ಆನಂದ್ ಮಹೀಂದ್ರಾ ಮೆಚ್ಚಿದ ಉತ್ತರಾಖಂಡದ ನೈಸರ್ಗಿಕ ಈಜುಕೊಳ
ಆನಂದ್ ಮಹೀಂದ್ರಾ, ದೈತ್ಯ ಮಹೀಂದ್ರಾ ಕಂಪನಿ ಅಧ್ಯಕ್ಷರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರಾ ಅವರು ಹಲವು ಬಾರಿ ತಮ್ಮ ಟ್ವೀಟ್ ಗಳ ಮೂಲಕ ಸುದ್ದಿಯಾಗಿದ್ದರು.
ಇದೀಗ ಆನಂದ್ ಮಹೀಂದ್ರಾ ಅವರು ಉತ್ತರಾಖಂಡದ ನೈಸರ್ಗಿಕ ಈಜುಕೊಳ ಮೆಚ್ಚಿ, ಟ್ವೀಟ್ ಮಾಡಿದ್ದಾರೆ. ತಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಈ ಈಜುಕೊಳ ಕೂಡ ಸೇರಲಿದೆ ಎಂದು ಹೇಳಿ ಮತ್ತೆ ಸುದ್ದಿಯಾಗಿದ್ದಾರೆ.
- ನವ್ಯಶ್ರೀ ಶೆಟ್ಟಿ
ಆನಂದ್ ಮಹೀಂದ್ರಾ ಒಬ್ಬ ಯಶಸ್ವಿ ಉದ್ಯಮಿ. ಜೊತೆಗೆ ತಾನೊಬ್ಬ ಉತ್ತಮ ಸಾಮಾಜಿಕ ದೃಷ್ಟಿಕೋನ ವುಳ್ಳ ವ್ಯಕ್ತಿಯೆಂದು ಹಲವು ಬಾರಿ ತಮ್ಮ ಕಾರ್ಯದ ಮೂಲಕ ನಿರೂಪಿಸಿದ್ದರು. ಇದೀಗ ಆನಂದ್ ಮಹೀಂದ್ರಾ ನಿಸರ್ಗದ ಸಹಜತೆ ಕಾಪಿಟ್ಟು ಕೊಂಡಿರುವ ಜಾಗ ಇಷ್ಟ ಎಂದು ಸಾಬೀತು ಮಾಡಿದ್ದಾರೆ. ಉತ್ತರಾಖಂಡದ ನೈಸರ್ಗಿಕ ಈಜುಕೊಳವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆನಂದ್ ಮಹೀಂದ್ರಾ ಮೆಚ್ಚಿದ ಸುಂದರ ಈಜು ಕೊಳ
ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ನೈಸರ್ಗಿಕ ಈಜು ಕೊಳವೊಂದರ ಫೋಟೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಂದರ ತಾಣದ ನಡುವೆ ಇರುವ ಈ ನೈಸರ್ಗಿಕ ಈಜುಕೊಳಕ್ಕೆ ಮನ ಸೋತಿದ್ದಾರೆ.
ನಾನು ಇಲ್ಲಿಯ ತನಕ ಇಂತಹ ಅದ್ಭುತ ಸ್ಥಳವನ್ನು ನೋಡಿಲ್ಲ. ನನ್ನ ಮುಂದಿನ ಪಯಣದ ಪಟ್ಟಿಯಲ್ಲಿ ಈ ಸ್ಥಳ ಸೇರ್ಪಡೆಯಾಗಲಿದ್ದು, ಈ ಜಾಗಕ್ಕೆ ಭೇಟಿ ನೀಡಿ ಇಲ್ಲಿನ ಈಜು ಕೊಳದಲ್ಲಿ ತಾನು ಕೂಡ ಸ್ವಿಮ್ಮಿಂಗ್ ಅನುಭವ ಪಡೆದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸಹೋಗ್ ಫೌಂಡೇಶನ್ (sahayog foundation) ಅಧ್ಯಕ್ಷ ಹಂಚಿಕೊಂಡಿದ್ದ ಫೋಟೋ
ಸಹೋಗ್ ಫೌಂಡೇಶನ್ ಅಧ್ಯಕ್ಷ ಸಿದ್ದಾರ್ಥ್ ಬಕರಿಯಾ (Siddarth Barkariya) ಅವರು ಉತ್ತರಾಖಂಡ್ ನೈಸರ್ಗಿಕ ಈಜುಕೊಳದ ಚಿತ್ರವನ್ನು ಮೇ 30ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ನೀವುಇದನ್ನುಇಷ್ಟಪಡಬಹುದು: ಪ್ರವಾಸಿಗರ ಪ್ರವೇಶಕ್ಕೆ ಮುಕ್ತವೆಂದ ಉತ್ತರಾಖಂಡದ ಸುಂದರ ವ್ಯಾಲಿ ಆಫ್ ಫ್ಲವರ್ಸ್ ಉದ್ಯಾನವನ
ಈಜುಕೊಳದ ಸುಂದರ ಚಿತ್ರ ಸೆರೆ ಹಿಡಿದ ಧಾಮಿ ನರೇಶ್ (Dhami Naresh) ಹೆಸರು ಉಲ್ಲೇಖಿಸಿದ್ದರು. ಈ ಈಜುಕೊಳಕ್ಕಿಂತ ಸುಂದರ ಈಜು ಕೊಳ ಇನ್ನೊಂದಿಲ್ಲ ಎಂದು ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಆನಂದ್ ಮಹೀಂದ್ರಾ ಫೋಟೋ ಹಂಚಿಕೊಳ್ಳುವುದು ಮಾತ್ರವಲ್ಲದೇ ಸುಂದರ ನೈಸರ್ಗಿಕ ಈಜುಕೊಳದ ವಿಳಾಸವನ್ನು ಸಿದ್ದಾರ್ಥ್ ಅವರ ಬಳಿ ಕೇಳಿ ಟ್ವೀಟ್ ಮಾಡಿದ್ದಾರೆ.
ಉತ್ತರಾಖಂಡದಲ್ಲಿದೆ (uttarkhand) ಈ ಈಜುಕೊಳ.
ತನ್ನ ಪ್ರಕೃತಿ ಸೌಂದರ್ಯ ಹಾಗೂ ಅದರ ನಡುವಿನ ಈಜು ಕೊಳದಿಂದ ಆನಂದ್ ಮಹೀಂದ್ರಾ ಅವರನ್ನು ಆಶ್ಚರ್ಯ ಚಕತರನ್ನಾಗಿ ಮಾಡಿರುವ ಈ ಈಜುಕೊಳ ಇರುವುದು ಭಾರತ ಮತ್ತು ನೇಪಾಳ (nepal) ಗಡಿ ಸಮೀಪದ ಸ್ಥಳದಲ್ಲಿ. ಉತ್ತರಾಖಂಡ್ ರಾಜ್ಯದ ದಾರ್ಚುಲ್ (darchula)ಪಟ್ಟಣದ ಖೆಲಾ (khela) ಎನ್ನುವ ಊರಿನಲ್ಲಿ.
ಪಿಥೋರಾಗ್ರಹ (pithoragrah) ಜಿಲ್ಲೆಯಲ್ಲಿರುವ ಈ ಈಜುಕೊಳ ಸಮುದ್ರಮಟ್ಟದಿಂದ 940 ಮೀಟರ್ ಎತ್ತರದಲ್ಲಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನೀವೂ ಕೂಡ ಉತ್ತರಾಖಂಡದ ಕಡೆ ಪ್ರವಾಸ ಹೋದಾಗ , ಈ ಸುಂದರ ತಾಣಕ್ಕೆ ಭೇಟಿ ನೀಡಿ ಅಲ್ಲಿನ ಸೌಂದರ್ಯ ಆಸ್ವಾದಿಸಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.