ವಿಂಗಡಿಸದ

IRCTC ಪ್ರವಾಸೋದ್ಯಮದ ವತಿಯಿಂದ ಜ್ಯೋತಿರ್ಲಿಂಗ ಯಾತ್ರಾ ಪ್ಯಾಕೇಜ್: ಸಂಪೂರ್ಣ ಮಾಹಿತಿ

ದೇಶದ ವಿವಿಧ ಸ್ಥಳಗಳಲ್ಲಿ ನೆಲೆಗೊಂಡಿರುವ ದ್ವಾದಶ (12) ಜ್ಯೋತಿರ್ಲಿಂಗಗಳು “ಶಿವನ ಕಾಂತಿಯ ಸ್ವರೂಪ”ವಾಗಿವೆ. ಈ ಜ್ಯೋತಿರ್ಲಿಂಗಗಳ ದರ್ಶನ ಎಲ್ಲಾ ಶಿವಭಕ್ತನ ಜೀವನದ ಕನಸಾಗಿರುತ್ತದೆ. ಈ ಕನಸು ನನಸು ಮಾಡಲು ಇಂಡಿಯನ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಜ್ಯೋತಿರ್ಲಿಂಗ ಯಾತ್ರಾ ಪ್ಯಾಕೇಜ್ ಪ್ರವಾಸವನ್ನು ಒದಗಿಸುತ್ತಿದೆ.

ಉಜ್ವಲಾ ವಿ.ಯು.

IRCTC ಈಗಾಗಲೇ 8 ವಿಧದ ಜ್ಯೋತಿರ್ಲಿಂಗ ಯಾತ್ರಾ ಪ್ಯಾಕೇಜ್ ಸೌಲಭ್ಯವನ್ನು ನೀಡುತ್ತಿದೆ. ಈ ಪ್ಯಾಕೇಜ್ ಜ್ಯೋತಿರ್ಲಿಂಗಗಳನ್ನು ಒಳಗೊಂಡು ಹತ್ತಿರದ ಇನ್ನಿತರ ಯಾತ್ರಾಸ್ಥಳಗಳನ್ನು ಸಹ ಭೇಟಿ ನೀಡುವ ಸೌಲಭ್ಯವನ್ನು ಹೊಂದಿದೆ. ಸಾರಿಗೆ (ಎಸಿ/ನಾನ್ ಎಸಿ), ವಸತಿ (ಎಸಿ/ನಾನ್ ಎಸಿ), ಆಹಾರ ಸೌಲಭ್ಯಗಳನ್ನೊಳಗೊಂಡ ಸಂಪೂರ್ಣ ಪ್ಯಾಕೇಜ್ ಇದಾಗಿದೆ. ಪ್ಯಾಕೇಜ್ ದರವೂ ಸಹ ಯಾತ್ರಾರ್ಥಿಗಳ ಅನುಕೂಲತೆಯ ಆಧಾರದ ಮೇಲೆ ನಿಗದಿಸಲಾಗಿದೆ.

Jyotirlinga Yatra tourism packages by IRCTC Tourism

IRCTC ಪ್ರವಾಸೋದ್ಯಮ (IRCTC Tourism) ವತಿಯಿಂದ ನೀಡಲಾಗುತ್ತಿರುವ ಎಂಟು ವಿಧದ ಜ್ಯೋತಿರ್ಲಿಂಗ ಯಾತ್ರಾ ಪ್ಯಾಕೇಜಿನ ಸಂಪೂರ್ಣ ಮಾಹಿತಿ ಇಲ್ಲಿದೆ:

1. 7 ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ಜ್ಯೋತಿರ್ಲಿಂಗ ಯಾತ್ರೆ (ಗೋರಖಪುರ ಎಕ್ಸ್ ಪ್ರೆಸ್):

ಓಂಕಾರೇಶ್ವರ ಜ್ಯೋತಿರ್ಲಿಂಗ, ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಸೋಮನಾಥ ಜ್ಯೋತಿರ್ಲಿಂಗ,ದ್ವಾರಕಾಧೀಶ ದೇವಸ್ಥಾನ ಮತ್ತು ನಾಗೇಶ್ವರ ಜ್ಯೋತಿರ್ಲಿಂಗ, ಭೇಟ್ ದ್ವಾರಕಾ, ತ್ರಯಂಬಕೇಶ್ವರ ಜ್ಯೋತಿರ್ಲಿಂಗ,ಗೃಹೇಶ್ವರ ಜ್ಯೋತಿರ್ಲಿಂಗ, ಭೀಮಾಶಂಕರ ಜ್ಯೋತಿರ್ಲಿಂಗ ದೇವಾಲಯಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ. ಅವಧಿ: 09 ರಾತ್ರಿಗಳು/10 ದಿನಗಳು, ದರ: ₹ 18950 ರಿಂದ ಆರಂಭ, ಮುಂಬರುವ ಯಾತ್ರೆಯ ದಿನಾಂಕ:17-ನವೆಂಬರ್-23.

2. ಭಾರತ್ ಗೌರವ್ ಶಿರಡಿ & 8 ಜ್ಯೋತಿರ್ಲಿಂಗ ಯಾತ್ರೆ, (ಪೂರ್ಣಿಯಾ ಕೋರ್ಟ್ ಎಕ್ಸ್ ಪ್ರೆಸ್):

ಈ ಪ್ಯಾಕೇಜ್ ಉಜ್ಜಯಿನಿ – ಓಂಕಾರೇಶ್ವರ ಜ್ಯೋತಿರ್ಲಿಂಗ, ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾಧೀಶ ದೇವಸ್ಥಾನ,ನಾಗೇಶ್ವರ ಜ್ಯೋತಿರ್ಲಿಂಗ, ಶಿರಡಿ ಸಾಯಿ ದರ್ಶನ, ಶನಿ ಶಿಂಗ್ಣಾಪುರ ಮಂದಿರ & ಗೃಹೇಶ್ವರ ಜ್ಯೋತಿರ್ಲಿಂಗ, ಭೀಮಾಶಂಕರ ಜ್ಯೋತಿರ್ಲಿಂಗ, ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ವಾರಣಾಸಿ- ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದೇವಾಲಯಗಳನ್ನು ಒಳಗೊಂಡಿದೆ. ಅವಧಿ : 12 ರಾತ್ರಿಗಳು/13 ದಿನಗಳು, ದರ: ರೂ. 21,251 ರಿಂದ ಆರಂಭ, ಮುಂಬರುವ ಪ್ರಯಾಣದ ದಿನಾಂಕ: 25.11.2023 ರಿಂದ 07.12.2023

3. ದಿವ್ಯ ದಕ್ಷಿಣ ಯಾತ್ರೆ:

ಈ ಪ್ಯಾಕೇಜ್ ತಿರುವಣ್ಣಾಮಲೈ-ಅರುಣಾಚಲಂ ದೇವಸ್ಥಾನ, ರಾಮೇಶ್ವರ: ರಾಮನಾಥಸ್ವಾಮಿ ಜ್ಯೋತಿರ್ಲಿಂಗ, ಮಧುರೈ -ಮೀನಾಕ್ಷಿ ಅಮ್ಮನ್ ದೇವಸ್ಥಾನ, ಕನ್ಯಾಕುಮಾರಿ: ವಿವೇಕಾನಂದ ರಾಕ್ ಸ್ಮಾರಕ, ಕುಮಾರಿ ಅಮ್ಮನ್ ದೇವಸ್ಥಾನ, ಗಾಂಧಿ, ಮಂಟಪ, ತಿರುವನಂತಪುರ: ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ತಿರುಚ್ಚಿ: ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ತಂಜಾವೂರು: ಬೃಹದೀಶ್ವರ ದೇವಸ್ಥಾನಗಳನ್ನು ಒಳಗೊಂಡಿದೆ. ಅವಧಿ: 8 ರಾತ್ರಿಗಳು/9 ದಿನಗಳು, ದರ: ₹ 14100 ರಿಂದ ಆರಂಭ, ಮುಂಬರುವ ಪ್ರಯಾಣದ ದಿನಾಂಕ: 31.10.2023

4. ಜ್ಯೋತಿರ್ಲಿಂಗ ಹೆರಿಟೇಜ್ ( ಚಂಡೀಗಢ ಎಕ್ಸ್ ಪ್ರೆಸ್):

ಈ ಪ್ಯಾಕೇಜ್ ಇಂದೋರ್, ಮಹೇಶ್ವರ, ಮಂಡು, ಓಂಕಾರೇಶ್ವರ, ಉಜ್ಜೈನ್ ದೇವಾಲಯಗಳನ್ನು ಒಳಗೊಂಡಿದೆ. ಅವಧಿ: 5 ರಾತ್ರಿಗಳು/6 ದಿನಗಳು, ದರ: ₹ 30920 ರಿಂದ ಆರಂಭ, ಮುಂಬರುವ ಪ್ರಯಾಣದ ದಿನಾಂಕ: 16.12.2023

5. ಲಕ್ನೋ JN-ಕಾನ್ಪುರ್ ಸೆಂಟ್ರಲ್-ಶಿರಡಿ- ಶನಿ ಶಿಂಗಾಪುರ ತ್ರಯಂಬಕೇಶ್ವರ-ಜ್ಯೋತಿರ್ಲಿಂಗ ಯಾತ್ರೆ:

ಈ ಪ್ಯಾಕೇಜ್ ಶಿರಡಿ ಮತ್ತು ತ್ರಯಂಬಕೇಶ್ವರದಲ್ಲಿರುವ ಸ್ಥಳಗಳನ್ನು ಒಳಗೊಂಡಿದೆ. ಅವಧಿ: 4 ರಾತ್ರಿಗಳು/5 ದಿನಗಳು, ದರ: ₹ 14160 ರಿಂದ ಆರಂಭ, ಮುಂಬರುವ ಪ್ರಯಾಣದ ದಿನಾಂಕ: 26-10-23

ನೀವು ಇದನ್ನೂ ಇಷ್ಟಪಡಬಹುದು: ಮುರುಡೇಶ್ವರದಲ್ಲಿದೆ ಜಗತ್ತಿನ ಎರಡನೇ ಅತೀ ಎತ್ತರದ ಶಿವನ ಮೂರ್ತಿ

6. ಮಧ್ಯ ಪ್ರದೇಶ ಜ್ಯೋತಿರ್ಲಿಂಗ ದರ್ಶನ:

ಈ ಪ್ಯಾಕೇಜ್ ಭೋಪಾಲ್, ಓಂಕಾರೇಶ್ವರ, ಸಾಂಚಿ, ಉಜ್ಜೈನ್, ಮಧ್ಯಪ್ರದೇಶ ಜ್ಯೋತಿರ್ಲಿಂಗಗಳ ದರ್ಶನವನ್ನು ಒದಗಿಸುತ್ತದೆ. ಅವಧಿ: 5 ರಾತ್ರಿಗಳು/6 ದಿನಗಳು, ದರ: ₹ 13530 ರಿಂದ ಆರಂಭ, ಮುಂಬರುವ ಪ್ರಯಾಣದ ದಿನಾಂಕ: 25-10-23

7. ಏಕತೆಯ ಪ್ರತಿಮೆಯೊಂದಿಗೆ ಸಪ್ತ ಜ್ಯೋತಿರ್ಲಿಂಗ ದರ್ಶನ ಯಾತ್ರೆ:

ಸ್ಟ್ಯಾಚ್ಯೂ ಆಫ್ ಯೂನಿಟಿ, ದ್ವಾರಕಾ ಭೇಟಿಯ ಜೊತೆಗೆ ಭೀಮಶಂಕರ, ಗ್ರೀಷ್ಣೇಶ್ವರ, ಮಹಾಕಾಳೇಶ್ವರ, ನಾಗೇಶ್ವರ, ಓಂಕಾರೇಶ್ವರ, ಸೋಮನಾಥ, ತ್ರಯಂಬಕೇಶ್ವರ ಜ್ಯೋತಿರ್ಲಿಂಗಗಳ ದರ್ಶನವನ್ನು ಈ ಪ್ಯಾಕೇಜ್ ಒಳಗೊಂಡಿದೆ. ಅವಧಿ: 12 ರಾತ್ರಿಗಳು/13 ದಿನಗಳು, ದರ: ₹ 21000 ರಿಂದ ಆರಂಭ, ಮುಂಬರುವ ಪ್ರಯಾಣದ ದಿನಾಂಕ: 18.11.2023

8. ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಮತ್ತು ತೆಲಂಗಾಣ ದೇವಾಲಯ ದರ್ಶನ:

ಈ ಪ್ಯಾಕೇಜ್ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ ಜೊತೆಗೆ ಶ್ರೀಶೈಲಂ, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಸುರೇಂದ್ರ ಪುರಿ ಮತ್ತು ಗೋಲ್ಕೊಂಡ, ಚಾರ್ಮಿನಾರ್, ಸಮಾನತೆಯ ಪ್ರತಿಮೆಗಳ ದರ್ಶನವನ್ನು ಒಳಗೊಂಡಿದೆ. ಅವಧಿ: 3 ರಾತ್ರಿಗಳು/4 ದಿನಗಳು, ದರ: ₹ 24615 ರಿಂದ ಆರಂಭ, ಮುಂಬರುವ ಪ್ರಯಾಣದ ದಿನಾಂಕ: ಪ್ರತಿದಿನ (01 ಸೆಪ್ಟೆಂಬರ್ 23 ರಿಂದ 31 ಮಾರ್ಚ್ 2024 ರವರೆಗೆ).

ಬುಕಿಂಗ್ ಹೇಗೆ?

12 ಜ್ಯೋತಿರ್ಲಿಂಗ ಯಾತ್ರಾ ಪ್ರವಾಸ ಪ್ಯಾಕೇಜ್ (Jyotirlinga Tourism package) ಅನ್ನು ಬುಕ್ ಮಾಡಲು, ಮೊದಲು IRCTC ಪ್ರವಾಸೋದ್ಯಮ ವೆಬ್‌ಸೈಟ್ (www.irctctourism.com) ಅಥವಾ ಅಪ್ಲಿಕೇಶನ್‌ಗೆ ಭೇಟಿ ನೀಡಿ. ಮುಖಪುಟದಲ್ಲಿ, ಜ್ಯೋತಿರ್ಲಿಂಗ ಪ್ರವಾಸ ಎಂದು ಟೈಪ್ ಮಾಡಿ ಮತ್ತು ನಿಮಗೆ ಬೇಕಾದ ಪ್ರವಾಸದ ಪ್ಯಾಕೇಜ್ ಅನ್ನು ಆಯ್ಕೆ ಮಾಡಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲ ತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button