Moreಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸ್ಮರಣೀಯ ಜಾಗ

ಎವರೆಸ್ಟ್‌ ಆರೋಹಿಗಳ ಸುರಕ್ಷತಾ ದೃಷ್ಟಿಯಿಂದ ಇ-ಚಿಪ್ ಇನ್ನು ಮುಂದೆ ಕಡ್ಡಾಯ:

ನೇಪಾಳವು (Nepal) ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ನ (Mount Everest) ಏರಲು ಬರುವ ಆರೋಹಿಗಳಿಗೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ.

8,849 ಮೀಟರ್ (29,032 ಅಡಿ) ಎತ್ತರವಿರುವ ಈ ಪರ್ವತವನ್ನು ಆರೋಹಣ ಅಥವಾ ಅವರೋಹಣದ ತುರ್ತು ಸಂದರ್ಭದಲ್ಲಿ ಸುರಕ್ಷತಾ ದೃಷ್ಟಿಯಿಂದವಸಂತ ಕಾಲದ ಆರಂಭದಲ್ಲಿ, ಎಲ್ಲಾ ಆರೋಹಿಗಳು (climbers) ಎಲೆಕ್ಟ್ರಾನಿಕ್ ಚಿಪ್ ಗಳನ್ನು (Electronic Chip) ಕೊಂಡೊಯ್ಯುವುದು ಕಡ್ಡಾಯವಾಗಿದೆ.

ಭಾರತ (India) ಮತ್ತು ನೇಪಾಳ (Nepal) ಸೇರಿದಂತೆ ವಿಶ್ವದಾದ್ಯಂತ ಸಾವಿರಾರು ಮಂದಿ ನೇಪಾಳದ ಸ್ಥಳೀಯವಾಗಿ ಸಾಗರ್ಮಾತಾ (Sagarmatha) ಎಂದು ಕರೆಯಲ್ಪಡುವ ಮೌಂಟ್ ಎವರೆಸ್ಟ್‌ ಅನ್ನು ಏರಲು ಬರುತ್ತಾರೆ.

ಈ ಸಂದರ್ಭದಲ್ಲಿ, ಅನೇಕರು ಯಶಸ್ವಿಯಾಗಿ ಪರ್ವತಾರೋಹಣವನ್ನು ಮಾಡಿದರೂ, ದುರದೃಷ್ಟವಶಾತ್ ಸಾವುಗಳು ಮತ್ತು ಗಂಭೀರ ಗಾಯಗಳ ವರದಿಗಳು ಸಾಕಷ್ಟಿವೆ.

1953 ರಿಂದ, ನೇಪಾಳ ಸರ್ಕಾರದ ಅಂಕಿಅಂಶಗಳ ಪ್ರಕಾರ, ಮೌಂಟ್ ಎವರೆಸ್ಟ್ನಲ್ಲಿ ಸುಮಾರು 300 ಮಂದಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ.

2023 ರ ವಸಂತ ಕಾಲದಲ್ಲಿಯೂ ಸಹ, ಮೇ 22 ರವರೆಗೆ, ನಾಲ್ಕು ನೇಪಾಳಿಗಳು, ಒಬ್ಬ ಭಾರತೀಯ ಮತ್ತು ಒಬ್ಬ ಚೈನೀಸ್ ಸೇರಿದಂತೆ 12 ಪರ್ವತಾರೋಹಿಗಳು ಮೌಂಟ್ ಎವರೆಸ್ಟ್‌ಗೆ (Mt. Everest) ಏರುವ ಸಮಯದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸುತ್ತದೆ.

ಹಿಮ ಬಿರುಗಾಳಿ ಮತ್ತು ಹಿಮಪಾತ ಸೇರಿದಂತೆ ವಿಪರೀತ ಹವಮಾನ ವೈಪರೀತ್ಯಗಳಿಂದಾಗಿ ಇಂತಹ ಸಾವು ನೋವುಗಳು ಸಂಭವಿಸುತ್ತಿವೆ.

ಈ ಸಾವು ನೋವುಗಳನ್ನು ಕಡಿಮೆ ಮಾಡುವ ನಿಟ್ಟಿನಿಂದ ನೇಪಾಳ ಸರ್ಕಾರವು ಸುರಕ್ಷತಾ ಕ್ರಮಗಳನ್ನು (Safety measures) ಜಾರಿಗೆ ತರಲಿದೆ.

ಇದು ಪರ್ವತಾರೋಹಿಗಳಿಗೆ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಒದಗಿಸಲು ಯೋಜಿಸಿದೆ.ಇದರ ದರ USD 10 ರಿಂದ USD 15 ರ ನಡುವೆ ಎಂದು ಅಂದಾಜಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಕೇಶ್ ಗುರುಂಗ್ ಅವರು ಹೇಳುವಂತೆ, ಈ ಇ-ಚಿಪ್ ಗಳನ್ನು ಆರೋಹಿಗಳ ಜಾಕೆಟ್‌ಗಳಿಗೆ ಅಳವಡಿಸುವುದರಿಂದ ಸುರಕ್ಷಿತ ಆರೋಹಣಕ್ಕೆ ಕೊಡುಗೆ ನೀಡುವುದಲ್ಲದೆ, ಹೆಚ್ಚು ಪರಿಣಾಮಕಾರಿಯಾಗಿ ತುರ್ತು ರಕ್ಷಣಾ ಕಾರ್ಯಾಚರಣೆಗಳನ್ನು ಸುಗಮಗೊಳಿಸುತ್ತದೆ.

ಕೆಲವು ಪ್ರತಿಷ್ಠಿತ ಕ್ಲೈಂಬಿಂಗ್ ಏಜೆನ್ಸಿಗಳು (Climbing Agencies) ಈ ನಿಯಮದ ಅಧಿಕೃತ ಘೋಷಣೆಯ ಮುನ್ನವೇ ತಮ್ಮ ಆರೋಹಿಗಳಿಗೆ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಒದಗಿಸುವ ಮೂಲಕ ಈ ಸುರಕ್ಷತಾ ಕ್ರಮವನ್ನು ಈಗಾಗಲೇ ಅಳವಡಿಸಿಕೊಂಡಿವೆ ಎಂದು ವರದಿಗಳು ತಿಳಿಸುತ್ತವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button