ಇವರ ದಾರಿಯೇ ಡಿಫರೆಂಟುಏಕಾಂಗಿ ಸಂಚಾರಿದೂರ ತೀರ ಯಾನಬೆರಗಿನ ಪಯಣಿಗರುವಿಂಗಡಿಸದಸೂಪರ್ ಗ್ಯಾಂಗು

ದೇವಿಕಾ ನಟರಾಜ್ ಬರೆದ ಕೇದಾರಕಂಠ ಟ್ರೆಕ್ಕಿಂಗ್ ಸ್ಟೋರಿ

ಮದುವೆಗೆ ಇನ್ನೇನೂ ತಿಂಗಳು ಬಾಕಿಯಿರುವಾಗ, ಮನೆಯಲ್ಲಿ ಕೆಲಸದ ನಿಮಿತ್ತ ದೆಹಲಿ ಹೋಗಿ ಬರುತ್ತೇನೆ ಎಂದು ಸುಳ್ಳು ಹೇಳಿ ಕೇದಾರಕಂಠ ಟ್ರೆಕ್ಕಿಂಗ್ ಹೋಗಿ ಬಂದವರ ಕಥೆ. ಸುತ್ತಾಟದ ಸುಸ್ತಿನಲ್ಲಿ ಖುಷಿ ಕಾಣುವ ದೇವಿಕಾ ನಟರಾಜ್ ಬರೆದ ಚೆಂದದ ಟ್ರೆಕ್ಕಿಂಗ್ ಅನುಭವದ ಕಥೆ. ನಿಮಗೂ ಟ್ರೆಕ್ಕಿಂಗ್ ಆಸೆ ಮೂಡಿಸಬಹುದು.

ದೇವಿಕಾ ನಟರಾಜ್

ಒಮ್ಮೆ ಬೆಂಗಳೂರಿನ ಸಮೀಪದ ಸ್ಕಂದಗಿರಿ ಚಾರಣಕ್ಕೆ ಹೋಗಿದ್ದಾಗ ಅಪೂರ್ವ ದಂಪತಿಗಳ ಪರಿಚಯವಾಯಿತು. ಬೆಳಗಿನ ಚಾರಣದ ನಂತರ ತಿಂಡಿ ತಿನ್ನುವ ಸಮಯದಲ್ಲಿ ಅವರು ಹೋಗಿದ್ದ ವಿಂಟರ್ ಟ್ರೆಕ್/ಹಿಮಾಲಯನ್ ಟ್ರೆಕ್ ಅನುಭವವನ್ನು ಹಂಚಿಕೊಂಡರು ಹಾಗೆ ನನ್ನನ್ನು ಒಮ್ಮೆ ಹೋಗಿ ಬರಲು ಪ್ರೇರೆಪಿಸಿದರು. ಸುತ್ತಾಟದ ಸುಸ್ತಿನಲ್ಲೇ ಖುಷಿ ಕಾಣುವ ನನಗೆ ಒಮ್ಮೆ ಈ ಚಾರಣ ಮಾಡಬೇಕೆಂದು ಚಿಗುರೊಡೆದ ಆಸೆ ಹೆಮ್ಮರವಾದದ್ದು ೨೦೨೦ ಡಿಸೆಂಬರ್ ನಲ್ಲಿ. ಮದುವೆಗೆ ಇನ್ನು ಒಂದೇ ತಿಂಗಳು ಮನೇಲಿ ಹೇಳಿದ್ರೆ ಬೇಡ ಅಂತಾರೆ. ಹಾಗಾಗಿ ಕೆಲಸದ ಮೇಲೆ ಡೆಲ್ಲಿಗೆ ೧ ವಾರ ಹೋಗುತ್ತಿದೆನೆಂದು ಹೇಳಿ( ನನ್ನ ಮದುವೆಯಾಗುವ ಹುಡುಗನಿಗೆ ಬಿಟ್ಟು ಬೇರೆಲ್ಲರಿಗೂ ಇದೆ ಹೇಳಿದ್ದು) ಕೇದಾರಕಾಂಠ ಟ್ರೆಕ್ ಗೆ ಹೋಗಲು ಇಂಡಿಯಾ ಹೈಕ್ಸ್(India hikes ) ನಲ್ಲಿ ಟಿಕೆಟ್ ಬುಕ್ ಮಾಡಿ, ವ್ಯಾಯಾಮ ಜಾಗಿಂಗ್ ಮಾಡಲು ಶುರು ಮಾಡಿದೆ.

Komala nataraj

ಜನವರಿ ೧೦ ರಂದು ಬೆಳಿಗ್ಗೆ ವಿಮಾನದಲ್ಲಿ ಡೆಲ್ಲಿ ತಲುಪಿ(ಇದು ನನ್ನ ಮೊದಲ ವಿಮಾನ ಪ್ರಯಾಣ) ಅಲ್ಲಿಂದ ರೈಲಿನಲ್ಲಿ ಡೆಹ್ರಾಡೂನ್ ತಲುಪಿದೆ. ಹೊರಡಲು ಕೇವಲ ೨ ನಿಮಿಷ ಇರುವಾಗ ಸ್ಟೇಷನ್ ತಲುಪಿ(ಡೆಲ್ಲಿಯ ಟ್ರಾಫಿಕ್ನಿಂದ) ಎರಡೆರಡು ಬ್ಯಾಗ್ ಹೊತ್ತುಕೊಂಡು ಹೋಗುತಿದ್ದ ರೈಲಿಗೆ ಹತ್ತಿದ್ದು ಅವತ್ತಿನ ನನ್ನ ಮಟ್ಟಿಗೆ ಸಾಹಸವೇ ಸರಿ. ಬೆಳಿಗ್ಗೆ ತಿಂಡಿ ತಿಂದಿದ್ದಷ್ಟೆ ೩.೩೦ರ ತನಕ ಏನು ತಿಂದಿರಲಿಲ್ಲ. ತುಂಬಾ ಹಸಿವು , ತಿನ್ನಲು ಏನು ಇರಲಿಲ್ಲ.ಫೋನ್ನಲ್ಲಿ ನಡೆದದ್ದೆಲ್ಲ ಹೇಳುತ್ತಿರುವಾಗ ಕೇಳಿಸಿಕೊಂಡ ಪಕ್ಕದಲಿ ಕೂತಿದ್ದದವರು ಬ್ರೆಡ್ ಮತ್ತು ಜಾಮ್ ಕೊಟ್ಟು ನಾವು ಕರ್ನಾಟಕದವರೇ, ತಿನ್ನಿ ಎಂದರು. ತುಂಬಾ ಹಸಿವು ಮತ್ತೆ ಓಡಿದ್ದ ದಣಿವು formalities ಗೂ ಬೇಡ ಎನ್ನದೇ ತಿನ್ನುವಂತೆ ಮಾಡಿತು. ಅವರ ಜೊತೆಗೆ ಸ್ವಲ್ಪ ಹೊತ್ತು ಮಾತಾಡಿ, ಸ್ವಲ್ಪ ನಿದ್ದೆ ಮಾಡಿದೆ. ಸುಮಾರು ೯ ಗಂಟೆಗೆ ದೆಹ್ರಾಡೂನ್ ತಲುಪಿ ಹೋಟೆಲ್ ಚೆಕ್ಇನ್ ಮಾಡಿದೆ.

Trekking

ಮರುದಿನ ಬೆಳಿಗ್ಗೆ ೬ ಗಂಟೆಗೆ ಹೊರಟ ಟಿ.ಟಿ ನಲ್ಲಿ ಸಹ ಚಾರಣಿಗರ ಪರಿಚಯವಾಯಿತು. ಮಸ್ಸೂರಿ ಬಳಿ ತಿಂಡಿ ತಿಂದು ಮುಂದುವರೆಯಿತು ನಮ್ಮ ಪ್ರಯಾಣ ಬೇಸ್ ಕ್ಯಾಂಪ್ ಕಡೆಗೆ. ದಾರಿಯುದ್ದಕ್ಕೂ ಕಂಡ ಸುತ್ತಲಿನ ಹಸಿರು, ಬೆಟ್ಟದ ಇಳಿಜಾರಿನಲ್ಲಿ ಕಟ್ಟುಕೊಂಡಿದ್ದ ಮನೆಗಳು ಕಣ್ಮನ ಸೆಳೆದವು. ಸುಮಾರು ೪ ಗಂಟೆಗೆ ಗೆಚ್ವಾನ್ ಗಾವ್ ಗೆ(basecamp) ತಲುಪಿದವು. ಮರುದಿನ ಬೆಳಿಗ್ಗೆ ಬಿಸಿ ಬಿಸಿ ಇಡ್ಲಿ ತಿಂದು ೮ ಗಂಟೆಗೆ ಶುರುವಾಯಿತು ನಮ್ಮ ಬೆಟ್ಟ ಹತ್ತುವ ಕೆಲಸ. ಎಷ್ಟೇ ಚಾರಣ ಮಾಡಿದ್ದರೂ ಚಾರಣ ಶುರು ಮಾಡಿದಾಗ ಯಾಕಾದ್ರೂ ಬೇಕಿತ್ತು ಈ ಟ್ರೆಕ್ ಅನಿಸುವುದಂತೂ ಸುಳ್ಳಲ್ಲ. ದಾರಿ ಮದ್ಯೆ ಒಂದು ಚಿಕ್ಕ ಹೋಟೆಲ್ ಬಳಿ ಒಮ್ಲೆಟ್ ತಿಂದು ಟೀ ಕುಡಿದು, ಅಲ್ಲಿ ಆಡುತಿದ್ದ ಮಕ್ಕಳೊಡನೆ ಸೇರಿ ಕುಂಟೆಬಿಲ್ಲೆ ಆಡಿದ್ದು ಖುಷಿ ಕೊಟ್ಟಿತ್ತು. ಅಲ್ಲಲ್ಲಿ ವಿಶ್ರಮಿಸಿ, ಫೋಟೋ ಕ್ಲಿಕ್ಕ್ಕಿಸಿ, ಸಹಚರರೊಡನೆ ಮಾತುಕಥೆಯ ನಡೆವೆ ೨.೩೦ ರ ವೇಳೆಗೆ ಕ್ಯಾಂಪ್(Julota) ತಲುಪಿದ್ದೆವು. ಮರುದಿನ ಮುಂದುವರೆದ ಪ್ರಯಾಣವು ಹಿಮದ ಹಾದಿಯಲ್ಲೇ ಸಾಗಿತ್ತು. ಎಲ್ಲರೊಡನೆ ಹಾಡು, ಹಿಮ ಎಸೆತದ ಆಟ, ಮಾತು ಕಥೆಯಾ ಜೊತೆ ಮುಂದಿನ ಕ್ಯಾಂಪ್ (Purkola) ತಲುಪಿದೆವು.

Kedarakanta

ಆ ಸಮಯಕ್ಕೆ ಆ ಬೆಳಿಗ್ಗೆ ಸಮ್ಮಿಟ್(Peak) ಗೆ ಹೋಗಿ ಬಂದ ಟೀಮ್ ಜೊತೆ ಮಾತಾಡಿ ಊಟ ಮಾಡಿ ರೆಸ್ಟ್ ಮಾಡಿದೆವು. ಆ ದಿನ ಸಾಯಂಕಾಲ ಸೂರ್ಯಾಸ್ಥ ನೋಡುತಿದ್ದ ಸಮಯದಲ್ಲೇ ಟ್ರೆಕ್ ನ ಮುಖ್ಯವಾದ ಭಾಗ ಸಮ್ಮಿಟ್ ಹತ್ತುವ ಬಗ್ಗೆ , ಗೇಟರ್ಸ್ , ಮೈಕ್ರೋ ಸ್ಪೀಕ್ಸ್(Gaters & microspikes) ಹಾಕಿಕೊಳ್ಳುವ ಬಗ್ಗೆ ಕಿರು ತರ್ಬರ್ iಪಡೆದು ಮಲಗಿಕೊಂಡೆವು. ಆ ದಿನ ರಾತ್ರಿ -೩ ಡಿಗ್ರಿ ಸೆಲ್ಸಿಯಸ್ ಅನುಭವ ಅಂತೂ ಭಯಂಕರವಾಗಿತ್ತು. ಬೆಳಿಗ್ಗೆ ೪.೩೦ ಗೆ ಕೊರೆಯುವ ಚಳಿಯಲ್ಲಿ ಎದ್ದು ರೆಡಿ ಆಗಿ ಲಘು ಉಪಹಾರ ಸೇವಿಸಿ ಹೊರಟೆವು. ಸ್ವಲ್ಪ ಸಮಯಲಲ್ಲಿ ಬೆಳಕು ಹರಿಯಲು ಶುರುವಾಗಿತ್ತು.

ನೀವು ಇದನ್ನು ಇಷ್ಟ ಪಡಬಹುದು:ನಟ ಶಠಮರ್ಷಣ ಅವಿನಾಶ್ ಸಂಚಾರದ ಕಥೆ

ಸುತ್ತಲೂ ಹಿಮ ಹಿಮ. ಹೋಗುತ್ತಾ ದಾರಿ ತುಂಬ ಕಡಿದಾಗಿದ್ದು, ಕೊಂಚ ಕಷ್ಟ ಪಟ್ಟೆ ಎಲ್ಲರೂ ಸಮ್ಮಿಟ್ ತಲುಪಿದೆವು. ಮೊದಲು ಸಿಕ್ಕ ಗಣೇಶ ಹಾಗು ಶಿವನ ಮೂರ್ತಿಗೆ ಕೈ ಮುಗಿದೆನು. ನಂತರ ಕಂಡ ಸೂರ್ಯೋದಯ ಎಂದೆಂದೂ ಮರೆಯಲಾಗುವುದಿಲ್ಲ. 3.30 ಯಲ್ಲಿ ಕಾಣುವ ದೃಶ್ಯ ಮನೋಜ್ಞ, ಅವಿಸ್ಮರಣೀಯ, ಅದ್ಭುತ ಇನ್ನು ಮುಂತಾದ ಸಮಾನಾರ್ಥಕ ಪದಗಳಲ್ಲಿಯೂ ವರ್ಣಿಸಲಾರೆನು. ಸಮ್ಮಿಟ್ ಮೇಲೆ ನೆಟ್ವರ್ಕ್ ಸಿಕ್ಕಿದ್ದರಿಂದ ಎಲ್ಲರು ಫ್ರೆಂಡ್ಸ್ ಮತ್ತು ಕುಟುಂಬದವರಿಗೆ ವಿಡಿಯೋ ಕಾಲ್ ಮಾಡಿ ಅಲ್ಲಿನ ದೃಶ್ಯ ಸೊಬಗನ್ನು ತೋರಿಸುವ ಹಾಗು ಟ್ರೆಕ್ ನ ಮುಖ್ಯ ಭಾಗ ಫೋಟೋ ತೆಗೆದುಕೊಳ್ಳುವ ಕಾರ್ಯ ಭರದಿಂದ ಸಾಗಿತ್ತು.ಟ್ರೆಕ್ ಗೈಡ್ ಸುತ್ತಲಿನ ಬೆಟ್ಟಗಳ ಬಗ್ಗೆ ಪರಿಚಯ ಮಾಡಿಕೊಟ್ಟರು.

Himalaya

ಪ್ರತಿಯೊಬ್ಬರಿಗೂ ಒಂದೊಂದು ಪೋಸ್ಟ್ ಕಾರ್ಡ್ ಕೊಟ್ಟು ನಮಗೆ ನಾವೇ ಪತ್ರ ಬರೆಯಲುಹೇಳಿದಾಗ ೧೦ ನಿಮಿಷ ಅತ್ತಿದ್ದೆ(ಈಗಲೂ ಕಾರಣ ತಿಳಿದಿಲ್ಲ ನಾನೇಕೆ ಅಷ್ಟು ಭಾವುಕಳಾದೆನೆಂದು) ನಂಗೆ ನಾನೇ ಮೊದಲು ಪತ್ರ ಬರೆದದ್ದು ಮತ್ತು ಆ ಅನುಭವ ಕೊಟ್ಟಿದಾಕೆ India hikes ಗೆ ಥ್ಯಾಂಕ್ಸ್ 🙂 ಬೆಳಿಗ್ಗೆ ೪.೩೦ ಗೆ ತಿಂಡಿ ತಿಂದಿದ್ದು ಹಾಗು Acclimatization ಇಂದ ಬಂದ ವಿಪರೀತ ತಲೆ ನೋವಿಂದ ದಣಿದಿದ್ದ ನನಗೆ ಆಲೂ ಪರೋಟ ಕೊಟ್ಟಿದ್ದು ಇನ್ನೊಮ್ಮೆ ಧನ್ಯವಾದ ಹೇಳುವಂತೆ ಮಾಡಿತು.

ಇಳಿಜಾರಿನಲ್ಲಿ ಹಿಮದ ಮೇಲೆ ಜಾರುಬಂಡೆಯಲ್ಲಿ ಜಾರಿದ್ದು ತುಂಬ ಖುಷಿ ಕೊಟ್ಟಿತ್ತು. ಹೇಗೋ ಕಷ್ಟ ಪಟ್ಟು ಕ್ಯಾಂಪ್ ತಲುಪಿ ಊಟ ಮಾಡಿ ವಿಶ್ರಮಿಸಿದ ಮೇಲೆ ಸ್ವಲ್ಪ ತಲೆ ನೋವು ಕಮ್ಮಿಯಾಯಿತು. ನಂತರ ಮತ್ತೆ ಶುರುವಾಯಿತು ಮತ್ತೊಂದು ಕ್ಯಾಂಪ್ ನತ್ತ ಪ್ರಯಾಣ. ಸುತ್ತಲಿನ ಹಿಮ, ಎತ್ತರಕ್ಕೆ ಬೆಳೆದ ಮರಗಳು ೩ ದಿನ ದಿಂದಲೂ ನೋಡಿದ ನಮಗೆ ಅದು ಕಾಮನ್ ವಿಷಯ ಆಗಿದ್ದಲ್ಲದೆ, ನಿದ್ದೆಯ ಅಭಾವ, ಸುಸ್ತಿನ ಕಾರಣದಿಂದ ಮೌನದಿಂದಲೇ ಕ್ಯಾಂಪ್ ತಲುಪಿದೆವು. ನಂತರ ರಾತ್ರಿ ಊಟ, ನಿದ್ದೆಯೊಂದಿಗೆ ದಿನ ಮುಕ್ತಾಯ ಆಯಿತು.

Camp

ಮರುದಿನ ಬೆಳಿಗ್ಗೆ ೯ ಗಂಟೆಗೆ ಮತ್ತೆ ಬೇಸ್ ಕ್ಯಾಂಪ್ ನತ್ತ ಪ್ರಯಾಣ ಶುರುವಾಯಿತು. ದಾರಿಯುದ್ದಕ್ಕೂ ಎಲ್ಲರೊಡನೆ ಬೆರೆತು, ಫೋಟೋ ಕ್ಲಿಕ್ಕಿಸಿ , ಸುತ್ತಲಿನ ಪರಿಸರದ ಸೊಬಗು ಅನುಭವಿಸುತ್ತ ಬೇಸ್ ಕ್ಯಾಂಪ್ ತಲುಪಿದೆವು.ಆ ದಿನ ಆ ಊರಿನ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ಖುಷಿ ಕೊಟ್ಟಿತ್ತು.ಆ ರಾತ್ರಿ ನಡೆದ ಅನುಭವ ಹಂಚಿಕೊಳ್ಳುವ ಕಾರ್ಯಕ್ರಮದಲ್ಲಿ ಎಲ್ಲರ ಅನುಭವ, ಅನಿಸಿಕೆ, ಜೋಕ್ಸ್ ಎಲ್ಲವೂ ಒಂದೊಳ್ಳೆ ಪ್ರಯಾಣ ಮುಗಿಸಿರುವುದರ ಸಂಕೇತವಾಗಿತ್ತು.ಇದು ನನ್ನ ಮೊದಲ ಸೋಲೋ ಟ್ರೆಕ್ , ವಿಂಟರ್ ಟ್ರೆಕ್, ಮೊದಲ ವಿಮಾನ ಪ್ರಯಾಣ, ಮೊದಲು ಓದಿ ಹೋಗಿ ಟ್ರೈನ್ ಹತ್ತಿದ್ದು, ಮೊದಲು ನನಗೆ ನಾನೇ ಪತ್ರ ಬರೆದದ್ದು. ಹೀಗೆ ಸುಮಾರು ಮೊದಲುಗಳಿಗೆ ಮೊದಲಾಗಿರುವ ಈ ಪ್ರಯಾಣ ನನ್ನ ಜೀವನದ ಮರೆಯಲಾಗದ ಪ್ರಯಾಣ.

Himalaya Trek

ಜವಾಬ್ದಾರಿ, ಟ್ರಾಫಿಕ್, ನಗರ ಜೀವನದ ಕಿರಿ ಇರಿ ಇಂದ ಒಂದು ಬ್ರೇಕ್ ತೆಗೊಂಡು ಒಮ್ಮೆ‌ಹಿಮಾಲಯನ್ ಟ್ರೆಕ್ ಹೋಗಿ ಬನ್ನಿ ಒಂದು ಹೊಸ ಹುಮ್ಮಸ್ಸು ಹೊಸ‌ಹುರುಪು ಸಿಗುತ್ತದೆ. Life ನಲ್ಲಿ ಒಮ್ಮೆ solo trek ಹೋಗಿ, ಒಳ್ಳೆ ಮಜಾ ಸಿಗುತ್ತೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button