೇವೆ. ಅದನ್ನು ನೋಡಿದಾಗ ನಾವು ಕೂಡ ಹಾರುವ ಕಾರಿನಲ್ಲಿ ಹೋಗಬೇಕು ಎನ್ನುವ ಕನಸು ಕಂಡಿರುವವರು ಇರಬಹುದು.  ಅಂತಹ ಹಾರುವ ಕಾರಿನಲ್ಲಿ ಸಂಚರಿಸುವ ಕನಸು ಕಂಡವರಿಗೆ ಸದ್ಯ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಹಾರುವ ಕಾರು ಸಂಚಾರ

ಸ್ಲೋವಾಕಿಯ (Slovakia) ಮೂಲದ ಕಂಪನಿ ಕ್ಲೈನ್ ವಿಷನ್ (clain vission) ಹಾರುವ ಕಾರನ್ನು ಮೊದಲು ಪರಿಚಯಿಸಿದ ಹೆಗ್ಗಳಿಕೆ ಪಡೆದುಕೊಂಡಿದೆ.  ನಿತ್ರಾ (Nitra) ವಿಮಾನ ನಿಲ್ದಾಣದಲ್ಲಿ ಏರ್ ಕಾರ್ ತನ್ನ ಹಾರಾಟವನ್ನು ಆರಂಭಿಸಿ ಕೇವಲ 35 ನಿಮಿಷದಲ್ಲಿ ಬ್ರಾಟಿಸ್ಲಾವಾ (Bratislava) ತಲುಪಿ ಬಂದಿದೆ. ಕ್ಲೈನ್ ವಿಷನ್ ಕಂಪನಿ ಸಿ. ಇ. ಓ ಸ್ವೀಪ್ ಕ್ಲೈನ್ ಏರ್ ಕಾರು ಚಲಾಯಿಸಿ ಖುಷಿ ಪಟ್ಟಿದ್ದಾರೆ. ಕಾರು ಹಾರಾಟದ ವಿಡಿಯೋವನ್ನು ಕಂಪನಿ ಸ್ವತಃ ತನ್ನ ಸಾಮಾಜಿಕ  ಜಾಲತಾಣ ದಲ್ಲಿ ಹಂಚಿಕೊಂಡಿದೆ.

Clain Vision Aircar Proto Type 1 Slovakia Nitra International Airport

ಕಳೆದ ಫೆಬ್ರವರಿ ಯಲ್ಲಿ ಏರ್ ಕಾರ್ ತನ್ನ ಮೊದಲ ಹಾರಾಟ ಕೈಗೊಂಡಿತ್ತು ಸ್ಲೋವಾಕಿಯಾ ವಿಮಾನ ಯಾನ  ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಕೂಡ ಯಶಸ್ವಿಯಾಗಿ ಹಾರಾಟಗೊಂಡಿರುವ , ಈ ಹಾರುವ ಕಾರು ಶೀಘ್ರವಾಗಿ  ವಾಣಿಜ್ಯ ದೃಷ್ಟಿಯಲ್ಲಿ ಉತ್ಪಾದನೆಗೆ ಅನುಮತಿ ಸಿಗುವ ನಿರೀಕ್ಷೆ ಕೂಡ ಇದೆ.

ಹಲವು ವಿಶೇಷತೆಗಳನ್ನು ಹೊಂದಿರುವ ಏರ್ ಕಾರ್

ಒಂದು ನಗರದಿಂದ ಇನ್ನೊಂದು ನಗರಕ್ಕೆ ಸಂಚರಿಸಿ ಅಚ್ಚರಿ ಮೂಡಿಸಿರುವ ಈ ಏರ್ ಕಾರ್ ವಿಶೇಷತೆಗಳಿಂದ ಕೂಡಿದೆ.  ಹಾರುವ ಕಾರನ್ನು ವಿಭಿನ್ನವಾಗಿ ವಿನ್ಯಾಸ  ಮಾಡಲಾಗಿದ್ದು , ವಿಮಾನವಾಗಿ ಮಾರ್ಪಡಿಸುವಾಗ 135 ಸೇಕೆಂಡಿನಲ್ಲಿ ಕಾರಿನಲ್ಲಿ ವಿಮಾನದ ರೆಕ್ಕೆಗಳು ಹೊರಬರುತ್ತದೆ. ಹಾರುವ ಕಾರು ಗಂಟೆಗೆ 170 ರಿಂದ 190 ಕಿಮೀ ವೇಗದಲ್ಲಿ ಚಲಿಸಲಿದೆ.

Clain Vision Aircar Proto Type 1 Slovakia Nitra International Airport

ಈ ಏರ್ ಕಾರಿಗೆ ಬಿಎಂಡಬ್ಲ್ಯು (BMW) ಸಾಮರ್ಥ್ಯದ ಎಂಜಿನ್ ಬಳಕೆ ಮಾಡಲಾಗಿದ್ದು , 2.15 ನಿಮಿಷದಲ್ಲಿ  ಆಗಸಕ್ಕೆ ಜಿಗಿಯಲಿದೆ ಹಾರುವ ಕಾರು.  ಆದರೆ ಈ ಹಾರುವ ಕಾರಿಗೆ ರನ್  ವೇ (run way) ಅಗತ್ಯ. 8200 ಅಡಿ ಹಾರಬಲ್ಲ ಸಾಮರ್ಥ್ಯವಿರುವ ಏರ್ ಕಾರ್, 10,000 ಕಿಮೀ  ಚಲಿಸುವ ಸಾಮರ್ಥ್ಯ ಹೊಂದಿದೆ.

ನೀವುಇದನ್ನುಇಷ್ಟಪಡಬಹುದು: ಹೆಲಿ ಪ್ರವಾಸೋದ್ಯಮದ ತಾಣವಾಗಲಿದೆ ಜಕ್ಕೂರಿನ ಏರ್ ಡ್ರೋಮ್

ಕಾರಿನಿಂದ ವಿಮಾನವಾಗಿ ಬದಲಾಗಲು ಸರಿಸುಮಾರು ಎರಡುವರೆ ನಿಮಿಷಗಳ ಅಂತರ ಸಾಕು.  ಈ ವಿಭಿನ್ನ ಏರ್ ಕಾರ್ ನಲ್ಲಿ ಇಬ್ಬರು ಮಾತ್ರ ಒಮ್ಮೆಗೇ ಸಂಚಾರಿಸಲು ಅವಕಾಶ. ಆದರೆ ಏರ್ ಕಾರಿನಲ್ಲಿ ಕಾಪ್ಟರ್ ನಂತೆ ನೇರವಾಗಿ ಮೇಲೆರುವುದು, ಇಳಿಯುವುದು ಸಾಧ್ಯವಿಲ್ಲ.

Clain Vision Aircar Proto Type 1 Slovakia Nitra International Airport

ರಸ್ತೆಯಲ್ಲಿ ಸಂಚರಿಸಬಲ್ಲ, ಆಗಸದಲ್ಲಿ ಹಾರಬಲ್ಲ ಏರ್  ಕಾರ್

ನೀವು ಈ ಕಾರಿನಲ್ಲಿ ರಸ್ತೆಯಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೂ ಚಲಿಸಬಹುದು. ಆಗಸದಲ್ಲಿ ಕೂಡ ಹೋಗಬಹುದು .  ಸುಮಾರು ಎರಡೂವರೆ ನಿಮಿಷಗಳಲ್ಲಿ ಈ ಕಾರು ವಿಮಾನವಾಗಿ ಬದಲಾಗುತ್ತದೆ.

ನೀವು ಆಗಸದಲ್ಲಿ ಸಂಚರಿಸಬಹುದು. ಇದು ವಿಶ್ವದ ಮೊದಲ ಕಾರು ವಿಮಾನವಾಗಿದ್ದು , ಕೆಲವೇ ನಿಮಿಷಗಳಲ್ಲಿ ವಿಮಾನವಾಗಿ ಬದಲಾಗುತ್ತದೆ. ಭೂಮಿ ಮತ್ತು ಗಾಳಿ ಎರಡರಲ್ಲೂ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಏರ್ ಕಾರು ಪೆಟ್ರೋಲ್ ಇಂಧನ  ಬಳಕೆಯಿಂದ ಸಂಚರಿಸುತ್ತದೆ.

Clain Vision Aircar Proto Type 1 Slovakia Nitra International Airport

ಹಲವು ವರ್ಷಗಳ ಪರಿಶ್ರಮದಿಂದ ಏರ್ ಕಾರು ನಿರ್ಮಾಣಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಏರ್ ಕಾರ್ ಜನರ ಓಡಾಟಕ್ಕೆ ಸಜ್ಜಾಗುತ್ತಿದೆ. ಹಾರುವ ಕಾರಿನಲ್ಲಿ ಸಂಚರಿಸುವ ನಿಮ್ಮ ಆಸೆ ಕೂಡ ಸದ್ಯದಲ್ಲೇ ಈಡೇರಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button