ದೂರ ತೀರ ಯಾನಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ಹೆಚ್ಚೇನೂ ಪ್ರಸಿದ್ಧವಲ್ಲದ ಭಾರತದ ಯುನೆಸ್ಕೊ ಪಾರಂಪರಿಕ ತಾಣಗಳು

ಯುನೆಸ್ಕೊ ಅದೆಷ್ಟೋ ಪಾರಂಪರಿಕ ತಾಣಗಳನ್ನು ನಮ್ಮ ದೇಶದಲ್ಲಿ ಪಟ್ಟಿ ಮಾಡಿದೆ. ಆ ತಾಣಗಳು ಐತಿಹಾಸಿಕವಾಗಿ ಪ್ರಸಿದ್ಧವಾಗಿದ್ದು, ಜನದಟ್ಟಣೆಯೂ ಹೆಚ್ಚಿರುತ್ತದೆ. ಆದರೆ, ಈ ತಾಣಗಳ ಪಟ್ಟಿಯಲ್ಲಿದ್ದು, ಅಷ್ಟೊಂದು ಪ್ರಸಿದ್ಧಿಗೆ ಬರದ ಸ್ಥಳಗಳೂ ದೇಶದಲ್ಲಿವೆ. ಅಂತಹ ತಾಣಗಳ ಪರಿಚಯವಿದು.

  • ವರ್ಷಾ ಉಜಿರೆ

ಭಾರತ ಪಾರಂಪರಿಕ ತಾಣಗಳ ತವರೂರು. ಪ್ರಪಂಚದಲ್ಲಿ ಅತೀ ಹೆಚ್ಚು ಪಾರಂಪರಿಕ ತಾಣಗಳಿರುವ ದೇಶಗಳ ಪಟ್ಟಿಯಲ್ಲಿ ದೇಶ ಆರನೇ ಸ್ಥಾನದಲ್ಲಿದೆ. ಯುನೆಸ್ಕೊ ಪಟ್ಟಿಯಲ್ಲಿ ೩೮ ಪಾರಂಪರಿಕ ತಾಣಗಳಿವೆ. ಆದರೆ ಎಲ್ಲವೂ ತಾಜ್ ಮಹಲ್, ಹಂಪಿಯಷ್ಟು ಪ್ರಸಿದ್ಧಿ ಪಡೆದಿಲ್ಲ.

ಸಾಮಾನ್ಯವಾಗಿ ಯುನೆಸ್ಕೊ ಪಟ್ಟಿಯಲ್ಲಿ ಪಾರಂಪರಿಕವಾಗಿ ಮತ್ತು ಐತಿಹಾಸಿಕವಾಗಿ ಚರಿತ್ರೆಯ ಪಟ್ಟಿಯಲ್ಲಿ ದಾಖಲಿಸಲ್ಪಟ್ಟ ಪ್ರದೇಶಗಳಿರುತ್ತವೆ. ಉದಾಹರಣೆಗೆ ಹಂಪಿ. ಉತ್ತರಾಖಂಡಿನ ವ್ಯಾಲಿ ಆಫ್ ಫ್ಲವರ್ಸ್, ಯುನೆಸ್ಕೊ ಪಟ್ಟಿ ಮಾಡಿದ ನೈಸರ್ಗಿಕ ತಾಣಕ್ಕೆ ಉತ್ತಮ ಉದಾಹರಣೆ.

ಯುನೆಸ್ಕೊ ಪಟ್ಟಿಯಲ್ಲಿ ಕೆಲವು ನೈಸರ್ಗಿಕ ತಾಣಗಳಿವೆ, ಐತಿಹಾಸಿಕ ತಾಣಗಳಿವೆ. ಅಥವಾ ಇವೆರಡೂ ಮಿಶ್ರಗೊಂಡ ತಾಣಗಳೂ ಇವೆ. ಪ್ರವಾಸಿಗರನ್ನು ಸೆಳೆಯಬಲ್ಲ, ಆದರೂ ಅಷ್ಟು ಪ್ರಸಿದ್ಧಿಯಲ್ಲದ ಅಂತಹ ತಾಣಗಳ ಪರಿಚಯ ಇಲ್ಲಿದೆ.

  • ಖಾಂಗ್ಚೆಂಡ್ಜೊಂಗಾ ನ್ಯಾಷನಲ್ ಪಾರ್ಕ್, ಸಿಕ್ಕಿಂ

ಈ ಉದ್ಯಾನವನವು ಭಾರತದ ಏಕೈಕ ಮತ್ತು ಮೊದಲ ಮಿಶ್ರಪರಂಪರೆಯ ತಾಣವಾಗಿದೆ. ಜಗತ್ತಿನ ಮೂರನೇ ಅತೀ ಎತ್ತರದ ಶಿಖರ ಕಾಂಗ್ಜೆನ್ ಜುಂಗಾ ಪರ್ವತಕ್ಕೆ ನೆಲೆಯಾದ ಇದು, ಸಮುದ್ರಮಟ್ಟದಿಂದ ೮೫೮೬ಮೀ ಎತ್ತರದಲ್ಲಿದೆ.

khangchendzonga national park, Sikkim

ಈ ಬೃಹತ್ ಉದ್ಯಾನವನವು ೧೭೮೪ ಚಕಿಮೀ ಪ್ರದೇಶದಲ್ಲಿ ಹರಡಿದೆ. ಅಜಮಾಸು ೫೦೦ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳ ಆವಾಸಸ್ಥಾನವಾಗಿದೆ. ಹಿಮಚಿರತೆ, ಹಿಮಾಲಯದ ಕಸ್ತೂರಿ ಜಿಂಕೆ ಮುಂತಾದ ಅಪರೂಪದ ಪ್ರಾಣಿಗಳನ್ನು ಇಲ್ಲಿ ಗುರುತಿಸಲಾಗಿದೆ. 

  • ಚಂಡೀಘರ್ ಕ್ಯಾಪಿಟಲ್ ಕಾಂಪ್ಲೆಕ್ಸ್, ಚಂಡೀಘರ್

ಚಂಡೀಗಢ ಸೆಕ್ಟರ್-೧ರಲ್ಲಿ ನೆಲೆಗೊಂಡಿರುವ ಈ ಸರ್ಕಾರಿ ಕಾಪೌಂಡಿನ ವಿನ್ಯಾಸಕಾರರು ಪ್ರಸಿದ್ಧ ವಾಸ್ತುಶಿಲ್ಪಿ ಲೆ ಕಾರ್ಬುಸಿಯರ್.

chandigarh capital complex

ಈ ತಾಣವು ೧೦೦ ಎಕರೆಗಳಷ್ಟು ಪ್ರದೇಶದಲ್ಲಿ ನೆಲೆಗೊಂಡಿದೆ. ಸಂಕೀರ್ಣದಲ್ಲಿ ಮೂರು ಮುಖ್ಯ ಕಟ್ಟಡಗಳಿವೆ. ಅವುಗಳೆಂದರೆ ಅಸೆಂಬ್ಲಿ, ಸೆಕ್ರೆಟೇರಿಯೇಟ್ ಬಿಲ್ಡಿಂಗ್ ಮತ್ತು ಹೈಕೋರ್ಟ್.

  • ಚಂಪಾನೇರ್- ಪಾವಗಢ ಆರ್ಕಿಯೋಲಾಜಿಕಲ್ ಪಾರ್ಕ್, ಗುಜರಾತ್

ಈ ಪುರಾತತ್ವ ಉದ್ಯಾನವು ಗುಜರಾತಿನ ಪಂಚಮಹಲ್ ಜಿಲ್ಲೆಯ ಐತಿಹಾಸಿಕ ನಗರ ಚಂಪಾನೇರಿನಲ್ಲಿ ನೆಲೆಗೊಂಡಿದೆ.

ನೀವುಇದನ್ನುಇಷ್ಟಪಡಬಹುದು: ಭಾರತದಲ್ಲಿ ನೀವು ನೋಡಬಹುದಾದ 19 ಪಾರಂಪರಿಕ ತಾಣಗಳು: ವಿಶ್ವ ಪಾರಂಪರಿಕ ದಿನ ವಿಶೇಷ

champaner pavagadh archaeological park

ಈ ಪಾರ್ಕ್, ಪಾರಂಪರಿಕ ಸ್ಮಾರಕಗಳು, ಐತಿಹಾಸಿಕ ಕೋಟೆ, ಪ್ರಾಚೀನ ದೇವಾಲಯಗಳು ಮತ್ತು ಸುಂದರವಾದ ಮೆಟ್ಟಿಲುಗಳು ಹಾಗೂ ಟ್ಯಾಂಕುಗಳಿಗೆ ಪ್ರಸಿದ್ಧಿ ಪಡೆದಿದೆ.

  • ಭೀಮ್ ಬೆಟ್ಕಾ ರಾಕ್ ಶೆಲ್ಟರ್ಸ್, ಮಧ್ಯಪ್ರದೇಶ

ಇದು ಇತಿಹಾಸ ಪೂರ್ವ ಶಿಲಾಯುಗ ಮತ್ತು ಮಧ್ಯಶಿಲಾಯುಗಗಳಿಗೆ ಸೇರಿದ ಪ್ರಾಚೀನ ಪುರಾತತ್ವ ತಾಣವಾಗಿದೆ.

bhimbetka rock shelters Madhya Pradesh

ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿರುವ ಈ ಗುಹೆಯು, ಭಾರತದಲ್ಲಿ ಮಾನವ ಜೀವನದ ಕುರುಹುಗಳನ್ನು ಪ್ರದರ್ಶಿಸುತ್ತದೆ. ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾದ ಈ ಪ್ರದೇಶ, ಏಳು ಬೆಟ್ಟಗಳು ಮತ್ತು ೭೫೦ಕ್ಕೂ ಹೆಚ್ಚು ರಾಕ್ ಶೆಲ್ಟರ್ ಗಳಿವೆ.

  • ಆಗ್ರಾ ಫೋರ್ಟ್, ಉತ್ತರಪ್ರದೇಶ

ಆಗ್ರಾ ಕೋಟೆ, ಸುಂದರವಾದ ಕೆಂಪು ಕಲ್ಲುಗಳ ರಚನೆಯನ್ನು ಹೊಂದಿದೆ. ಆದರೆ ತಾಜ್ ಮಹಲ್ ಉಪಸ್ಥಿತಿಯಿಂದಾಗಿ ಹೆಚ್ಚಾಗಿ ಕಡೆಗಣಿಸಲ್ಪಟ್ಟಿದೆ.

Agra Fort Uttara Pradesh

ಈ ಐತಿಹಾಸಿಕ ಕೋಟೆ ಒಂದು ಕಾಲದಲ್ಲಿ ಮೊಘಲ್ ರಾಜವಂಶದ ಚಕ್ರವರ್ತಿಗಳ ಮುಖ್ಯ ನಿವಾಸವಾಗಿತ್ತು. ಇದು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ೧೯೮೩ರಲ್ಲಿ. ವಾಸ್ತುಶಿಲ್ಪದ ಮತ್ತು ಐತಿಹಾಸಿಕ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ತಾಣವಾಗಿದೆ.

       ಯುನೆಸ್ಕೊ ಪಟ್ಟಿಯಲ್ಲಿರುವುದನ್ನು ಹೊರತುಪಡಿಸಿ ದೇಶದಲ್ಲಿ ಸಾವಿರಾರು ಇಂತಹ ತಾಣಗಳಿವೆ. ಕೆಲವು ಬೆಳಕಿಗೆ ಬಂದಿದ್ದರೂ, ಇನ್ನೂ ಕೆಲವು ನಿಗೂಢವಾಗಿ ಉಳಿದಿವೆ. ಪ್ರಸಿದ್ಧಿಗೆ ಬಂದಿರಲಿ ಅಥವಾ ಎಲೆಮರೆಯ ಕಾಯಿಯಂತೆ ಇರಲಿ, ಇವೆಲ್ಲವೂ ನಮ್ಮ ದೇಶದ ಆಸ್ತಿ. ನಮ್ಮ ಹೆಮ್ಮೆ. ಇವುಗಳನ್ನು ಕಾಪಾಡುವುದು ದೇಶದ ನಾಗರಿಕರಾದ ನಮ್ಮ ಆದ್ಯ ಕರ್ತವ್ಯ.   

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

  

Related Articles

Leave a Reply

Your email address will not be published. Required fields are marked *

Back to top button