ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರಿದ ತೆಲಂಗಾಣದ ಪುರಾತನ ದೇವಾಲಯ

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಭಾರತದ ಸ್ಥಳಗಳು ಸೇರ್ಪಡೆಯಾಗುವುದು ಹೆಮ್ಮೆಯ ಸಂಗತಿ. ತೆಲಂಗಾಣ ರಾಜ್ಯದ 13ನೇ ಶತಮಾನದಲ್ಲಿ ನಿರ್ಮಾಣವಾದ ಕಾಕತೀಯ ರುದ್ರೇಶ್ವರ (ರಾಮಪ್ಪ) ದೇವಸ್ಥಾನ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

  • ನವ್ಯಶ್ರೀ ಶೆಟ್ಟಿ

ಯುನೆಸ್ಕೊ (UNESCO ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭಾರತದ ಹಲವು ಸ್ಥಳಗಳು ಸ್ಥಾನ ಪಡೆದುಕೊಂಡಿದೆ. ಇದೀಗ ಆ ಪಟ್ಟಿಗೆ ತೆಲಂಗಾಣದ (Telangana) ದೇವಾಲಯವೊಂದು ಸೇರ್ಪಡೆಯಾಗಿದೆ. 13ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. 17 ದೇಶಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಆನ್ಲೈನ್ ಸಭೆಯಲ್ಲಿ ಈ ಕುರಿತು ಘೋಷಣೆ ಹೊರಬಿದ್ದಿದೆ.

ಯುನೆಸ್ಕೋ ಇದೊಂದು ಸುಂದರ ಹಾಗೂ ಭವ್ಯತೆ ಕೂಡಿರುವ ತಾಣವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತೀಯರ ಹೆಮ್ಮೆಗೆ ಕಾರಣವಾದ ಈ ಸುದ್ದಿಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

Kakatiya Rudreswara Temple Telanagana UNESCO World Heritage Site Thousand Pillar Temple Ramappa Temple

13ನೇ ಶತಮಾನದ ದೇವಾಲಯ ಹೈದರಾಬಾದ್ ನಗರದಿಂದ 220 ಕಿಮೀ ದೂರವಿರುವ ಈ ದೇವಾಲಯ ತೆಲಂಗಾಣ ರಾಜ್ಯದ ವಾರಂಗಲ್ (Warangal) ಜಿಲ್ಲೆಯಲ್ಲಿದೆ. 13 ನೆಯ ಶತಮಾನದಲ್ಲಿ ನಿರ್ಮಾಣವಾಗಿದೆ. ಕಾಕತೀಯ ರಾಜ ಗಣಪತಿದೇವ( Ganapatideva) ಕಾಲದಲ್ಲಿ ರಾಚೆರ್ಲ ಸೇನಾಪತಿ ರುದ್ರಯ್ಯ(Racherla se napati rudraya) ನಿರ್ಮಿಸಿದ್ದನು.

ಈ ದೇವಾಲಯ ಕುಸಿದು ಬಿದ್ದಿರುವ ಕಾಟೇಶ್ವರಯ್ಯ(kateshwarayya) ಮತ್ತು ಕಾಮೇಶ್ವರಯ್ಯ ಮೂರ್ತಿಗಳಿಂದ ಸುತ್ತುವರೆದಿದೆ. ಇದು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ತೆಲಂಗಾಣ ರಾಜ್ಯದ ಮೊದಲ ಸ್ಥಳ.

ನೀವುಇದನ್ನುಇಷ್ಟಪಡಬಹುದು: ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರಿದ ಜಮ್ಮು ಕಾಶ್ಮೀರದ ಐತಿಹಾಸಿಕ ರೈಲ್ವೆ ನಿಲ್ದಾಣ

ಮೂಲಗಳ ಪ್ರಕಾರ 1310ರಲ್ಲಿ ಮಲಿಕ್ ಕಪೂರ್ ಆಕ್ರಮಣ ಮಾಡಿದ್ದ ಕಾಲದಲ್ಲಿ ಈ ದೇವಾಲಯದ ಕೆಲವು ಪ್ರತಿಮೆಗಳು ಹಾಳಾಗಿದೆ. ಇಲ್ಲಿನ ಕೆಲವು ವಿಗ್ರಹಗಳನ್ನು ದ್ವಂಸ ಮಾಡಿದ್ದರು.

Kakatiya Rudreswara Temple Telanagana UNESCO World Heritage Site Thousand Pillar Temple Ramappa Temple

17ನೇ ಶತಮಾನದಲ್ಲಿ ಸಂಭವಿದ್ದ ಅತಿ ದೊಡ್ಡ ಭೂಕಂಪನಕ್ಕೆ ಈ ದೇವಾಲಯ ಸಾಕ್ಷಿಯಾಗಿತ್ತು. ಆ ಸಮಯದಲ್ಲಿ ಭೂಕಂಪನದ ತೀವ್ರತೆಗೆ ದೇವಾಲಯದ ನೆಲಹಾಸು ನಲುಗಿತ್ತು. ಆದರೆ ಸ್ತಂಭಗಳ ರಚನೆ ಸದೃಡವಾಗಿತ್ತು ,ದೇವಾಲಯಕ್ಕೆ ದೊಡ್ಡ ಮಟ್ಟಿಗೆ ಹಾನಿ ಆಗಿರಲಿಲ್ಲ.

13ನೇ ಶತಮಾನದ ಆ ಕಾಲಘಟ್ಟದಲ್ಲಿಯೇ ಈ ದೇವಾಲಯ ಸ್ಯಾಂಡ್ ಬಾಕ್ಸ್ ಕಲ್ಪನೆಯಿಂದ ರಚಿತವಾಗಿತ್ತು. ಈ ಕಾರಣದಿಂದಾಗಿ 17ನೆಯ ಶತಮಾನದ ಆ ದೊಡ್ಡ ಭೂಕಂಪನ ಕೂಡ ಈ ದೇವಾಲಯ ಎದುರಿಸಿತ್ತು. ಜೊತೆಗೆ ಇಂದಿಗೂ ನಿಮಗೆ ಭವ್ಯತೆಯ ಜೊತೆಗೆ ಮನಸಿಗೆ ಶಾಂತತೆ ನೀಡುತ್ತದೆ ಈ ದೇವಾಲಯ.

Kakatiya Rudreswara Temple Telanagana UNESCO World Heritage Site Thousand Pillar Temple Ramappa Temple

ಶುಭ ಕೋರಿದ ಪ್ರಧಾನಿ ಮೋದಿ

ತೆಲಂಗಾಣ ರಾಜ್ಯದ ದೇವಾಲಯ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ತೆಲಂಗಾಣ ಜನತೆಗೆ ಶುಭಾಶಯ ಕೋರಿದ್ದಾರೆ ನರೇಂದ್ರ ಮೋದಿ.

ತೆಲಂಗಾಣದ ಕಾಕತೀಯ ರುದ್ರೇಶ್ವರ (ರಾಮಪ್ಪ) (Kaakatiya Rudreshwara ramappa) ದೇವಾಲಯ ಕಾಕತೀಯ ರಾಜರ ಒಂದು ಅದ್ಬುತ ಕೌಶಲ್ಯ ಹಾಗೂ ಕಲಾತ್ಮಕತೆಯಿಂದ ಕೂಡಿದೆ. ಈ ದೇವಾಲಯಕ್ಕೆ ಎಲ್ಲರೂ ಭೇಟಿ ನೀಡಿ ಅಲ್ಲಿನ ಭವ್ಯತೆ ಹಾಗೂ ಸೌಂದರ್ಯವನ್ನು ಆಸ್ವಾದಿಸಿ ಎಂದು ಟ್ವೀಟ್ ಮಾಡಿದ್ದಾರೆ ಪ್ರಧಾನಿ.

Kakatiya Rudreswara Temple Telanagana UNESCO World Heritage Site Thousand Pillar Temple Ramappa Temple

13ನೇ ಶತಮಾನದಲ್ಲಿ ನಿರ್ಮಾಣವಾದ ತೆಲಂಗಾಣದ ಕಾಕತೀಯ ರುದ್ರೇಶ್ವರ ದೇವಾಲಯ 17 ರಾಷ್ಟ್ರಗಳ ಸಮ್ಮುಖದಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಘೋಷಣೆಯಾಗಿರುವುದು ಖುಷಿಯ ವಿಷಯ. ಇದು ನಿಜಕ್ಕೂ ಭಾರತೀಯರಿಗೆ ಹೆಮ್ಮೆಯ ಸಂಗತಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button