ವಿಂಗಡಿಸದ

ವಿಶ್ವದ ಅತ್ಯಂತ ಸಂತೋಷ ಮತ್ತು ಅತೃಪ್ತ ದೇಶಗಳ ಪಟ್ಟಿ ಬಿಡುಗಡೆ; ಇಲ್ಲಿದೆ ವಿವರ

ಗ್ಲೋಬಲ್ ಮೈಂಡ್ ಪ್ರಾಜೆಕ್ಟ್‌ನ (Global mental health) ‘ಮೆಂಟಲ್ ಸ್ಟೇಟ್ ಆಫ್ ದಿ ವರ್ಲ್ಡ್’ (Mental State of the World) ವರದಿಯು ಈ ವರ್ಷದ ಸಂತೋಷದ (Happiest) ಮತ್ತು ಅತೃಪ್ತ (Miserable) ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದು 71 ದೇಶಗಳ 4,00,000 ಕ್ಕೂ ಹೆಚ್ಚು ಜನರನ್ನು ಒಳಗೊಂಡ ಸಮೀಕ್ಷೆಯಾಗಿದ್ದು, 2020 ರಲ್ಲಿ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಮಾನಸಿಕ ಯೋಗಕ್ಷೇಮದಲ್ಲಿ (Mental wellbeing) ಗಮನಾರ್ಹ ಕುಸಿತವನ್ನು ಸಂಶೋಧನೆ ಬಹಿರಂಗಪಡಿಸುತ್ತವೆ.

ಇದರ ಇತ್ತೀಚಿನ ವರದಿಗಳ ಪ್ರಕಾರ, ಜಾಗತಿಕವಾಗಿ ಜನರ ಮಾನಸಿಕ ಆರೋಗ್ಯದ ಮೇಲೆ COVID-19 ಸಾಂಕ್ರಾಮಿಕ ರೋಗವು ಆಳವಾಗಿ ಪ್ರಭಾವ ಬೀರಿರುವುದನ್ನು ಒತ್ತಿ ಹೇಳುತ್ತದೆ.

ನರವಿಜ್ಞಾನ ಸಂಶೋಧನಾ ಸಂಸ್ಥೆ ಸೇಪಿಯನ್ ಲ್ಯಾಬ್ಸ್ ನೇತೃತ್ವದಲ್ಲಿ, ಗ್ಲೋಬಲ್ ಮೈಂಡ್ ಪ್ರಾಜೆಕ್ಟ್ 2019 ರಿಂದ ಯಾವುದೇ ಲಾಭೋದ್ದೇಶವಿಲ್ಲದ ದೇಶಗಳ ಮಾನಸಿಕ ಆರೋಗ್ಯ ಪ್ರವೃತ್ತಿಗಳ ಒಳನೋಟಗಳನ್ನು ಬಿಡುಗಡೆ ಮಾಡುತ್ತಿದೆ.

ಮಾನಸಿಕ ಆರೋಗ್ಯ ಶ್ರೇಯಾಂಕ (Mental Health Quotient (MHQ)) ಎಂದು ಕರೆಯಲ್ಪಡುವ ಮಾಪನವನ್ನು ಬಳಸಿಕೊಂಡು, ದೇಶಗಳ ಜನರ ಮಾನಸಿಕ ಆರೋಗ್ಯದ ವಿವಿಧ ಆಯಾಮಗಳನ್ನು ನಿರ್ಣಯಿಸುತ್ತದೆ.

ಭಾಗವಹಿಸುವ ಜನರನ್ನು “ಅಭಿವೃದ್ಧಿ” ಎಂದು ಪರಿಗಣಿಸಲ್ಪಟ್ಟವರಿಂದ ಹಿಡಿದು “ಸಂಕಷ್ಟ” ಎಂದು ವರ್ಗೀಕರಿಸಿದ ವ್ಯಕ್ತಿಗಳವರೆಗೆ MHQ ಸ್ಕೋರ್‌ಗಳ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ.

ಈ ವರದಿಯ ಪ್ರಕಾರ, ಅತ್ಯಂತ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗಿಂತ, ಅಭಿವೃದ್ಧಿಶೀಲ ದೇಶಗಳು ಹೆಚ್ಚು ಮಾನಸಿಕ ಯೋಗಕ್ಷೇಮವನ್ನು ಹೊಂದಿರುವುದು ಸಂಶೋಧನೆಯ ಮೂಲಕ ತಿಳಿದು ಬಂದಿದೆ.

ಪ್ರಪಂಚದ ಅತ್ಯಂತ ಸಂತೋಷದ ಸ್ಥಳಗಳ ಪಟ್ಟಿಯಲ್ಲಿ ಡೊಮಿನಿಕನ್ ರಿಪಬ್ಲಿಕ್, ಶ್ರೀಲಂಕಾ ಮತ್ತು ತಾಂಜಾನಿಯಾ ದೇಶಗಳು ಸೇರಿದರೆ, ಅತ್ಯಂತ ಅತೃಪ್ತ ದೇಶಗಳ ಪಟ್ಟಿಯಲ್ಲಿ ಉಜ್ಬೇಕಿಸ್ತಾನ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ತಜಕಿಸ್ತಾನ್, ಬ್ರೆಜಿಲ್ ದೇಶಗಳು ಸೇರಿವೆ.

ವರದಿಯ ಪ್ರಕಾರ, ಡೊಮಿನಿಕನ್ ರಿಪಬ್ಲಿಕ್ (Dominican Republic) ಹೆಚ್ಚು 91 MHQ ಶ್ರೇಯಾಂಕ ಪಡೆದು, ಅತ್ಯಂತ ಉತ್ತಮ ಮಾನಸಿಕ ಯೋಗಕ್ಷೇಮ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.

ಇದರ ನಂತರ ಶ್ರೀಲಂಕಾ (Sri Lanka) ಮತ್ತು ತಾಂಜಾನಿಯಾಗಳು (Tanzania) ಅನುಕ್ರಮವಾಗಿ 89 ಮತ್ತು 88 ರ MHQ ಸ್ಕೋರ್‌ಗಳನ್ನು ಪಡೆದು, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದೆ.

ಉಜ್ಬೇಕಿಸ್ತಾನ (Uzbekistan) ಅತ್ಯಂತ ಕಡಿಮೆ 48 MHQ ಸ್ಕೋರ್ ಪಡೆದು ಅತ್ಯಂತ ಕಡಿಮೆ ಮಾನಸಿಕ ಯೋಗಕ್ಷೇಮ ಹೊಂದಿರುವ ಸ್ಥಾನದಲ್ಲಿದ್ದು, ಅತ್ಯಂತ ಅತೃಪ್ತ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಯುನೈಟೆಡ್ ಕಿಂಗ್‌ಡಮ್ (United Kingdom) 49 ಸ್ಕೋರ್‌ನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

MHQ ಶ್ರೇಯಾಂಕಗಳ ಪ್ರಕಾರ, ಟಾಪ್ 10 (Top 10) ಉತ್ತಮ ಮಾನಸಿಕ ಯೋಗಕ್ಷೇಮ ಹೊಂದಿರುವ ಸಂತೋಷದ ದೇಶಗಳ (Happiest Countries) ಪಟ್ಟಿ ಇಲ್ಲಿದೆ.

1.ಡೊಮಿನಿಕನ್ ರಿಪಬ್ಲಿಕ್

2.ಶ್ರೀಲಂಕಾ

3. ಟಾಂಜಾನಿಯಾ

4. ಪನಾಮ

5. ಮಲೇಷ್ಯಾ

6. ನೈಜೀರಿಯಾ

7. ವೆನೆಜುವೆಲಾ

8. ಎಲ್ ಸಾಲ್ವಡಾರ್

9. ಕೋಸ್ಟ ರಿಕಾ

10. ಉರುಗ್ವೆ

MHQ ಶ್ರೇಯಾಂಕಗಳ ಪ್ರಕಾರ, ಟಾಪ್ 10 ಕಡಿಮೆ ಮಾನಸಿಕ ಯೋಗಕ್ಷೇಮ ಹೊಂದಿರುವ ಅತೃಪ್ತ ದೇಶಗಳ (Unhappiest Countries) ಪಟ್ಟಿ ಇಲ್ಲಿದೆ. 1.ಉಜ್ಬೇಕಿಸ್ತಾನ್

2.ಯುನೈಟೆಡ್ ಕಿಂಗ್ಡಮ್

3.ದಕ್ಷಿಣ ಆಫ್ರಿಕಾ

4.ಬ್ರೆಜಿಲ್

5.ತಜಕಿಸ್ತಾನ್

6.ಆಸ್ಟ್ರೇಲಿಯಾ

7.ಈಜಿಪ್ಟ್

8.ಐರ್ಲೆಂಡ್

9.ಇರಾಕ್

10.ಯೆಮೆನ್

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button