ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ಗತವೈಭವದ ರಹಸ್ಯಗಳನ್ನು ಸಾರಿ ಹೇಳಲಿದೆ ರೋಮ್ನ ಕೊಲೊಸಿಯಮ್

ತನ್ನ 2,000 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಟಲಿಯ ರೋಮ್‌ನ ಕೊಲೊಸಿಯಮ್ ತನ್ನ ರಹಸ್ಯ ಸುರಂಗಗಳನ್ನು ಸಾರ್ವಜನಿಕರಿಗೆ ತೆರೆದು ಹಳೆಯ ಗತವೈಭವದ ಕಥೆಗಳನ್ನು ಅನ್ವೇಷಿಸಲು ಅನುವು ಮಾಡಿಕೊಟ್ಟಿದೆ.

  • ಆದಿತ್ಯ ಯಲಿಗಾರ

ರೋಮನ್ ಫೋರಂನ ಸ್ವಲ್ಪ ಪೂರ್ವದಲ್ಲಿ ಇರುವ ಕೊಲೊಸಿಯಮ್ ಎಂದು ಕರೆಯಲ್ಪಡುವ ಬೃಹತ್ ಕಲ್ಲಿನ ಆಂಫಿಥಿಯೇಟರ್ ಅನ್ನು ಕ್ರಿಸ್ತಶಕ 70-72ರ ಸುಮಾರಿಗೆ ಫ್ಲೇವಿಯನ್ ರಾಜವಂಶದ ಚಕ್ರವರ್ತಿ ವೆಸ್ಪಾಸಿಯನ್ ಅವರು ರೋಮನ್ ಜನರಿಗೆ ಬಳುವಳಿಯಾಗಿ ನಿರ್ಮಿಸಿದರು. ಕ್ರಿಸ್ತಶಕ 80 ರಲ್ಲಿ, ವೆಸ್ಪಾಸಿಯನ್ ಅವರ ಮಗ ಟೈಟಸ್ ಕೊಲೊಸಿಯಮ್ ಅನ್ನು ಅಧಿಕೃತವಾಗಿ ಫ್ಲೇವಿಯನ್ ಆಂಫಿಥಿಯೇಟರ್ ಎಂದು ಕರೆದರು ಗ್ಲಾಡಿಯೇಟೋರಿಯಲ್ ಯುದ್ಧಗಳು(ಒಂದು ಬಗೆಯ ಮನೋರಂಜನಾತ್ಮಕ ಕಾದಾಟ) ಮತ್ತು ಕಾಡು ಪ್ರಾಣಿಗಳ ಕಾದಾಟಗಳು ಸೇರಿದಂತೆ ಹಲವು ಬಗೆಯ ಆಟಗಳು ಆಡಲ್ಪಡುತ್ತಿದ್ದವು.

ನಾಲ್ಕು ಶತಮಾನಗಳ ಸಕ್ರಿಯ ಬಳಕೆಯ ನಂತರ, ಭವ್ಯವಾದ ರಂಗವು ನಿರ್ಲಕ್ಷ್ಯಕ್ಕೆ ಒಳಗಾಯಿತು, ಮತ್ತು 18 ನೇ ಶತಮಾನದವರೆಗೆ ಇದನ್ನು ಕಟ್ಟಡ ಸಾಮಗ್ರಿಗಳ ಮೂಲವಾಗಿ ಬಳಸಲಾಗುತ್ತಿತ್ತು. ಮೂಲ ಕೊಲೊಸಿಯಂ ಸಾಕಷ್ಟು ನಾಶವಾಗಿದ್ದರೂ, ಆಂಫಿಥಿಯೇಟರ್ ಜನಪ್ರಿಯ ಪ್ರವಾಸಿ ತಾಣವಾಗಿ ಉಳಿದಿದೆ, ಜೊತೆಗೆ ರೋಮ್‌ನ ಸಾಂಪ್ರದಾಯಿಕ ಸಂಕೇತ ಮತ್ತು ಅದರ ಸುದೀರ್ಘ, ಪ್ರಕ್ಷುಬ್ಧ ಇತಿಹಾಸವನ್ನ ಸಾರಿ ಹೇಳುತ್ತದೆ.

Rome Colosseum Hypogeum Amphitheater

ತನ್ನ 2,000 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರೋಮ್‌ನ ಕೊಲೊಸಿಯಮ್  ತನ್ನ ರಹಸ್ಯ ಸುರಂಗಗಳನ್ನು ಸಾರ್ವಜನಿಕರಿಗೆ ತೆರೆಯುವ ಮೂಲಕ ಈ ಐತಿಹಾಸಿಕ ಆಂಫಿಥಿಯೇಟರ್‌ಗೆ ಭೇಟಿ ನೀಡುವವರು  ಅದರ ರಹಸ್ಯಮಯ ಸುರಂಗಗಳನ್ನ ಮತ್ತು ಕೋಣೆಗಳನ್ನು ಸಂಪೂರ್ಣವಾಗಿ ಅನ್ವೇಷಿಸಬಹುದು, ಅಲ್ಲಿ ಗ್ಲಾಡಿಯೇಟರ್‌ಗಳು (ಒಂದು ರೀತಿಯ ವಿಶಿಷ್ಟ ಯೋಧರು)  ಒಮ್ಮೆ ತರಬೇತಿ ಪಡೆಯುತ್ತಿದ್ದರು ಮತ್ತು ಯುದ್ಧಕ್ಕಾಗಿ ಅಲ್ಲಿ ಕಾಯುತ್ತಿದ್ದರು.

Rome Colosseum Hypogeum Amphitheater

ಕೊಲೊಸಿಯಮ್ ಭವ್ಯ ಕಟ್ಟಡದ ‘ಹೃದಯ’ ಎಂದು ವರ್ಣಿಸಲಾಗಿರುವ ಈ ಪ್ರದೇಶವು ವಾಸ್ತವವಾಗಿ 15,000 ಚದರ ಮೀಟರ್‌ನಲ್ಲಿ ಹರಡಿರುವ ಹೈಪೊಜಿಯಂ (ನೆಲದಡಿಯಲ್ಲಿರುವ ಕೋಣೆ) ಆಗಿದೆ.ಇಟಾಲಿಯನ್ ಫ್ಯಾಶನ್ ಹೌಸ್ ಮಾಡಿದ ಧನಸಹಾಯದ ಕಾರಣ   ಕೊಲೊಸಿಯಮ್ ನೆಲದಡಿಯನ್ನ ಮರುಸ್ಥಾಪನೆಗೊಳಿಸುವ ಕಾರ್ಯ ಶುರುವಾಯಿತು. ಮರುಸ್ಥಾಪನೆ ಪೂರ್ಣಗೊಂಡ ನಂತರ ಇದನ್ನು ಸಾರ್ವಜನಿಕರಿಗೆ ತೆರೆಯಲಾಯಿತು ಎಂದು ದಿ ಗಾರ್ಡಿಯನ್ ವರದಿ ತಿಳಿಸಿದೆ.

ನೀವುಇದನ್ನುಇಷ್ಟಪಡಬಹುದು: ಆಗಸದಲ್ಲಿ ಹಾರಾಟ ಆರಂಭಿಸಿದ ವಿಶ್ವದ ಮೊದಲ ಏರ್ ಕಾರ್.

80 ಕ್ಕೂ ಹೆಚ್ಚು ಪುರಾತತ್ವ ತಜ್ಞರು, ವಾಸ್ತುಶಿಲ್ಪಿಗಳು ಮತ್ತು ಎಂಜಿನಿಯರ್‌ಗಳು ಕೊಲೊಸಿಯಮ್ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಟಾಡ್‌ನ (Transit Oriented Development) ಅಧ್ಯಕ್ಷ ಡಿಯಾಗೋ ಡೆಲ್ಲಾ ವ್ಯಾಲೆ ಹೇಳಿದ್ದಾರೆ. ವರದಿಗಳ ಪ್ರಕಾರ, ಎಂಟು ವರ್ಷಗಳ ಹಿಂದೆ ಪ್ರಾರಂಭವಾದ ಕೊಲೊಸಿಯಮ್ ಜೀರ್ಣೋದ್ಧಾರ ಕಾರ್ಯದ ಮೂರು-ಹಂತದ ಯೋಜನೆಯ ಎರಡನೇ ಭಾಗವಾಗಿ ನೆಲದಡಿಯ ಹೈಪೊಜಿಯಂನ್ನು ಪುನಃಸ್ಥಾಪನೆಗೊಳಿಸಲಾಗಿದೆ.

2010 ರಿಂದ, ಆಂಫಿಥಿಯೇಟರ್ ಅಖಾಡದ ಕೆಳಗಿರುವ ಹೈಪೊಜಿಯಂ ನೆಟ್‌ವರ್ಕ್‌ಗೆ ಇಳಿಯಲು ಸಂದರ್ಶಕರಿಗೆ ಅವಕಾಶ ನೀಡಲಾಯಿತು. ಆದರೆ ಆ ಸಮಯದಲ್ಲಿ ಅವರಿಗೆ ಅಲ್ಲಿನ ಒಂದು ಸಣ್ಣ ಭಾಗವನ್ನಷ್ಟೆ ಪ್ರವೇಶಿಸಲು ಅವಕಾಶವಿತ್ತು. ಈಗ, ಅವರು ಮುಕ್ತವಾಗಿ ಅಲ್ಲಿನ ಕಾಲುದಾರಿಗಳಲ್ಲಿ ಸಂಚರಿಸಬಹುದು ಮತ್ತು ಎಲ್ಲಾ ಸುರಂಗಗಳನ್ನ ಮತ್ತು ಕೋಣೆಗಳನ್ನ ಅನ್ವೇಷಿಸಬಹುದು.

ಪ್ರಾಚೀನ ರೋಮನ್ ಅವಧಿಯಲ್ಲಿ, ಹೈಪೊಜಿಯಂ ಅನ್ನು ಮೇಣದ ಬತ್ತಿಯ ದೀಪದಿಂದ ಮಾತ್ರ ಬೆಳಗಿಸಲಾಗುತಿತ್ತು. ಆದರೆ ಅಲ್ಲಿಯ ಅಖಾಡದ ಮೂಲ ನೆಲ ಮಟ್ಟ ನಾಶವಾದ ನಂತರ, ಈ ಹೈಪೊಜಿಯಂ ಪ್ರದೇಶ ಕೊಲೊಸಿಯಮ್‌ನ ಮೇಲಿನಿಂದ ಗೋಚರಿಸಿತು ಎಂದು ಸಿಎನ್‌ಎನ್ ಟ್ರಾವೆಲ್ ವರದಿ ಮಾಡಿದೆ.

Rome Colosseum Hypogeum Amphitheater

ಹೈಪೊಜಿಯಂ ಆಂಫಿಥಿಯೇಟರ್‌ನ ‘ತೆರೆಮರೆಯಾಗಿ’ (Backstage) ಬಳಸಲಾಗುತ್ತಿತ್ತು ಎಂದು ಕೊಲೊಸಿಯಮ್‌ನ ನಿರ್ದೇಶಕ ಅಲ್ಫೊನ್ಸಿನಾ ರುಸ್ಸೊ ಹೇಳಿದ್ದಾರೆ. ಇದನ್ನು ಮೂಲತಃ 19 ನೇ ಶತಮಾನದಲ್ಲಿ ಶೋಧನೆ ಮಾಡಲಾಯಿತು.”ಹೈಪೊಜಿಯಂ 400 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ,ಇಂದು ನಾವು ಈ ಭವ್ಯ ಸ್ಮಾರಕದೊಳಗಿನ ಮತ್ತೊಂದು ಸ್ಮಾರಕವನ್ನು ಸಾರ್ವಜನಿಕರಿಗೆ ಪರಿಚಯಿಸುತ್ತಿದ್ದೇವೆ.” ಎಂದು ರುಸ್ಸೋ ಹೇಳಿದರು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button