ಒಲಂಪಿಕ್ಸ್ ವಿಲೇಜ್ ಟೋಕಿಯೋ ಹೀಗಿದೆ ನೋಡಿ.

ಕೊರೋನಾ ಕಾರ್ಮೋಡದ ನಡುವೆಯೂ ಟೋಕಿಯೋ ಒಲಂಪಿಕ್ಸ್ ಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಒಲಂಪಿಕ್ಸ್ ವಿಲೇಜ್ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಅಲ್ಲಿನ ಸಿದ್ಧತೆಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಹಜವಾಗಿ ಜಾಸ್ತಿಯಾಗಿದೆ. ಪ್ರಪಂಚದಾದ್ಯಂತ ಜನರ ಆಕರ್ಷಣೆಯ ಕೇಂದ್ರವಾಗಿರುವ ಒಲಂಪಿಕ್ಸ್ ವಿಲೇಜ್ ಹೇಗಿದೆ? ಎನ್ನುವ ನಿಮ್ಮ ಕುತೂಹಲ ತಣಿಸುವುದಕ್ಕಾಗಿ ನಮ್ಮ ಈ ಲೇಖನ.
- ನವ್ಯಶ್ರೀ ಶೆಟ್ಟಿ
ಪ್ರತಿ ನಾಲ್ಕು ವರ್ಷಕೊಮ್ಮೆ ನಡೆಯುವ ಒಲಂಪಿಕ್ಸ್ ಬಗ್ಗೆ ಸಹಜವಾಗಿ ಕ್ರೀಡಾಭಿಮಾನಿಗಳಿಗೆ ಕುತೂಹಲ ,ನಿರೀಕ್ಷೆ, ಕಾತುರಗಳು ಇರುತ್ತದೆ. ತಮ್ಮ ದೇಶ ಪದಕ ಗೆಲ್ಲಬೇಕು ಎನ್ನುವ ಆಸೆಯ ಜೊತೆಗೆ ಒಲಂಪಿಕ್ಸ್ ನಡೆಯುವ ಸ್ಥಳದ ಬಗ್ಗೆ ಕೂಡ ಕುತೂಹಲ ಇರುತ್ತದೆ. ಸದ್ಯ ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿರುವುದು ಒಲಂಪಿಕ್ಸ್ (Olympics) ವಿಲೇಜ್. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿರುವ ಟೋಕಿಯೋ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ನಿಮಗಾಗಿ.

ಟೋಕಿಯೋದಲ್ಲಿ ನಡೆಯುತ್ತಿರುವ ಎರಡನೇ ಒಲಂಪಿಕ್ಸ್
2020 ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಂಪಿಕ್ಸ್ ವೈರಸ್ ಕಾರಣದಿಂದ ನಡೆಯಲಿಲ್ಲ. ಆ ಕಾರಣದಿಂದ 2021ರ ಜುಲೈ 23 ರಿಂದ ಒಲಂಪಿಕ್ಸ್ ಆರಂಭವಾಗಿದೆ. ಆದರೆ ಈ ಒಲಂಪಿಕ್ಸ್ ನನ್ನು ಟೋಕಿಯೋ(tokyo) ಒಲಂಪಿಕ್ಸ್ 2020 ಎಂದೇ ಕರೆಯಲಾಗುತ್ತಿದೆ . ಇದು ಟೋಕಿಯೋದಲ್ಲಿ ನಡೆಯುತ್ತಿರುವ ಎರಡನೇ ಒಲಂಪಿಕ್ಸ್.

ಟೋಕಿಯೋ ಒಲಂಪಿಕ್ಸ್ ಒಟ್ಟು 43 ಸ್ಥಳಗಳಲ್ಲಿ ನಡೆಯಲಿದೆ. ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಟೋಕಿಯೋ ಬೇ ಝೋನ್ ಮತ್ತು ಹೆರಿಟೇಜ್ ಝೋನ್ ಆಗಿ ವಿಂಗಡಿಸಲಾಗಿದೆ. ಈ ಎರಡು ಝೋನ್ ಗಳಲ್ಲಿ ಕ್ರೀಡಾಪಟುಗಳ ಹಣಾಹಣಿ ನಡೆಯಲಿದೆ. ಪ್ಯಾರ ಒಲಂಪಿಕ್ಸ್ ಮತ್ತು ಒಲಂಪಿಕ್ಸ್ ಎರಡೂ ಕ್ರೀಡಾ ಹಬ್ಬಕ್ಕೆ ಟೋಕಿಯೋ ಸಾಕ್ಷಿ.
ಸಕಲ ರೀತಿಯಲ್ಲಿ ಸಜ್ಜುಗೊಂಡ ಒಲಂಪಿಕ್ ಹಳ್ಳಿ
ಕೊರೋನಾ ವೈರಸ್ ಭೀತಿ ಒಲಂಪಿಕ್ಸ್ ನನ್ನೂ ಬಿಟ್ಟಿಲ್ಲ. ಈ ಕಾರಣದಿಂದ ಒಲಂಪಿಕ್ಸ್ ಹಳ್ಳಿಯಲ್ಲಿ ಕಟ್ಟು ನಿಟ್ಟಿನ ಕೊರೋನಾ ಮಾರ್ಗಸೂಚಿಯೊಂದಿ ಗೆ ಒಲಿಂಪಿಕ್ಸ್ ನಡೆಯುತ್ತಿದ್ದೆ. ಸುಮಾರು 11,000 ಒಲಂಪಿಕ್ ಅಥ್ಲೀಟ್ ಗಳು ,4400 ಪ್ಯಾರ ಒಲಂಪಿಕ್ ಅಥ್ಲೀಟ್ ಗಳು ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾಗಿಯಾಗಿದ್ದಾರೆ. ಎಲ್ಲಾ ಕ್ರೀಡಾ ಸ್ಪರ್ಧಿಗಳು ಸ್ಪರ್ಧೆಯ ಸಮಯ ಹೊರತು ಪಡಿಸಿ ಉಳಿದ ಸಮಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.
ಒಲಂಪಿಕ್ಸ್ ವಿಲೇಜ್ ನಲ್ಲಿ ಫೀವರ್ ಕ್ಲಿನಿಕ್ ಸ್ಥಾಪಿಸಲಾಗಿದೆ.ಯಾರಿಗಾದರೂ ಕೊರೋನಾ ಲಕ್ಷಣ ಕಂಡು ಬಂದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ವೈರಸ್ ಇರುವುದು ದೃಢ ಪಟ್ಟರೆ , ಒಲಂಪಿಕ್ಸ್ ವಿಲೇಜ್ ಹೊರಗಡೆ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ. ಟೋಕಿಯೋ ದ ಪ್ರತಿಶತ 80ರಷ್ಟು ಮಂದಿ ವ್ಯಾಕ್ಸೀನ್ ಪಡೆದುಕೊಂಡಿದ್ದಾರೆ. ಅಥ್ಲೀಟ್ ಗಳಿಗೆ ಪ್ರತಿ ದಿನ ಕೊರೋನಾ ಟೆಸ್ಟ್ ನಡೆಸಲಾಗುತ್ತದೆ.
ನೀವುಇದನ್ನುಇಷ್ಟಪಡಬಹುದು: ಒಲಿಂಪಿಕ್ಸ್ ಅಲ್ಲಿ ಭಾಗಿಯಾಗಿರುವ ಟೋಂಗಾ ದೇಶದ ಬಗ್ಗೆ ನಿಮಗೆ ಗೊತ್ತಾ?
ಒಲಂಪಿಕ್ಸ್ ಹಳ್ಳಿಯಲ್ಲಿ ಕಟ್ಟಡಗಳು ನೀಲಿ (indigo blue) ದಲ್ಲಿ ಸಿಂಗಾರಗೊಂಡಿದೆ. ಇಲ್ಲಿನ ವಾಸಸ್ಥಳಗಳನ್ನು ನಾಲ್ಕು ವಿಭಾಗವಾಗಿ ವಿಂಗಡಿಸಲಾಗಿದೆ. Sun ,park ,fort ,sea ಎಂದು ಹೆಸರನ್ನು ನೀಡಿ ಅದಕ್ಕೆ ವಿನೂತನ ವಿನ್ಯಾಸ ಮಾಡಿ ವಿಭಿನ್ನ ಬಣ್ಣಗಳ ಪರಿಕಲ್ಪನೆ ನೀಡಲಾಗಿದೆ.
ಅಥ್ಲೀಟ್ ಗಳು ವಾಸವಿರುವ ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಆಯಾ ದೇಶಗಳ ದ್ವಜಗಳನ್ನು ಇರಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳ ಅಥ್ಲೀಟ್ಸ್ ಮೆಚ್ಚುಗೆಗೆ ಪಾತ್ರವಾಗಿದೆ ಒಲಿಂಪಿಕ್ಸ್ ಹಳ್ಳಿಯ ಸಿದ್ಧತೆ.

ಸ್ಪರ್ಧೆ ನಡೆಯುವ ಕೆಲವು ಸ್ಥಳ
ಒಲಿಂಪಿಕ್ಸ್ ವಿಲೇಜ್ ತನ್ನ ಸುಸಜ್ಜಿತ ಸಿದ್ಧತೆಯ ಜೊತೆಗೆ ಕ್ರೀಡಾಂಗಣದ ಮೂಲಕ ಜಗತ್ತಿನ ಗಮನ ಸೆಳೆದಿದೆ.
ಒಲಿಂಪಿಕ್ ಸ್ಟೇಡಿಯಂ
ಒಲಿಂಪಿಕ್ ಉದ್ಘಾಟನಾ ಸಮಾರಂಭ ಹಾಗೂ ಸಮಾರೋಪ ಸಮಾರಂಭ ನಡೆಯಲಿರುವ ಒಲಂಪಿಕ್ ವಿಲೇಜ್ ಕ್ರೀಡಾಂಗಣ ಅತ್ಯಾಕರ್ಷಕವಾಗಿದೆ. ಇದು ಟೋಕಿಯೋ ನಗರದ ಹೃದಯ ಭಾಗದಲ್ಲಿ ಈ ಕ್ರೀಡಾಂಗಣ. 68 ಸಾವಿರ ಜನ ಕುಳಿತು ಕೊಳ್ಳಬಹುದಾದ ಅಸನ ಸಾಮರ್ಥ್ಯ ಹೊಂದಿದೆ.
ಈ ಬಾರಿ ಕೆಲ ಅಥ್ಲೆಟಿಕ್ಸ್ ಮತ್ತು ಫುಟ್ಬಾಲ್ ಸ್ಪರ್ಧೆಗಳು ಈ ಸ್ಟೇಡಿಯಂ ನಲ್ಲಿ ನಡೆಯಲಿದೆ. ಟೋಕಿಯೋದಲ್ಲಿ 1964 ರಲ್ಲಿ ನಡೆದ ಮೊದಲ ಒಲಿಪಿಕ್ಸ್
ಸಮಯದಲ್ಲಿ ಈ ಕ್ರೀಡಾಂಗಣ ನಿರ್ಮಾಣ ಮಾಡಲಾಗಿತ್ತು.
ಅರಿಯೇಕ್ ಅರೆನಾ
ನೂತನವಾಗಿ ನಿರ್ಮಾಣ ವಾಗಿರುವ ಅರಿಯೇಕ್ ಅರೆನಾ ಕ್ರೀಡಾಂಗಣದಲ್ಲಿ ವಾಲಿಬಾಲ್ ಮತ್ತು ಪ್ಯಾರಾ ಒಲಂಪಿಕ್ ಬ್ಯಾಸ್ಕೆಟ್ ಬಾಲ್ ಸ್ಪರ್ಧೆಗಳು ನಡೆಯಲಿದೆ . 15 ಸಾವಿರ ಜನ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ ಹೊಂದಿದೆ ಈ ಅರಿಯೆಕ್ ಅರೆನಾ.
ಆಕ್ವಾಟಿಕಾ ಸೆಂಟರ್
ಝೋನ್ ನಲ್ಲಿರುವ ಈ ಕ್ರೀಡಾಂಗಣ 15 ಸಾವಿರ ಜನರ ಆಸನ ವ್ಯವಸ್ಥೆ ಹೊಂದಿದೆ. ಈಜು ಕೊಳ , ಡೈವಿಂಗ್ ಮತ್ತು ಆರ್ಟಿಸ್ಟಿಕ್ ಸ್ವಿಮ್ಮಿಂಗ್ ಫುಲ್ ಹೊಂದಿದ್ದು ಹೊಂದಿದೆ.
ಸೀ ಫಾರೆಸ್ಟ್ ವಾಟರ್ ವೇ
ಕೃತಕ ದ್ವೀಪದಲ್ಲಿ ನಿರ್ಮಾಣವಾಗಿರುವ ಸೀ ಫಾರೆಸ್ಟ್ ವಾಟರ್ ವೇ ಬರೋಬ್ಬರಿ 24,000 ಜನ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ ಹೊಂದಿದೆ. ರೋಯಿಂಗ್ ಮತ್ತು
ಕೇನೂಯಿಂಗ್ ಸ್ಪರ್ಧೆಗಳು ಸೇರಿದಂತೆ ಇಲ್ಲಿ ಒಟ್ಟು 30 ಸ್ಪರ್ಧೆಗಳು ನಡೆಯಲಿದೆ.

ಈ ಬಾರಿಯ ಒಲಂಪಿಕ್ಸ್ ಹಲವು ಕಾರಣದಿಂದ ಭಿನ್ನ. ಜಗತ್ತು ಕುತೂಹಲ ಕಣ್ಣಿಂದ ನೋಡುತ್ತಿರುವ ಒಲಿಂಪಿಕ್ ವಿಲೇಜ್ ಸಕಲ ಸಿದ್ಧತೆ, ಹಲವು ವಿಶೇಷಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.