ದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

ಜೂ.1 ರಿಂದ ಬೆಂಗಳೂರಿಂದ ದೇವಗಢಕ್ಕೆ ನೇರ ಇಂಡಿಗೋ ವಿಮಾನ

ದೇವಗಢ(Deoghar)ಭಾರತದ ಜಾರ್ಖಂಡ್ (Jharkhand)ರಾಜ್ಯದಲ್ಲಿ ನೆಲೆಗೊಂಡಿದೆ, ಇದು ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿರುವ ನಗರ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ(Jyotirlinga)ಒಂದಾದ ಪ್ರಸಿದ್ಧ ಬೈದ್ಯನಾಥ (Baidyanath)ದೇವಾಲಯಕ್ಕೆ ನೆಲೆಯಾಗಿದೆ.

ಇದು ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ನಗರವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ, ಅದರ ಸುತ್ತಲೂ ಬೆಟ್ಟಗಳು,(Hills) ಜಲಪಾತಗಳು(Falls) ಮತ್ತು ಕಾಡುಗಳಿವೆ(Forest). ಇಲ್ಲಿಗೆ ಪಯಣಿಸುವ ರಾಜ್ಯದ ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರೆತಿದೆ.

IndiGo announces direct flights between Bengaluru and Deoghar

ಇಂಡಿಗೋ (Indigo)ವಾರಕ್ಕೆ ಮೂರು ಬಾರಿ ದೇವಗಢಕ್ಕೆ ಮತ್ತು ಬೆಂಗಳೂರು(Bangalore )ನಡುವೆ ನೇರ ವಿಮಾನಯಾನವನ್ನು(Direct Flight )ಘೋಷಿಸಿದೆ. ಜೂನ್ 01, 2024 ರಿಂದ ಆರಂಭ ಆಗಲಿದೆ.

ನೀವು ಇದನ್ನು ಓದಬಹುದು: ಮೇ 10 ರಿಂದ ಚಾರ್ ಧಾಮ್ ಯಾತ್ರೆ ಆರಂಭ

ಈ ನೇರ ವಿಮಾನಗಳು ಮಂಗಳವಾರ,(Tuesday )ಗುರುವಾರ(Thursday )ಮತ್ತು ಶನಿವಾರದಂದು (Saturday)ಕಾರ್ಯನಿರ್ವಹಿಸುತ್ತವೆ. ಈ ಹೊಸ ಮಾರ್ಗವು ಭಾರತದ ದಕ್ಷಿಣ ಭಾಗದಿಂದ (South India)ಜಾರ್ಖಂಡ್‌ನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕವನ್ನು ಕಲ್ಪಿಸಲಿದೆ.

ಇಂಡಿಗೋ ದೇವಗಢ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ಏಕೈಕ ವಿಮಾನಯಾನ ಸಂಸ್ಥೆಯಾಗಿದೆ. ಈ ಹೊಸ ವಿಮಾನಗಳೊಂದಿಗೆ, ಕೋಲ್ಕತ್ತಾ,(Calcutta)ಪಾಟ್ನಾ, (Patna)ರಾಂಚಿ (Ranchi)ಮತ್ತು ದೆಹಲಿಯ(Delhi) ನಂತರ ದೇವಗಢಕ್ಕೆ ನೇರ ಸಂಪರ್ಕವನ್ನು ಒದಗಿಸುವ ಐದನೇ ತಾಣವಾಗಿ ಬೆಂಗಳೂರು ಆಗಲಿದೆ.

IndiGo announces direct flights between Bengaluru and Deoghar

ಇಂಡಿಗೋದ ಜಾಗತಿಕ ಮಾರಾಟದ ಮುಖ್ಯಸ್ಥರಾದ ಶ್ರೀ ವಿನಯ್ ಮಲ್ಹೋತ್ರಾ(Vinay Malhotra) “ದೇವಗಢಕ್ಕೆ ಸಂಪರ್ಕವನ್ನು ಒದಗಿಸುವ ಮೊದಲ ಮತ್ತು ಏಕೈಕ ವಿಮಾನಯಾನ ಸಂಸ್ಥೆಯಾಗಿ, ಬೆಂಗಳೂರು ಮತ್ತು ದೇವಗಢ ನಡುವೆ ನೇರ ವಿಮಾನಯಾನವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಇದು ಜಾರ್ಖಂಡ್‌ನ ಪವಿತ್ರ ನಗರದ ಸೌಂದರ್ಯವನ್ನು ಗ್ರಾಹಕರಿಗೆ ಒದಗಿಸುತ್ತದೆ” ಎಂದಿದ್ದಾರೆ.

ಬೆಂಗಳೂರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ(Kempegowda International Airport)ನಿಲ್ದಾಣದಿಂದ ಬೆಳಿಗ್ಗೆ 10.05 ಕ್ಕೆ ಹೊರಟು ದೇವಗಢವನ್ನು ಮಧ್ಯಾಹ್ನ 12.25 ಕ್ಕೇ ತಲುಪಲಿದೆ. ಅಲ್ಲಿಂದ ಮರಳಿ 12.55 ಕ್ಕೆ ಹೊರಟು ಮಧ್ಯಾಹ್ನ 3.25 ರ ವೇಳೆಗೆ ಬೆಂಗಳೂರಿಗೆ ಬರಲಿದೆ ಎಂದು ಇಂಡಿಗೋ ತಿಳಿಸಿದೆ. ಈ ವಿಮಾನದಿಂದಾಗಿ ಬೆಂಗಳೂರಿನ ಜನರು ಜ್ಯೋತಿರ್ಲಿಂಗಗಳಲ್ಲಿ ಒಂದಾದ ವೈದ್ಯನಾಥ ದರ್ಶನವನ್ನು ಬಹು ಸುಲಭವಾಗಿ ಪಡೆಯಬಹುದು.ಈ ವಿಮಾನವು 6,500 ರುಪಾಯಿ ಪ್ರಯಾಣದ ವೆಚ್ಚವನ್ನು(Flight Charge)ಹೊಂದಿರಲಿದೆ. ಎಂದು ಇಂಡಿಗೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

IndiGo announces direct flights between Bengaluru and Deoghar

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button