ಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಕಲಬುರಗಿಯ ಕೋಟೆಗಳ ಕತೆ ಕೇಳಿದಿರಾ: ರಾಷ್ಟ್ರಕೂಟರ ಊರಿನ ಚರಿತ್ರೆ

ಕಲಬುರಗಿ ಒಂದು ಕಾಲದಲ್ಲಿ ರಾಷ್ಟ್ರಕೂಟರು ಆಳಿದ ನಾಡು. ಆಮೇಲೆ ಬಹಮನಿ ಸುಲ್ತಾನರು ಬಂದರು. ಸಾವಿರಾರು ವರ್ಷ ರಾಜರುಗಳಿಂದ ಆಳಿಸಿಕೊಂಡ ಈ ಊರಲ್ಲಿ ಹತ್ತಾರು ಕೋಟೆಗಳಿವೆ. ನೀವು ಇತಿಹಾಸ ಪ್ರಿಯರಾದರೆ ಈ ಕೋಟೆಗಳ ಕತೆ ತಿಳಿದುಕೊಳ್ಳಿ.

  1. ಬಹುಮನಿ ಕೋಟೆ
vijaybhaskarreddymunnur

ಕಲಬುರಗಿ ನಗರದ ಬಹಮನಿ ಕೋಟೆಯು ಕರ್ನಾಟಕ ಪ್ರಾಚೀನ ಇಸ್ಲಾಮಿಕ್ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆ. ಈ ಕೋಟೆಯನ್ನು ರಾಜಾ ಗುಲ್ಚಂದ್ ಕಟ್ಟಿಸಿದ್ದಾನೆ. ಶುತ್ರುಗಳು ಸುಲಭವಾಗಿ ಆಕ್ರಮಣ ಮಾಡಬಾರದೆಂದು ಕೋಟೆಯ ಸುತ್ತಲೂ ಆಳವಾದ ಕಂದಕ ಹಾಗೂ ಕಾಲವೆ ತಯಾರಿಸಲಾಗಿದೆ. ಈ ಕೋಟೆಯು 38000 ಚದರ ಅಡಿ ಪ್ರದೇಶದಲ್ಲಿದೆ. ಕಲಬುರಗಿ ಕೋಟೆ ಭಾರತೀಯ ಪುರಾತತ್ವ ಇಲಾಖೆ ರಾಷ್ಟ್ರೀಯ ಸ್ಮಾರಕ ಎಂದು ಗುರುತಿಸಲಾಗಿದೆ

  1. ಜಾಮಾ ಮಸೀದಿ (ಕಲಬುರಗಿ ಕೋಟೆ)
vijaybhaskarreddymunnur

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

ಕಲಬುರಗಿ ನಗರದ ಬಹಮನಿ ಕೋಟೆಯಲ್ಲಿರುವ ಜಾಮಾ ಮಸೀದಿ ತನ್ನ ಮುಸ್ಲಿಂ ವಾಸ್ತು ಶಿಲ್ಪದಿಂದಾಗಿ ಹೆಸರುವಾಸಿ. ಸ್ಪೇನ್ ದೇಶದ ಕಾರ್ಡೋವಾ ಎಂಬಲ್ಲಿರುವ ಜಾಮಾ ಮಸೀದಿ ನಂತರ ಜಗತ್ತಿನಲ್ಲೇ ಇರುವಂತಹ ಸುಂದರ ಕಮಾನುಗಳಿರುವ, ಅದ್ಭುತ ನೆರಳು- ಬೆಳಕಿನ ನೋಟಗಳಿಂದಾಗಿ ಆಕರ್ಷಕವಾಗಿರುವ ಮಸೀದಿ ಇದು.

3.ಚೋರ್ ಗುಂಬಜ್

vijaybhaskarreddymunnur

ಇದನ್ನು ಕಲಬುರಗಿ ಗೋಲಗುಂಬಜ್ ಎಂದೇ ಹೇಳುತ್ತಾರೆ. ಬಹಮನಿ ಅರಸರ ಕಾಲದಲ್ಲಿ ಕಟ್ಟಲಾಗಿದೆ. ಎತ್ತರದಲ್ಲಿರುವ ಈ ಗುಂಬಜ್ ಹಿಂದೆ ಬಹಮನಿ ಸೈನಿಕರು ಕಾವಲು ಗೋಪುರವನ್ನಾಗಿ ಉಪಯೋಗಿಸುತ್ತಿದ್ದರು. ಇದು ಬಾರಿ ಗಾತ್ರದ ಗುಮ್ಮಟ ಹೊಂದಿದ್ದು ನೋಡಲು ಆಕರ್ಷಕವಾಗಿದೆ.

4. ಜೋಡ್ ಕಮಾನ್

vijaybhaskarreddymunnur

ಕಲಬುರಗಿಯ ಷಹಾಬಜಾರ್‌ನಲ್ಲಿರುವ ಜೋಡಿ ಗುಮ್ಮಟಗಳಿರುವ ತಾಣ. ಬಹಮನಿ ಅರಸರ ಕಾಲದ ಅದ್ಭುತ ರಚನೆ, ನೋಡಲು ಥೇಟ್ ದೆಹಲಿ ಕುತುಬ್ ಮಿನಾರ್ ಹೋಲುವ ಈ ರಚನೆಗಳು ಬಲು ಎತ್ತರ ಹಾಗೂ ಕುಸುರಿ ಕೆತ್ತನೆ ಹೊಂದಿವೆ.

5. ಕಲಬುರಗಿ ತೋಪು (ವಿಶ್ವದಲ್ಲೇ ಅತ್ಯಂತ ಉದ್ದದ ತೋಪು) 

ಕಲಬುರಗಿ ಬಹುಮನಿ ಕೋಟೆಯ ರಣ ಮಂಡಲ ಮೇಲಿರುವ ದೈತ್ಯಗಾತ್ರದ ತೋಪು ಇದು. ಪಂಚ ಲೋಹದ ಈ ತೋಪು ವಿಶ್ವದಲ್ಲೇ ಅತ್ಯಂತ ಉದ್ದನೇಯ ತೋಪು ಎಂದು ಹವ್ಯಾಸಿ ಇತಿಹಾಸಕಾರರು ಹೇಳುತ್ತಿದ್ದಾರೆ. ಈಚೆಗಷ್ಟೇ ಈ ತೋಪಿನ ಉದ್ದಳತೆ ಕರಾರುವಾಕ್ಕಾಗಿ ಅಳೆದು ದಾಖಲೆ ಮಾಡಲಾಗಿದ್ದು, ಇದಕ್ಕಿನ್ನೂ ವಿಶ್ವದ ಉದ್ದನೇಯ ತೊಪು ಎಂಬ ಪಟ್ಟ ಅಧಿಕೃತವಾಗಿ ಘೋಷಣೆಯಾಗಿಲ್ಲ. ಇದೇ ಕೋಟೆಯಲ್ಲಿ ವಿವಿಧ ಆಕಾರದ 25ಕ್ಕೂ ಹೆಚ್ಚು ತೋಪುಗಳಿವೆ.

6. ಸಾತ್ ಗುಂಬಜ್

ಕಲಬುರಗಿ ಮಹಾನಗರದಲ್ಲಿರುವ ೭ ಗುಮ್ಮಟಗಳ ಪ್ರದೇಶ. ಸಾತ್ ಗುಂಬಜ್ ಎಂದೇ ಹೆಸರುವಾಸಿ. ಇಲ್ಲಿ ಬಹಮನಿ ಅರಸರು, ಅವರ ಕುಟುಂಬದವರ ಸಮಾಧಿಗಳಿವೆ. ಈ ರಚನೆಗಳು ನೋಡಲು ಬಲು ಸುಂದರ ಹಾಗೂ ಅದ್ಭುತವಾಗಿದೆ.

7. ಮಳಖೇಡ ಕೋಟೆ 

ರಾಷ್ಟ್ರಕೂಟರ ಕಾಲದಲ್ಲಿ ಮಾನ್ಯಖೇಟವೆಂದೇ ಹೆಸರಾಗಿದ್ದ ಮಳಖೇಡದಲ್ಲಿದೆ ಪಾಳುಬಿದ್ದ ಕೋಟೆ. ಇಲ್ಲಿರುವ ಎತ್ತರದ ಗೋಪುರ ಇಂದಿಗೂ ಪ್ರಮುಖ ಆಕರ್ಷಣೆ. ಅದನ್ನು ಹತ್ತಿ ನೋಡಿದರೆ ಸುತ್ತಲಿನ ಕಾಗಿಣಾ ನದಿತೀರದ ಸುಂದರ ನೋಟ ಕಾಣುತ್ತದೆ. ಕಲಬುರಗಿ- ಸೇಡಂ ಮಧ್ಯೆ 40 ಕಿ.ಮೀ. ದೂರದಲ್ಲಿರುವ ಕೋಟೆಗೆ ಹೋಗಿ ಬರಲು ವಾಹನ ಸೌಕರ್ಯವಿದೆ.

8. ಫಿರೋಜಾಬಾದ್ ಕೋಟೆ 

ಕಲಬುರಗಿ ತಾಲೂಕಿನ ಭೀಮಾ ತೀರದಲ್ಲಿರುವ ಸುಂದರ ಕೋಟೆ ಪ್ರದೇಶ. ಹಿಂದೆ ಬಹಮನಿ ಅರಸ ಫಿರೋಜ್ ಶಹಾ ತನ್ನ ರಾಜಧಾನಿಯನ್ನಾಗಿ ಇದನ್ನೇ ಆಯ್ಕೆಮಾಡಿದ್ದ. ಅದಕ್ಕೇ ಫಿರೋಜಾಬಾದ್ ಎಂದೇ ಹೆಸರಿಟ್ಟು ಅಕ್ಬರ್ ರಾಜನ ರಾಜಧಾನಿ ತೇಪುರ ಸಿಕ್ರಿ ಮಾದರಿಯಲ್ಲಿಯೇ ಇಲ್ಲಿ ವಾಸ್ತುಶಿಲ್ಪ ನಿರ್ಮಿಸಿದ್ದ. ಇಂದಿಗೂ ಅಳಿದುಳಿದ ಕೋಟೆ ಪ್ರದೇಶ ಇಲ್ಲಿ ಕಾಣಬಹುದಾಗಿದೆ. ಕಲಬುರಗಿಯಿಂದ 25 ಕಿ.ಮೀ. ಅಂತರದಲ್ಲಿರುವ ಈ ಸ್ಥಳಕ್ಕೆ ಹೋಗಿ ಬರಲು ಬಸ್ ಸವಲತ್ತಿದೆ.

9. ಶಹಾಬಾದ ಕೋಟೆ

ಕಲಬುರಗಿ ಜಿಲ್ಲೆಯ ಶಹಾಬಾದ ನಗರದ ಹಳೆ ಶಹಾಬಾದ ಭಾಗದಲ್ಲಿರುವ ಪ್ರಾಚೀನ ಕೋಟೆ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಬಹುಮನಿ ಅರಸರು, ಹೈದ್ರಾಬಾದ್ ನಿಜಾಮರ ಸೇರಿದಂತೆ ಕಾಲಕಾಲಕ್ಕೆ ಆಡಳಿತ ನಡೆಸಿದ ರಾಜರ ಅಧೀನಕ್ಕೆ ಒಳಪಟ್ಟಿದ್ದು, ಸಣ್ಣಯ ಸೇನಾ ತುಕುಡಿ ಇಲ್ಲಿ ಇಡಲಾಗುತ್ತಿತ್ತೆಂದು ಹೇಳಲಾಗುತ್ತದೆ. ಕೋಟೆ ಒಳಭಾಗದ ಮಧ್ಯದಲ್ಲಿ ಒಂದು ಗೋಡೆಯಿದ್ದು, ಕೆಲ ವರ್ಷಗಳಿಂದ ಈ ಕೋಟೆ ಎರಡು ಸಮುದಾಯಗಳ ನಡುವೆ ಹಕ್ಕಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಕೋಟೆ ಬಾಗಿಲು ಮುಚ್ಚಲಾಗಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

2 Comments

  1. ಸೂಪರ್ ವಿಜಿ ಸದಾ ಹೀಗೆ ಬರೀತಾರು ನಾವು ನೋಡಿ ನಮ್ಮ ಊರು ನಮ್ಮಜಿಲ್ಲೇ ಅನ್ನೋ ಹೆಮ್ಮೆ ನಮಗೂ ಬರ್ತಾಇದೇ
    *ಹೆಮ್ಮೆಯ ಮಾತೆಂನೆಂದರೆ ನಾನು ನೀನು ಗೆಳೆಯರು*

Leave a Reply

Your email address will not be published. Required fields are marked *

Back to top button