Moreವಂಡರ್ ಬಾಕ್ಸ್ವಿಂಗಡಿಸದ

49 ವರ್ಷಗಳ ನಂತರ ಮೊದಲ ರೈಲು ನಿಲ್ದಾಣ ನಿರ್ಮಾಣಕ್ಕೆ ಸಜ್ಜಾಗಿದೆ “ಸಿಕ್ಕಿಂ”

ರೈಲು ನಿಲ್ದಾಣವನ್ನು ಹೊಂದಿರದ ಏಕೈಕ ರಾಜ್ಯ ಎನಿಸಿದ್ದ ಸಿಕ್ಕಿಂ (Sikkim) ರಾಜ್ಯದಲ್ಲಿ ಶೀಘ್ರದಲ್ಲೇ ರೈಲು ನಿಲ್ದಾಣ ಸ್ಥಾಪಿಸಲು ಶಂಕು ಸ್ಥಾಪನೆ ನೆರವೇರಿದೆ.

ವರದಿಗಳ ಪ್ರಕಾರ, ಫೆಬ್ರುವರಿ 26 ರಂದು ನಿನ್ನೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ರಾಜ್ಯದ ಮೊದಲ ರೈಲ್ವೆ ನಿಲ್ದಾಣಕ್ಕೆ(First Railway Station) ಶಂಕು ಸ್ಥಾಪನೆ ನೆರವೇರಿಸಿದ್ದಾರೆ.

ಸಿಕ್ಕಿಂನ ಮೊದಲ ರೈಲು ನಿಲ್ದಾಣ ರಾಂಗ್ಪೋ ನಲ್ಲಿ (Rangpo) ಸ್ಥಾಪನೆಯಾಗಲಿದೆ. ಇದು ಪ್ರವಾಸೋದ್ಯಮ ಮತ್ತು ರಕ್ಷಣೆ ಎರಡೂ ದೃಷ್ಟಿಕೋನದಿಂದ ನಿರ್ಮಿಸಲಾಗುತ್ತಿರುವ ನಿಲ್ದಾಣವಾಗಿದೆ.

ಈ ರೈಲ್ವೇ ಯೋಜನೆಯು (railway project) ಮೂರು ಹಂತಗಳಲ್ಲಿ ಮಾರ್ಗವನ್ನು ರೂಪಿಸುತ್ತದೆ. ಒಂದನೇ ಹಂತ ಸೆವೋಕ್ ಟು ರಂಗ್ಪೋ ರೈಲು ಯೋಜನೆ (Sivok-Rangpo railway project) ಎರಡನೇ ಹಂತದಲ್ಲಿ ರಂಗ್ಪೋದಿಂದ ಗ್ಯಾಂಗ್ಟಾಕ್ (Gangtok) ಮತ್ತು ಅಂತಿಮವಾಗಿ, ಮೂರನೇ ಹಂತದಲ್ಲಿ ಗ್ಯಾಂಗ್ಟಾಕ್ನಿಂದ ನಾಥುಲಾ (Nathula) ಮಾರ್ಗದಲ್ಲಿ ವಿಸ್ತರಿಸಲಿದೆ.

ಸಿಕ್ಕಿಂ ಮೇ 16, 1975 ರಂದು ರಾಜಪ್ರಭುತ್ವದ ರದ್ದತಿಯ ನಂತರ ಅಧಿಕೃತವಾಗಿ ಭಾರತದ 22 ನೇ ರಾಜ್ಯವಾಯಿತು.

ಅಂದಿನಿಂದಲೂ ರೈಲ್ವೇ ಯೋಜನೆಯ ಕುರಿತಾದ ಕಾರ್ಯತಂತ್ರಗಳು ರೂಪುಗೊಂಡರೂ ಕಾರ್ಯಕ್ಕೆ ಬಂದಿರಲಿಲ್ಲ.

ಈಗ ಸುಮಾರು ಐದು ದಶಕಗಳ ಕಾಯುವಿಕೆಯ ನಂತರ ಈ ಯೋಜನೆ ರೂಪುಗೊಳ್ಳುತ್ತಿದೆ.

ಸಿಕ್ಕಿಂ ರೈಲ್ವೆ ನಿಲ್ದಾಣ ಯೋಜನೆಯು ಅಕ್ಟೋಬರ್ 2009 ರಲ್ಲಿ ಪ್ರಾರಂಭವಾದ ಸಿವೋಕ್-ರಂಗಪೋ ರೈಲ್ವೇ ಯೋಜನೆಯ ಪ್ರಮುಖ ಅಂಗವಾಗಿದೆ.

ಪಶ್ಚಿಮ ಬಂಗಾಳದ ಸಿವೋಕ್‌ನಿಂದ ಸಿಕ್ಕಿಂ‌ನ ರಂಗ್‌ಪೋವರೆಗೆ ಸುಮಾರು 45 ಕಿಮೀ ವಿಸ್ತರಿಸುವ ಈ ರೈಲು ಮಾರ್ಗವು ಐದು ನಿಲ್ದಾಣಗಳನ್ನು ಹೊಂದಿರಲಿದೆ.

ಈ ರೈಲ್ವೇ ಯೋಜನೆಯು 22 ಸೇತುವೆ ಮತ್ತು 14 ಸುರಂಗ ಮಾರ್ಗಗಳನ್ನು ಹೊಂದಿದ್ದು, ಈ ಯೋಜನೆಯ ವಿಶಿಷ್ಟ ಲಕ್ಷಣವಾಗಿದೆ.

ಈ ಮಾರ್ಗದಲ್ಲಿರುವ ತೀಸ್ತಾ ಬಜಾರ್ (Teesta Bazar) ದೇಶದ ಮೊದಲ ಭೂಗತ ರೈಲು (Underground halt station) ನಿಲ್ದಾಣವಾಗಿದೆ.

ಯೋಜನೆಯ ಪ್ರಮುಖ ಅಂಶವೆಂದರೆ ಇತ್ತೀಚಿನ NATM (ಹೊಸ ಆಸ್ಟ್ರಿಯನ್ ಟನೆಲಿಂಗ್ ವಿಧಾನ) ತಂತ್ರವನ್ನು ಸುರಂಗಮಾರ್ಗಕ್ಕಾಗಿ ಅಳವಡಿಸಲಾಗುತ್ತದೆ.

ರೈಲ್ವೆ ಸಂಪರ್ಕವು ಸಿಕ್ಕಿಂ ರಾಜ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಲಿದೆ. ಪ್ರವಾಸಿಗರು ಮತ್ತು ಸ್ಥಳೀಯರಿಗೆ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಇದುವರೆಗೆ ರಸ್ತೆ ಸಾರಿಗೆ ಮತ್ತು ವಿಮಾನ ಪ್ರಯಾಣದ ಮೇಲೆ ಮಾತ್ರ ಅವಲಂಬಿತವಾಗಿತ್ತು.

ಈಗ ರೈಲು ಸಂಪರ್ಕದಿಂದಾಗಿ ಸರಕು ಸಾಮಾನುಗಳ ಸಮರ್ಥ ಸಾಗಾಣಿಕೆಯು ಸಿಕ್ಕಿಂ ಮತ್ತು ಇತರ ರಾಜ್ಯ, ಭಾಗಗಳ ನಡುವೆ ವ್ಯಾಪಾರ ವಹಿವಾಟನ್ನು ಸುಗಮಗೊಳಿಸಲಿದೆ.

ಇದು ಸಿಕ್ಕಿಂ ರಮಣೀಯ ಸೌಂದರ್ಯವನ್ನು ನೋಡಲು ಬರುವ ಪ್ರವಾಸಿಗರಿಗೆ ಉತ್ತಮ ಅವಕಾಶವನ್ನು ನೀಡಲಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದರ ಜೊತೆಗೆ ದಕ್ಷ ಪಡೆಗಳ ಚಲನೆಯನ್ನೂ ಸುಗಮಗೊಳಿಸಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button