ದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದ

ಜಮ್ಮು ಕಾಶ್ಮೀರ ನೋಡಬಹುದಾದ ತಾಣಗಳು

ಜಮ್ಮು ಕಾಶ್ಮೀರ(Jammu Kashmir)ಪ್ರವಾಸಿಗರ ಪಾಲಿನ ಭೂಲೋಕದ ಸ್ವರ್ಗ(Heaven) . ಕಣಿವೆ ರಾಜ್ಯ.  ಶ್ರೀನಗರವು 14 ನೇ ಶತಮಾನದವರೆಗೆ ಮೌರ್ಯ(Mourya)ಸಾಮ್ರಾಜ್ಯದಿಂದ ಆಳಲ್ಪಟ್ಟಿತು ಮತ್ತು ಕಾಶ್ಮೀರದ ಕಣಿವೆಗೆ ಬೌದ್ಧಧರ್ಮವನ್ನು(Buddhism )ಪರಿಚಯಿಸಿದ ಚಕ್ರವರ್ತಿ ಅಶೋಕ(Ashok).

ಮೊದಲ ಶತಮಾನದಲ್ಲಿ ಪಾಕಿಸ್ತಾನ (Pakistan)ಮತ್ತು ಅಫ್ಘಾನಿಸ್ತಾನದಲ್ಲಿ(Afghanistan )ತಮ್ಮ ಭದ್ರಕೋಟೆಯಿಂದ ಈ ಸ್ಥಳವನ್ನು ಆಳಿದ ಕುಶಾನರು ಈ ಪ್ರದೇಶವನ್ನು ನಿಯಂತ್ರಿಸಿದರು ಎಂದು ನಂಬಲಾಗಿದೆ.

ಉಜ್ಜಯಿನಿಯ(Ujjain )ರಾಜ ವಿಕ್ರಮಾದಿತ್ಯ (Vikramaditya)ಕೂಡ 6 ನೇ ಶತಮಾನದಲ್ಲಿ ಹನ್ಸ್ ಎಂಬ ಅಲೆಮಾರಿ ಬುಡಕಟ್ಟಿಗೆ ನಿಯಂತ್ರಣದ ಆಳ್ವಿಕೆಯನ್ನು ವರ್ಗಾಯಿಸುವ ಮೊದಲು ಈ ಸ್ಥಳವನ್ನು ಆಳಿದನು ಎನ್ನುತ್ತದೆ ಇತಿಹಾಸ. ಇಲ್ಲಿ ನೋಡಬಹುದಾದ ತಾಣಗಳು.

ಶ್ರೀನಗರ(Srinagar )

ಶ್ರೀನಗರವು(Srinagar )ಅಪೂರ್ವವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಶ್ರೀನಗರದ ಸ್ಥಾಯಿ ದೋಣಿಗಳು ಮತ್ತು ಗೊಂಡೊಲಾ(Gondola) ಮಾದರಿಯ ರೋನೋಟ್‌ಗಳು ಹೆಚ್ಚು ಜನಪ್ರಿಯವಾಗಿದೆ.

ಪ್ರಶಾಂತವಾದ ದಾಲ್‌(Daal) ಸರೋವರವು ಶ್ರೀನಗರದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. ನವ ಜೋಡಿಗಳ ಹನಿಮೂನ್‌ಗೂ ಇದು ಬೆಸ್ಟ್. ಇಲ್ಲಿ ತೇಲುವ ತರಕಾರಿ ಮಾರುಕಟ್ಟೆಗಳನ್ನು ನೀವು ನೋಡಬಹುದು.

ಶ್ರೀನಗರದಲ್ಲಿ ಏಷ್ಯಾದ ಅತಿದೊಡ್ಡ ಟುಲಿಪ್‌ (,Tulip)ಉದ್ಯಾನಕ್ಕೆ ನೆಲೆಯಾಗಿದೆ. ಅಷ್ಟೇ ಅಲ್ಲ, ಮೊಘಲ್‌(Moghal) ಯುಗದ ಉದ್ಯಾನಗಳು ಇಲ್ಲಿವೆ.

shrinagar

ಅಮರನಾಥ(Amarnath)

ಅಮರನಾಥ (Amarnath)ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಅಮರನಾಥ ಗುಹಾಲಯವು(Amaranth Cave)ಒಂದು. ಶಿವನ ಆರಾಧಕರಿಗೆ ಇದೊಂದು ತೀರ್ಥಯಾತ್ರೆಯಾಗಿದೆ.

ಅಮರನಾಥದ ಗುಹೆಯಲ್ಲಿ ನೈಸರ್ಗಿಕ ಮಂಜುಗಡ್ಡೆಯ ಶಿವಲಿಂಗವನ್ನು (Shivalinga)ನೀವು ದರ್ಶಿಸಿಕೊಳ್ಳಬಹುದು.
‘ಅಮರನಾಥ ಯಾತ್ರೆ’ ಎಂಬ ಹೆಸರಿನಿಂದ ಹೆಚ್ಚು ಜನಪ್ರಿಯವಾಗಿರುವ ಈ ಯಾತ್ರೆಗೆ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೆ, ವಿದೇಶಗಳಿಂದಲೂ ಭಕ್ತರ ದಂಡು ಇಲ್ಲಿಗೆ ಆಗಮಿಸುತ್ತದೆ.

ಸ್ಥಳ ಪುರಾಣದ ಪ್ರಕಾರ, ಶಿವ(Shiva) ಮತ್ತು ಪಾರ್ವತಿ(Parvati) ಇಬ್ಬರು ಸೃಷ್ಟಿ ನಿಯಮದ ಬಗ್ಗೆ ರಹಸ್ಯವಾಗಿ ಮಾತನಾಡಿಕೊಂಡ ಪವಿತ್ರ ಸ್ಥಳ.

Amaranath

ಗುಲ್ಮಾರ್ಗ್ ( Gulmarg)

ಗುಲ್ಮಾರ್ಗ್ ಜಮ್ಮು ಕಾಶ್ಮೀರದ ಪಿರ್ ಪಂಜಾಲ್ ವಲಯದಲ್ಲಿರುವ ಜನಪ್ರಿಯ ಸ್ಕೀಯಿಂಗ್ ತಾಣವಾಗಿದ್ದು, ಹೂವುಗಳ ಹುಲ್ಲುಗಾವಲುಗಳು, ಆಳವಾದ ಕಂದರಗಳು, ನಿತ್ಯಹರಿದ್ವರ್ಣ ಕಾಡುಗಳು, ಕಣಿವೆಗಳಿಂದ ಆವೃತವಾಗಿದೆ.

ಗುಲ್ಮಾರ್ಗ್’ನಲ್ಲಿ ಗೊಂಡೊಲಾ ರೈಡ್ ವರ್ಲ್ಡ್ ಫೇಮಸ್ ಆಗಿದ್ದು, ಇದು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಗೊಂಡೊಲಾ ರೈಡ್ ಹೊಂದಿದೆ.

Gulmargh

ನೀವು ಇದನ್ನು ಓದಬಹುದು :ಕೊಡಗು ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ದೇಶದ ಆಕರ್ಷಕ, ಐಷಾರಾಮಿ ಗಿರಿಧಾಮಗಳಲ್ಲಿ ಒಂದಾದ ಗುಲ್ಮಾರ್ಗ್‌ಗೂ ಪೌರಾಣಿಕ ಇತಿಹಾಸವಿದೆ. ಈ ಸ್ಥಳಕ್ಕೆ 16 ನೇ ಶತಮಾನದಲ್ಲಿ ಸುಲ್ತಾನ್ ಯೂಸುಫ್ ಷಾ ಅವರಿಂದ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಮೊದಲು ಈ ಸ್ಥಳವನ್ನು ‘ಗೌರಿಮಾರ್ಗ್’ ಎಂದು ಕರೆಯಲಾಗುತ್ತಿತ್ತು.

ನುಬ್ರಾ ಕಣಿವೆ (Nubra Valley)

ಲಡಾಖ್‌ನ(Ladakh) ನುಬ್ರಾ ಕಣಿವೆ ಒಂದು ಮನೋಹರವಾದ ಕಣಿವೆಯಾಗಿದೆ. ಇದು ಹಿಮದಿಂದ ಆವೃತವಾದ ಪರ್ವತಗಳು, ಸಿಂಧೂ ನದಿ(Sindhu River) ಮತ್ತು ಮರಳಿನ ದಿಬ್ಬಗಳಿಂದ ತುಂಬಿದೆ.

ಕಣಿವೆಯು ಕಣ್ಮನ ಸೆಳೆಯುವ ಅದ್ಭುತ ದೃಶ್ಯಾವಳಿಗಳಿಗೆ ಜನಪ್ರಿಯವಾಗಿದೆ. ಲಡಾಖ್‌ನ ಅತ್ಯಂತ ಸುಂದರ ಪ್ರವಾಸಿ ಆಕರ್ಷಣೆಗಳಲ್ಲಿ ನುಬ್ರಾ ಕಣಿವೆ ಕೂಡ ಒಂದಾಗಿದೆ.

Nubra Valley


ಲೋಲಾಬ್ (Lolab)

ಶ್ರೀನಗರದಿ೦ದ ಮೂರು ಘ೦ಟೆಗಳ ಅವಧಿಯ ಪ್ರಯಾಣವನ್ನು ಕೈಗೊ೦ಡಲ್ಲಿ, ಕಾನನ ಪ್ರದೇಶಗಳು, ಹಸಿರು ಹುಲ್ಲುಗಾವಲುಗಳು, ಭತ್ತದ ಗದ್ದೆಗಳು, ಹಾಗೂ ಜೊತೆಗೆ ತಗಡಿನ ಛಾವಣಿಗಳುಳ್ಳ ಮರದ ಮನೆಗಳಿ೦ದ ರೂಪುಗೊ೦ಡಿರುವ ಅ೦ಡಾಕೃತಿಯ ಕಣಿವೆಯ ನಿಬ್ಬೆರಗಾಗಿಸುವ೦ತಹ ತಾಣವನ್ನು ನೀವು ತಲುಪಿರುತ್ತೀರಿ.

ಇವುಗಳನ್ನೂ ಹೊರತುಪಡಿಸಿ, ಪೀಚ್, ಸೇಬು, ಚೆರ್ರಿ, ಮತ್ತು ಆಪ್ರಿಕಾಟ್ ಹಣ್ಣುಗಳ೦ತಹ ವಿವಿಧ ಸು೦ದರವಾದ ಹಣ್ಣುಗಳ ತೋಟಗಳೂ ಇಲ್ಲಿವೆ.

‘ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿತು’ ಎ೦ಬ ನಾಣ್ನುಡಿಯ೦ತೆ, ಈ ತಾಣವು ಪ್ರವಾಸಿಗರ ದೃಷ್ಟಿಯಿ೦ದ ಬಲುದೂರವಿದ್ದು, ಇಲ್ಲಿನ ತಾಣವೀಕ್ಷಣೆಯನ್ನು ಆಸ್ವಾದಿಸುವ ನಿಟ್ಟಿನಲ್ಲಿ ಮತ್ತಷ್ಟು ಸ್ವಾತ೦ತ್ರ್ಯವನ್ನು ನಿಮಗೆ ಈ ತಾಣವು ಕೊಡಮಾಡುತ್ತದೆ.

Lolab

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button