ದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದ

ವಸಂತ ಋತುವಿನಲ್ಲಿ ತಂಗಾಳಿಯಂತ ಅನುಭವ ನೀಡುವ ತಾಣಗಳು

ವಸಂತ ಕಾಲ(Spring Season)ಸುಂದರ ಕಾಲಗಳಲ್ಲಿ ಪ್ರಮುಖ ಸ್ಥಾನ. ಬಿಸಿಲೂ ಇಲ್ಲದ, ಇತ್ತ ಚಳಿಯೂ ಇಲ್ಲದ ತಂಗಾಳಿ ಬೀಸುವ ಕಾಲ. ಈ ಕೆಲವು ಸ್ಥಳಗಳನ್ನು ವಸಂತ ಕಾಲದಲ್ಲಿ ನೋಡಿದ್ರೆನೆ ಚೆಂದ.

ಶ್ರೀನಗರ, ಕಾಶ್ಮೀರ(Srinagara,Kashmir)

ಭೂಲೋಕದ ಸ್ವರ್ಗ ಎಂದೇ ಹೆಸರು ಪಡೆದ ಕಾಶ್ಮೀರವನ್ನು ಚಳಿಗಾಲದಲ್ಲಿ ನೋಡಿ ಖುಷಿ ಪಡುವುದರ ಜೊತೆಗೆ ವಸಂತ ಕಾಲದಲ್ಲಿ ನೋಡುವುದು ಇನ್ನೂ ಸೊಗಸು.

ಕಾಶ್ಮೀರದ ಶ್ರೀನಗರದ ಟ್ಯುಲಿಪ್‌ ಉದ್ಯಾನದಲ್ಲಿ ಬಣ್ಣಬಣ್ಣದಲ್ಲಿ ಟ್ಯುಲಿಪ್‌ ಹೂವರಳಿ ಎಲ್ಲರನ್ನೂ ಆಕರ್ಷಿತಸುತ್ತದೆ. ವಿದೇಶಗಳಲ್ಲಿ ಕಾಣುವ ಈ ಹೂವು ಭಾರತದಲ್ಲಿ ಕಾಣಸಿಗುವ ಕೆಲವೇ ನಗರಗಳ ಪೈಕಿ ಶ್ರೀನಗರಕ್ಕೆ ಪ್ರಮುಖ ಸ್ಥಾನ.

Sringara

ಮುನ್ನಾರ್‌, ಕೇರಳ(Munnar,Kerala)

ಕೇರಳದ ಮುನ್ನಾರ್‌ ಕೂಡಾ ವಸಂತ ಕಾಲದಲ್ಲಿ ನೀವು ನೋಡಲೇ ಬೇಕಾಗಿರುವ ತಾಣಗಳಲ್ಲಿ ಒಂದು. ಜಲಪಾತಗಳು, ಟೂರಿಸ್ಟ್‌ ಪಾಯಿಂಟ್‌ಗಳು ಇಲ್ಲಿದ್ದು, ವಸಂತ ಕಾಲದ ಚಿಗುರು ಹಸಿರಿನಲ್ಲಿ ಚಂದವಾಗಿ ಕಾಣುತ್ತದೆ.

Munnar

ಶಿಲ್ಲಾಂಗ್‌, ಮೇಘಾಲಯ(Shillang,Meghalaya)

ಮೇಘಾಲಯವನ್ನು ನೋಡಲು ಉತ್ತಮ ಸಮಯ ಅಂದ್ರೆ ಅದು ವಸಂತ ಕಾಲ. ಹಸಿರಿನಿಂದ ಕಂಗೊಳಿಸುವ ಈ ಕಾಲದಲ್ಲಿ ಶಿಲ್ಲಾಂಗ್‌ ಸುತ್ತುವುದಕ್ಕೆ ನಿಮಗೆ ಯಾವುದು ಅಡ್ಡಿ ಬರುವುದಿಲ್ಲ . ಅದ್ಭುತ ಸೌಂದರ್ಯದ ದಟ್ಟ ಹಸಿರಿನ ಮೇಘಾಲಯದ ಪ್ರಕೃತಿ ಸೌಂದರ್ಯವನ್ನು ಸವಿಯಲು ಇದು ಅತ್ಯುತ್ತಮ ಕಾಲ.

Shillang

ಡಾರ್ಜಿಲಿಂಗ್‌, ಪಶ್ಚಿಮ ಬಂಗಾಳ(Darjeeling, West Bengal)

ತನ್ನ ಚಹಾ ತೋಟಗಳ ಹಾಗೂ ಹಿಮಾಲಯ ಅದ್ಭುತ ಸೌಂದರ್ಯವನ್ನು ಜೊತೆಯಾಗಿ ಕಟ್ಟಿಕೊಡಬಲ್ಲ ತಾಣ ಡಾರ್ಜಿಲಿಂಗ್‌. ಚಳಿಗಾಲದ ಚಳಿಯಿಂದ ಕೊಂಚ ಹೊರಬಂದು ಹಿತವಾದ ಬಿಸಿಲು, ಹೊದ್ದು ಮಲಗುವ ಚಳಿ ಎರಡನ್ನೂ ನೀಡಬಲ್ಲ ಸಮಯವೆಂದರೆ ಅದು ವಸಂತ ಕಾಲ. ಈ ಸಮಯದಲ್ಲಿ ನೀವು ಈ ಜಾಗಕ್ಕೆ ಭೇಟಿ ಕೊಟ್ರೆ ಹಿತ ಅನುಭವ ಪಡೆದುಕೊಳ್ಳಬಹುದು.

ಗ್ಯಾಂಗ್ಟಕ್‌, ಸಿಕ್ಕಿಂ(Gangtok, Sikkim)

ಸೌಂದರ್ಯವನ್ನು ತೋರಿಸುವ ರಾಜ್ಯ ಸಿಕ್ಕಿಂ. ಇಲ್ಲಿನ ಗ್ಯಾಂಗ್ಟಕ್‌ ಸ್ಥಳದಲ್ಲಿ, ವಸಂತದಲ್ಲಿ ನಿಧಾನವಾಗಿ ಚಿಗುರೊಡೆವ ಮರಗಿಡಗಳನ್ನೂ ಕಣ್ತುಂಬಿಕೊಂಡು, ಹೂಗಳ ರಾಶಿಯನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು.

ಊಟಿ, ತಮಿಳುನಾಡು(City of ooty, Tamil Nadu)

ಹೇಳಿ ಕೇಳಿ ಊಟಿ ಪ್ರೇಮಿಗಳಿಗೆ ಸ್ವರ್ಗ. ಇನ್ನು, ವಸಂತ ಕಾಲದಲ್ಲಿ ಉದ್ಯಾನಗಳಲ್ಲೆಲ್ಲ ನಳನಳಿಸುವ ಹೂಗಳರಳಿದ್ದರೆ ಕೇಳಬೇಕೇ? ದಂಪತಿಗಳಿಗೆ ಮತ್ತು ಪ್ರೇಮಿಗಳಿಗೆ ಅದು ಬೆಸ್ಟ್ ತಾಣ. ಹೀಗಾಗಿ, ದೂರ ಪ್ರವಾಸ ಹೋಗಲಾಗದೆ ಇರುವವರು ಹತ್ತಿರದ ಊಟಿಗೇ ಹೋಗಿ ಬಣ್ಣಬಣ್ಣದ ಹೂಗಳನ್ನು ಕಣ್ತುಂಬಿಕೊಂಡು ಬರಬಹುದು.

Ooty

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button