ದೂರ ತೀರ ಯಾನವಂಡರ್ ಬಾಕ್ಸ್ವಿಂಗಡಿಸದ

ಐದು ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಕೇಂದ್ರ ಸರ್ಕಾರ : ಇಲ್ಲಿದೆ ಪೂರ್ಣ ಮಾಹಿತಿ

ಕೊರೋನಾ ಕಾರಣದಿಂದಾಗಿ ಹೆಚ್ಚು ಕಡಿಮೆ ಎಲ್ಲಾ ಉದ್ಯಮಗಳು ನೆಲಕಚ್ಚುವ ಸ್ಥಿತಿಗೆ ತಲುಪಿವೆ. ಪ್ರವಾಸೋದ್ಯಮ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಪ್ರವಾಸಿಗರನ್ನು ಅವಲಂಬಿಸಿಯೇ ಬದುಕುವ ಈ ಕ್ಷೇತ್ರಕ್ಕೆ, ಸಾಲು ಸಾಲಾಗಿ ಬರುತ್ತಿರುವ ಕೊರೋನಾ ಅಲೆಗಳು ಬಲವಾದ ಹೊಡೆತವನ್ನೇ ನೀಡುತ್ತಿವೆ. ಈ ಮಧ್ಯೆ ಕೇಂದ್ರ ಸರ್ಕಾರ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೆನ್ನೆಲುಬಾಗಿ ನಿಂತು ಹಲವು ಯೋಜನೆಗಳನ್ನು ಘೋಷಿಸಿದೆ. ಅದರ ಪೂರ್ಣ ಮಾಹಿತಿ ಇಲ್ಲಿದೆ.

  • ವರ್ಷಾ ಉಜಿರೆ

5 ಲಕ್ಷ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡುವುದಾಗಿ ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ಪತ್ರಿಕಾಗೋಷ್ಠಿಯಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕೋವಿಡ್-19ರ ಎರಡನೇ ಅಲೆಯಿಂದ ಕಂಗೆಟ್ಟಿರುವ ಉದ್ಯಮ ಕ್ಷೇತ್ರಕ್ಕೆ ಚೈತನ್ಯ ತುಂಬಲು ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ.

ಬ್ರೀಫಿಂಗ್ ಸಮಯದಲ್ಲಿ, ಹಣಕಾಸು ಸಚಿವಾಲಯವು 2019ರಲ್ಲಿ 10.93 ಮಿಲಿಯನ್ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ. ಮತ್ತು ವಿರಾಮದ ಸಲುವಾಗಿ ಹಾಗೂ ವ್ಯವಹಾರಕ್ಕಾಗಿ $30.098 ಬಿಲಿಯನ್ ಖರ್ಚು ಮಾಡಿದ್ದಾರೆ ಎಂದು ತಿಳಿಸಿದೆ.

Free Tourist Visa Ministry Of Finance Covid19 Pandemic

ಭಾರತದಲ್ಲಿ ವಿದೇಶಿ ಪ್ರವಾಸಿಗರ ಸರಾಸರಿ ದೈನಂದಿನ ವಾಸ್ತವ್ಯ 21 ದಿನಗಳು ಮತ್ತು ಸರಾಸರಿ ದೈನಂದಿನ ಖರ್ಚು $ 34 (2400). ವೀಸಾ ವಿತರಣೆಯನ್ನು ಪುನರಾರಂಭಿಸಿದ ನಂತರ, ಮೊದಲ 5 ಲಕ್ಷ ಪ್ರವಾಸಿ ವೀಸಾಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಪ್ರತಿ ಪ್ರವಾಸಿಗರಿಗೆ ಒಂದು ಬಾರಿ ಮಾತ್ರ ಫ್ರೀ ವೀಸಾ ಪಡೆದುಕೊಳ್ಳುವ ಅವಕಾಶವಿರುತ್ತದೆ. ಈ ಯೋಜನೆ 31 ಮಾರ್ಚ್ 2022ರವರೆಗೆ ಅಥವಾ 5 ಲಕ್ಷ ವೀಸಾಗಳನ್ನು ನೀಡುವವರೆಗೆ ಅನ್ವಯಿಸುತ್ತದೆ. ಒಟ್ಟು ಆರ್ಥಿಕ ಪರಿಣಾಮ ₹100 ಕೋಟಿ ಎಂದು ನಿರೀಕ್ಷಿಸಲಾಗಿದೆ.

ನೀವುಇದನ್ನುಇಷ್ಟಪಡಬಹುದು: ನೀವು ವಿಮಾನಯಾನ ಮಾಡಬಯಸುತ್ತಿದ್ದರೆ ಇಲ್ಲಿವೆ ನೀವು ತಿಳಿದುಕೊಳ್ಳಬೇಕಾದ ಕೆಲ ಸೌಲಭ್ಯಗಳು

11,000 ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳು / ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಟೇಕ್ ಹೋಲ್ಡರ್ ಗಳಿಗೆ ಕೇಂದ್ರವು ಆರ್ಥಿಕ ಸಹಾಯವನ್ನು ಘೋಷಿಸಿದೆ. ಪ್ರವಾಸೋದ್ಯಮ ಕ್ಷೇತ್ರದ ಜನರಿಗೆ ಕಾರ್ಯನಿರತ ಬಂಡವಾಳ / ವೈಯಕ್ತಿಕ ಸಾಲಗಳನ್ನು ಶೇಕಡಾ 100 ರಷ್ಟು ಖಾತರಿ ನೀಡಲಾಗುವುದು. ಸಂಸ್ಕರಣಾ ಶುಲ್ಕ, ಪೂರ್ವಪಾವತಿ ಶುಲ್ಕ ಮನ್ನಾ ಮಾಡಲಾಗಿದೆ.


ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು, ಹೊಸ ಸಾಲ ಖಾತರಿ ಯೋಜನೆಯು 10,700 ಪ್ರಾದೇಶಿಕ ಮಟ್ಟದ ಪ್ರವಾಸಿ ಮಾರ್ಗದರ್ಶಿಗಳನ್ನು ಮತ್ತು ಪ್ರವಾಸೋದ್ಯಮ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಟ್ರಾವೆಲ್ & ಟೂರಿಸಂ ಸ್ಟೇಕ್ ಹೋಲ್ಡರ್ಸ್ (ಟಿಟಿಎಸ್) ಬೆಂಬಲಿಸುತ್ತದೆ.

ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಶನ್ಸ್ ಮೂಲಕ 25 ಲಕ್ಷ ಜನರಿಗೆ ಸಾಲ ನೀಡಲು ಅನುಕೂಲವಾಗುವಂತೆ ಹೊಸ ಸಾಲ ಖಾತರಿ ಯೋಜನೆಯನ್ನು ಘೋಷಿಸಲಾಗಿದೆ. ಬ್ಯಾಂಕುಗಳಿಂದ ಪಡೆದ ಸಾಲದ ಮೇಲಿನ ಬಡ್ಡಿದರವನ್ನು ಎಂಸಿಎಲ್‌ಆರ್ ಜೊತೆಗೆ ಶೇ. 2ರಷ್ಟು ಮುಚ್ಚಲಾಗುತ್ತದೆ. ಹಳೆಯ ಸಾಲಗಳನ್ನು ಮರುಪಾವತಿಸದೆ ಹೊಸ ಸಾಲ ನೀಡುವತ್ತ ಗಮನ ಹರಿಸಲಾಗುವುದು.

ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ರಫ್ತು ವಿಮಾ ಖಾತೆಗೆ ಹೆಚ್ಚುವರಿ ರೂ. 33,000 ಕೋಟಿ ಯೋಜನಾ ರಫ್ತಿಗೆ ಒಳಪಡಲು ಹೆಚ್ಚುವರಿ ಕಾರ್ಪಸ್ ಒದಗಿಸಲು ಸರ್ಕಾರ ಪ್ರಸ್ತಾಪಿಸಿದೆ.

ಈ ನಡುವೆ ಕೆಲವು ದೇಶಗಳು ಭಾರತೀಯರಿಗೆ ತಮ್ಮ ದೇಶಕ್ಕೆ ಬರಲು ಮುಕ್ತ ಅವಕಾಶ ಒದಗಿಸಿವೆ. ಕೋವಿಡ್ ನೆಗೆಟಿವ್ ರಿಪೋರ್ಟ್, ವ್ಯಾಕ್ಸಿನ್, ಐಸೋಲೇಷನ್ ಮುಂತಾದ ಷರತ್ತುಗಳನ್ನು ವಿಧಿಸಿವೆ. ಏತನ್ಮಧ್ಯೆ, ಕರ್ನಾಟಕ ರಾಜ್ಯದಲ್ಲಿ ಪ್ರವಾಸಿ ತಾಣಗಳು ಮತ್ತೆ ತೆರೆಯುವ ಮುನ್ಸೂಚನೆಯೂ ಇದೆ. ಒಟ್ಟಾರೆ ಪ್ರವಾಸೋದ್ಯಮ ಕ್ಷೇತ್ರ ತನ್ನ ಹಳೆಯ ರೂಪಕ್ಕೆ ಮರಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button