ದೂರ ತೀರ ಯಾನವಿಂಗಡಿಸದ

ಭಾರತೀಯರಿಗೆ ಪ್ರವೇಶ ಮುಕ್ತವೆಂದ ಈ ನಾಲ್ಕು ರಾಷ್ಟ್ರಗಳು. ಆದರೆ, ನಿಯಮ ಪಾಲನೆ ಕಡ್ಡಾಯ.

ಭಾರತದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣ ಸಂಖ್ಯೆಯಿಂದಾಗಿ ಹಲವು ದೇಶಗಳು ಭಾರತೀಯರಿಗೆ ಪ್ರವೇಶವನ್ನು ನಿರ್ಬಂಧಿಸಿರುವುದು ಪ್ರವಾಸ ಪ್ರಿಯರಿಗೆ ಕೊಂಚ ಬೇಸರದ ವಿಷಯವೇ ಸರಿ. ಆದರೆ ಕೆಲವು ದೇಶಗಳು ಭಾರತೀಯರಿಗೆ ಪ್ರವಾಸಕ್ಕೆ ಅನುಮತಿ ನೀಡಿದೆ. ಜೊತೆಗೆ ಕೆಲವು ನಿಯಮಗಳನ್ನು ವಿಧಿಸಿದೆ.

ಭಾರತೀಯ ಪ್ರವಾಸಿಗರಿಗೆ ಅನುಮತಿ ನೀಡಿರುವ ದೇಶಗಳು ಹಾಗೂ ನಿಯಮಗಳು ನಿಮ್ಮ ಮಾಹಿತಿಗಾಗಿ. ನಿಯಮಗಳನ್ನು ಪಾಲಿಸಿ ನೀವು ಆ ದೇಶಗಳಿಗೆ ಪ್ರವಾಸ ಹೊರಡಬಹುದು.

  • ನವ್ಯಶ್ರೀ ಶೆಟ್ಟಿ

ಕೊರೋನಾ ಎರಡನೇ ಅಲೆ ಪ್ರವಾಸ ಪ್ರಿಯರಿಗಂತೂ ಬೇಸರ ತರಿಸಿದೆ. ವಿದೇಶಿ ಪ್ರವಾಸ ಕನಸು ಕಾಣುತ್ತಿದ್ದ ಪ್ರವಾಸ ಪ್ರಿಯರ ಕನಸಿಗೆ ಮಹಾಮಾರಿ ಅಡ್ಡಿಯಾಗಿದೆ. ಹಲವು ದೇಶಗಳಲ್ಲಿ ಕೊರೋನಾ ಕಾರಣದಿಂದ ಭಾರತೀಯರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಈ ಮಧ್ಯೆ ಪ್ರವಾಸ ಪ್ರಿಯರಿಗೊಂದು ಖುಷಿ ಸುದ್ದಿ. ಜಗತ್ತಿನ ಈ 4 ದೇಶಗಳು ಭಾರತೀಯ ಪ್ರವಾಸಿಗರಿಗೆ ಅನುಮತಿ ನೀಡಿದೆ. ಕೋವಿಡ್ ಪರೀಕ್ಷೆ ಸೇರಿದಂತೆ ಕೆಲವು ನಿಯಮಗಳನ್ನು ರೂಪಿಸಿದೆ. ವಿಮಾನ ದರಗಳು ನಿಗದಿಯಾಗಿದ್ದು, ದರಗಳು ಏರಿಳಿತ ಕೂಡ ಆಗಬಹುದು.

ರಷ್ಯಾ (Russia)

ಭಾರತೀಯ ಪ್ರವಾಸಿಗರಿಗೆ ಅನುಮತಿ ನೀಡಿರುವ ದೇಶಗಳಲ್ಲಿ ರಷ್ಯಾ ಕೂಡ ಒಂದು. ನೀವು ವಿದೇಶಿ ಪ್ರವಾಸ ಹೋಗಬೇಕು ಎಂದು ಬಯಸಿದ್ದಲ್ಲಿ 30 ದಿನಗಳ ಟೂರಿಸ್ಟ್ ವೀಸಾ (Tourist visa ) ಪಡೆದುಕೊಂಡು ರಷ್ಯಾ ಪ್ರವಾಸ ಮಾಡಬಹುದು. ನೀವು ಒಬ್ಬರೇ ಹೋಗಬಹುದು. ಜೊತೆಗೆ ಇನ್ನೊಬ್ಬರನ್ನು ಕರೆದುಕೊಂಡು ಕೂಡ ಹೋಗಲು ಅನುಮತಿ ನೀಡಿದೆ.

Russia Covid-19 Second wave Guidelines for Travellers Corona negative report

ರಷ್ಯಾ ಸರ್ಕಾರವು ತನ್ನ ದೇಶಕ್ಕೆ ಬರುವ ಎಲ್ಲ ಪ್ರವಾಸಿಗರಿಗೆ ಕೊರೋನಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ರಷ್ಯಾ ದೇಶಕ್ಕೆ ಪಯಣ ಬೆಳೆಸುವವರು, ಹೊರಡುವ 3 ದಿನಗಳ ಹಿಂದೆ RT-PCR ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಕೊರೋನಾ ಪರೀಕ್ಷೆ (Covid test)ಯಲ್ಲಿ ನೆಗಟಿವ್ ವರದಿ ಬಂದರೆ ಮಾತ್ರ ನಿಮಗೆ ರಷ್ಯಾಕ್ಕೆ ಹೋಗುವ ಅವಕಾಶ.

ರಷ್ಯಾಕ್ಕೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ವಿಮಾನ ಓಡಾಟ ಇದೆ. ರಷ್ಯಾ ಹೋಗುವ ಕನಸು ಕಂಡಿರುವ ಭಾರತೀಯ ಪ್ರವಾಸ ಪ್ರಿಯರು ಈ ಸೀಮಿತ ವಿಮಾನವನ್ನೇರಿ ರಷ್ಯಾ ತಲುಪಬಹುದು .

ನೀವುಇದನ್ನುಇಷ್ಟಪಡಬಹುದು: ನೀವು ವಿಮಾನಯಾನ ಮಾಡಬಯಸುತ್ತಿದ್ದರೆ ಇಲ್ಲಿವೆ ನೀವು ತಿಳಿದುಕೊಳ್ಳಬೇಕಾದ ಕೆಲ ಸೌಲಭ್ಯಗಳು

ಏರ್ ಇಂಡಿಯಾ (Air India), ಏರೋಫ್ಲಾಟ್ (Aeroflot), ಉಜ್ಬೇಕಿಸ್ತಾನ್ ಏರ್ ವೇಸ್ (Uzbekistan Airways), ಕೆಎಲ್ಎಂ ರಾಯಲ್ ಡಚ್ (KLM royal Dutch) ಮತ್ತು ಮುಂಬೈಯ ಎಮಿರೇಟ್ಸ್ (Emirates from Mumbai) ಮತ್ತು ದೆಹಲಿಯಿಂದ ಮಾಸ್ಕೋ (Delhi to Moscow) ವಿಮಾನಗಳು ಲಭ್ಯವಿದೆ. ಈ ವಿಮಾನಗಳು 80, 000ರೂ. ವಿಮಾನ ದರವನ್ನು ನಿಗದಿ ಪಡಿಸಿದೆ .

ಟರ್ಕಿ (Turkey)

ಟರ್ಕಿ ದೇಶವು ಭಾರತೀಯರಿಗೆ ತನ್ನ ದೇಶಕ್ಕೆ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದೆ. ಟರ್ಕಿಗೆ ಪ್ರವಾಸ ಕೈಗೊಂಡವರು, ಟರ್ಕಿಗೆ ಹೋಗುವ ಮುನ್ನ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ (Institution quarantine) ನಲ್ಲಿ ಇರಬೇಕು. ಟರ್ಕಿ ಹೋಗುವ ಪಯಣಿಗರು 14ನೇ ದಿನದಂದು ಕೊರೋನ ಪರೀಕ್ಷೆ ಮಾಡಿಸಬೇಕು. ನೆಗಟಿವ್ ವರದಿ ಬಂದರೆ ಮಾತ್ರ ಕ್ವಾರಂಟೈನ್ ಅವಧಿ ಮುಕ್ತಾಯವಾಗಿ ನೀವು ಟರ್ಕಿಗೆ ಹೊರಡಬಹುದು.

ಟರ್ಕಿ ದೇಶವು 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೂಡ RT-PCR ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಹೊರಡುವ 72 ಗಂಟೆಗಳ ಮುನ್ನ ಪರೀಕ್ಷೆ ಮಾಡಿಸಿ, ನೆಗೆಟಿವ್ ವರದಿಯನ್ನು ಪಡೆದಿರಬೇಕು.

Turkey Covid-19 Second wave Guidelines for Travellers Corona negative report

ಟರ್ಕಿ ದೇಶಕ್ಕೆ ಪ್ರವಾಸ ಕೈಗೊಳ್ಳುವ ಭಾರತೀಯ ಪ್ರವಾಸಿಗರು ಏರ್ ಇಂಡಿಯಾ, ಮುಂಬೈ ಎಮಿರೇಟ್ಸ್ ಮತ್ತು ಕೆಎಲ್ಎಂ ರಾಯಲ್ ಡಚ್ ನಿಂದ ಇಸ್ತಾಂಬುಲ್ (Istanbul) ಗೆ ವಿಮಾನಗಳು ಲಭ್ಯವಿದೆ. ವಿಮಾನ ದರ 72,00 ರೂಪಾಯಿ.

ಈಜಿಪ್ಟ್ (Egypt)

ಭಾರತವು ಸೇರಿದಂತೆ ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ಸಿಕ್ಕಿರುವ ರಾಷ್ಟ್ರಗಳ ಪ್ರಯಾಣಿಕರು, ಈಜಿಪ್ಟ್ ದೇಶಕ್ಕೆ ಪ್ರವಾಸ ಮಾಡುವ ಯೋಜನೆ ಹಾಕಿಕೊಂಡಿದ್ದರೆ ಅವರು 15 ನಿಮಿಷಗಳಲ್ಲಿ ಫಲಿತಾಂಶ ನೀಡುವ ಕೊರೋನಾ ಪರೀಕ್ಷೆ(Rapid test) ಕಡ್ಡಾಯವಾಗಿ ನಡೆಸಿರಬೇಕು. ಒಂದು ವೇಳೆ ಸೋಂಕು ದೃಢಪಟ್ಟಲ್ಲಿ 15 ದಿನಗಳ ಕಾಲ ಐಸೋಲೇಷನ್ ಗೆ ಒಳಪಡಿಸಲಾಗುತ್ತದೆ.

Egypt Covid-19 Second wave Guidelines for Travellers Corona negative report

ಮುಂಬೈನಿಂದ ಕಾರಿಯೋ (Cario)ಗೆ ಇರುವ ಏರ್ ಇಂಡಿಯಾ, ಎಥಿಯಾಡ್ ಏರ್ವೇಸ್ (Ethiad Airways), ಈಜಿಪ್ಟ್ ಏರ್ (Egypt Air) ವಿಮಾನದಲ್ಲಿ ನೀವು ಈಜಿಪ್ಟ್ ಪ್ರವಾಸ ಕೈಗೊಳ್ಳಬಹುದು. ಪಯಣ ದರ 2,30,000ರೂ.

ದಕ್ಷಿಣ ಆಫ್ರಿಕಾ (South africa)

ದಕ್ಷಿಣ ಆಫ್ರಿಕಾ ಜನರು ಭಾರತದಿಂದ ಬರುವ ಜನರಿಗೆ ನಿರ್ಬಂಧ ವಿಧಿಸಬೇಕು ಅನ್ನುವ ಮನವಿಯನ್ನು ಅಲ್ಲಿನ ಸರಕಾರಕ್ಕೆ ಸಲ್ಲಿಸಿದ್ದರು. ಆದರೆ ದಕ್ಷಿಣ ಆಫ್ರಿಕಾದ ಸರ್ಕಾರ ಪೂರ್ಣ ಪ್ರಮಾಣದ ನಿರ್ಬಂಧ ಹೇರದೆ ಕೆಲವು ನಿಯಮಗಳೊಂದಿಗೆ ಪ್ರವಾಸಕ್ಕೆ ಅನುಮತಿ ನೀಡಿದೆ. ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಮೂರು ದಿನಗಳ ಹಿಂದೆ ನಡೆಸಿದ RT-PCR ನೆಗೆಟಿವ್ ವರದಿಯ ರಿಪೋರ್ಟ್ ನೀಡುವುದು ಕಡ್ಡಾಯ.

South Africa Covid-19 Second wave Guidelines for Travellers Corona negative report

ದಕ್ಷಿಣ ಆಫ್ರಿಕಾಗೆ ಹೋದ ನಂತರ ನಿಮಗೆ ಅಲ್ಲಿ ಯಾವುದಾದರೂ ಕೊರೋನಾ ಲಕ್ಷಣಗಳು ಇದೆಯೇ ಎನ್ನುವುದರ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ನಿಮಗೆ ಯಾವುದಾದರೂ ಲಕ್ಷಣಗಳು ಕಂಡು ಬಂದಲ್ಲಿ, ನಿಮಗೆ ಪುನಃ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಆ ವೇಳೆ ನಿಮಗೆ ಸೋಂಕು ದೃಢ ಪಟ್ಟರೆ 10 ದಿನಗಳ ಕಾಲ ಐಸೋಲೇಷನ್ (isolation) ಮಾಡಲಾಗುತ್ತದೆ. ಈ ಸಂಪೂರ್ಣ ಖರ್ಚನ್ನು ಪ್ರವಾಸಿಗರೇ ಭರಿಸಬೇಕು.

ಪ್ರವಾಸಿಗರು ಸಂಬಂಧ ಪಟ್ಟ ಇಲಾಖೆಗೆ ಸರಿಯಾದ ದಾಖಲೆ ಸಲ್ಲಿಸಬೇಕು. ದಕ್ಷಿಣ ಆಫ್ರಿಕಾ ಈಗಾಗಲೇ ಗುಂಪು ಕೂಡುವಿಕೆ, ನೈಟ್ ಕ್ಲಬ್ ಗೆ ನಿರ್ಬಂಧ ವಿಧಿಸಿದೆ. ಪ್ರವಾಸಿಗರು ಕೂಡ ಈ ನಿಯಮ ಪಾಲಿಸಬೇಕು.

ಮುಂಬೈನಿಂದ ಜಾನ್ಸನ್ ಬರ್ಗ್ (Johannesburg) ಹೋಗಲು ಎಥಿಯಾಡ್ ಏರ್ವೇಸ್ ಮತ್ತು ಕೆಎಲ್ಎನ್ ರಾಯಲ್ ಡಚ್ ವಿಮಾನ ಲಭ್ಯವಿದೆ. ಪಯಣ ದರ 1,32,000ರೂ.

ಬಹುತೇಕ ದೇಶಗಳು ಭಾರತೀಯರಿಗೆ ಪ್ರವಾಸ ನಿರ್ಬಂಧ ವಿಧಿಸಿರುವ ಬೆನ್ನಲ್ಲೇ ರಷ್ಯಾ , ಟರ್ಕಿ, ಈಜಿಪ್ಟ್, ಸೌತ್ ಆಫ್ರಿಕಾ ದೇಶಗಳು ಭಾರತೀಯರಿಗೆ ಪ್ರವಾಸಕ್ಕೆ ಅನುಮತಿ ನೀಡಿದೆ . ವಿದೇಶಕ್ಕೆ ಪ್ರವಾಸ ಹೋಗಬೇಕು ಅನ್ನುವ ಆಸೆ ಹೊಂದಿರುವ ಪ್ರವಾಸಿ ಪ್ರಿಯರಿಗೆ ಇದೊಂದು ಖುಷಿ ವಿಷಯ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button