ದೂರ ತೀರ ಯಾನವಿಂಗಡಿಸದ

ಈ ಯುರೋಪಿಯನ್ ದೇಶಗಳು ಕೋವಿಶೀಲ್ಡ್ ವ್ಯಾಕ್ಸಿನ್ ಒಪ್ಪಿಕೊಂಡಿದೆ. ಆದರೆ ನೀವು ಪ್ರಯಾಣಿಸಬಹುದೇ?

ಜುಲೈ 1ರ ನಂತರ  ವಿವಿಧ ದೇಶಗಳಿಗೆ ಪ್ರವೇಶಿಸುವ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗುತ್ತಿದೆ. ಹಾಗೆ ನಿಯಮಗಳನ್ನು ಪದೇ  ಪದೇ  ಪರಿಶೀಲಿಸಲಾಗುತ್ತಿದೆ ಮತ್ತು ಪರಿಷ್ಕರಿಸಲಾಗುತ್ತಿದೆ. ಆದ್ದರಿಂದ ನಿಮ್ಮ ರಜೆ ಅರ್ಜಿಯನ್ನು ಕಳುಹಿಸುವ ಮೊದಲು ಅಧಿಕೃತ ವೆಬ್‌ಸೈಟ್‌ಗಳನ್ನು ಪರಿಶೀಲಿಸುತ್ತಿರಿ.

  • ಮಧುರಾ ಎಲ್ ಭಟ್

ಕೋವಿಶೀಲ್ಡ್ ಅನ್ನು ಪಡೆಯುವುದರಿಂದ ನಮಗೆ  ಕನಿಷ್ಠ ಎಂಟು ಯುರೋಪಿಯನ್ ದೇಶಗಳು  ಸುಲಭವಾಗಿ ಪ್ರವೇಶವನ್ನು ನೀಡುತ್ತದೆ ಎಂಬುದು ನಿಜ. ಆದರೆ ಅದಕ್ಕೆ ಕೆಲವು ಅಡಚಣೆಗಳು ಉಂಟಾಗಿದೆ. ಏಕೆಂದರೆ  ಕೆಲವು ದೇಶಗಳು ಈ ಸಮಯದಲ್ಲಿ ಭಾರತೀಯರಿಗೆ ಪ್ರವಾಸಿ ವೀಸಾಗಳನ್ನು ನೀಡುತ್ತಿಲ್ಲ.

ಕೆಲವರಿಗೆ  ನೇರ ವಿಮಾನ ವ್ಯವಸ್ಥೆಯು ಇಲ್ಲದ ಕಾರಣ ಅವರೂ ಬೇರೆ ದೇಶದ ಮೂಲಕ ಪ್ರಯಾಣವನ್ನು ಬೆಳೆಸಬೇಕಾಗುತ್ತದೆ. ಆ ದೇಶಗಳಲ್ಲಿ ಪ್ರಯಾಣಕ್ಕೆ  ವಿಭಿನ್ನ ನಿಯಮಗಳನ್ನು ರೂಪಿಸಲಾಗಿದೆ.  

ಜರ್ಮನಿ

ಜರ್ಮನಿಯಲ್ಲಿ ಲಸಿಕೆಗೆ ಮಾನ್ಯತೆಯನ್ನು ನೀಡಿದ್ದರು ಪ್ರಯಾಣದ ನಿರ್ಬಂಧಗಳು ಹಾಗೆ ಉಳಿದಿವೆ. ಬುಧವಾರದಂದು ಭಾರತದ ಜರ್ಮನ್ ರಾಯಭಾರಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸನ್ನು ಜರ್ಮನಿ ಸಂಪೂರ್ಣವಾಗಿ ಕೋವಿಡ್ ವಿರೋಧಿ ಲಸಿಕೆಯಾಗಿ ಗುರುತಿಸಿದೆ ಎಂದು ದೃಢಪಡಿಸಿದ್ದಾರೆ. ಆದರೆ ವೈರಸ್ ರೂಪಾಂತರಗೊಂಡಿರುವ ಪ್ರದೇಶದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ  ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಯಾಣ ಅಥವಾ ವೀಸಾ ನಿರ್ಬಂಧಗಳನ್ನು ಮಾರ್ಪಡಿಸುವುದಿಲ್ಲ ಎಂದು ಅವರೂ ಹೇಳಿದ್ದಾರೆ.

ಭಾರತವನ್ನು  ಸೂಕ್ಷ್ಮ ಪ್ರದೇಶವಾಗಿ ಗುರುತಿಸಿರುವುದರಿಂದ ಕೋವಿಡ್ ಶೀಲ್ಡ್ 2 ಡೋಸ್  ಗಳನ್ನು ತೆಗೆದುಕೊಂಡರೂ ಸಹ, ಜರ್ಮನಿಯನ್ನು ಪ್ರವೇಶಿಸಲು ನಿಮಗೆ ಉಚಿತ ಪಾಸ್ ಸಿಗುವುದಿಲ್ಲ. 

ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಗೆ  ಒಳಪಡಬೇಕಾಗುತ್ತದೆ .ಇದನ್ನು ಪರೀಕ್ಷಾ ಫಲಿತಾಂಶ ಅಥವಾ ವ್ಯಾಕ್ಸಿನೇಷನ್ ಅಥವಾ ಚೇತರಿಕೆಯ ಪುರಾವೆಗಳನ್ನು ಪ್ರಸ್ತುತಪಡಿಸುವ ಮೂಲಕ ಅಕಾಲಿಕವಾಗಿ ಕೊನೆಗೊಳಿಸಲಾಗುವುದಿಲ್ಲ ಎಂದು ದೇಶ ಹೇಳುತ್ತದೆ.

ಸ್ಪೇನ್

ಗ್ರೀನ್ ಪಾಸ್ (ಇಯು ಡಿಜಿಟಲ್ ಕೋವಿಡ್ ಸರ್ಟಿಫಿಕೇಟ್) ಪಡೆಯುವುದಕ್ಕಾಗಿ  ಎಲ್ಲಾ ಡಬ್ಲ್ಯುಎಚ್‌ಒ-ಅನುಮೋದಿತ ಲಸಿಕೆಗಳು ಮಾನ್ಯವಾಗಿವೆ ಎಂದು ದೇಶದ ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಹೇಳುತ್ತದೆ. ಮತ್ತು ಹೆಚ್ಚಿನ ಕೋವಿಡ್ ಕೇಸ್ ಇರುವ ದೇಶಗಳಿಂದ ಪ್ರಯಾಣಿಸುವವರು, ಲಸಿಕೆ ಪ್ರಮಾಣಪತ್ರ ಅಥವಾ ನೆಗೆಟಿವ್ ಆರ್.ಟಿ.ಪಿ.ಸಿ.ಆರ್ ಪ್ರಮಾಣಪತ್ರವನ್ನು ತೋರಿಸಿ ಪ್ರವೇಶಿಸಬಹುದು.

ರೋಗನಿರ್ಣಯ ಪರೀಕ್ಷೆ (ಪಿಸಿಆರ್ ನಂತಹ) ಅಥವಾ ಕೋವಿಡ್ ನಂತರ ಚೇತರಿಕೆಯ ಪ್ರಮಾಣಪತ್ರವೂ ಇದಕ್ಕೆ ಅಗತ್ಯವಾಗಿದೆ.  ಆದರೆ ಸ್ಪೇನ್‌ನ ಅಧಿಕೃತ ಪ್ರವಾಸೋದ್ಯಮ ವೆಬ್‌ಸೈಟ್, ಟ್ರಾವೆಲ್ ಸೇಫ್, ಭಾರತದಿಂದ ಬರುವವರು ಪ್ರವಾಸೋದ್ಯಮವನ್ನು ಒಳಗೊಂಡಿರದ ನಿರ್ದಿಷ್ಟ ಕಾರಣಗಳಿಗಾಗಿ ಮಾತ್ರ ಸ್ಪೇನ್‌ಗೆ ಪ್ರಯಾಣಿಸಬಹುದು ಎಂದು ಹೇಳುತ್ತದೆ.

ಐರ್ಲೆಂಡ್

ಭಾರತದಂತಹ ಗೊತ್ತುಪಡಿಸಿದ ದೇಶಗಳಿಂದ  ಪ್ರಯಾಣಿಸುವವರು ತಮ್ಮದೇ ಖರ್ಚಿನಲ್ಲಿ 14 ದಿನಗಳವರೆಗೆ ಹೋಟೆಲ್‌ನಲ್ಲಿ ಕ್ಯಾರೆಂಟೈನ್ ಮಾಡಬೇಕಾಗುತ್ತದೆ. ಈ  ಪ್ಯಾಕೇಜ್ 1875 ಯುರೊಗಳನ್ನೂ ಒಳಗೊಂಡಿರುತ್ತದೆ (ಒಬ್ಬರಿಗೆ  ರೂ .1.6 ಲಕ್ಷ). ಸಂಪೂರ್ಣವಾಗಿ ಲಸಿಕೆ ಪಡೆದವರು ಮನೆಯಲ್ಲಿಯೇ  ಕನಿಷ್ಠ ಐದು ದಿನಗಳ ಕ್ವಾರಂಟೈನ್ ಗೆ  ಒಳಪಡಬೇಕು. (ನಿಮ್ಮ ಎರಡನೇ ಡೋಸ್ ಕೋವಿಶೀಲ್ಡ್ ಪೂರ್ಣ ವ್ಯಾಕ್ಸಿನೇಷನ್ ಎಂದು ಪರಿಗಣಿಸಿ 15 ದಿನಗಳು).

ನೀವು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದರು ಸಹ, ನೀವು ಐರ್ಲೆಂಡ್‌ಗೆ ಆಗಮಿಸುವ 72 ಗಂಟೆಗಳ ಮೊದಲು ತೆಗೆದುಕೊಂಡ ಕೋವಿಡ್ -19 ನೆಗೆಟಿವ್ ಆರ್.ಟಿ.ಪಿ.ಸಿ.ಆರ್  ವರದಿಯನ್ನು  ಹೊಂದಿರಬೇಕು. ನೀವು ಮನೆಯಲ್ಲಿ ಅಥವಾ ನಿಮ್ಮ ಪ್ರಯಾಣಿಕರ ಲೊಕೇಟರ್ ಫಾರ್ಮ್ ನಲ್ಲಿ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಕ್ವಾರಂಟೈನ್  ಪೂರ್ಣಗೊಳಿಸಬೇಕು ಎಂದು ಪ್ರವಾಸೋದ್ಯಮ ಮಂಡಳಿಯ ವೆಬ್‌ಸೈಟ್ ಹೇಳುತ್ತದೆ.

ನೀವುಇದನ್ನುಇಷ್ಟಪಡಬಹುದು: ನೀವು ವಿದೇಶಕ್ಕೆ ಹೋಗುವವರಾದರೆ, ಪಾಸ್ ಪೋರ್ಟಿಗೆ ಲಸಿಕೆ ಪ್ರಮಾಣ ಪತ್ರವನ್ನು ನೀವೇ ಲಿಂಕ್ ಮಾಡಿ.

ಐಸ್ಲ್ಯಾಂಡ್

ಕೇವಲ 4 ಲಕ್ಷ ಜನಸಂಖ್ಯೆ ಹೊಂದಿರುವ ಈ ದೇಶವು ಎಲ್ಲಾ ಕೋವಿಡ್  ನಿರ್ಬಂಧಗಳನ್ನು ತೆಗೆದುಹಾಕಿದೆ. ಕಡ್ಡಾಯವಾಗಿ  ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸಾಮಾಜಿಕ ಸಭೆ ಸೇರದಿರುವುದು ಈ ಎಲ್ಲಾ ನಿಯಮಗಳನ್ನು ತೆಗೆದುಹಾಕಿದೆ.

ಜುಲೈ 1 ರಿಂದ ಐಸ್ಲ್ಯಾಂಡ್ ಸಂಪೂರ್ಣ ವ್ಯಾಕ್ಸಿನ್ ತೆಗೆದುಕೊಂಡವರನ್ನು ಹೆಚ್ಚಿನ ದೇಶಗಳಿಂದ ಸ್ವಾಗತಿಸುತ್ತದೆ. ಕೋವಿಶೀಲ್ಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರವು ಮಾನ್ಯವಾಗಿದೆ.

ಸ್ವಿಟ್ಜರ್ಲೆಂಡ್

ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿರುವ  ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಧಿಕೃತವಾದ  ಲಸಿಕೆಯನ್ನು ಪಡೆದುಕೊಂಡಿರಬೇಕು.  ಕೋವಿಶೀಲ್ಡ್ ಡಬ್ಲ್ಯೂಎಚ್ ಒ  ಪಟ್ಟಿಯಲ್ಲಿದೆ ಮತ್ತು ಎರಡೂ ಡೋಸ್ ಗಳನ್ನೂ ಹೊಂದಿರುವವರು ಈಗ ಆರ್ ಟಿ -ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳದೆ ಸ್ವಿಟ್ಜರ್ಲೆಂಡ್‌ಗೆ ಪ್ರವೇಶಿಸಬಹುದು.

10 ದಿನಗಳ ಕ್ವಾರಂಟೈನ್ ಕೂಡಾ ಅಗತ್ಯವಿರುವುದಿಲ್ಲ. ಆದರೂ ಬೋರ್ಡಿಂಗ್ ಮಾಡುವ ಮೊದಲು ನಿಮ್ಮ ವಿಮಾನಯಾನ ಸಂಸ್ಥೆಯು ಆರ್ ಟಿ ಪಿ ಸಿ ಆರ್ ಪರೀಕ್ಷೆಯ ವರದಿಯನ್ನು ಕೇಳಬಹುದು. ಹಾಗಾಗಿ  ಪ್ರಯಾಣಿಸುವ ಮೊದಲು ಪರಿಶೀಲಿಸಿ.

ಗ್ರೀಸ್

ಯುಎಸ್, ಯುಕೆ, ಚೀನಾ, ರಷ್ಯಾ ಮತ್ತು ಯುಎಇ ಸೇರಿದಂತೆ ಯುರೋಪಿನ ಪ್ರವಾಸಿಗರಿಗೆ ಮತ್ತು ವಿಶ್ವದಾದ್ಯಂತದ ದೇಶಗಳಿಗೆ ಗ್ರೀಸ್ ತೆರೆಯುತ್ತಿದೆ.  ಭಾರತ ಇನ್ನೂ ಈ ಪಟ್ಟಿಯಲ್ಲಿಲ್ಲ.

ಜುಲೈ 3 ರೊಳಗೆ ಪಟ್ಟಿಯನ್ನು ಪರಿಷ್ಕರಿಸುವ ಸಾಧ್ಯತೆಯಿದೆ. ನಿಮ್ಮ ತಾಯ್ನಾಡಿನಲ್ಲಿ ಪ್ರಮಾಣೀಕರಿಸಿದ ಯಾವುದೇ ಲಸಿಕೆ ಪ್ರವೇಶಕ್ಕೆ ಮಾನ್ಯವಾಗಿರುತ್ತದೆ.

ಆಸ್ಟ್ರಿಯಾ

ಆಸ್ಟ್ರಿಯಾ ತನ್ನ  ದೇಶದೊಳಗೆ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ಈಗ ಮುಕ್ತವಾಗಿವೆ. ಭಾರತ, ಯುಕೆ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಬೋಟ್ಸ್ವಾನ ದಂತಹ ವೈರಸ್ ರೂಪಾಂತರ ದೇಶಗಳಿಂದ ಪ್ರವೇಶ ನಿರ್ಬಂಧಿತವಾಗಿದೆ. 

ಪ್ರವೇಶವು ಆಸ್ಟ್ರಿಯನ್ ನಾಗರಿಕರು ಮತ್ತು ವಾಸಸ್ಥಳ ಹೊಂದಿರುವ ಅಥವಾ ಸಾಮಾನ್ಯವಾಗಿ ಆಸ್ಟ್ರಿಯಾದಲ್ಲಿ ವಾಸಿಸುವ ವ್ಯಕ್ತಿಗಳಿಗೆ ಮಾತ್ರ. ಅಥವಾ ಮಾನವೀಯ ಕಾರಣಗಳಿಗಾಗಿ ಅಥವಾ ಗಣರಾಜ್ಯದ ಹಿತಾಸಕ್ತಿಗಳಲ್ಲಿ ಬಲವಾದ ಕಾರಣಗಳಿಗಾಗಿ ಭೇಟಿ ನೀಡುವವರಿಗೆ ಮಾತ್ರವಾಗಿರುತ್ತದೆ.

ಸ್ಲೊವೇನಿಯಾ

ಜೂನ್ 15 ರಂದು ಸ್ಲೊವೇನಿಯಾ  ಔಪಚಾರಿಕವಾಗಿ “ಸಾಂಕ್ರಾಮಿಕ ರೋಗದ ಅಂತ್ಯ” ಎಂದು ಘೋಷಿಸಿದೆ. ಅದನ್ನು ಹಾಗೆಯೇ ಉಳಿಸಿಕೊಳ್ಳಲು, ಇಂದು  ವಿಶ್ವದ ಕೆಲವು ಭಾಗಗಳಿಂದ ಪ್ರಯಾಣಕ್ಕೆ ನಿರ್ಬಂಧಗಳನ್ನು ಹೊಂದಿದೆ. ಸ್ಲೊವೇನಿಯಾದ ಕೆಂಪು ಪಟ್ಟಿಯಲ್ಲಿ 41 ದೇಶಗಳಲ್ಲಿ ಭಾರತವೂ ಒಂದು ಹಾಗೂ ಭಾರತದಿಂದ ಪ್ರವೇಶಿಸಲು  ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದೆ.

ನೀವು ವ್ಯಾಕ್ಸಿನೇಷನ್ ಪ್ರಮಾಣಪತ್ರ ಅಥವಾ ಕೋವಿಡ್ -19  ಚೇತರಿಕೆಯ ಪ್ರಮಾಣಪತ್ರವನ್ನು ಹೊಂದಿದ್ದರೆ  ನೀವು 10 ದಿನಗಳ ಕ್ವಾರಂಟೈನ್ ಬಿಡಬಹುದು. ನೀವು ಕೋವಿಶೀಲ್ಡ್ ತೆಗೆದುಕೊಂಡಿದ್ದರೆ, ಪ್ರವೇಶಕ್ಕೆ ಅರ್ಹತೆ ಪಡೆಯಲು ಕೊನೆಯ ಡೋಸ್ ನಂತರ ಕನಿಷ್ಠ 21 ದಿನಗಳ ಅಂತರದ ಅಗತ್ಯವಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button