ವಿಂಗಡಿಸದಸಂಸ್ಕೃತಿ, ಪರಂಪರೆ

ಕುಂಭಾಶಿ ವಿನಾಯಕನ ಮಹಿಮೆ ಬಲ್ಲೀರಾ..!

ಅನೆಗುಡ್ಡೆ ಕುಂಭಾಶಿ ವಿನಾಯಕ (Anegudde kumbashi Vinayaka Temple)ದೇವಸ್ಥಾನದ ಹೆಸರನ್ನು ಸಿನಿ ಕ್ಷೇತ್ರದ ಒಲವಿರುವ ಹೆಚ್ಚಿನವರು ಕೇಳಿಯೇ ಇರುತ್ತೀರಿ. ಯಾಕಂದ್ರೆ ಕಾಂತರದಂತ (Kantara)ಹಿಟ್ ಸಿನಿಮಾ ಕೊಟ್ಟ ತಂಡ ತನ್ನ ಪ್ರಿಕ್ವೆಲ್ ಮುಹೂರ್ತ ಮಾಡಿದ್ದು ಇದೇ ಸನ್ನಿಧಿಯಲ್ಲಿ. ಕಾಂತರದ ಮುಹೂರ್ತ ಮಾಡಿದ್ದು ಕೂಡ ಈ ಜಾಗದಲ್ಲಿ.

ನಾವು ಕಾಂತಾರಾದ ಬಗ್ಗೆ ಹೇಳೋದಕ್ಕೆ ಕಾರಣ ಇಷ್ಟೇ.. ಕನ್ನಡ ಸಿನಿ ರಂಗಕ್ಕೆ ಹೊಸ ಮೈಲಿಗಲ್ಲು ಕೊಟ್ಟ ಸಿನಿಮಾದ ಮುಹೂರ್ತ ಬರೆದ ಈ ಜಾಗದ ಮಹಿಮೆಯೇ ಅಪಾರ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕವೂ ಆನೆಗುಡ್ಡೆ ವಿನಾಯಕ ಮಹಿಮೆಗೆ ಕರಾವಳಿ ಭಾಗದ ಮಂದಿ ಒಳಗಾಗಿ ಇರ್ತಾರೆ. ಅಲ್ಲಿ ಯಾರೇ ಹೊಸ ವಾಹನ ಖರೀದಿ ಮಾಡಿರಲಿ,ಮೊದಲು ಹೋಗುವುದು ಕೂಡ ಅಲ್ಲಿಗೆ. ಅಷ್ಟೊಂದು ಶಕ್ತಿಶಾಲಿ ಈ ಗಣಪ.

Anegudde kumbashi Vinayaka Temple

ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂದಾಪುರದಿಂದ(Kundapura) ಸುಮಾರು 9 ಕಿಲೋಮೀಟರ್ ದೂರದಲ್ಲಿರುವ ಆನೆಗುಡ್ಡೆ ವಿನಾಯಕ ದೇವಸ್ಥಾನವು ಉಡುಪಿ(Udupi) ಮತ್ತು ಕಾರವಾರದ ನಡುವೆ ಕುಂಭಾಶಿಯಲ್ಲಿರುವ ಹಿಂದೂ ದೇವಾಲಯವಾಗಿದೆ. ಕುಂಭಾಶಿಯ ಬೆಟ್ಟದ ಮೇಲಿರುವ ಆನೆಗುಡ್ಡೆ ವಿನಾಯಕ ದೇವಾಲಯವು ಗಣೇಶನಿಗೆ ಸಮರ್ಪಿತವಾಗಿದೆ. ಈ ಸ್ಥಳದಲ್ಲಿಯೇ ಅಗಸ್ತ್ಯ ಋಷಿ(Agastya) ಇಂದಿರರನ್ನು ಆಕರ್ಷಿಸಲು ತಪಸ್ಸು ಮಾಡಿದರು ಎಂದು ನಂಬಲಾಗಿದೆ.

ಆನೆಗುಡ್ಡೆ ಎಂಬ ಪದವು ಆನೆ ಎಂಬರ್ಥದ ‘ಆನೆ’ (Elephant)ಎಂಬ ಪದದಿಂದ ಮತ್ತು ಗುಡ್ಡವನ್ನು ಸೂಚಿಸುವ ‘ಗುಡ್ಡೆ’ ಪದದಿಂದ ಬಂದಿದೆ. ಈ ದೇಗುಲವು ಗಣೇಶನ (Ganesha)ನೆಲೆಯಾಗಿದೆ. ಪ್ರಸಿದ್ಧ ಋಷಿಯಾಗಿದ್ದ ಪರಶುರಾಮನಿಂದ (Parashurama)ರಚಿಸಲ್ಪಟ್ಟ ‘ಪರಶುರಾಮ ಸೃಷ್ಟಿ’ ಎಂದು ಕರೆಯಲ್ಪಡುವ ರಾಜ್ಯದ ಯಾತ್ರಿಕರು ಗೌರವ ಸಲ್ಲಿಸುವ ಅನೇಕ ಪ್ರಮುಖ ದೇವಾಲಯಗಳಲ್ಲಿ ಈ ದೇವಾಲಯವೂ ಒಂದಾಗಿದೆ.

ಈ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದೆ ಇಲ್ಲಿ ರಾಕ್ಷಸ ಕುಂಬಾಸುರನು ಕೊಲ್ಲಲ್ಪಟ್ಟನು ಎನ್ನಲಾಗಿದೆ. ಪೌರಾಣಿಕ ಉಲ್ಲೇಖಗಳ ಪ್ರಕಾರ ಅಗಸ್ತ್ಯ ಋಷಿಯು ಜನರ ಯೋಗ ಕ್ಷೇಮಕ್ಕಾಗಿ ಒಂದು ಯಜ್ಞವನ್ನು ಮಾಡುತ್ತಿದ್ದಾಗ ಕುಂಬಾಸುರ ಎಂಬ ರಾಕ್ಷಸನು ಯಜ್ಞವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದನು.

ನೀವು ಇದನ್ನು ಇಷ್ಟ ಪಡಬಹುದು:ಉತ್ತರಕನ್ನಡಕ್ಕೆ ಹೋದಾಗ ಇಡಗುಂಜಿಗೂ ಹೋಗಿ ಬನ್ನಿ

Anegudde kumbashi Vinayaka Temple

ಭಗವಾನ್ ವಿನಾಯಕ ನೀಡಿದ ಶಕ್ತಿಶಾಲಿ ಖಡ್ಗದಿಂದ ಪಾಂಡವರಲ್ಲಿ ಒಬ್ಬನಾದ ಭೀಮನು ಕುಂಬಾಸುರನನ್ನು ಕೊಂದನು. ಧಾರ್ಮಿಕ ವಿಧಿ ವಿಧಾನಗಳು ಯಶಸ್ವಿಯಾಗಿ ಮುಗಿದ ನಂತರ ಇಲ್ಲಿನ ಜನರು ಸುಭಿಕ್ಷರಾದರು. ನಂತರ ಜನರು ವಿನಾಯಕನನ್ನು ಪೂಜಿಸಲು ಪ್ರಾರಂಭಿಸಿದರು.

ವಿನಾಯಕನ ವಿಗ್ರಹವು ದೇವಾಲಯದ ಗರ್ಭಗುಡಿಯಲ್ಲಿ ನಿಂತಿರುವ ಭಂಗಿಯಲ್ಲಿದೆ. ವಿಗ್ರಹವು ನಾಲ್ಕು ಕೈಗಳನ್ನು ಹೊಂದಿದೆ. ಎರಡು ಮೇಲಿನ ಕೈಗಳನ್ನು “ವರದ ಹಸ್ತ” ಎಂದು ಕರೆಯಲಾಗುತ್ತದೆ. ದೈವಿಕ ವರಗಳನ್ನು ನೀಡಲು ಕೈಗಳು ಎಂದರ್ಥ. ಉಳಿದ ಎರಡು ಕೈಗಳು ನೆಲದ ಕಡೆಗೆ ತೋರಿಸುತ್ತಿವೆ. ವಿಗ್ರಹವು ಬೆಳ್ಳಿಯ ರಕ್ಷಾಕವಚವನ್ನು ಹೊಂದಿದ್ದು ಭವ್ಯವಾದ ನೋಟವನ್ನು ನೀಡುತ್ತದೆ. ದೇವಾಲಯದ ಸುತ್ತಮುತ್ತ ಅನೇಕ ಪ್ರತಿಮೆಗಳನ್ನು ಕೆತ್ತಲಾಗಿದೆ.

ಈ ಪ್ರತಿಮೆಗಳು ಪುರಾಣಗಳು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಅನೇಕ ಪಾತ್ರಗಳಿಗೆ ಸಂಬಂಧಿಸಿವೆ. ಈ ಪುರಾತನ ದೇವಾಲಯದ ಜೀರ್ಣೋದ್ಧಾರವನ್ನು 1985 ರಲ್ಲಿ ಮಾಡಲಾಯಿತು. ಈ ದೇವಾಲಯದಲ್ಲಿ ತುಲಾಭಾರ, ಗಣಹೋಮ, ಮೂಡ ಗಣಪತಿ ಹಾಗೂ ರಂಗಪೂಜೆಗಳಂತಹ ವಿಶೇಷ ಸೇವೆಗಳನ್ನು ಮಾಡಲಾಗುತ್ತದೆ ಹಾಗೂ ಪ್ರತಿದಿನ ಗಣೇಶನಿಗೆ ವಿಶೇಷ ಪೂಜೆಗಳು ನಡೆಯುತ್ತಿರುತ್ತವೆ.

Anegudde kumbashi Vinayaka Temple

ವಾರದಲ್ಲಿ ಭಾನುವಾರ(Sunday), ಮಂಗಳವಾರ(Tuesday), ಶುಕ್ರವಾರ(Friday) ಹಾಗೂ ಸಂಕ್ರಮಣ, ಸಂಕಷ್ಟಹರ ಚತುರ್ಥಿ ಹಾಗೂ ಗಣೇಶ ಚತುರ್ಥಿಯ ಸಮಯದಲ್ಲಿ ಹೆಚ್ಚಿನ ಭಕ್ತರು ಆಗಮಿಸುತ್ತಾರೆ.

ಪ್ರತಿ ಹುಣ್ಣಿಮೆಯ ನಂತರದ ಚೌತಿಯಂದು ವಿಶೇಷ ಪೂಜೆಯೂ ದೇವಸ್ಥಾನದಲ್ಲಿರುತ್ತದೆ. ಮಾರ್ಗಶಿರ ಶುದ್ದ ಚತುರ್ಥಿ ವಾರ್ಷಿಕ ರಥೋತ್ಸವ ನಡೆಯುತ್ತದೆ. ವರ್ಷದಲ್ಲಿ 8-10 ಸಹಸ್ರ ನಾಳಿಕೇರ ಗಣಯಾಗ ನಡೆಯುತ್ತದೆ. ಸತ್ಯಗಣಪತಿ ವೃತವನ್ನು ಇಷ್ಟಾರ್ಥ ಸಿದ್ದಿಗಾಗಿ ಮಾಡಿಸುತ್ತಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button