ದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದ

ಹೆಲಿ ಪ್ರವಾಸೋದ್ಯಮದ ತಾಣವಾಗಲಿದೆ ಜಕ್ಕೂರಿನ ಏರ್ ಡ್ರೋಮ್

ನಮ್ಮ ರಾಜ್ಯದ ರಾಜಧಾನಿಯ ಪ್ರಮುಖ ನಗರಗಳಲ್ಲಿ ಒಂದಾದ ಜಕ್ಕೂರಿನಲ್ಲಿ ಹೆಲಿ ಪ್ರವಾಸೋದ್ಯಮವನ್ನು ಜಾರಿಗೆ ತರಲು ಸಕಲ ಸಿದ್ಧತೆ ನಡೆಯುತ್ತಿದೆ. ಜಕ್ಕೂರಿನ ಏರ್ ಡ್ರೋಮ್ ಅಲ್ಲಿ ಈ ಯೋಜನೆ ಆರಂಭಗೊಳ್ಳಲಿದೆ ಎಂದು ಸರ್ಕಾರ ಘೋಷಿಸಿದೆ. ಈ ಮೂಲಕ ರಾಜ್ಯದಲ್ಲಿ ಪ್ರವಾಸಕ್ಕೆ ಹೊಸದೊಂದು ಬಗೆಯ ಆಯಾಮ ಕೊಟ್ಟಂತಾಗಿದೆ.

  • ವರ್ಷಾ ಉಜಿರೆ

ಬೆಂಗಳೂರಿನ ಜಕ್ಕೂರು ಏರ್ ಡ್ರೋಮ್ ಅಲ್ಲಿ ಹೆಲಿ- ಪ್ರವಾಸೋದ್ಯಮವನ್ನು ಆಯೋಜಿಸುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಘೋಷಿಸಿದ್ದಾರೆ. ಜಕ್ಕೂರನ್ನು ಲ್ಯಾಂಡಿಂಗ್ ಮತ್ತು ಟೇಕ್- ಆಫ್ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ಪ್ರವಾಸಿಗರಿಗಾಗಿ ಹೆಲಿಕಾಪ್ಟರ್‌ಗಳನ್ನು ಗೋವಾ, ತಮಿಳುನಾಡು, ಪಾಂಡಿಚೆರಿ ಮತ್ತು ಕೇರಳಕ್ಕೆ ಕರೆದೊಯ್ಯಲು ಸರ್ಕ್ಯೂಟ್ ಸಿದ್ಧಪಡಿಸಲಾಗುವುದು. ಹೆಲಿ- ಪ್ರವಾಸೋದ್ಯಮ ಸೇವೆಯನ್ನು ವಿವಿಐಪಿಗಳು ಮತ್ತು ತುರ್ತು ಸೇವೆಗಳಿಗಾಗಿ ಬಳಸಬಹುದು.

ಜಕ್ಕೂರು ಏರ್ ಡ್ರೋಮ್ ಮತ್ತು ಇತರ ಐದು ವಾಯುನೆಲೆಗಳನ್ನು ಹೆಲಿ- ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಬಳಸಿಕೊಳ್ಳಲು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಯುವ ಮತ್ತು ಕ್ರೀಡಾ ಸೇವೆಗಳ ಇಲಾಖೆ ಹಾಗೂ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಐಐ) ಇವುಗಳಿಂದ ಅನುಮೋದನೆ ಪಡೆದಿದೆ.

ಜಕ್ಕೂರಿನಲ್ಲಿ ಆರು ಹೆಲಿಕಾಪ್ಟರ್‌ಗಳು ಒಂದೇ ಸಮಯದಲ್ಲಿ ಟೇಕ್- ಆಫ್ ಮತ್ತು ಇಳಿಯಲು ಸಾಧ್ಯವಾಗುವಂತೆ ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಇದರ ಕುರಿತ ಸೇವೆಗಳಿಗಾಗಿ ಮೂರು ಏಜೆನ್ಸಿಗಳನ್ನು ಅಂತಿಮಗೊಳಿಸಲಾಗಿದೆ.

ಬೆಂಗಳೂರಿನ ಹೊರತಾಗಿ, ಮೈಸೂರು, ಮಂಗಳೂರು, ಬಳ್ಳಾರಿ, ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದ ಇತರ ಪ್ರದೇಶಗಳಲ್ಲಿಯೂ ಹೆಲಿ-ಪ್ರವಾಸೋದ್ಯಮವನ್ನು ಆರಂಭಿಸುವ ಯೋಜನೆ ಸರ್ಕಾರಕ್ಕಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಹೆಲಿ- ಪ್ರವಾಸೋದ್ಯಮವನ್ನು ಆರಂಭಿಸುವ ಯೋಜನೆಯಿದೆ.

ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಮೈಸೂರಿನಲ್ಲಿ ಹೆಲಿ- ಪ್ರವಾಸೋದ್ಯಮವನ್ನು ಆರಂಭಿಸಲು ಯೋಜಿಸಿತ್ತು. ಆದರೆ ಈ ಯೋಜನೆಗಾಗಿ ಮರಗಳನ್ನು ಕಡಿಯುವುದಾಗಿ ಪ್ರಸ್ತಾಪಿಸಿದ ನಂತರ, ಮೈಸೂರಿನ ರಾಜಮನೆತನ ಮತ್ತು ಪರಿಸರ ಕಾರ್ಯಕರ್ತರು ವಿರೋಧಿಸಿದರು. ಈ ವಿವಾದದ ನಂತರ ಯೋಜನೆ ಅಲ್ಲೇ ತಣ್ಣಗಾಯಿತು. 

ನೀವುಇದನ್ನುಇಷ್ಟಪಡಬಹುದು: ವಿಮಾನಗಳ ಸಂಖ್ಯೆ ಕಡಿಮೆ,ಶುಲ್ಕ ಹೆಚ್ಚಳ:ನಾಗರಿಕ ವಿಮಾನಯಾನ ಸಚಿವಾಲಯದಿಂದ ಹೊಸ ನಿಯಮ ಜಾರಿ

ಪರಿಸರ ಕಾರ್ಯಕರ್ತರು ಹೇಳುವಂತೆ, ಪ್ರವಾಸೋದ್ಯಮ ಇಲಾಖೆಯು ಕುರುಬರಹಳ್ಳಿಯ ನಾಲ್ಕು ಎಕರೆ ಪ್ರದೇಶದಲ್ಲಿ, ಲಲಿತ ಮಹಲ್ ಪ್ಯಾಲೇಸ್ ಎದುರಿನ ವಿವಿಧ ಜಾತಿಯ ೧೫೦ ಮರಗಳನ್ನು ಬೀಳಿಸಲು ಉದ್ದೇಶಿಸಿತ್ತು. ಹಾಗಾಗಿ ಈ ಯೋಜನೆ ಸ್ಥಗಿತಗೊಂಡಿದೆ.

ಜಕ್ಕೂರು  ಬೆಂಗಳೂರಿನ ಉತ್ತರ ಭಾಗದ ಉಪನಗರ. ಯಲಹಂಕ ಮತ್ತು ಹೆಬ್ಬಾಳ ನಡುವಿನ ರಾಷ್ಟ್ರೀಯ ಹೆದ್ದಾರಿ 44ರ ಪೂರ್ವ ಭಾಗದಲ್ಲಿ ಇರುವ ಈ ನಗರ,  ಜಕ್ಕೂರು ಏರೋಡ್ರೋಮ್ ಮತ್ತು ಜಕ್ಕೂರು ಕೆರೆಗೆ ಹೆಸರುವಾಸಿ.

200 ಎಕರೆಗಳಷ್ಟು ವಿಸ್ತಾರವಾಗಿರುವ ಜಕ್ಕೂರು ಏರೋಡ್ರೋಮ್ ಅನ್ನು 1948ರಲ್ಲಿ ಸ್ಥಾಪಿಸಲಾಯಿತು. ಮತ್ತು ಇದು ನಗರದ ಏಕೈಕ ವಾಯುಯಾನ ಕ್ಷೇತ್ರವಾಗಿದೆ. ದೇಶದ ಅತ್ಯಂತ ಹಳೆಯ ಫ್ಲೈಯಿಂಗ್ ಶಾಲೆಗಳಲ್ಲಿ ಒಂದಾದ ಸರ್ಕಾರಿ ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್ (ಜಿಎಫ್ ಟಿಎಸ್) ಕೂಡಾ ಜಕ್ಕೂರಿನಲ್ಲಿದೆ.

ಜಕ್ಕೂರು ಕೆರೆ 160 ಎಕರೆ ವಿಸ್ತಾರವಾಗಿದ್ದು, ಎರಡು ಶತಮಾನಗಳ ಹಿಂದೆ ನಿರ್ಮಿತವಾಗಿದೆ.  2005 ರಲ್ಲಿ ಒಳಚರಂಡಿ ಮತ್ತು ತ್ಯಾಜ್ಯದಿಂದ  ಕಲುಷಿತಗೊಂಡ ಈ ಸರೋವರವನ್ನು, ಅದರೊಳಗೆ ಪ್ರವೇಶಿಸುವ ಒಳಚರಂಡಿ ನೀರನ್ನು ಸಂಸ್ಕರಿಸುವ ಮೂಲಕ ಮತ್ತೆ ಜೀವ ಕೊಡಲಾಯಿತು. 

ಕಾವೇರಿ ನೀರು ಲಭ್ಯವಿಲ್ಲದ ಹತ್ತಿರದ ಗ್ರಾಮಗಳಿಗೆ ಈ ಕೆರೆ ಕುಡಿಯುವ ನೀರಿನ ಮೂಲವಾಗಿದೆ. ಅಲ್ಲದೆ ಹಲವು ಬಗೆಯ ಜೀವ ವೈವಿಧ್ಯಕ್ಕೆ ಆಶ್ರಯ ತಾಣವೂ ಹೌದು!

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

 

Related Articles

One Comment

Leave a Reply

Your email address will not be published. Required fields are marked *

Back to top button