ವಿಂಗಡಿಸದಸಂಸ್ಕೃತಿ, ಪರಂಪರೆ

ಮತ್ತೆ ಬಂದಿದೆ ಯುಗಾದಿ ಹಬ್ಬದ ಸಂಭ್ರಮ

ನಮ್ಮ ನಾಡು ಸನಾತನಕಾಲದಿಂದಲೂ ಸಂಸ್ಕೃತಿಗಳ ನೆಲೆಬೀಡಾಗಿದೆ. ಕಾಲಕ್ಕೆ ತಕ್ಕಂತೆ ಹಬ್ಬಗಳನ್ನು(Festival )ಆಚರಿಸುತ್ತ ಬಂದಿದ್ದಾರೆ..ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಅರ್ಥವಿದೆ, ಮಹತ್ವವಿದೆ, ಸಂಪ್ರದಾಯವಿದೆ, ವಿಶೇಷತೆ ಹಾಗೂ ಅದರದೇ ಆದ ಇತಿಹಾಸ ಕೂಡ ಇದೆ. ಹೊಸ ಯುಗದ ಆರಂಭವನ್ನು ಭಾರತೀಯರು (Indians)ಯುಗಾದಿಯಂದು(Ugadi )ಆಚರಿಸುತ್ತಾರೆ.

ಯುಗಾದಿ ಎಂಬ ಪದದ ಅರ್ಥ ಯುಗದ ಆದಿ ಎಂಬುದಾಗಿದೆ. ಈ ದಿನದಂದು ಬ್ರಹ್ಮನು(Brahma)
ಬ್ರಹ್ಮಾಂಡವನ್ನು ಸೃಷ್ಟಿಸಿದನು ಎಂಬ ಪ್ರತೀತಿ ಇದೆ. ಪ್ರಕೃತಿಯು ಹಚ್ಚಹಸಿರಿನಿಂದ ಆವರಿಸಿಕೊಂಡು ಎಲ್ಲೆಡೆ ಬೆಲ್ಲದ ಹಾಗೆ ಸಂತೋಷವನ್ನು ಪಸರಿಸುತ್ತಾ ವಸಂತಕಾಲದ ಆಗಮನದೊಂದಿಗೆ ಹೊಸದಕ್ಕೆ ಆರಂಭ ನೀಡುವುದೇ ಯುಗಾದಿಯಾಗಿದೆ.

Ugadi Festival

ಯುಗಾದಿ ಹಬ್ಬ ಎಂದರೆ ಎಲ್ಲರಲ್ಲೂ ಬೆರಗು,ಸಂಭ್ರಮ, ಉತ್ಸಾಹ, ಉಲ್ಲಾಸ, ಸಂತಸ ಮೂಡಿಸುವ ಕ್ಷಣ. ಆದ್ದರಿಂದಲೇ, ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಎಂದು ನಮ್ಮ ಹಿರಿಯ ಕವಿಗಳು ವಿಧ ವಿಧವಾಗಿ ಯುಗಾದಿ ಯನ್ನು ಬಣ್ಣಿಸಿದ್ದಾರೆ. ಬಿರುಬೇಸಗೆಯ ಸಮಯದಲ್ಲಿ ಬರುವ ಯುಗಾದಿಯು, ಹೊಸ ವರ್ಷದಲ್ಲಿ(New Year)ಹೊಸ ಬದುಕನ್ನು ಕಟ್ಟಿಕೊಳ್ಳಲು ಸ್ಫೂರ್ತಿ ತುಂಬುವ ಹಬ್ಬ, ಬಿಸಿಲಿನ ತಾಪವು ಜಾಸ್ತಿಯಾಗಿದ್ದರೂ, ಇದೇ ಬಿಸಿಲಿನ ಶಕ್ತಿ ಯಿಂದ ಸಸ್ಯಗಳು ಆಹಾರ ಉತ್ಪತ್ತಿ ಮಾಡುತ್ತವೆ ಮತ್ತು ಅದರಿಂದಾಗಿ ನಮ್ಮ ಬದುಕು ಹಸನುಗೊಳ್ಳುತ್ತದೆ ಎಂಬ ಅರಿವು ನಮ್ಮ ಜನರಿ ಗಿತ್ತು. ಆದ್ದರಿಂದಲೇ, ಯುಗಾದಿಯನ್ನು ಬಹಳ ಗೌರವದಿಂದ ಸ್ವಾಗತಿಸುತ್ತಾ ಬಂದಿದ್ದಾರೆ. ಜತೆಗೆ, ಬದುಕಿನಲ್ಲಿ ಎದುರಾಗುವ ಸಂಕಷ್ಟ ಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂಬ ಬಹು ಆರೋಗ್ಯಪೂರ್ಣ, ಅರ್ಥಪೂರ್ಣ ಸಂದೇಶವನ್ನು ಸಹ ಈ ಹಬ್ಬದ ಆಚರಣೆಯಲ್ಲಿ ರೂಪಿಸಲಾಗಿದೆ.

ಬೇವಿನ ಎಸಳುಗಳನ್ನು ಬೆಲ್ಲದ ಜತೆ ಸೇರಿಸಿ ತಿನ್ನುವ ಪ್ರಕ್ರಿಯೆಗೆ ಎಷ್ಟೊಂದು ವಿಶಾಲವಾದ ಅರ್ಥವಿದೆ! ನೋವನ್ನು ಸ್ವೀಕರಿಸೋಣ, ನಲಿವನ್ನೂ ಆಚರಿಸೋಣ ಎನ್ನುವ ಸಂದೇಶವು ಬೇವು- ಬೆಲ್ಲಗಳ ಮಿಶ್ರಣದಲ್ಲಿದೆ, ಅದನ್ನು ಹಬ್ಬದಂದು ಸೇವಿಸುವ ಆಚರಣೆಯಲ್ಲಿದೆ.

ನೀವು ಇದನ್ನೂ ಇಷ್ಟ ಪಡಬಹುದು: ವಸಂತ ಋತುವಿನಲ್ಲಿ ತಂಗಾಳಿಯಂತ ಅನುಭವ ನೀಡುವ ತಾಣಗಳು

Ugadi Festival

ಪುರಾಣಗಳ ಪ್ರಕಾರ, ಬ್ರಹ್ಮ ದೇವರು(Brahma)ಯುಗಾದಿಯಂದು ಬ್ರಹ್ಮಾಂಡದ ಸೃಷ್ಟಿಯನ್ನು ಪ್ರಾರಂಭಿಸಿದನು ಎನ್ನುವ ಉಲ್ಲೇಖವಿದೆ. ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಆಚರಿಸುವ ಒಂಬತ್ತು ದಿನಗಳ ಉತ್ಸವದ ಮೊದಲ ದಿನ – ಚೈತ್ರ ನವರಾತ್ರಿಯು(Chaitra Navratri)ಈ ದಿನದಿಂದ ಪ್ರಾರಂಭವಾಗುತ್ತದೆ. ಭಗವಾನ್ ಬ್ರಹ್ಮನಿಂದ ಮಾನವಕುಲದ ಸೃಷ್ಟಿಯ ಪ್ರಾರಂಭವನ್ನು ಗುರುತಿಸಲು ಯುಗಾದಿ ಎಂದು ಈ ದಿನವನ್ನು ಆಚರಿಸಲಾಗುತ್ತದೆ.

12 ನೇ ಶತಮಾನದಲ್ಲಿ ಭಾರತೀಯ ಗಣಿತಜ್ಞ ಭಾಸ್ಕರಾಚಾರ್ಯರು (Bhaskaracharya )ಹೊಸ ವರ್ಷದ ಆರಂಭ, ಹೊಸ ತಿಂಗಳು ಮತ್ತು ಹೊಸ ದಿನ ಎಂದು ಉಲ್ಲೇಖಿಸಿದ್ದಾರೆ. ವೇದಗಳ ಕಾಲದಿಂದಲೂ ಯುಗಾದಿಯ ಆಚಣೆಯಿದೆ. ಎಲ್ಲ ಶಾಸ್ತ್ರ ಗ್ರಂಥಗಳಲ್ಲಿ ಯುಗಾದಿಯ ಕುರಿತು ಉಲ್ಲೇಖಗಳಿವೆ.

ಶ್ರೀ ರಾಮನು(Shri Rama)ರಾವಣನನ್ನು(Ravana )ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೆ ಮಹಾಭಾರತದಲ್ಲಿ(Mahabharat )ಬರುವ ಚೇದಿರಾಜ್ಯದ ಅರಸು ಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾತೆಯನ್ನು ಅವನಿಗೆ ಕೊಟ್ಟು ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆ ಮೇಲೆ ಇಟ್ಟಿರುವ ದಿನ ಇದಾಗಿದೆ ಎಂದು ಹೇಳಲಾಗುತ್ತದೆ.

ಇಹಾಸದ ಪುಟಗಳಲ್ಲಿ ವರಹಮಿರರಾಚಾರ್ಯರು ವರ್ಷ ಆರಂಭವನ್ನು ಚೈತ್ರ ಮಾಸವೆಂದು ಹೇಳಿರುವರು. ನಾಂಗ ಮತ್ತು ಶಾಸ್ತ್ರದ ಪ್ರಕಾರ ಶುಭದಿನ ಹಾಗೂ ಅತ್ಯಂತ ಶುಭ ಮುಹೂರ್ತದ ದಿನಗಳೆಂದರೆ ಯುಗಾದಿ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಅದರಲ್ಲಿ ಯುಗಾದಿ ಅತೀ ಶ್ರೇಷ್ಠ ಶುಭದಿನವಾದ ಯುಗಾದಿ ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ದಿನವೆಂದು ಹೇಳುವರು. ಇದಕ್ಕಿಂತ ಉತ್ತಮ ಸಮಯವಿಲ್ಲ ಎಂದು ಜನರು ನಂಬುತ್ತಾರೆ.

Ugadi Festival

ಆದ್ದರಿಂದ ಮನೆ, ವಾಹನ ಅಥವಾ ಅಂಗಡಿ ಖರೀದಿಸುವಂತಹ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಈ ದಿನವನ್ನು ಪರಿಗಣಿಸುತ್ತಾರೆ. ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಉಜ್ವಲವನ್ನು ಜನತೆಗೆ ಸುಖ ಶಾಂತಿಯನ್ನು ನೀಡುವ ಸಮಯವಾಗಿದೆ ಎಂದು ಹೇಳುತ್ತಾರೆ.

ಯುಗಾದಿ ಮತ್ತೆ ಮತ್ತೆ ಬರುತಿರಲಿ ಸಡಗರವ ಹೊತ್ತು ಹೊತ್ತು ತರುತ್ತಿರಲಿ. ಹೊಸ ವರುಷವು ಎಲ್ಲರಲ್ಲೂ ಹೊಸ ತನವನ್ನು ತಂದು ಹೊಸ ದಾರಿಗೆ ಹೊಸ ಯಶಸ್ಸಿಗೆ ಮುನ್ನುಡಿ ಬರೆಯುವಂತಾಗಲಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button