ತುಂಬಿದ ಮನೆದೂರ ತೀರ ಯಾನವಿಂಗಡಿಸದ

ಶಿವಮೊಗ್ಗದ ಹಸಿರುಮಕ್ಕಿ ಲಾಂಚ್ ಸ್ಥಗಿತ

ಶರಾವತಿ ನದಿ(Sharavati River) ಹಿನ್ನೀರು (Backwaters)ಸಂಪೂರ್ಣ ಬತ್ತಿ ಹೋಗಿದ್ದು, ಹಸಿರುಮಕ್ಕಿಯ(Hasirumakki) ಲಾಂಚ್ (Lanch)ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾಗರ (Sagar)ಮತ್ತು ಹೊಸನಗರ (Hosanagara)ನಡುವೆ ಸಂಪರ್ಕ ಕೊಂಡಿಯಾಗಿದ್ದ ಹಸಿರುಮಕ್ಕಿ ಲಾಂಚ್ ಸಂಚಾರ ಕೂಡ ಸ್ಥಗಿತಗೊಂಡಿದೆ. ವರ್ಷಪೂರ್ತಿ ನೀರು ತುಂಬಿರುತ್ತಿದ್ದ ಶರಾವತಿ ನದಿಯ ಹಿನ್ನೀರು ಕೂಡ ಖಾಲಿಯಾಗಿದ್ದು, ಜನರು ಪರದಾಡುತ್ತಿದ್ದಾರೆ.

ಅದರಲ್ಲಿಯೂ ಮುಖ್ಯವಾಗಿ ಶಿವಮೊಗ್ಗ(Shivamogga )ಜಿಲ್ಲೆಯಲ್ಲಿ ಒಳನಾಡು ಜಲಸಾರಿಗೆಗೆ ಪ್ರಸಿದ್ಧಿಯಾಗಿದ್ದ ಶರಾವತಿ ನದಿ ಹಿನ್ನೀರಿನಲ್ಲಿದ್ದ ಹಸಿರುಮಕ್ಕಿ ಲಾಂಚ್ ಸಂಚಾರವೂ ಸ್ಥಗಿತಗೊಂಡಿದೆ. ಈ ಮೂಲಕ ಸಾಗರ ಮತ್ತು ಹೊಸನಗರ ಪಟ್ಟಣಗಳ ಸಂಪರ್ಕವೂ ಕಡಿತಗೊಂಡಿದೆ.

Hasirumakki Launch Suspended due to lack of water

ಹಸಿರುಮಕ್ಕಿ ಲಾಂಚ್‌ ಸಾಗರ ಮತ್ತು ಹೊಸನಗರ ತಾಲೂಕು ಸಂಪರ್ಕದ ಕೊಂಡಿಯಾಗಿತ್ತು. ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಲಾಂಚ್ ಸೇವೆಯನ್ನು ಶನಿವಾರದಿಂದ ಸ್ಥಗಿತಗೊಳಿಸಲಾಗಿದೆ. ದಡದಲ್ಲಿ ಕೆಸರು ಹೆಚ್ಚಿರುವ ಕಾರಣಕ್ಕೆ ಕಳೆದ ಹಲವು ದಿನಗಳಿಂದ ಲಾಂಚ್ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.

ನೀವು ಇದನ್ನು ಓದಬಹುದು:ಹವಾಮಾನದ ಪರಿಣಾಮ; ಹಿಮನದಿ ಕಳೆದುಕೊಂಡ ವೆನೆಜುವೆಲಾ

ಆದರೂ, ಪ್ರಯಾಣಿಕರು ಹೆಚ್ಚಾಗಿದ್ದರಿಂದ ಅನಿವಾರ್ಯವಾಗಿ ತುಸು ಕಷ್ಟದಿಂದಲೇ ಲಾಂಚ್ ನಡೆಸುತ್ತಿದ್ದರು. ಆದರೆ, ಈಗ ಲಾಂಚ್ ದಡ ಸೇರಲು ಸಾಧ್ಯವಾಗದಷ್ಟು ನೀರಿಲ್ಲದ ಕಾರಣ ಶನಿವಾರದಿಂದ(Saturday )ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.ಹಸಿರುಮಕ್ಕಿ ಲಾಂಚ್‌ ಮೂಲಕ ಪ್ರತಿದಿನ ವಾಹನಗಳು ಸಂಚರಿಸುತ್ತಿದ್ದವು. ಆದರೆ, ಈಗ ಲಾಂಚ್‌ ಸೇವೆ ನಿಲುಗಡೆಗೊಂಡ ಹಿನ್ನೆಲೆಯಲ್ಲಿ ಹಸಿರುಮಕ್ಕಿ ಕಡೆಗೆ ಬರುತ್ತಿದ್ದ ಬಸ್‌ಗಳ ಸೇವೆಯನ್ನೂ(Bus Service)ಸ್ಥಗಿತಗೊಳಿಸಲಾಗಿದೆ.

ಸಾಗರದಿಂದ ನಿಟ್ಟೂರು(Nitturu) ಮಾರ್ಗವಾಗಿ ಕುಂದಾಪುರ (Kundapura)ತಲುಪಲು ಹಸಿರುಮಕ್ಕಿ ಲಾಂಚ್ ಮೂಲಕ ಸಾಗುವುದು ಅತಿ ಸಮೀಪದ ಮಾರ್ಗವಾಗಿತ್ತು. ಆದರೆ, ಲಾಂಚ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಸುಮಾರು 40 ಕಿ.ಮೀ. ಬಳಸಿ ಹೊಸನಗರ ಮಾರ್ಗವಾಗಿ ತೆರಳುವ ಅನಿವಾರ್ಯತೆ ಎದುರಾಗಿದೆ.

ನೀರಿನ ಆಳದ ಕೆಸರಿನಲ್ಲಿದ್ದ ದೊಡ್ಡ ದೊಡ್ಡ ಮರದ ಬೃಹತ್‌ ದಿಮ್ಮಿಗಳು ಕೆಸರಿನಿಂದ ಮೇಲೆ ಕಾಣಿಸುತ್ತಿವೆ. ಇವು ಲಾಂಚ್ ಸಂಚಾರಕ್ಕೆ ತೊಂದರೆಯಾಗಿದ್ದು, ಲಾಂಚ್‌ಗೆ ಹಾನಿ ಉಂಟುಮಾಡಲಿವೆ. ಜೊತೆಗೆ, ಲಾಂಚ್ ಸಾಗುವಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ಈ ಹಿನ್ನೆಲೆ ಲಾಂಚ್‌ ಸೇವೆ ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಹೆಚ್ಚಳವಾಗುವವರೆಗೆ ಹಸಿರುಮಕ್ಕಿ ಲಾಂಚ್‌ ಸೇವೆ ಇರುವುದಿಲ್ಲ ಎಂದು ಲಾಂಚ್‌ನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button