ಇವರ ದಾರಿಯೇ ಡಿಫರೆಂಟುದೂರ ತೀರ ಯಾನವಿಂಗಡಿಸದಸ್ಮರಣೀಯ ಜಾಗ

ಒಲಿಂಪಿಕ್ಸ್ ಅಲ್ಲಿ ಭಾಗಿಯಾಗಿರುವ ಟೋಂಗಾ ದೇಶದ ಬಗ್ಗೆ ನಿಮಗೆ ಗೊತ್ತಾ?

ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಟೋಂಗಾ (Tonga) ದೇಶದ ಧ್ವಜ ಹಿಡಿದಿದ್ದ ಯುವಕ ಎಲ್ಲರ ಗಮನ ಸೆಳೆದ. ಯಾವುದು ಈ ಟೋಂಗಾ ದೇಶ? ಏನಿದರ ವಿಶೇಷತೆ?

  • ಮಧುರಾ ಎಲ್ ಭಟ್

ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಟೋಂಗಾ (Tonga) ದೇಶದ ಧ್ವಜ ಹಿಡಿದಿದ್ದ ಯುವಕ ಎಲ್ಲರ ಗಮನ ಸೆಳೆದ.

Tonga country Friendly island Tokyo Olympic 2021

ಸದೃಢ ಮೈಕಟ್ಟು ಹೊಂದಿರುವ ಅವನು ಮೈಗೆ ಎಣ್ಣೆ ಬಳಿದುಕೊಂಡು ಹೆಜ್ಜೆ ಹಾಕಿದ. ಈ ಬಾರಿಯ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾದ. ಅವನ ಹೆಸರು ಪೀಟಾ ಟೋಫಾಟೋಫಾ. ದೇಶ ಟೋಂಗಾ. ಆ ದೇಶ ಎಲ್ಲಿದೆ, ಹೇಗಿದೆ ಗೊತ್ತಾ?

ಈ ದೇಶವು ದಕ್ಷಿಣ ಶಾಂತಸಾಗರದಲ್ಲಿನ ಒಂದು ದ್ವೀಪಗುಚ್ಛವಾಗಿದೆ. ಇದನ್ನು “ಫ್ರೆಂಡ್ಲೀ ಐಲೆಂಡ್ಸ್” (Friendly Islands) ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ.  ಓಷಿಯಾನಿಯಾದಲ್ಲಿ ನೆಲೆಗೊಂಡಿರುವ ಟೋಂಗಾ ದಕ್ಷಿಣ ಪೆಸಿಫಿಕ್ ಮಹಾಸಾಗರದ ಒಂದು ದ್ವೀಪಸಮೂಹವಾಗಿದೆ. ಇದರಲ್ಲಿ 169 ದ್ವೀಪಗಳಿದ್ದು, ಅವುಗಳಲ್ಲಿ 36 ದ್ವೀಪಗಳಲ್ಲಿ  ಜನವಸತಿಯನ್ನು ಹೊಂದಿದೆ. 

ಅದನ್ನು  ಮುಖ್ಯವಾಗಿ  ವವಾವು, ಹಾಪೈ ಮತ್ತು ಟೊಂಗಾಟಾಪು ಎಂದು ವಿಂಗಡಿಸಲಾಗಿದೆ. ಈ ದೇಶದ ಒಟ್ಟು 1, 03,197  ನಿವಾಸಿಗಳಲ್ಲಿ 70% ಕ್ಕೂ ಹೆಚ್ಚು ಜನರು ಮುಖ್ಯ ದ್ವೀಪವಾದ ಟೊಂಗಾಟಾಪುನಲ್ಲಿ (Tongatapu) ವಾಸಿಸುತ್ತಿದ್ದಾರೆ. ಅಲ್ಲದೇ ಈ ದೇಶದ ಎಲ್ಲಾ ಕೆಲಸ ಕಾರ್ಯಗಳನ್ನು ನುಕುಸಲೋಫಾ (Nuku’alofa) ಎಂಬ ಇದರ ಕೇಂದ್ರ ಕಚೇರಿ ನಿಭಾಯಿಸುತ್ತಿದೆ.

ಈ ದೇಶದ ಹವಾಮಾನದ ಬಗ್ಗೆ ತಿಳಿದುಕೊಳ್ಳುವುದಾದರೆ ಇದೊಂದು ಉಷ್ಣವಲಯದ ಮಳೆಕಾಡು ಹವಾಮಾನವನ್ನು ಹೊಂದಿರುವ ದೇಶವಾಗಿದೆ. ಏಕೆಂದರೆ ಇದೊಂದು ದ್ವೀಪದಲ್ಲಿರುವ ದೇಶವಾಗಿದ್ದರಿಂದ ಇಲ್ಲಿ  ಡಿಸೆಂಬರ್-ಏಪ್ರಿಲ್ ತಿಂಗಳಲ್ಲಿ ಬೆಚ್ಚಗಿನ ಹವಾಮಾನ ಮತ್ತು ಮೇ-ನವೆಂಬರ್ ಅಲ್ಲಿ ತಂಪಾದ ಹವಾಮಾನ ಇರುತ್ತದೆ. ಮತ್ತು ಉಳಿದ ಸಮಯದಲ್ಲಿ  ತಾಪಮಾನವು ವಿರಳವಾಗಿ ಹೆಚ್ಚಾಗಿರುತ್ತದೆ.

ನೀವುಇದನ್ನುಇಷ್ಟಪಡಬಹುದು: ಅರೇಬಿಯಾದ ಮಲೆನಾಡು ಸಲಾಲ್ಹ

Tonga Country Friendly island

ಈ ದೇಶದಲ್ಲಿ 73 ಜಾತಿಗಳನ್ನು ಹೊಂದಿರುವ ಪಕ್ಷಿ ಪ್ರಭೇದಗಳಿವೆ. ಇಲ್ಲಿ  ಹಾರುವ ಬಾವಲಿಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾರುವ ನರಿ ಬಾವಲಿಗಳನ್ನು ಗಮನಿಸಬಹುದಾಗಿದೆ.

ಒಂದೊಂದು ದೇಶದಲ್ಲಿಯೂ ಒಂದೊಂದು ಭಾಷೆಯನ್ನು ಬಳಸುವಂತೆ ಈ ದೇಶದಲ್ಲಿ ಟೋಂಗನ್ ಭಾಷೆ ಮತ್ತು ಇಂಗ್ಲಿಷ್ ಭಾಷೆಯನ್ನು ಅಧಿಕೃತವಾಗಿ ಬಳಸಲಾಗುತ್ತದೆ.

ಇನ್ನು ಈ ಟೋಂಗಾ ದೇಶದ ಜನರು  ದೈನಂದಿನ ಜೀವನವನ್ನು ಹೇಗೆ ಸಾಗಿಸುತ್ತಾರೆ ?ಎಂದು ನೋಡುವುದಾದರೆ. ಇಲ್ಲಿನ ಜನರು  ಪಾಲಿನೇಷ್ಯನ್ ಸಂಪ್ರದಾಯಗಳಿಂದ ಮತ್ತು ಕ್ರಿಶ್ಚಿಯನ್ ನಂಬಿಕೆಯಿಂದ ಹೆಚ್ಚು ಪ್ರಭಾವಿತವಾಗಿದ್ದಾರೆ.

ಕ್ರಿಶ್ಚಿಯನ್ ಧರ್ಮದ ಪದ್ಧತಿಗಳನ್ನೇ ಹೆಚ್ಚು ರೂಢಿಯಲ್ಲಿಯೂ ಇಟ್ಟುಕೊಂಡಿದ್ದಾರೆ.  ಹಾಗೂ ಇಲ್ಲಿ ಸಂಬಂಧಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆಗಳನ್ನು ನೀಡುತ್ತಾರೆ. ಅದರಲ್ಲಿಯೂ ವಲಸೆ ಜನಾಂಗದ ಜನರು ಇಲ್ಲಿದ್ದು  ಅವರೊಂದಿಗೆ ಈ ದೇಶದ ಜನರ ಸಂಬಂಧ ತುಂಬಾ ಒಳ್ಳೆಯ ರೀತಿಯಲ್ಲಿದೆ.

ಈ ಟೋಂಗಾ ದೇಶವು ಬೇರೆ ದೇಶಗಳಂತೆ ಕ್ರೀಡೆಯಲ್ಲಿಯು ತನ್ನದೇ ಸಾಧನೆ ಮಾಡಿದೆ. ರಗ್ಬಿ ಯೂನಿಯನ್ ಎಂಬುದು ಈ  ದೇಶದ ರಾಷ್ಟ್ರೀಯ ಕ್ರೀಡೆಯಾಗಿದೆ. ಹಾಗೂ ಈ ದೇಶವು ಕೆಲವು ವಿಭಿನ್ನವಾದ  ಕ್ರೀಡಾ ಸಂಪ್ರದಾಯವನ್ನು ಹೊಂದಿದ್ದು  ಇದು ಯಾವುದೇ ಒಂದು ಕ್ರೀಡಾ ಪಂದ್ಯವನ್ನು ಪ್ರಾರಂಭಿಸುವ ಮೊದಲು ಇಕಲೆ ತಾಹಿ ಯುದ್ಧ ನೃತ್ಯ ಅಥವಾ ಸಿಪಿ ಟೌ (ಕೈಲಾವ್‌ನ ಒಂದು ರೂಪ) ಪ್ರದರ್ಶಿಸುತ್ತಾರೆ.

Tonga Country

ಹೀಗೆ ಈ ಟೋಂಗಾ ದೇಶವು ದ್ವೀಪದಲ್ಲಿರುವ ದೇಶವಾದರೂ ಕ್ರೀಡೆ, ಸಂಸ್ಕೃತಿ, ಜನ ಜೀವನ ಇತ್ಯಾದಿಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button