ಮ್ಯಾಜಿಕ್ ತಾಣಗಳುವಿಂಗಡಿಸದ

ಭಾರತದ ಈ ರಾಜ್ಯಗಳಿಗೆ ಹೋಗಲು ಕೋವಿಡ್ ನೆಗೆಟಿವ್ ವರದಿ ಬೇಕಾಗಿಲ್ಲ.

ಕೊರೋನಾ ಬಂದ ಮೇಲೆ ಪ್ರಯಾಣ ಅಷ್ಟೊಂದು ಸುಲಭವಲ್ಲ. ನೀವು ವಿದೇಶ ಹಾಗೂ ಭಾರತದ ಕೆಲವು ಕಡೆ ಪ್ರಯಾಣಿಸಬೇಕಾದರೆ ಅಲ್ಲಿನ ಸರಕಾರಗಳು ಒಂದಷ್ಟು ನಿಯಮಗಳನ್ನು ವಿಧಿಸಿದೆ. ನೀವು ಅದನ್ನು ಪಾಲಿಸಬೇಕಾದ ಅನಿವಾರ್ಯತೆ ಕೂಡ ಇದೆ. ಆದರೆ ಭಾರತದ ಈ ಕೆಲವು ರಾಜ್ಯಗಳಿಗೆ ಹೋಗಲು ಕೋವಿಡ್ ನೆಗೆಟಿವ್ ವರದಿ ಬೇಕಿಲ್ಲ. ನೀವು ಹೋಗಬೇಕೆಂದಿರುವ ರಾಜ್ಯಗಳ ಹೆಸರು ಈ ಪಟ್ಟಿಯಲ್ಲಿದೆಯೇ ಎಂದು ನೋಡಿಕೊಳ್ಳಿ.

ನವ್ಯಶ್ರೀ ಶೆಟ್ಟಿ.

ಭಾರತದ ಈ ಕೆಲವು ರಾಜ್ಯಗಳು ಪ್ರಯಾಣಿಕರಿಗೆ ಸಂಪೂರ್ಣವಾಗಿ ಮುಕ್ತವಾಗಿದೆ. ಕೊರೋನಾ ಕಾಲದಲ್ಲಿ ನಿಯಮಗಳನ್ನು ಕಡಿತಗೊಳಿಸಿ. ಕೆಲವೊಂದು ರಾಜ್ಯಗಳು ಕೊರೋನಾ ನೆಗೆಟಿವ್ ರಿಪೋರ್ಟ್ ಇಲ್ಲದೇ ಪ್ರಯಾಣಿಕರಿಗೆ ಅನುಮತಿ ನೀಡಿದೆ.

ಈ ರಾಜ್ಯಗಳಿಗೆ ಹೋಗಲು ಕೋವಿಡ್ ನೆಗೆಟಿವ್ ವರದಿ ಬೇಕಾಗಿಲ್ಲ.

ಭಾರತದ 11 ರಾಜ್ಯಗಳು ಯಾವುದೇ RT-PCR ಪರೀಕ್ಷೆ ಇಲ್ಲದೇ ಕೂಡ ತನ್ನ ರಾಜ್ಯಕ್ಕೆ ಬರಲು ಅನುಮತಿ ನೀಡಿದೆ. ಕೊರೋನಾ ನೆಗೆಟಿವ್ ವರದಿ ಇಲ್ಲದೆ ತನ್ನ ರಾಜ್ಯಕ್ಕೆ ಬರಲು ಅನುಮತಿ ನೀಡಿದ ರಾಜ್ಯಗಳಿವು.

RT-PCR test

ದೆಹಲಿ (Delhi)

ರಾಷ್ಟ್ರ ರಾಜಧಾನಿ ದೆಹಲಿ ತನ್ನ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ RT-PCR ಟೆಸ್ಟ್ ಇಲ್ಲದೆ ಕೂಡ ಬರಲ ಅನುಮತಿ ನೀಡಿದೆ. ಆದರೆ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕೊರೋನಾ ಟೆಸ್ಟ್ ಸ್ಯಾಂಪಲ್ ತೆಗೆದುಕೊಳ್ಳಲಾಗುತ್ತದೆ.

ಗುಜರಾತ್(gujarath)

ಗುಜರಾತ್ , ವಡೋದರಾದಲ್ಲಿ ಪಯಣಿಸುವವರಿಗೆ ಪರೀಕ್ಷೆಯ ಅಗತ್ಯವಿಲ್ಲ. ಆದರೆ ಅಹಮದಾಬಾದ್ ಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೊರೋನಾ ರೋಗ ಲಕ್ಷಣಗಳಿದ್ದಲ್ಲಿ ಪರೀಕ್ಷೆಗೆ ಒಳಪಡಬೇಕು.

ತಮಿಳುನಾಡು(Tamilunadu)

ತಮಿಳುನಾಡಿನಲ್ಲಿ ನೀವು ಪ್ರಯಾಣಿಸ ಬೇಕಾದರೆ ಯಾವುದೇ ಟೆಸ್ಟ್ ಹಾಗೂ ಲಸಿಕೆ ಪಡೆದ ಪ್ರಮಾಣ ಪತ್ರದ ಅಗತ್ಯವಿಲ್ಲ. ನೀವು ತಮಿಳುನಾಡಿನಿಂದ ಹೊರಗಡೆ ಕೊಯಮತ್ತೂರು ವಿಮಾನ ನಿಲ್ದಾಣದಿಂದ ಪಯಣ ಬೆಳೆಸುತ್ತಿದ್ದರೆ, ಇಂಡಿಗೋ ವಿಮಾನದಲ್ಲಿ ನೆಗೆಟಿವ್ ವರದಿ ತೆಗೆದುಕೊಂಡು ಹೋಗಬೇಕಾಗಬಹುದು ಇಲ್ಲವೆಂದರೆ ಆಗಮನದ ಬಳಿಕ ವೈರಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಕರ್ನಾಟಕ (karnataka)

ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿರುವ ಕರ್ನಾಟಕದಲ್ಲಿ ಕೂಡ ಪ್ರಯಾಣಕ್ಕೆ ಹೆಚ್ಚಿನ ನಿರ್ಬಂಧವಿಲ್ಲ. ಆದರೆ ಕರ್ನಾಟಕದ ಪಕ್ಕದ ರಾಜ್ಯಗಳಾದ ಕೇರಳ , ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ನೆಗೆಟಿವ್ ವರದಿಯ ಜೊತೆಗೆ ಒಂದು ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರಬೇಕು. ಉಳಿದ ರಾಜ್ಯಗಳು ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಸಬಹುದು.

RT-PCR ಕಡ್ಡಾಯವಿರದ ಇತರ ರಾಜ್ಯಗಳು

ಆಂಧ್ರಪ್ರದೇಶ
ಮಧ್ಯಪ್ರದೇಶ
ಪಂಜಾಬ್
ಛತ್ತೀಸಗಢ
ಹರಿಯಾಣ
ಹಿಮಾಚಲ ಪ್ರದೇಶ
ತೆಲಂಗಾಣ

ನೀವು ಇದನ್ನುಇಷ್ಟಪಡಬಹುದು:ಭಾರತೀಯರಿಗೆ ಪ್ರವೇಶ ಮುಕ್ತವೆಂದ ಈ ನಾಲ್ಕು ರಾಷ್ಟ್ರಗಳು. ಆದರೆ, ನಿಯಮ ಪಾಲನೆ ಕಡ್ಡಾಯ.

 COVID-19 Test

ಒಂದು ಡೋಸ್ ಲಸಿಕೆ ಪಡೆದು ಪ್ರಯಾಣಿಸಬಹುದಾದ ರಾಜ್ಯಗಳು

ಭಾರತದ ಈ ರಾಜ್ಯಗಳಿಗೆ ಪ್ರಯಾಣಿಸುವಾಗ ನೀವು ಲಸಿಕೆ ಪಡೆದಿದ್ದರೆ ನಿಮಗೆ RT-PCR ಪರೀಕ್ಷೆಯ ಅಗತ್ಯವಿಲ್ಲ. ಆದರೆ ಕನಿಷ್ಟ ಒಂದು ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ.

ರಾಜಸ್ಥಾನ (Rajasthan)
ನಾಗಾಲ್ಯಾಂಡ್ (Nagalyand): ನೀವು ಮೊದಲ ಡೋಸ್ ಲಸಿಕೆ ಪಡೆದು 15 ದಿನ ಆಗಿದ್ದಲ್ಲಿ RT-PCR ಪರೀಕ್ಷೆಯ ಅಗತ್ಯವಿಲ್ಲ. ಆದರೆ ಅಲ್ಲಿ 7 ದಿನ ಕ್ವಾರಂಟೈನ್ ಆಗುವುದು ಕಡ್ಡಾಯ.

ಎರಡು ಡೋಸ್ ಲಸಿಕೆ ಪಡೆದವರು ಈ ರಾಜ್ಯಗಳಿಗೆ ಹೋಗಲು ನೆಗೆಟಿವ್ ವರದಿ ಕಡ್ಡಾಯವಿಲ್ಲ.

ಭಾರತದ ಈ ರಾಜ್ಯಗಳಿಗೆ ಪ್ರಯಾಣಿಸುವವರು ಎರಡು ಡೋಸ್ ಲಸಿಕೆ ಪಡೆದಿರಬೇಕು. ಲಸಿಕೆ ಪಡೆದ ಬಗ್ಗೆ ಸೂಕ್ತ ದಾಖಲೆ ಇದ್ದಲ್ಲಿ RT-PCR ಟೆಸ್ಟ್ ಕಡ್ಡಾಯವಲ್ಲ.

ಛತ್ತೀಸ್ ಗಢ
ಕೇರಳ
ಮಣಿಪುರ
ಒಡಿಶಾ
ಪಶ್ಚಿಮ ಬಂಗಾಳ
ತ್ರಿಪುರ
ಉತ್ತರಾಖಂಡ್
ಮಹಾರಾಷ್ಟ್ರ
ಮೇಘಾಲಯ
ಗೋವಾ

Covid -19 vaccine

ಗೋವಾ ಸರಕಾರ ಕೆಲವು ಸಂದರ್ಭದಲ್ಲಿ ಲಸಿಕೆ ಪಡೆದ ಪ್ರಯಾಣಿಕರಿಗೆ ಮಾತ್ರ ಪ್ರವೇಶ ಅನ್ನುವ ನಿರ್ಬಂಧವನ್ನು ಕಡಿತಗೊಳಿಸಿದೆ. ಆರೋಗ್ಯದ ತುರ್ತು ಸಂದರ್ಭದಲ್ಲಿ, ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಗೋವಾ ಮೂಲದ ಉದ್ಯೋಗಿಗಳಿಗೆ , ಕೆಲಸ ಹಾಗೂ ವೈದ್ಯಕೀಯ ಸಂದರ್ಭಕ್ಕಾಗಿ ಹೊರ ರಾಜ್ಯಕ್ಕೆ ಪ್ರಯಾಣಿ ಸುವವರಿಗೆ ನಿರ್ಬಂಧಗಳಿಂದ ವಿನಾಯಿತಿ ನೀಡಿದೆ. ಆದರೆ ಇತರ ಪ್ರಯಾಣಿಕರಿಗೆ ನೆಗೆಟಿವ್ ವರದಿ ಇಲ್ಲದಿದ್ದಲ್ಲಿ ಎರಡು ಡೋಸ್ ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರದ ದಾಖಲೆ ಸಲ್ಲಿಸುವುದು ಕಡ್ಡಾಯ ಗೊಳಿಸಿದೆ.

ನೀವು ಈ ಮೇಲಿನ ಯಾವುದಾದ್ರೂ ರಾಜ್ಯಗಳಿಗೆ ಪ್ರಯಾಣ ಬೆಳೆಸುವ ಯೋಜನೆಯಲ್ಲಿ ಇದ್ದಲ್ಲಿ ನಿಯಮಗಳನ್ನು ಪರಿಶೀಲಿಸಿ ಪಯಣ ಹೊರಡಲು
ಸಿದ್ಧರಾಗಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button