ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ವಿದ್ಯಾ ದೇವತೆ ಶಾರದಾಂಬೆಯ ನಾಡಿನ ಎರಡು ಮುಖ್ಯವಾದ ದೇಗುಲಗಳು

ನಾಡಿನ ಮಹತ್ವದ ಎರಡು ಶಾರದಾಂಬೆ ದೇಗುಲಗಳ ಸಂಪೂರ್ಣ ಪರಿಚಯ.

  • ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನಲ್ಲಿ ದಸರಾ ಹಬ್ಬದ ಆಚರಣೆಗೆ ವಿಶಿಷ್ಟವಾದ ಪರಂಪರೆ ಇದೆ. ಇಲ್ಲಿ ಹಲವು ದೇವಿಯ ಆರಾಧನೆಗಳಲ್ಲಿ ವಿದ್ಯಾ ಆದಿ ದೇವತೆ ಶಾರದಾ ದೇವಿಯೂ ಪೂಜೆಯೂ ಪ್ರಮುಖವಾದದ್ದು. ನಾಡಿನ ಮುಖ್ಯವಾದ ಶಾರದಾ ದೇವಾಲಯಗಳ ಪರಿಚಯ ಇಲ್ಲಿದೆ.

ಶೃಂಗೇರಿ ಶ್ರೀ ಶಾರದಾ ದೇವಾಲಯ

ಶಾರದೆ ಎಂದರೆ ನಮಗೆ ನೆನಪಾಗುವುದು ಶೃಂಗೇರಿಯ ಶಾರದಾ ಮಾತೆ.(sringeri sharadamba) ಶೃಂಗಗಿರಿ ಎಂದೇ ಪ್ರಸಿದ್ಧಿಯಾಗಿದ್ದ ಇಲ್ಲಿ ವಿಬಾಂಡಕ ಮುನಿಗಳು ತಪಸ್ಸನ್ನು ಆಚರಿಸಿದ್ದರು. ಶೃಂಗ (ಕೋಡು) ಹೊಂದಿದ್ದ ಮುನಿ ಇಲ್ಲಿ ತಪಸ್ಸು ಮಾಡಿದ ಕಾರಣ ಶೃಂಗ ಗಿರಿ ಎಂಬ ಹೆಸರು ಬಂದಿದೆ. ಇಲ್ಲಿ ಹಸುವಿನ ಕೋಡಿನ ಹಾಗೆ ಗಿರಗಳು ಇರುವ ಕಾರಣ ಇಲ್ಲಿ ಈ ಹೆಸರು ಬಂದಿತು ಎಂಬ ನಂಬಿಕೆಯೂ ಇದೆ.

Sringeri Sharadamba
Shankaracharya Shivamogga
Akhil S

ಶ್ರೀ ಶಂಕಾರಾಚಾರ್ಯರಿಂದ(shankaracharya) ಮೊದಲು ಸ್ಥಾಪಿತವಾದ ಪೀಠವೇ ಶ್ರೀ ಶಾರದಾ ಪೀಠ. ಇಲ್ಲಿ ಮಳೆ ಬರುವ ಸಮಯದಲ್ಲಿ ಹಾವು ಕಪ್ಪೆಗೆ ರಕ್ಶಣೆ ನೀಡಿದ ಘಟನೆ ಶಂಕರಾಚಾರ್ಯರಿಗೆ ಇಲ್ಲಿ ಶ್ರೀ ಮಠವನ್ನು ಸ್ಥಾಪಿಸಲು ಪ್ರೇರಣೆ ನೀಡಿತು ಎನ್ನಲಾಗಿದೆ. ಶಂಕಾರಚಾರ್ಯರಿಂದ ಸ್ಥಾಪಿತವಾದಿ ಶ್ರೀಚಕ್ರ ಇದ್ದು ಗರ್ಭಗುಡಿಯಲ್ಲಿ ಸುಂದರ ಶಾರದಾ ಮೂರ್ತಿ ಇದೆ. ಶಾರದಾ ಮಾತೆಯ ಶಿಲ್ಪ ಸುಂದರವಾಗಿದ್ದು ನಾಲ್ಕು ಭುಜವನ್ನ ಹೊಂದಿದೆ. ಮೇಲಿನ ಕೈಗಳಲ್ಲಿ ಅಕ್ಶರಮಾಲೆ ಹಾಗು ಮುಕ್ತಾ ಫಲಕ ಇದ್ದರೆ ಕೆಳಗಿನ ಕೈಗಳಲ್ಲಿ ಅಭಯಹಸ್ತವಿದ್ದು ಇದರಲ್ಲಿ ಪದ್ಮವಿದ್ದರ ಮತ್ತೊಂದರಲ್ಲಿ ಪುಸ್ತಕವಿದೆ. ಈಗಿನ ದೇವಾಲಯ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಸುಂದರ ದೇವಾಲಯ. 

Sringeri Sharadamba
Shankaracharya Shivamogga
Kavana Jois

ಇಲ್ಲಿ ನವರಾತ್ರಿಯಲ್ಲಿ ಶಾರದಾ ಮಾತೆಗೆ ವಿಶೇಷ ಪೂಜ ನಡೆಯಲಿದ್ದು ಪ್ರತಿ ದಿನವೂ ವಿಭಿನ್ನ ವಾಹನದಿಂದ ದೇವಿಯ ಅಲಂಕಾರ ಮಾಡುವುದು ವಿಶೇಷ. ಆಶ್ವೀಜ ಮಾಸದ ಹುಣ್ಣಿಮೆಯ ದಿನ ಇಲ್ಲಿ ಶ್ರೀ ಶಾರದಾಂಭಾ ತೆಪ್ಪೋತ್ಸವ(theppotsava) ನಡೆಯುತ್ತದೆ. ದೇವಾಲಯದ ಪ್ರಕಾರದಲ್ಲಿ ಹಲವು ದೇವಾಲಯಗಳಿದ್ದು 16ನೇ ಶತಮಾನದ ವಿಜಯನಗರ ಕಾಲದ ಸುಂದರ ಶಿಲಾ ವಿದ್ಯಾಶಂಕರ ದೇವಾಲಯ ಗಮನ ಸೆಳೆಯುತ್ತದೆ. ಆವರಣದಲ್ಲಿ ಶ್ರೀ ಶಂಕರಾಚಾರ್ಯರಿಗೆ ನೂತನ ದೇವಾಲಯ ಹಾಗು ರಾಜಗೋಪುರವನ್ನು ಇತ್ತೀಚಿಗೆ ನಿರ್ಮಿಸಲಾಗಿದ್ದು ನಿತ್ಯ ಅನ್ನಧಾನವಿದೆ.

Sringeri Sharadamba
Shankaracharya Shivamogga

ಇಲ್ಲಿನ ಚತುವಿರ್ದ್ವೇಶ್ವರ ದೇವಾಲಯ, ಮಲಹಾನಿಕರೇಶ್ವರ ದೇವಾಲಯ, ಕಾಲ ಭೈರವೇಶ್ವರ ದೇವಾಲಯ, ನರಸಿಂಹ ವನ, ಕಾಳಿಕಾಂಬಾ ದೇವಾಲಯ, ವಿದ್ಯಾರಾಣ್ಯಪುರದಲ್ಲಿನ ದೇವಾಲಯಗಳು ನೋಡಲೇಬೇಕಾದದ್ದು. 

ನೀವು ಇದನ್ನು ಇಷ್ಟಪಡಬಹುದು: ಹೊಯ್ಸಳ ರಾಜರು ನಿರ್ಮಿಸಿದ ವಿಶಿಷ್ಟ ದೇಗುಲ ಹರಿಹರೇಶ್ವರ: ಸುವರ್ಣಲಕ್ಷ್ಮೀ ಬರೆದ ದೇಗುಲ ಪರಿಚಯ

ಹರಿಹರಪುರ ಶ್ರೀ ಶಾರದ ದೇವಾಲಯ 

ಶೃಂಗೇರಿಯ ಸನಿಹದಲ್ಲಿ ಶ್ರೀ ಶಂಕರಾಚಾರ್ಯರಿಂದ ಶ್ರೀ ಚಕ್ರ ಪ್ರತಿಷ್ಠಾಪನೆಗೊಂಡು ನಂತರದಲ್ಲಿ ಶಾರದಾ ಪೀಠ ಸ್ಥಾಪನಗೊಂಡ ಮತ್ತೊಂದು ಕ್ಷೇತ್ರವೆಂದರೆ ಹರಿಹರಪುರದ ಶ್ರೀ ಲಕ್ಶ್ಮೀ ನರಸಿಂಹ ಶಾರಾದ ಪೀಠ.

14ನೇ ಶತಮಾನದಲ್ಲಿ ವಿಜಯನಗರದ ಹರಿಹರನ ಕಾಲದಲ್ಲಿ ಇಲ್ಲಿ ಅಗ್ರಹಾರವನ್ನು ನಿರ್ಮಿಸಿ ಹರಿಹರಿಹಪುರ ಎಂಬ ಹೆಸರು ಇಟ್ಟ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಇನ್ನು ಇಲ್ಲಿನ ಸ್ಥಳ ಪುರಾಣದಂತೆ ಸಿದ್ಧಿ ಕ್ಷೇತ್ರವಾದ ಇಲ್ಲಿ ದಕ್ಷ ಪ್ರಜಾಪತಿಯು ಇಲ್ಲಿ ಮಹಾಯಾಗ ಮಾಡಿದ್ದು ಶಿವನೇ ಇಲ್ಲಿ ಎಲ್ಲರನ್ನು ಅನುಗ್ರಹಸಿದ ಎಂಬ ನಂಬಿಕೆ ಇದೆ. ಇಲ್ಲಿನ ಅರಣ್ಯದ ನಡುವೆ ದೇವಾಲಯ ಇದ್ದು ಶ್ರೀ ದಕ್ಷಹರ ಸೋಮೇಶ್ವರ ಎಂದೇ ಪೂಜೆಗೊಳ್ಳುತ್ತಿದೆ.  

ಶ್ರೀ ಅಗಸ್ತ್ಯ ಮಹರ್ಷಿಗಳು ಇಲ್ಲಿ ತಪೋನಿರತರಾಗಿದ್ದು ಇಲ್ಲಿನ ತುಂಗಾನದಿಯ(Tunga river) ತಟದ ಪರಿಸರಕ್ಕೆ ಮನಸೋತು ತಾವು ಪೂಜಿಸುತ್ತಿದ್ದ ಶ್ರೀ ಲಕ್ಷ್ಮೀನರಸಿಂಹದ ಚಿಕ್ಕ ಸಾಲಿಗ್ರಾಮ ಮೂರ್ತಿಗಳನ್ನು ತಮ್ಮ ಶಿಷ್ಯ ಶ್ರೀ ಗೋವಿಂದ ಯೋಗಿಗಳಿಗೆ ನೀಡಿ ತೆರಳಿದರು ಎಂಬ ನಂಬಿಕೆ ಇದೆ. ಈಗಲೂ ಶ್ರೀ ಲಕ್ಷ್ಮೀನರಸಿಂಹ ಮೂರ್ತಿಗಳು ಪೂಜಿಸಲ್ಪಡುತ್ತಿದೆ. 

Sharadamba Temple
Shankaracharya
Harihar

ಶ್ರೀ ಶಂಕರಾಚಾರ್ಯರು ಭಾರತದಲ್ಲಿ ಧರ್ಮ ಪ್ರಚಾರದ ನಿಮಿತ್ತ ಭಾರತ ಪ್ರವಾಸ ಕಾಲದಲ್ಲಿ ದಕ್ಷಿಣದಲ್ಲಿ ಪೀಠ ಸ್ಥಾಪನೆಗೆ ಜಾಗ ಅರುಸುತ್ತಿರುವಾಗ ಈ ಕ್ಷೇತ್ರಕ್ಕೆ ಬಂದಿದ್ದರು. ಆಗ ಅಲ್ಲಿ ನರಸಿಂಹ ದೇವರ ಪೂಜೆ ನಿರ್ವಹಿಸುತ್ತಾ ಇದ್ದ ಶ್ರೀ ಕೃಷ್ಣ ಯೋಗಿಂದ್ರರ ಸನ್ನಿಧಾನದಲ್ಲಿ ಇಲ್ಲಿನ ಸುಂದರ ಪರಿಸರ ಕಂಡು ತಮ್ಮ ಅಧಿ ದೇವತೆಯಾಗಿದ್ದ ಶ್ರೀ ಶಾರದಾ ಮಾತೆಯನ್ನು ತುಂಗಾ ನದಿ ತೀರದಲ್ಲಿ ಶ್ರೀ ಚಕ್ರದ ಮೂಲಕ ಸ್ಥಾಪಿಸಿ ಉಪಾಸನೆಯ ನಿರ್ವಹಣೆಯನ್ನು ಶ್ರೀ ಕೃಷ್ಣ ಯೋಗೀಂದ್ರರಿಗೆ ಒಪ್ಪಿಸಿ ಮುಂದೆ ಶೃಂಗೇರಿಗೆ ಪ್ರಯಾಣ ಬೆಳಸಿದರು.

ತರ ಕಾಲದಲ್ಲಿ ಶೃಂಗೇರಿಯಲ್ಲಿ ಪೀಠ ಸ್ಥಾಪಿತವಾದ ನಂತರ ಪ್ರಥಮ ಪೀಠಾದೀಶ ಶ್ರೀ ಸುರೇಶ್ವಾರಾಚಾರ್ಯರು ಶ್ರೀ ಕೃಷ್ಣ ಯೋಗೀಂದ್ರರಿಗೆ ಸಂನಾಸ್ಯ ದೀಕ್ಷೆ ನೀಡಿ ಇಲ್ಲಿ ಶ್ರೀ ಶಾರದಾ ಪೀಠ ಸ್ಥಾಪನೆಯಾಗಿ ಇಂದಿಗೂ ಪೂಜೆ ನಡೆಯುತ್ತಿದೆ.  

ದಸರೆಯಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಪ್ರತಿದಿನವೂ ಶ್ರೀ ಶಾರದಾ ಮಾತೆಗೆ ಪ್ರತಿ ದಿನವೂ ವಿಷೇಶ ವಾಹನದೊಂದಿಗೆ ಅಲಂಕಾರ ಮಾಡುವುದು ವಿಶೇಷ. ಈಗ ಇಲ್ಲಿ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿಗಳು ಪೀಠಾದಿಶರಾಗಿದ್ದು ಇಡೀ ದೇವಾಲಯವನ್ನು ಶೀಲಾಮಯವಾಗಿ ಪುನರ್ ನಿರ್ಮಾಣ ಮಾಡುತ್ತಿದ್ದು ವೇದ ಪಾಠಶಾಲೆ ಮುಂತಾದ ಕಾರ್ಯಕ್ರಮಗಳಿಂದ ಹೊಸ ಸ್ಪರ್ಶ ನೀಡಿದ್ದಾರೆ.

ತಲುಪುವುದು ಹೀಗೆ

ಶಿವಮೊಗ್ಗ – ಕೊಪ್ಪ ಮಾರ್ಗವಾಗಿ ಶೃಂಗೇರಿ ಮಾರ್ಗದಲ್ಲಿ ಸುಮಾರು 10ಕಿ ಮೀ ದೂರದಲ್ಲಿದೆ. ಬೆಂಗಳೂರು – ಶೃಂಗೇರಿ ಮಾರ್ಗವಾಗಿ ಕೊಪ್ಪ – ಶಿವಮೊಗ್ಗ ಮಾರ್ಗದಲ್ಲಿ ಸುಮಾರು 18 ಕಿ ಮೀ ದೂರದಲ್ಲಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button