ಅಯೋಧ್ಯೆ ಯಾತ್ರೆ ಪ್ರಾರಂಭಿಸಿದ ವಿಶ್ವದ ಐಷಾರಾಮಿ ರೈಲು
42 ವರ್ಷಗಳ ನಂತರ ಮೊದಲ ಬಾರಿಗೆ ರಾಜಸ್ಥಾನದ ರಾಯಲ್ ಟ್ರೈನ್(Royal Train)ಎಂದು ಕರೆಯಲ್ಪಡುವ ಪ್ಯಾಲೇಸ್ ಆನ್ ವೀಲ್ಸ್(Palace on Wheels) ಶೀಘ್ರದಲ್ಲೇ ಧಾರ್ಮಿಕ ಪ್ರಯಾಣವನ್ನು ಕೈಗೊಳ್ಳಲಿದೆ.
ಈ ರೈಲು ಪ್ರಯಾಗರಾಜ್ (Prayagraj), ವಾರಣಾಸಿ(Varanasi) ಮೂಲಕ ಅಯೋಧ್ಯೆಗೆ(Ayodhya)ಹೋಗಲಿದೆ.
ಪ್ಯಾಲೇಸ್ ಆನ್ ವೀಲ್ಸ್ ಶೀಘ್ರದಲ್ಲೇ ಧಾರ್ಮಿಕ ಪ್ರಯಾಣವನ್ನು ಕೈಗೊಳ್ಳಲಿದೆ. ಈ ರೈಲು ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುವುದರಿಂದ ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರ ಆಹಾರ ಮೆನುವನ್ನು ಬದಲಾಯಿಸಲಾಗಿದ್ದು, ಪ್ರಯಾಣಿಕರಿಗೆ ಮದ್ಯವನ್ನು ನೀಡಲಾಗುವುದಿಲ್ಲ.
ಜೊತೆಗೆ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಕರಿಯನ್ನು ನಿಷೇಧಿಸಿದೆ. ಈ ರೈಲು ವಾರಣಾಸಿ, ಮಥುರಾ,(Mathura) ವೃಂದಾವನ(Vrandavan )ಮತ್ತು ಅಯೋಧ್ಯೆ ಮುಂತಾದ ಧಾರ್ಮಿಕ ನಗರಗಳಿಗೆ ಭೇಟಿ ನೀಡಲಿದೆ.
ನೀವು ಇದನ್ನು ಇಷ್ಟ ಪಡಬಹುದು:ಫೆ.5ರಿಂದ ‘ಅಶ್ವಮೇಧ’ ದಲ್ಲಿ ಊರು ತಲುಪಬಹುದು.
ಇಲ್ಲಿಂದ ಈ ರೈಲು ಆರು ದಿನಗಳ ನಂತರ ಮಥುರಾ ವೃಂದಾವನದ ಮೂಲಕ ದೆಹಲಿಗೆ ಮರಳಲಿದೆ. ಈ ರೈಲು ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುವುದರಿಂದ ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರ ಆಹಾರ ಮೆನುವನ್ನು ಬದಲಾಯಿಸಲಾಗಿದೆ.
ಹೊಸ ಬದಲಾವಣೆಯ ಪ್ರಕಾರ, ಪ್ರಯಾಣಿಕರಿಗೆ ಮದ್ಯವನ್ನು ನೀಡಲಾಗುವುದಿಲ್ಲ ಅಥವಾ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಕರಿಯನ್ನು ನಿಷೇಧಿಸಿದೆ.
ಈ ರೈಲನ್ನು ಆರ್‌ಟಿಡಿಸಿಯಿಂದ 7 ವರ್ಷಗಳ ಕಾಲ ಗುತ್ತಿಗೆ ಪಡೆದಿರುವ ಕಂಪನಿಯು ಈ ಹೊಸ ಪ್ರಯಾಣದ ನೀಲಿನಕ್ಷೆಯನ್ನು ಆರ್‌ಟಿಡಿಸಿ ಮುಂದೆ ಸಲ್ಲಿಸಿದೆ.
ಪ್ಯಾಲೇಸ್ ಆನ್ ವೀಲ್ಸ್ ಟಿಕೇಟ್ ದರ ಎಷ್ಟು?
ಈ ರೈಲಿನಲ್ಲಿ ಪ್ರಯಾಣಿಸಲು ದಿನಕ್ಕೆ 70 ಸಾವಿರ ರೂ ಪಾವತಿಸಬೇಕು. ಈ 70 ಸಾವಿರ ನಿಮಗೆ ಹೆಚ್ಚೆನಿಸಬಹುದು ಆದರೆ ಇದು ಸೆಮಿ-ಡೀಲಕ್ಸ್(Semi deluxe )ಕೋಚ್‌ನ ದರ.
ಈ ರೈಲಿನ ಡಿಲಕ್ಸ್ ಕೋಚ್ ನಲ್ಲಿ ಪ್ರಯಾಣಿಸಲು ಪ್ರಯಾಣಿಕರು ದಿನಕ್ಕೆ 95 ಸಾವಿರ ರೂ. ಇದಲ್ಲದೇ ಸೂಪರ್ ಡಿಲಕ್ಸ್‌ನ ದರವು ದಿನಕ್ಕೆ ಸುಮಾರು 2 ಲಕ್ಷ ರೂ. ಒಟ್ಟಾಗಿ ನೀವು ಈ ರೈಲಿನಲ್ಲಿ ಪ್ರಯಾಣಿಸಲು 13 ಲಕ್ಷ ರೂ. ಖರ್ಚು ಮಾಡಬೇಕಿದೆ.
ರೈಲಿನಲ್ಲಿ ಒಂದು ಬಾರಿಗೆ ಒಟ್ಟು 46 ಪ್ರಯಾಣಿಕರು ಪ್ರಯಾಣಿಸಬಹುದು. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ರೈಲಿನಲ್ಲಿ ಮಲಗುವ ಕೋಣೆ, ವಿಶ್ರಾಂತಿ ಕೋಣೆ, ಅಡುಗೆಮನೆ ಹೀಗೆ ಸಾಕಷ್ಟು ಐಷಾರಾಮಿ ಸೌಲಭ್ಯಗಳಿವೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.