ವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ನಭದಲ್ಲಿಂದು ಕೆಂಪು ಚಂದಿರನೆಂಬ ಅಚ್ಚರಿ.

ಇಂದು ಜಗತ್ತು ಕೆಂಪು ಚಂದಿರನ ಕಾಣಲು ಕಾತುರವಾಗಿದೆ. ಇಂದು ನಭೋ ಮಂಡಲದಲ್ಲಿ ಸೂಪರ್ ಮೂನ್ ಕಾಣಿಸಲಿದೆ. ಖಗೋಳದ ಈ ಕೆಂಪು ಚಂದಿರ ಪೂರ್ವ ಭಾರತ, ಈಶಾನ್ಯ ಭಾರತದ ಕೆಲವು ಸ್ಥಳ ಸೇರಿದಂತೆ ಭಾರತದ ಕೆಲವು ಕಡೆ ಗೋಚರಿಸಲಿದೆ. 5 ಗಂಟೆಯ ಗ್ರಹಣದ ಅವಧಿಯಲ್ಲಿ ಕೆಂಪು ಚಂದ್ರ 14 ನಿಮಿಷ ಗೋಚರಿಸಲಿದ್ದಾನೆ. ನಿಮಗೆ ಸಾಧ್ಯವಾದರೆ ನೀವು ಕೆಂಪು ಚಂದ್ರನ ನೋಡಿ ಕಣ್ತುಂಬಿಕೊಳ್ಳಿ.

  • ನವ್ಯಶ್ರೀ ಶೆಟ್ಟಿ

ನಭೋ ಮಂಡಲದಲ್ಲಿ ಸದಾ ಕೌತುಕ ನಡೆಯುತ್ತಿರುತ್ತದೆ. ಅದೆಷ್ಟೋ ವಿಸ್ಮಯಗಳಿಗೆ ಸೌರ ಮಂಡಲ ಸಾಕ್ಷಿ. ಜನರಿಗೆ ನಭದಲ್ಲಿನ ಕೌತುಕ ನೋಡುವ ಕಾತುರ. ಸೂರ್ಯ ಗ್ರಹಣ,ಚಂದ್ರ ಗ್ರಹಣ ಸೌರ ಮಂಡಲದ ವಿಸ್ಮಯ. ಜನರಿಗೆ ಗ್ರಹಣ ವಿಸ್ಮಯ ಜೊತೆ ಒಂದಷ್ಟು ನಂಬಿಕೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಗ್ರಹಣ ಬಂದಿದೆ. ಆದರೆ ಇಂದು ಸಂಭವಿಸಲಿರುವ ಚಂದ್ರ ಗ್ರಹಣ ವಿಶೇಷ. ನಭದಲ್ಲಿ ಕೆಲವೊಮ್ಮೆ ಮಾತ್ರ ಈ ವಿಶೇಷ ನಡೆಯಲಿದೆ. ಅದುವೇ ಸೂಪರ್ ಮೂನ್.

Red Blood Moon Super Moon Lunar Eclipse Chandra Grahan

ಎಲ್ಲಿಲ್ಲಿ ನೋಡಬಹುದು ?
ಇಂದು ಸಂಭವಿಸಲಿರುವ ಚಂದ್ರ ಗ್ರಹಣ ವರ್ಷದ ಮೊದಲ ಗ್ರಹಣ. ಆದರೆ ಇದು ರಕ್ತ ಚಂದ್ರ ಗ್ರಹಣ (blood moon) ಎನ್ನುವುದೇ ವಿಶೇಷ. ಖಗೋಳ ಪ್ರಿಯರು ಈ ಕೌತುಕ ಕ್ಷಣಕ್ಕೆ ಕಾತುರಾಗಿದ್ದಾರೆ.

ಇಂದು ನಭೋ ಮಂಡಲದಲ್ಲಿ ಸಂಭವಿಸಲಿರುವ ಗ್ರಹಣದಲ್ಲಿ ಚಂದ್ರ ಕೆಂಪಾಗಿ ಗೋಚರಿಸಲಿದ್ದಾನೆ. ಆದರೆ ಈ ಚಂದ್ರ ಗ್ರಹಣ ಭಾರತದ ಎಲ್ಲ ಕಡೆ ಕಾಣಿಸುವುದಿಲ್ಲ. ಪೂರ್ವ ಭಾರತ, ಈಶಾನ್ಯ ಭಾರತ ಸೇರಿದಂತೆ ಕೆಲವು ಕಡೆಗಳಲ್ಲಿ ಗೋಚರಿಸಲಿದ್ದು , ಆ ಭಾಗದ ಮಂದಿಗೆ ಮಾತ್ರ ಕೆಂಪು ಚಂದ್ರನ ನೋಡುವ ಭಾಗ್ಯ.

ನೀವುಇದನ್ನುಇಷ್ಟಪಡಬಹುದು: ಭಯದಲೆಗಳಿಗೆ ಸಾಕ್ಷಿಯಾದ ದೇಶದ ಪಶ್ಚಿಮ ಕರಾವಳಿ: ತೌಕ್ತೆಯ ನಂತರ ಬಂತು ಯಾಸ್ ಚಂಡಮಾರುತ

Red Blood Moon Super Moon Lunar Eclipse Chandra Grahan

ಖಗೋಳದಲ್ಲಿ ಗೋಚರಿಸಲಿರುವ ಸೂಪರ್ ಮೂನ್ (super moon) ಅಥವಾ ಕೆಂಪು ಚಂದ್ರ (blood moon) ನನ್ನು ಆಸ್ಟ್ರೇಲಿಯಾ (Australia) ,ಪಶ್ಚಿಮ ಯು.ಎಸ್. ಎ (USA), ಕೆನಡಾ (canada), ಪಶ್ಚಿಮ ಮತ್ತು ದಕ್ಷಿಣ ಅಮೆರಿಕ, ಹವಾಯಿ, ಮೆಕ್ಸಿಕೊ(mexico), ಆಗ್ನೇಯ ಏಷ್ಯಾ (East Assia) ಜನರು ವೀಕ್ಷಿಸಬಹುದು.

ಇಂದು ಕಾಣಿಸಲಿರುವ ಈ ಸೂಪರ್ ಮೂನ್ ಅವಧಿ 5 ಗಂಟೆ. ಭಾರತೀಯ ಕಾಲ ಮಾನದ ಪ್ರಕಾರ ಮಧ್ಯಾಹ್ನ 2.17 ಕ್ಕೆ ಆರಂಭವಾಗುವ ಈ ಚಂದ್ರ ಗ್ರಹಣ 7.19 ಕ್ಕೆ ಕಲ್ಕತ್ತಾದಲ್ಲಿ ಕೊನೆಗೊಳ್ಳಲಿದೆ. ನಭದಲ್ಲಿ 14 ನಿಮಿಷಗಳ ಕಾಲ ಕೆಂಪು ಚಂದ್ರ ಕಾಣಿಸಲಿದ್ದಾನೆ. ಜನ ನೋಡಿ ಕೆಂಪು ಚಂದಿರನ ಕಣ್ತುಂಬಿಕೊಳ್ಳಬಹುದು.

ಏನಿದು ಕೆಂಪು ಚಂದಿರ ?

ಸಾಮಾನ್ಯವಾಗಿ ನಾವು ಚಂದ್ರ ಗ್ರಹಣ, ಸೂರ್ಯ ಗ್ರಹಣ ನೋಡುತ್ತಿವೆ .ಆದರೆ ನಮಗೆ ಅದರಲ್ಲಿ ಯಾವುದೇ ವಿಶೇಷತೆ ಕಾಣಿಸಲ್ಲ. ಆದರೆ ಇಂದು ಗೋಚರವಾಗಲಿರುವ ಚಂದ್ರ ಗ್ರಹಣ ಕೊಂಚ ಭಿನ್ನ. ಸಾಮಾನ್ಯವಾಗಿ ಗ್ರಹಣ ಹುಣ್ಣಿಮೆ ಸಮಯದಲ್ಲಿ ಸಂಭವಿಸುತ್ತದೆ.ಭೂಮಿಯ ನೆರಳು ಚಂದ್ರನ ಎಲ್ಲ ಭಾಗವನ್ನು ಆವರಿಸಿದಾಗ ಚಂದ್ರ ಗ್ರಹಣ ಗೋಚರಿಸುತ್ತದೆ.

Red Blood Moon Super Moon Lunar Eclipse Chandra Grahan

ಸೂಪರ್ ಮೂನ್ , ಸಾಮಾನ್ಯ ಚಂದ್ರನಿಗಿಂತ ದೊಡ್ಡದಾಗಿ ಕಾಣುತ್ತಾನೆ. ಪ್ರಕಾಶಮಾನವಾಗಿ ಗೋಚರಿಸುತ್ತಾನೆ. ಇಂದು ,ಖಗೊಳದಲ್ಲಿ ಚಂದ್ರನು ಭೂಮಿಯ ನೆರಳಿನಿಂದ ಸಂಪೂರ್ಣವಾಗಿ ಅವರಿಸಲ್ಪಡುತ್ತಾನೆ. ಆಗ ಚಂದಿರ ಕಪ್ಪು ಕಾಣಿಸದೇ, ಕೆಂಪಗೆ ಕಾಣಿಸುತ್ತಾನೆ.

ಕೆಲವು ಬಾರಿ ಸಂಭವಿಸುವ ಈ ಅಚ್ಚರಿಗೆ , ಆ ಸಮಯದ ಚಂದ್ರಗ್ರಹಣವನ್ನು ಕೆಂಪು ಅಥವಾ ರಕ್ತ ಚಂದ್ರ ಗ್ರಹಣವೆಂದು ಕರೆಯಲಾಗುತ್ತದೆ. ಇಂದು ಸಂಭವಿಸಲಿರುವ ಗ್ರಹಣದಲ್ಲಿ ಭೂಮಿಯು ಶೇಕಡಾ 101.6ರಷ್ಟು ಚಂದಿರನನ್ನು ಆವರಿಸುತ್ತದೆ.

ಪೆರಿಗೆಯ ಕಕ್ಷೆ ಬಳಿ ಸಂಭವಿಸುವ ಹುಣ್ಣಿಮೆಗೆ ಸೂಪರ್ ಮೂನ್ ಎಂದು ಹೆಸರು. ಸೂಪರ್ ಮೂನ್ ನಮಗೆ ಎಲ್ಲಾ ಬಾರಿಯೂ ಬರಿಗಣ್ಣಿಗೆ ಗೋಚರಿಸುವುದಿಲ್ಲ. ಚಂದಿರನ ವ್ಯಾಸದ ಸುಮಾರು 70% ಭೂಮಿ ಮುಳುಗಿದ ನಾವು ನಭೋ ಮಂಡಲದ ಈ ಕೆಂಪು ಚಂದಿರನ ಬರಿಗಣ್ಣಿನಿಂದ ನೋಡಬಹುದು.

ಭಾರತದಲ್ಲಿ ಕೆಂಪು ಚಂದಿರ ಗೋಚರಿಸುವ ಸ್ಥಳಗಳು

ಭಾರತದ ಅಗರ್ತಲ್ (Agartal), ಐಜಾಲ್ (Aizawl), ಕೊಲ್ಕತ್ತಾ (kolkata), ಚಿರಾಪುಂಜಿ (chirapunji), ಕೂಚ್ ಬೇಹರ್ (cooch Behar), ಡೈಮಂಡ್ ಹಾರ್ಬರ್ (Daimand harbour), ದಿಘಾ (Digha), ಗುವಾಹಟಿ (Guwahati), ಇಂಫಾಲ್ (Imphal), ಇತನಗರ್(Itanagar), ಕೊಹಿಮ(Kohima), ಲುಮ್ಡಿಂಗ್(Lumding), ಮಾಲ್ಡಾ(Malda), ಉತ್ತರ ಲಖೀಂಪುರ (North Lakhimpur), ಪಾರದೀಪ್ (Paradeep), ಪಾಸೈಟ್ (Pasight), ಪೋರ್ಟ್ ಬ್ಲೇರ್(Port bliar), ಪುರಿ (puri), ಶಿಲ್ಲಾಂಗ್ (shillang), ಸಿಬಸಗರ್ (sibasgar), ಸಿಲಚರ್ (Silachar) ಗೋಚರಿಸಲಿದ್ದಾನೆ. ನಿಮಗೆ ಸಾಧ್ಯವಾದಲ್ಲಿ ಖಗೋಳದ ಕೆಂಪು ಚಂದಿರನನ್ನು ಕಣ್ತುಂಬಿಕೊಳ್ಳಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button