ಆಹಾರ ವಿಹಾರದೂರ ತೀರ ಯಾನವಿಂಗಡಿಸದ

ಅಯೋಧ್ಯೆಯಲ್ಲಿಯೂ KFC ಓಪನ್; ಆದ್ರೆ ಷರತ್ತುಗಳು ಅನ್ವಯ

 ಲಕ್ಷಾಂತರ ಸಂಖ್ಯೆಯ ಭಕ್ತರು ಅಯೋಧ್ಯೆಗೆ ಧಾವಿಸುತ್ತಿದ್ದು,  ರಾಮಾನೂರಿನಲ್ಲಿ ವಾಣಿಜ್ಯ ಚಟುವಟಿಕೆಗಳು ಕೂಡ ಜೋರಾಗಿದೆ. ಈ ಪೈಕಿ ಮಾಂಸಹಾರಕ್ಕೆ ಹೆಸರಾದ ಕೆಎಫ್‌ಸಿ ಮಳಿಗೆ ಕೂಡಾ ಸ್ಥಾಪನೆ ಆಗ್ತಿರೋದು ವಿಶೇಷ.

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಗೊಂಡಿದೆ. ನಿತ್ಯ ಸಾವಿರಾರು ಜನ ಶ್ರೀರಾಮನ ಜನ್ಮ ಭೂಮಿಯಲ್ಲಿ ರಾಮಮಂದಿರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಸದ್ಯ ಅಯೋಧ್ಯೆ ಪ್ರವಾಸಿಗರ ಪ್ರಮುಖ ವೀಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ಈ ನಡುವೆ ಅಯೋಧ್ಯೆಯಲ್ಲಿ ಕೆಂಟುಕಿ ಫ್ರೈಡ್ ಚಿಕನ್ (KFC) ಮಳಿಗೆಗಳನ್ನು ತೆರೆಯಲಾಗಿದೆ. ಇದಕ್ಕೆ ಜಿಲ್ಲಾಡಳಿತ ಕೂಡ ಒಪ್ಪಿಗೆ ಸೂಚಿಸಿದೆ.

KFC

ಅಮೆರಿಕ ಮೂಲದ ಕೆಂಟುಕಿ ಫ್ರೈಡ್ ಚಿಕನ್ (KFC) ಸಂಸ್ಥೆಯು ತೀರ್ಥ ಕ್ಷೇತ್ರವಾದ ಅಯೋಧ್ಯೆಯಲ್ಲಿ ತನ್ನ ಮೊಟ್ಟ ಮೊದಲ ಸಸ್ಯಹಾರ (Vegetarian) ಮಳಿಗೆ ತೆರೆಯಲು ತೀರ್ಮಾನಿಸಿದೆ.

ಅಯೋಧ್ಯೆಗೆ (Ayodhya) ಬರುವ ಯಾತ್ರಾರ್ಥಿಗಳಿಗೆ ಇಷ್ಟವಾಗುವ ರೀತಿಯಲ್ಲಿ ಸಸ್ಯಹಾರ ಖಾದ್ಯಗಳನ್ನು ಮಾರಾಟ ಮಾಡಲು ಮುಂದಾಗಿದೆ

ಕೆಎಫ್‌ಸಿ ಎಂದ ಕೂಡಲೇ ಕ್ರಿಸ್ಪಿ ಚಿಕನ್ ನೆನಪಾಗುತ್ತೆ, ಮಾಂಸಹಾರ ಪ್ರಿಯರ ಬಾಯಲ್ಲಿ ನೀರೂರಿಸುತ್ತೆ. ಆದರೆ, ಅಯೋಧ್ಯೆಯಲ್ಲಿ ಯಾವುದೇ ಕಾರಣಕ್ಕೂ ಮಾಂಸಹಾರ ಸೇವನೆ, ತಯಾರಿ ಹಾಗೂ ಮಾರಾಟ ಮಾಡುವಂತೆಯೇ ಇಲ್ಲ.

ಇಲ್ಲಿನ ಧಾರ್ಮಿಕ ಮಹತ್ವ ಹಾಗೂ ನಿಯಮಾವಳಿಗಳನ್ನ ಮನಗಂಡಿರುವ ಬಹುರಾಷ್ಟ್ರೀಯ ಕಂಪನಿ ಕೆಎಫ್‌ಸಿ, ಇಷ್ಟಾದರೂ ವಿಶ್ವದ ಗಮನ ಸೆಳೆದಿರುವ ಈ ತೀರ್ಥ ಕ್ಷೇತ್ರದಲ್ಲಿ ತನ್ನದೊಂದು ಮಳಿಗೆ ಇರಲೇ ಬೇಕು ಅನ್ನೋ ಕಾರಣಕ್ಕೆ ತನ್ನ ಮೆನು ಬದಲಾವಣೆ ಮಾಡಿಕೊಂಡಿದೆ.

ಕೆಎಫ್ ಸಿ ಶಾಖೆ ತೆರೆಯಲು ಯಾವುದೇ ಸಮಸ್ಯೆ ಇಲ್ಲ. ಆದ್ರೆ ಒಂದು ಷರತ್ತನ್ನು ಅದು ಪಾಲಿಸಬೇಕಾಗುತ್ತದೆ. 

ಪವಿತ್ರ ನಗರವಾಗಿರುವುದರಿಂದ ಅಯೋಧ್ಯೆ (Ayodhya) ಯಿಂದ 15 ಕಿಮೀ ಯಾತ್ರಾಸ್ಥಳದೊಳಗೆ ಮಾಂಸ ಮತ್ತು ಮದ್ಯ ಎರಡನ್ನೂ ನಿಷೇಧಿಸಲಾಗಿದೆ. ಇಲ್ಲಿರುವ ಯಾವುದೇ ಉಪಾಹಾರ ಗೃಹವು ಮಾಂಸ (Meat) ವನ್ನು ನೀಡುವಂತಿಲ್ಲ.

ನಿರ್ಬಂಧಿತ ಕ್ಷೇತ್ರದಿಂದ ಹೊರಗೆ ಮಾಂಸಹಾರವನ್ನು ಮಾರಾಟ ಮಾಡಬಹುದು. ಒಂದ್ವೇಳೆ ಈ ನಿರ್ಬಂಧಿತ ಪ್ರದೇಶದಲ್ಲಿ ಕೆಎಫ್ ಸಿ ತನ್ನ ಶಾಖೆ ಶುರು ಮಾಡುತ್ತಿದ್ದಲ್ಲಿ  ಅದು ತನ್ನ ಶಾಖೆಯಲ್ಲಿ ಮಾಂಸಹಾರ ನೀಡುವಂತಿಲ್ಲ.

ಚಿಕನ್ ಗೆ ಫೇಮಸ್ ಆಗಿರುವ ಕೆಎಫ್ ಸಿ, ಅಯೋಧ್ಯೆ ಶಾಖೆಯಲ್ಲಿ ಚಿಕನ್ ಸೇರಿದಂತೆ ಯಾವುದೇ ಮಾಂಸಾಹಾರ ನೀಡುವಂತಿಲ್ಲ.

ಸಸ್ಯಹಾರವನ್ನು ಮಾತ್ರ ಕೆಎಫ್ ಸಿ ಒದಗಿಸುತ್ತದೆ ಎಂದಾದ್ರೆ ನಾವು ಸ್ಥಳ ನೀಡಲು ಸಿದ್ಧರಿದ್ದೇವೆ ಎಂದು ಅಯೋಧ್ಯೆಯ ಸರ್ಕಾರಿ ಅಧಿಕಾರಿ ವಿಶಾಲ್ ಸಿಂಗ್ ಹೇಳಿದ್ದಾರೆ. ಸದ್ಯ ಕೆಎಫ್ ಸಿ ಶಾಖೆಯು ಅಯೋಧ್ಯೆ-ಲಖನೌ ಹೆದ್ದಾರಿಯಲ್ಲಿದೆ. ಅಲ್ಲಿ ಮಾಂಸಹಾರವನ್ನು ನೀಡಲಾಗುತ್ತಿದೆ. 

ಈ ಮಾರ್ಗವು ಪಂಚ ಕೋಸಿ ಪರಿಕ್ರಮವನ್ನು ಒಳಗೊಂಡಿದೆ, ರಾಮಾಯಣಕ್ಕೆ(Ramayana) ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಅಯೋಧ್ಯೆಯ ಸುತ್ತ 15-ಕಿಲೋಮೀಟರ್ ತೀರ್ಥಯಾತ್ರೆ ಸರ್ಕ್ಯೂಟ್ ಆಗಿ ಗುರುತಿಸಲಾಗಿದೆ.

ನೀವು ಇದನ್ನು ಇಷ್ಟಬಹುದು:ಅಯೋಧ್ಯೆ ಯಾತ್ರೆ ಪ್ರಾರಂಭಿಸಿದ ವಿಶ್ವದ ಐಷಾರಾಮಿ ರೈಲು

Kentkui chicken Fry

ಹಾಗೆ ನೋಡಿದ್ರೆ, ಕೆಎಫ್‌ಸಿಗೆ ಮುನ್ನವೇ ಡಾಮಿನೋಸ್(Domino’s )ಈ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಡಾಮಿನೋಸ್ ಸಂಸ್ಥೆಯು ಅಯೋಧ್ಯೆಯಲ್ಲಿ ಸಸ್ಯಹಾರ ಮಳಿಗೆ ಸ್ಥಾಪನೆ ಮಾಡಿದ್ದು, ಭರ್ಜರಿ ಯಶಸ್ಸನ್ನೂ ಕಂಡಿದೆ.

ಈ ಹಿನ್ನೆಲೆಯಲ್ಲಿ ಕೆಎಫ್‌ಸಿ ಕೂಡಾ ಡಾಮಿನೋಸ್ ಮಾದರಿಯಲ್ಲೇ ಸಸ್ಯಹಾರ ಮಳಿಗೆ ತೆರೆಯಲು ತೀರ್ಮಾನಿಸಿದೆ. ತನ್ನ ಮಳಿಗೆಗೆ ಬರುವ ಆಹಾರ ಪ್ರಿಯರಿಗೆ ಕೆಎಫ್‌ಸಿ ವೆಜ್‌ ಮೆನುವನ್ನು ಆಸ್ವಾದಿಸುವ ಅವಕಾಶ ನೀಡಲು ಮುಂದಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button