Moreಕಾರು ಟೂರುವಿಂಗಡಿಸದ

ಪ್ರಯಾಣದ ಸಮಯದಲ್ಲಿ ಅನುಸರಿಸಬೇಕಾದ ಆರೋಗ್ಯ ಸಲಹೆಗಳು

ಪ್ರಯಾಣದ ಸಮಯದಲ್ಲಿನ ನಮ್ಮ ದಿನಚರಿ, ಹೊಸ ಆಹಾರ ಪದ್ಧತಿ, ಹವಾಮಾನ ಬದಲಾವಣೆ, ಇತರೆ ಅಭ್ಯಾಸಗಳ ಪರಿಣಾಮ ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಅನೇಕ ವೇಳೆ ಸವಾಲು ಎದುರಿಸಬೇಕಾಗುತ್ತದೆ.

ಕೆಲವು ಎಚ್ಚರಿಕೆಯ ಮತ್ತು ಸರಳ ಯೋಜನೆಗಳ ಮೂಲಕ ನಾವು ಪ್ರಯಾಣದ ಉದ್ದಕ್ಕೂ ಆರೋಗ್ಯವಾಗಿ ಮತ್ತು ಉತ್ಸಾಹದಿಂದ ಇರಬಹುದು.

ಪ್ರಯಾಣದ (Travelling) ಸಮಯದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳುವುದು ಎಂಬ ಪ್ರಶ್ನೆಗೆ ಇಲ್ಲಿದೆ ಕೆಲವು ಉಪಯುಕ್ತ ಸಲಹೆಗಳು(health tips). ಪ್ರಯಾಣದ ಸಮಯದಲ್ಲಿ ಇವುಗಳನ್ನು ತಪ್ಪದೇ ಅನುಸರಿಸಿ.

1.ಹೈಡ್ರೇಟೆಡ್ (hydrated) ಆಗಿರಿ:

“ನೀರು” ನಮ್ಮ ದೇಹಕ್ಕೆ ಅತಿ ಮುಖ್ಯ. ಆರೋಗ್ಯವಾಗಿರಲು ಸರಿಯಾದ ಪ್ರಮಾಣದಷ್ಟು ನೀರು ಕುಡಿಯುವುದು ಅತ್ಯಗತ್ಯ.

ಪ್ರಯಾಣದ ಸಮಯದಲ್ಲಿ ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯನ್ನು ಒಯ್ಯಿರಿ ಮತ್ತು ದಿನವಿಡೀ ಸಾಕಷ್ಟು ನೀರು ಕುಡಿಯಿರಿ, ವಿಶೇಷವಾಗಿ ಬಿಸಿ ಅಥವಾ ಶುಷ್ಕ ವಾತಾವರಣದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಲೇಬೇಕು.

2. ಸಕ್ರಿಯರಾಗಿರಿ:

ಪ್ರಯಾಣದ ಸಮಯದಲ್ಲಿ ಅತಿಯಾಗಿ ವಿಮಾನ, ಕಾರು ಇತರ ವಾಹನಗಳಿಗೆ ಅವಲಂಬಿತರಾಗದೇ ದೈಹಿಕ ಚಟುವಟಿಕೆಗಳನ್ನು ಒಳಗೊಂಡ ಪ್ರಯಾಣವನ್ನು ಅನುಸರಿಸಿ.

ನಿಮ್ಮ ಗಮ್ಯಸ್ಥಾನವನ್ನು ತಲುಪಲು ನಡುಗೆ, ಹೈಕಿಂಗ್, ಬೈಕಿಂಗ್ ಅಥವಾ ಈಜುವ ಅವಕಾಶವಿದ್ದರೆ ಅದರ ಲಾಭ ಪಡೆಯಿರಿ.ನಿಮ್ಮ ಪ್ರಯಾಣದ ದಿನಚರಿಯಲ್ಲಿ ಕೆಲವು ಸರಳ ವ್ಯಾಯಾಮವನ್ನು ಅಳವಡಿಸಿಕೊಳ್ಳಿ.

3. ಆರೋಗ್ಯಕರ ತಿನಿಸುಗಳು ನಿಮ್ಮ ಬಳಿ ಇರಲಿ: ನಿಮಗೆ ಪೌಷ್ಟಿಕತೆಯನ್ನು ನೀಡುವ ಕೆಲವು ಆರೋಗ್ಯಕರ ತಿನಿಸುಗಳು ನಿಮ್ಮ ಬ್ಯಾಗ್ ನಲ್ಲಿ ಯಾವಾಗಲೂ ಇರಲಿ.

ಹಸಿವನ್ನು ತಡೆಯಲು ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಡ್ರೈ ಫ್ರೂಟ್ಸ್, ಮೊಳಕೆ ಕಾಳುಗಳು, ಹಣ್ಣುಗಳು, ಇತರೆ ತಿನಿಸುಗಳನ್ನು ನಿಮ್ಮ ಬಳಿ ಇರಲಿ.

4. ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ:

ಕೈ-ಕಾಲುಗಳನ್ನು ಆಗಾಗ ಸಾಬೂನಿನಿಂದ ತೊಳೆಯಿರಿ. ಎಲ್ಲಿಗೆ ಪ್ರಯಾಣ ಹೋಗಿ ಬಂದರೂ ಮುಖ, ಕೈ-ಕಾಲುಗಳನ್ನು ನೀರಿನಿಂದ ತೊಳೆಯಿರಿ. ಹ್ಯಾಂಡ್ ಸ್ಯಾನಿಟೈಸರ್ ಸಹ ಜೊತೆಗೆ ಇರಲಿ.

ತೊಳೆಯದ ಕೈಗಳಿಂದ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಬೇಡಿ.

5. ಚೆನ್ನಾಗಿ ನಿದ್ರೆ ಮಾಡಿ:

ವಿವಿಧ ಸ್ಥಳಗಳಿಗೆ ಪ್ರಯಾಣ ಬೆಳೆಸುವಾಗ ನಿದ್ರೆ ಮಾಡುವುದೇ ಸವಾಲಾಗಿರುತ್ತದೆ. ಆದರೆ ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಇಲ್ಲದಿದ್ದರೇ ಮುಂದಿನ ಪ್ರಯಾಣಗಳಿಗೆ ಅದು ಪರಿಣಾಮವನ್ನುಂಟು ಮಾಡುತ್ತದೆ.

ಆದ್ದರಿಂದ ಎಲ್ಲಿಗೆ ಹೋದರೂ ನಿದ್ರೆಗೆ ಆದ್ಯತೆ ನೀಡಿ. ಸಾಧ್ಯವಾದಷ್ಟು ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸಲು ಪ್ರಯತ್ನಿಸಿ.

6. ತಿನ್ನುವ ಆಹಾರದ ಮೇಲೆ ಗಮನವಿರಲಿ:

ಪ್ರಯಾಣ ಮಾಡುವಾಗ ಸ್ಥಳೀಯ ಪಾಕಪದ್ಧತಿಯನ್ನು ಸವಿಯಲು ಮನಸ್ಸಾಗುವುದು ಸಹಜ. ಆದರೆ ಆ ಆಹಾರವನ್ನು ತಿನ್ನುವ ಪ್ರಮಾಣದ ಬಗ್ಗೆ ಗಮನವಿರಲಿ.

ಸಾಧ್ಯವಾದಷ್ಟು ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್ಗಳು ಮತ್ತು ಧಾನ್ಯಗಳನ್ನು ಒಳಗೊಂಡಿರುವ ಸಮತೋಲಿತ ಊಟವನ್ನು ಆಯ್ಕೆಮಾಡಿ.

ಹೆಚ್ಚಿನ ಪ್ರಮಾಣದಲ್ಲಿ ಕರಿದ ಅಥವಾ ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದನ್ನು ನಿಲ್ಲಿಸಿ.

7. ಒತ್ತಡವನ್ನು ನಿರ್ವಹಿಸಿ:

ಕೆಲವು ಪ್ರಯಾಣಗಳು ಒತ್ತಡವನ್ನುಂಟು ಮಾಡುತ್ತವೆ. ಪರಿಚಯವಿಲ್ಲದ ಸ್ಥಳಗಳಿಗೆ ಹೋದಾಗ ಸಹಜವಾಗಿ ಸಾರಿಗೆ ಸಮಸ್ಯೆ, ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದು, ಅಲ್ಲಿಯ ಪಾಕ ಪದ್ಧತಿಯನ್ನು ಅನುಸರಿಸುವುದು ಕಷ್ಟವಾಗುತ್ತದೆ.

ಆದರೆ ಇಂತಹ ಸಮಯದಲ್ಲಿ ಪ್ಯಾನಿಕ್ ಆಗದೇ ಒತ್ತಡವನ್ನು ನಿರ್ವಹಿಸುವುದನ್ನು ಅಭ್ಯಾಸ ಮಾಡಿ.

8. ಗಮ್ಯಸ್ಥಾನದ ಕುರಿತು ಸರಿಯಾದ ಮಾಹಿತಿ ಇರಲಿ:

ನೀವು ಪ್ರಯಾಣಿಸುವ ಮೊದಲು ನಿಮ್ಮ ಗಮ್ಯಸ್ಥಾನದ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಸಂಶೋಧಿಸಿ. ಸ್ಥಳೀಯ ವೈದ್ಯಕೀಯ ಸೌಲಭ್ಯಗಳು ಮತ್ತು ತುರ್ತು ಸಂಪರ್ಕದ ಮಾಹಿತಿ ಇರಲಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button