ವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ನೀವು ವಿದೇಶಕ್ಕೆ ಹೋಗುವವರಾದರೆ, ಪಾಸ್ ಪೋರ್ಟಿಗೆ ಲಸಿಕೆ ಪ್ರಮಾಣ ಪತ್ರವನ್ನು ನೀವೇ ಲಿಂಕ್ ಮಾಡಿ.

ಕೊರೋನಾ ಕಾಲದಲ್ಲಿ ಪ್ರವಾಸ ಅಷ್ಟೊಂದು ಸುಲಭವಲ್ಲ. ವಿದೇಶ ಪ್ರಯಾಣ ಮಾಡಬೇಕು ಎಂದರೆ ಹತ್ತಾರು ಹೊಸ ನಿಮಯ. ನಿಯಮ ಪಾಲನೆ ಮಾಡಿ ಪ್ರವಾಸ ಕೈಗೊಳ್ಳುವುದು ಅನಿವಾರ್ಯ.

ವಿದೇಶ ಪ್ರಯಾಣಕ್ಕೆ ಇರುವ ನಿಯಮಗಳಲ್ಲಿ, ನಿಮ್ಮ ಪಾಸ್ ಪೋರ್ಟಿಗೆ ಲಸಿಕೆ ಪ್ರಮಾಣ ಪತ್ರವನ್ನು ಲಿಂಕ್ ಮಾಡುವುದು ಒಂದು. ನಿಮ್ಮ ಪಾಸ್ ಪೋರ್ಟಿಗೆ ಲಸಿಕೆ ಪ್ರಮಾಣ ಪತ್ರವನ್ನು ನೀವೇ ಲಿಂಕ್ ಮಾಡಬಹುದು. ಲಿಂಕ್ ಮಾಡುವ ಹಂತಗಳ ಕುರಿತು ಮಾಹಿತಿ ಇಲ್ಲಿದೆ.

  • ನವ್ಯಶ್ರೀ ಶೆಟ್ಟಿ

ಕೊರೋನಾ ಕಾಲದಲ್ಲಿ ವಿದೇಶ ಪ್ರಯಾಣ ಮಾಡಲು ಹತ್ತಾರು ನಿಯಮ ಪಾಲನೆ ಕಡ್ಡಾಯ. ವಿದೇಶ ಪ್ರಯಾಣಕ್ಕೆ ವಿಧಿಸಿರುವ ಹಲವು ನಿಯಮಗಳಲ್ಲಿ ನಿಮ್ಮ ಪಾಸ್ ಪೊರ್ಟ್ ಗೆ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಲಿಂಕ್ ಮಾಡುವುದು ಕೂಡ ಒಂದು. ನೀವು ಲಸಿಕೆ ಪಡೆದ ಪ್ರಮಾಣ ಪತ್ರದ ಜೊತೆಗೆ ಪಾಸ್ ಪೊರ್ಟ್ ಸಂಖ್ಯೆ ಲಿಂಕ್ ಮಾಡಲು ಯಾರಿಗೂ ಕಾಯಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಪಾಸ್ ಪೊರ್ಟ್, ಲಸಿಕೆ ಪ್ರಮಾಣ ಪತ್ರವನ್ನು ನೀವೇ ಲಿಂಕ್ ಮಾಡಿ ಕೊಳ್ಳಬಹುದು.

ಆರೋಗ್ಯ ಸೇತು ಟ್ವೀಟ್

ವಿದೇಶಕ್ಕೆ ಹೋಗುವ ಭಾರತೀಯರು ಕೋವಿಡ್ ಪೊರ್ಟಲ್ ಅಡಿಯಲ್ಲಿ ಪಾಸ್ ಪೊರ್ಟ್ ಸಂಖ್ಯೆಯನ್ನು , ಲಸಿಕೆ ಪ್ರಮಾಣ ಪತ್ರದ ಜೊತೆಗೆ ಲಿಂಕ್ ಮಾಡಬಹುದು. ಇದು ನೀವು ಲಸಿಕೆ ಪಡೆದ ದಾಖಲೆಯ ಜೊತೆಗೆ ನಿಮ್ಮ ವಿದೇಶ ಪ್ರಯಾಣಕ್ಕೆ ಕೂಡ ಸಹಾಯ ಆಗಲಿದೆ. ಈ ಕುರಿತು ಆರೋಗ್ಯ ಸೇತು ಆ್ಯಪ್ ಮೂಲಕ ತನ್ನ ಅಧಿಕೃತ ಖಾತೆಯಲ್ಲಿ
ನಿಮ್ಮ ಪಾಸ್ ಪೊರ್ಟ್ ಸಂಖ್ಯೆಯನ್ನು ,ಲಸಿಕೆ ಪಡೆದ ರಿಪೊರ್ಟ್ ನಲ್ಲಿ ನಮೂದಿಸಿ ಅಪ್ಡೇಟ್ ಮಾಡಿಕೊಳ್ಳಬಹುದು ಎಂದು ಟ್ವೀಟ್ ಮಾಡಿದೆ. ಜೊತೆಗೆ ಅಪ್ಡೇಟ್ ಮಾಡುವ ಹಂತಗಳನ್ನು ಕೂಡ ಟ್ವೀಟ್ ನಲ್ಲಿ ನಮೂದಿಸಿದೆ.

Passport Indian Airlines Arogya Setu App Covid-19 Vaccine

ನೀವೇ ಲಿಂಕ್ ಮಾಡಿಕೊಳ್ಳಬಹುದು

ಕೇಂದ್ರ ಸರಕಾರ ಹೊರಡಿಸಿರುವ ಈ ಹೊಸ ಮಾರ್ಗ ಸೂಚಿಗೆ ನೀವು ಯಾರಿಗೂ ಕಾಯಬೇಕು ಎಂದಿಲ್ಲ. ನಿಮ್ಮ ಪಾಸ್ ಪೊರ್ಟ್ ಗೆ ಲಸಿಕೆ ಪಡೆದ ಪ್ರಮಾಣ ಪತ್ರಗಳನ್ನು ನೀವೇ ಲಿಂಕ್ ಮಾಡಿಕೊಳ್ಳಬಹುದು. ಆನ್ಲೈನ್ ಮೂಲಕ ನೀವು ನೋಂದಾವಣಿ ಮಾಡಿಕೊಳ್ಳಬಹುದು. ಸರಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ನೀವು ನಿಮ್ಮ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದು.

ಪಾಸ್ ಪೊರ್ಟ್ ಮತ್ತು ಲಸಿಕೆ ಪ್ರಮಾಣ ಪತ್ರ ಲಿಂಕ್ ಮಾಡುವ ಹಂತಗಳು

.cowin.govt.in ಲಾಗಿನ್ ಆಗಿ, ನಿಮ್ಮ ಮಾಹಿತಿಗಳನ್ನು ನಮೂದಿಸಿ.
.‘ರೈಸ್ ಆನ್ ಇಶ್ಯೂ'( raise an issue) ಅಯ್ಕೆ ಮಾಡಿಕೊಳ್ಳಿ.
.ಪಾಸ್ ಪೊರ್ಟ್ (passport) ಎಂಬುವುದನ್ನು ಕ್ಲಿಕ್ (click)ಮಾಡಿ
. ಆಗ ಕಾಣಿಸುವ ಮೆನು ವಿನಲ್ಲಿ ನೀವು ಯಾರ ಲಸಿಕೆ ಪಡೆದ ಪ್ರಮಾಣ ಪತ್ರವನ್ನು , ಪಾಸ್ ಪೊರ್ಟ್ ಗೆ ಲಿಂಕ್ ಮಾಡಲಿದ್ದಿರೋ ಅವರ ಹೆಸರನ್ನು ನಮೂದಿಸಿ.
.ನೀವು ಲಿಂಕ್ ಮಾಡಲಿರುವ ಪಾಸ್ ಪೊರ್ಟ್ ಸಂಖ್ಯೆ ನಮೂದಿಸಿ , ಸಬ್ಮಿಟ್ (submit) ಬಟನ್ ಕ್ಲಿಕ್ ಮಾಡಿ.
. ಕೆಲವೇ ಸಮಯದಲ್ಲಿ ನಿಮಗೆ ಅಪ್ಡೇಟ್ (update) ಆದ ಅಂದರೆ ಪಾಸ್ ಪೊರ್ಟ್ ಸಂಖ್ಯೆ ಲಿಂಕ್ ಆಗಿರುವ ಲಸಿಕೆ ಪ್ರಮಾಣ ಪತ್ರ ದೊರೆಯುತ್ತದೆ.

ನೀವು ಇದನ್ನುಇಷ್ಟಪಡಬಹುದು: ವಿದೇಶಕ್ಕೆ ಹೋಗುವವರೇ ಗಮನಿಸಿ, ನಿಮಗಿನ್ನು ವ್ಯಾಕ್ಸಿನ್ ಪಾಸ್ ಪೋರ್ಟ್ ಬೇಕಾಗಬಹುದು

Passport Indian Airlines Arogya Setu App Covid-19 Vaccine

ತಿದ್ದುಪಡಿಗೆ ಅವಕಾಶ.

ಪಾಸ್ ಪೊರ್ಟ್ ಹಾಗೂ ,ಲಸಿಕೆ ಪಡೆದ ಪ್ರಮಾಣ ಪತ್ರದಲ್ಲಿ ನಮೂದಿಸಿರುವ ಹೆಸರುಗಳಲ್ಲಿ ವ್ಯತ್ಯಾಸ ಕಂಡು ಬಂದರೆ ತಿದ್ದುಪಡಿಗೆ ಅವಕಾಶವಿದೆ. ಹೆಸರು ಹೊಂದಾಣಿಕೆ ಆಗದಿದ್ದಲ್ಲಿ ನಿಮ್ಮ ಹೆಸರು ತಿದ್ದುಪಡಿಗೆ ನೀವು ಕೋರಿಕೆ ಸಲ್ಲಿಸಬಹುದು. ಆದರೆ ಪಾಸ್ ಪೊರ್ಟ್ ನಮೂದಿಸಿ ಅಪ್ಡೇಟ್ ಮಾಡಲು ಜೊತೆಗೆ ಹೆಸರು ತಿದ್ದುಪಡಿ ಮಾಡಲು ಒಮ್ಮೆ ಮಾತ್ರ ಅವಕಾಶ.

ಹೆಸರು ತಿದ್ದು ಪಡಿಯ ಹಂತಗಳು.

  1. ನೀವು ಪಾಸ್ ಪೊರ್ಟ್ ಸಂಖ್ಯೆ ಲಿಂಕ್ ಮಾಡಲು ಲಾಗಿನ್ ಆಗಿರುವ cowin.govt.in ಗೆ ಲಾಗಿನ್ ಆಗಿ.
  2. raise an issue ಕ್ಲಿಕ್ ಮಾಡಿ.
  3. ಕರೆಕ್ಷನ್ ಇನ್ ಸರ್ಟಿಫಿಕೇಟ್ (correction in certificate) ಅಂದರೆ ಪ್ರಮಾಣ ಪತ್ರದಲ್ಲಿ ತಿದ್ದುಪಡಿ ಎಂಬ ಅಯ್ಕೆಯನ್ನು ಕ್ಲಿಕ್ ಮಾಡಿ.
  4. ಮೆನುವಿನಲ್ಲಿ ನಿಮ್ಮ ಹೆಸರು ನಮೂದಿಸಿ
  5. ನಿಮಗೆ ತಿದ್ದುಪಡಿ ಮಾಡಬೇಕಿರುವ ವಿವರಗಳನ್ನು ತಿದ್ದುಪಡಿ ಮಾಡಿ.
    Submit ಬಟನ್ ಒತ್ತಿ, ನಿಮ್ಮ ತಿದ್ದುಪಡಿಯಾದ ದಾಖಲೆಗಳು ಅಪ್ಡೇಟ್ ಆಗುತ್ತದೆ.
Passport Indian Airlines Arogya Setu App Covid-19 Vaccine

ನೀವು ಕೂಡ ವಿದೇಶ ಪಯಣಕ್ಕೆ ಹೊರಡುವವರಾಗಿದ್ದಲ್ಲಿ ಪಾಸ್ ಪೊರ್ಟ್ ಗೆ ಲಸಿಕೆ ಪ್ರಮಾಣ ಪತ್ರವನ್ನು ನೀವೇ ಲಿಂಕ್ ಮಾಡಿ . ಅಪ್ಡೇಟ್ ಆಗಿರುವ ಈ ದಾಖಲೆಗಳು ನಿಮ್ಮ ವಿದೇಶ ಪ್ರಯಾಣಕ್ಕೆ ಸಹಕಾರಿ ಆಗಲಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.


Related Articles

Leave a Reply

Your email address will not be published. Required fields are marked *

Back to top button