ದೂರ ತೀರ ಯಾನವಿಂಗಡಿಸದ

ಜಗತ್ ಪ್ರಸಿದ್ಧ ಈ ತಾಣಗಳಲ್ಲಿ ಕ್ಯಾಮೆರಾಗಿಲ್ಲ ಎಂಟ್ರಿ

ವಿಶ್ವದ ಕೆಲವು ಅತ್ಯಂತ ಸುಂದರವಾದ ತಾಣಗಳಿಗೆ ಪ್ರವಾಸ ಕೈಗೊಂಡಿರುವಂತಹ ಸಂದರ್ಭಗಳಲ್ಲಿ ಕ್ಯಾಮರಾ ಹಿಡಿದುಕೊಂಡು ಹೋಗುವವರೇ ಹೆಚ್ಚು. ಆದರೆ ಈ ಜಾಗಗಳಿಗೆ ಹೋದಾಗ ಅಪ್ಪಿ ತಪ್ಪಿಯೂ ಈ ರೀತಿ ಮಾಡಬೇಡಿ.

ತಾಜ್ ಮಹಲ್ -(Taj Mahal)

ಭಾರತದ ಆಗ್ರಾದಲ್ಲಿ(Agra)ನೆಲೆಸಿರುವತಾಜ್ ಮಹಲ್ಇದೊಂದು ಪ್ರೀತಿಯ ಸಂಕೇತ. ಮಾತ್ರವಲ್ಲದೆ ವಾಸ್ತುಶಿಲ್ಪದ ಅದ್ಭುತ.

ವಿಶ್ವದ ಅದ್ಬುತಗಳ ಪಟ್ಟಿಯಲ್ಲಿ ಹೆಸರು ಪಡೆದಿರುವ ತಾಜ್ ಮಹಲ್ ಗೆ ಪ್ರವಾಸಿಗರು ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಆದರೆ, ಇಲ್ಲಿ ಒಳಗಿನಿಂದ ಸಮಾಧಿಯ ಛಾಯಾಚಿತ್ರವನ್ನು ಅನುಮತಿಸಲಾಗುವುದಿಲ್ಲ

ಸಮಾಧಿಯ ಪಾವಿತ್ರ್ಯತೆ ಕಾಪಾಡಿಕೊಳ್ಳುವುದು ಮತ್ತು ಭದ್ರತಾ ದೃಷ್ಟಿಯಿಂದ ಇಲ್ಲಿ ಒಳಗೆ ಕ್ಯಾಮೆರಾ ತೆಗೆದುಕೊಂಡು ಹೋಗುವುದಾಗಲಿ ಅಥವಾ ಫೋಟೋ ತೆಗೆಯುವುದಾಗಲಿ ನಿರ್ಬಂಧಿಸಲಾಗಿದೆ. ಆದರೆ ಹೊರಭಾಗದಲ್ಲಿ ನೀವು ಇಷ್ಟ ಪಡುವ ಈ ಸ್ಮಾರಕದ ಚಿತ್ರಗಳನ್ನು ತೆಗೆದುಕೊಳ್ಳಬಹುದಾಗಿದೆ

ಐಫೆಲ್ ಟವರ್ (Eiffel tower)

ಪ್ಯಾರಿಸ್ ನಲ್ಲಿ (Paris)ಎತ್ತರದ ಐಫೆಲ್ ಟವರ್ ಅತ್ಯಂತ ಸುಂದರವಾದ ರಚನೆ.  

 ಆದರೆ ಇಲ್ಲಿ ಸೂರ್ಯಾಸ್ತದ ನಂತರ ಇಲ್ಲಿ ಛಾಯಾಗ್ರಹಣವನ್ನು ನಿರ್ಬಂಧಿಸಲಾಗಿದೆ. ರಾತ್ರಿ ಸಮಯದಲ್ಲಿ ಈ ಗೋಪುರವು ಲೈಟಿಂಗ್ ನಿಂದ ಪ್ರಕಾಶಮಾನವಾಗಿ ಹೊಳೆಯುತ್ತದೆ.

ಆ ನಂತರ ಈ ಗೋಪುರವನ್ನು ಕಲಾ ಸ್ಥಾಪನೆ ಎಂದು ಪರಿಗಣಿಸಲಾಗುತ್ತದೆ. ಆಗ ಇದು ಹಕ್ಕು ಸ್ವಾಮ್ಯ ರಕ್ಷಣೆಗಳ ಅಡಿಯಲ್ಲಿ ಬರುತ್ತದೆ . ಆದ್ದರಿಂದ ಆನ್ ಲೈನ್ ನಲ್ಲಿ ಅಥವಾ ವಾಣಿಜ್ಯ ಉದ್ದೇಶಗಳಿಗಾಗಿಯೂ ಇದರ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ.

ಕುಮ್ಸುಸನ್ ಪ್ಯಾಲೆಸ್ ಆಫ್ ಸನ್ (Kumsusan Palace of the Sun)

ಇದು ಉತ್ತರ ಕೊರಿಯಾದ ಪಯೋಂಗ್ಯಾಂಗ್‌ನ ಈಶಾನ್ಯ ಮೂಲೆಯಲ್ಲಿ ಇರುವ ಒಂದು ಸಮಾಧಿಯಾಗಿದೆ. ಅರಮನೆಯನ್ನು 1976 ರಲ್ಲಿ ನಿರ್ಮಿಸಲಾಯಿತು.

ಉತ್ತರ ಕೊರಿಯಾದ ರಹಸ್ಯ ಜಗತ್ತಿನಲ್ಲಿರುವ, ಕುಮ್ಸುಸನ್ ಪ್ಯಾಲೆಸ್ ಆಫ್ ಸನ್. ಇದಕ್ಕೆ ಪ್ರವೇಶ ಮಾಡುವ ಮೊದಲು ಸಂಪೂರ್ಣ ದೇಹದ ತಪಾಸಣೆ ಮತ್ತು ಪ್ರವೇಶ ದ್ವಾರದಲ್ಲಿಯೇ ತಮ್ಮ ಎಲ್ಲಾ ವಸ್ತುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಒಪ್ಪಿಸಬೇಕಾಗುತ್ತದೆ.

ಕಿಮ್ ಇಲ್-ಸುಂಗ್ ಮತ್ತು ಕಿಮ್ ಜೊಂಗ್-ಇಲ್ ಅವರ ದೇಹಗಳು ವಿಶ್ರಾಂತಿ ಪಡೆಯುವ ಸಮಾಧಿಯೊಳಗೆ ಛಾಯಾಗ್ರಹಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಅಲಾಮೊ (Alamo)

ಅಲಾಮೊ ಒಂದು ಐತಿಹಾಸಿಕ ಸ್ಪ್ಯಾನಿಷ್ ಮಿಷನ್ ಮತ್ತು ಕೋಟೆಯ ಸಂಕೀರ್ಣವಾಗಿದ್ದು, 

ಈ ಐತಿಹಾಸಿಕ ತಾಣವು ಹಿಂದಿನ ಕಾಲದ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಪ್ರವಾಸದ ಸಮಯದಲ್ಲಿ ಕಟ್ಟಡದ ಒಳಗೆ ಛಾಯಾಗ್ರಹಣವನ್ನು ನಿಷೇಧಿಸಿಲಾಗಿದೆ.

ಇಲ್ಲಿಗೆ ಭೇಟಿ ನೀಡುವ ಸಂದರ್ಶಕರು ಏರು ಧ್ವನಿಯಲ್ಲಿ ಮಾತನಾಡುವಂತಿಲ್ಲ ಮತ್ತು ಪ್ರವೇಶಿಸುವಾಗ ಟೋಪಿಗಳನ್ನು ಏನಾದರೂ ಹಾಕಿಕೊಂಡಿದ್ದರೆ ಅದನ್ನು ತೆಗೆದು ಪ್ರವೇಶಿಸಬೇಕು. 

ವೆಸ್ಟ್‌ಮಿನ್‌ಸ್ಟರ್ ಅಬ್ಬೆ: (Westminster abbey)

ವೆಸ್ಟ್‌ ಮಿನಿಸ್ಟರ್‌ನಲ್ಲಿರುವ ಕಾಲೇಜಿಯೇಟ್ ಚರ್ಚ್ ಆಫ್ ಸೇಂಟ್ ಪೀಟರ್ ಎಂದು ಔಪಚಾರಿಕವಾಗಿ ಹೆಸರಿಸಲ್ಪಟ್ಟಿರುವ ಇದನ್ನು ವೆಸ್ಟ್‌ಮಿನ್‌ಸ್ಟರ್ ಅಬ್ಬೆ ಎಂದೂ ಕರೆಯಲಾಗುತ್ತದೆ. 

ಬ್ರಿಟೀಷ್ ಇತಿಹಾಸದ ಮೂಲಾಧಾರವಾಗಿರುವ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಹೊರಗಿನಿಂದ ಮಾತ್ರ ಛಾಯಾಗ್ರಹಣವನ್ನು ತೆಗೆಯಲು ಅನುಮತಿಯಿದೆ .

ಪವಿತ್ರವಾದ ವಾತಾವರಣವನ್ನು ಸಂರಕ್ಷಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಒಳಗಿನಿಂದ ಛಾಯಾಗ್ರಹಣವನ್ನು ತೆಗೆಯಲು ನಿಷೇಧಿಸಲಗಿದೆ. 

ಸಿಸ್ಟಿನ್ ಚಾಪೆಲ್ (sistine chapel)

ಇದು ವ್ಯಾಟಿಕನ್ ಸಿಟಿಯಲ್ಲಿರುವ, ಸಿಸ್ಟೀನ್ ಚಾಪೆಲ್ ಪೋಪ್ ಅವರ ಅಧಿಕೃತ ನಿವಾಸವಾದ ಅಪೋಸ್ಟೋಲಿಕ್ ಅರಮನೆಯಲ್ಲಿರುವ ಪ್ರಾರ್ಥನಾ ಮಂದಿರವಾಗಿದೆ.

ಮೂಲತಃವಾಗಿ ಕ್ಯಾಪೆಲ್ಲಾ ಮ್ಯಾಗ್ನಾ ಎಂದು ಕರೆಯಲ್ಪಡುವ ಈ ಚಾಪೆಲ್ 1473 ಮತ್ತು 1481ರ ನಡುವೆ ಇದನ್ನು ನಿರ್ಮಿಸಿದ ಪೋಪ್ ಸಿಕ್ಸ್ಟಸ್ IV ಅವರ ಹೆಸರನ್ನು ಪಡೆದುಕೊಂಡಿದೆ.

 ಕಾರ್ಪೋರೇಷನ್ ಎರಡು ದಶಕಗಳ ಜಿಂದೆ ಪುನ:ಸ್ಥಾಪನೆ ಯೋಜನೆಯನ್ನು ಪೂರ್ಣಗೊಳಿಸಿದ್ದರೂ ಸಹ, ಸಿಸ್ಟೆಮ್ ಚಾಪೆಲ್ ನಲ್ಲಿ ಛಾಯಾಗ್ರಹಣವನ್ನು  ನಿಷೇಧಿಸಲಾಗಿದೆ. 

ರಾಷ್ಟ್ರಪತಿ ಅರಮನೆ,(ಪ್ರೆಸಿಡೆಂಟಲ್ ಪ್ಯಾಲೆಸ್)-

 ಯುನೈಟೆಡ್ ಅರಬ್ ಎಮಿರೇಟ್ಸ್:

ದೇಶದ ಪರಂಪರೆಯನ್ನು ವಿಶ್ವಕ್ಕೆ ತಲುಪುವಂತೆ ಮಾಡುವ ಉದ್ದೇಶದಿಂದ, ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ (ಅಬುಧಾಬಿಯ ಆಡಳಿತಗಾರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ) ಮತ್ತು ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (ಅಬುಧಾಬಿಯ ಕ್ರೌನ್ ಪ್ರಿನ್ಸ್ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್) 2019 ರಲ್ಲಿ ಸಾರ್ವಜನಿಕರಿಗೆ ಅರಮನೆಯನ್ನು ತೆರೆಯಲು ನಿರ್ಧರಿಸಿದರು.

ಭದ್ರತಾ ಕಾರಣಗಳಿಂದ ರಾಷ್ಟ್ರಪತಿ ಭವನದಲ್ಲಿ ಛಾಯಾಗ್ರಹಣ ಮತ್ತು ವೀಡಿಯೋಗ್ರಾಫಿಯನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ.

ಈ ನಿಷೇಧವು ಇತರ ಸರ್ಕಾರಿ ಕಟ್ಟಡಗಳು ಮತ್ತು ಮಿಲಿಟರಿ ಕಾರ್ಯಕ್ಕಾಗಿ ಸ್ಥಾಪನೆಗೊಂಡ ಕಟ್ಟಡಗಳಿಗೂ ವಿಸ್ತರಿಸಲಾಗಿದೆ. 

ವ್ಯಾಲಿ ಆಫ್ ಕಿಂಗ್ಸ್

ವ್ಯಾಲಿ ಆಫ್ ಕಿಂಗ್ಸ್ ಇದು, ಪಶ್ಚಿಮ ಪ್ರದೇಶದಲ್ಲಿನ ಇಳಿಜಾರಿನ ಬಂಡೆಗಳ ದ್ಯೋತಕವಾಗಿದೆ. ಹಾಗೂ, ಇಲ್ಲಿ ಫೇರೋಗಳ ದೇಹಗಳನ್ನು ಬಂಡೆಯೊಳಗೆ ಆಳವಾಗಿ ಕತ್ತರಿಸಿದ ಸಮಾಧಿಗಳಲ್ಲಿ ಇಡಲಾಗಿದೆ.

ಈ ಸಮಾಧಿಗಳು ಸಿಂಗಲ್ ಚೇಂಬರ್ ಸಮಾಧಿಗಳಿಂದ ಹಿಡಿದು ಗಾತ್ರದಲ್ಲಿ ಹಲವಾರು ಸಾವಿರ ಚದರ ಮೀಟರ್‌ಗಳಷ್ಟು ಬೃಹತ್ ಸಂಕೀರ್ಣಗಳವರೆಗೆ ವಿಸ್ತಾರವಾಗಿವೆ.

ವ್ಯಾಲಿ ಆಫ್ ಕಿಂಗ್ಸ್, ಇದು ಪುರಾತನ ರಾಜರ ಗೋರಿಗಳು ಮತ್ತು ಸ್ಮಾರಕಗಳ ಖಜಾನೆಯಾಗಿದೆ. ಆದುದರಿಂದ ಇಲ್ಲಿ ನೋ-ಫೋಟೋಗ್ರಫಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ.

ಈ ಪುರಾತತ್ವ ಅದ್ಬುತಕ್ಕೆ ಭೇಟಿ ಕೊಡುವ ಸಂದರ್ಶಕರು ಛಾಯಾಗ್ರಹಣ ಮಾಡಲು ಪ್ರಯತ್ನಿಸಿದಲ್ಲಿ ದಂಡವನ್ನು ವಿಧಿಸಬೇಕಾಗುತ್ತದೆ. ಈ ಸುಂದರ ಐತಿಹಾಸಿಕ ಸ್ಥಳದ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ನಿಯಮವನ್ನು ಜಾರಿಗೊಳಿಸಲಾಗಿದೆ.

ಉಲುರು ಕಟಾ-ಟ್ಜುಟಾ ರಾಷ್ಟ್ರೀಯ ಉದ್ಯಾನವನ:

ಉಲುರು ಕಟಾ ಟ್ಜುಟಾ ರಾಷ್ಟ್ರೀಯ ಉದ್ಯಾನವನವು ಆಸ್ಟ್ರೇಲಿಯಾದ ಉತ್ತರ ಪ್ರ್ಯಾಂತ್ಯದ ಸಂರಕ್ಷಿತ ಪ್ರದೇಶವಾಗಿದೆ. ಈ ಉದ್ಯಾನವನವು ಉಲುರು ಮತ್ತು ಕಟ ಟ್ಜುಟಾ ಎರಡಕ್ಕೂ ನೆಲೆಯಾಗಿದೆ.

ಇದು ಒಂದು ಬೃಹತ್, ದುಂಡಗಿನ, ಕೆಂಪು ಮರಳುಗಲ್ಲಿನ ಏಕಶಿಲೆಯಾಗಿದ್ದು, 9.4 ಕಿಲೋಮೀಟರ್ ಸುತ್ತಳತೆಯಲ್ಲಿ ಬಯಲಿನಿಂದ 340 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿದೆ.

ಉಲುರು ಕಟ -ಟ್ಜುಟಾ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಸಿರುವ ಆಯರ್ಸ್ ರಾಕ್ ಸ್ಥಳೀಯ ಮೂಲ ನಿವಾಸಿಗಳಿಗೆ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ .

ಇಲ್ಲಿನ ಕೆಲವು ಪವಿತ್ರ ಸ್ಥಳಗಳು, ಸಮಾರಂಭಗಳು ಮತ್ತು ವಸ್ತುಗಳ ಛಾಯಾಗ್ರಹಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗೂ ವೃತ್ತಿಪರ ಛಾಯಾಗ್ರಾಹಕರು ಉದ್ಯಾನವನಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.ತ್ ಪ್ರಸಿದ್ಧ ಈ ತಾಣಗಳಲ್ಲಿ  ಕ್ಯಾಮೆರಾಗಿಲ್ಲ ಎಂಟ್ರ

Related Articles

Leave a Reply

Your email address will not be published. Required fields are marked *

Back to top button