ಪ್ರವಾಸಿಗರ ಪ್ರವೇಶಕ್ಕೆ ಮುಕ್ತವೆಂದ ಉತ್ತರಾಖಂಡದ ಸುಂದರ ವ್ಯಾಲಿ ಆಫ್ ಫ್ಲವರ್ಸ್ ಉದ್ಯಾನವನ
ಉತ್ತರಾಖಂಡ ಒಂದು ಸುಂದರ ರಾಜ್ಯ. ವೈವಿಧ್ಯಮಯ ಸುಂದರ ತಾಣಗಳು ಇಲ್ಲಿವೆ. ಉತ್ತರಾಖಂಡ ರಾಜ್ಯವು ತನ್ನಲ್ಲಿ ಕಾಪಿಟ್ಟುಕೊಂಡಿರುವ ಸೊಬಗಿನಲ್ಲಿ ಸುಂದರ ಹೂವಿನ ಕಣಿವೆಗಳು ಕೂಡ ಒಂದು.
ಪ್ರತಿವರ್ಷ ಜೂನ್ 1ರಂದು ಪ್ರವಾಸಿಗರಿಗೆ ತೆರೆಯಲ್ಪಡುವ ಹೂವಿನ ಕಣಿವೆಗಳು ಈ ಬಾರಿ ವೈರಸ್ ಕಾರಣದಿಂದ ಪ್ರವಾಸಿಗರಿಗೆ ಮುಕ್ತವಾಗಿರಲಿಲ್ಲ. ಆದರೆ ಇದೀಗ ವೈರಸ್ ಪ್ರಕರಣ ಸಂಖ್ಯೆ ಇಳಿಕೆಯಾದ ಹಿನ್ನಲೆ ಉತ್ತರಾಖಂಡದ ವ್ಯಾಲಿ ಆಫ್ ಫ್ಲವರ್ಸ್ ಉದ್ಯಾನವನ ಪ್ರವಾಸಿಗರಿಗೆ ಮುಕ್ತವಾಗಿದೆ.
- ನವ್ಯಶ್ರೀ ಶೆಟ್ಟಿ
ಉತ್ತರಾಖಂಡ (uttarakhand) ರಾಜ್ಯದ ಪ್ರಸಿದ್ದ ‘ವ್ಯಾಲಿ ಆಫ್ ಫ್ಲವರ್ಸ್’ ಪ್ರತಿ ವರ್ಷ ಜೂನ್ 1 ರಿಂದ ಪ್ರವಾಸಿಗರ ಪ್ರವೇಶಕ್ಕೆ ಸಜ್ಜಾಗುತ್ತಿತ್ತು. ಆದರೆ ಈ ಬಾರಿ ಉತ್ತರಾಖಂಡ ರಾಜ್ಯದಲ್ಲಿ ಕೂಡ ಕೊರೋನಾ ಕರ್ಫ್ಯೂ ಜಾರಿಯಲ್ಲಿದ್ದ ಹಿನ್ನಲೆಯಲ್ಲಿ ವ್ಯಾಲಿ ಆಫ್ ಫ್ಲವರ್ಸ್ (valley of flowers) ಪ್ರವಾಸಿಗರ ಪ್ರವೇಶಕ್ಕೆ ಕೂಡ ವಿಳಂಬವಾಗಿತ್ತು. ಆದರೆ ಇತ್ತೀಚೆಗೆ ವೈರಸ್ ಪ್ರಕರಣ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದ ಹಿನ್ನಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ ಸಂಬಂಧ ಪಟ್ಟ ಇಲಾಖೆ.
ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ತಾಣ
ವ್ಯಾಲಿ ಆಫ್ ಫ್ಲವರ್ಸ್ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಲ್ಲಿ ಇದು ಕೂಡ ಒಂದು. ಈ ಸುಂದರ ಉದ್ಯಾನವನ ಆಲ್ಪಿಂಗ್ (alping) ಹುಲ್ಲು ಗಾವಲುಗಳು ಜೊತೆಗೆ ವಿವಿಧ ರೀತಿಯ ವೈವಿಧ್ಯಮಯ ಸಸ್ಯ ಸಂಪತ್ತುಗಳನ್ನು ಹೊಂದಿದ್ದು, ಸುಂದರವಾಗಿ ಕಂಗೊಳಿಸುತ್ತಿದೆ ಈ ವ್ಯಾಲಿ ಆಫ್ ಫ್ಲವರ್ಸ್ ಉದ್ಯಾನವನ.
ಈ ಹೂವಿನ ಕಣಿವೆಗೆ ಭೇಟಿ ನೀಡಲು ಸೂಕ್ತವಾದ ಸಮಯ ಜೂನ್ – ಅಕ್ಟೋಬರ್. ಈ ದಿನಗಳಲ್ಲಿ ಮಾತ್ರ ಪ್ರವಾಸಿಗರಿಗೆ ತೆರೆದಿರುತ್ತದೆ ವ್ಯಾಲಿ ಆಫ್ ಫ್ಲವರ್ಸ್. ಬೇರೆಯ ದಿನಗಳಲ್ಲಿ ಈ ಸುಂದರ ಉದ್ಯಾನವನ ಮುಚ್ಚಿರುತ್ತದೆ. ರಸ್ತೆಯ ಸಂಪರ್ಕ ಹೊಂದಿರದ ಈ ಉದ್ಯಾನವನ ಜೋಶಿ ಮಠ ಹತ್ತಿರದ ಗೋವಿಂದಘಾಟ್ ಕಣಿವೆಯಿಂದ 17ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 6,234 ಅಡಿಯಷ್ಟು ಎತ್ತರದಲ್ಲಿದೆ.
ನೀವುಇದನ್ನುಇಷ್ಟಪಡಬಹುದು: ಕರ್ಫ್ಯೂ ಸಡಿಲಗೊಂಡ ಬೆನ್ನಲ್ಲೇ ಹಿಮಾಚಲ ಪ್ರದೇಶಕ್ಕೆ ಹರಿದು ಬಂತು ಜನಸಾಗರ
ಪೂರ್ಣ ಹೂ ಬಿಡುವ ಸಮಯದಲ್ಲಿ ಈ ಉದ್ಯಾನವನ ಪ್ರವಾಸಿಗರಿಗೆ ತೆರೆದುಕೊಳ್ಳಲಿದ್ದು ,ಇನ್ನಷ್ಟು ಸುಂದರವಾಗಿ ಕಂಗೊಳಿಸಲಿದೆ. ಪ್ರವಾಸಿಗರಿಗೆ ಹಗಲಿನಲ್ಲಿ ಮಾತ್ರ ವ್ಯಾಲಿ ಆಫ್ ಫ್ಲವರ್ಸ್ ಉದ್ಯಾನವನ ಪ್ರವೇಶಕ್ಕೆ ಅವಕಾಶ.
ಕೊರೋನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ
ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಿರುವ ಈ ವ್ಯಾಲಿ ಆಫ್ ಫ್ಲವರ್ಸ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಕೊರೋನಾ ನೆಗೆಟಿವ್ ವರದಿಯನ್ನು ಹೊಂದಿರುವ ರಿಪೋರ್ಟ್ ಕಡ್ಡಾಯವಾಗಿದೆ. ಪ್ರವಾಸಿಗರು ಸುಂದರ ಹೂವಿನ ಕಣಿವೆ ಪ್ರವೇಶಿಸುವ 72 ಗಂಟೆಗಳ ಮುನ್ನ ಪರೀಕ್ಷೆ ಮಾಡಿ ನೆಗಟಿವ್ ವರದಿ ಹೊಂದಿರಬೇಕು.
ಉತ್ತರಾಖಂಡ ರಾಜ್ಯ ಹೊರಡಿಸುವ ಕೊರೋನಾ ಮಾರ್ಗಸೂಚಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ನೀವೂ ನೆಗಟಿವ್ ರಿಪೋರ್ಟ್ ಹೊಂದಿದ್ದು, ವ್ಯಾಲಿ ಆಫ್ ಫ್ಲವರ್ಸ್ ಉದ್ಯಾನವನದ ಸುಂದರತೆಯನ್ನು ಕಣ್ತುಂಬಿಕೊಳ್ಳುವ ಆಸೆ ನಿಮ್ಮದಾಗಿದ್ದರೆ ಪ್ರವಾಸಕ್ಕೆ ಸಜ್ಜಾಗಬಹುದು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ