ತುಂಬಿದ ಮನೆದೂರ ತೀರ ಯಾನನಡಿಗೆ ನಮ್ಮ ಖುಷಿಗೆವಿಂಗಡಿಸದ

ಬಿಹಾರದಲ್ಲಿ ನೋಡಬಹುದಾದ ತಾಣಗಳು

ಬಿಹಾರ(Bihar) ಭಾರತದಲ್ಲಿ(India) ಐತಿಹಾಸಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ರಾಜ್ಯ. ಪ್ರಾಚೀನ ಭಾರತೀಯ ಸಾಮ್ರಾಜ್ಯಗಳ ಸ್ಥಾನವಾಗಿ ಹಿರಿಮೆ ಗರಿಮೆಗಳಿವೆ. ಗತ ಇತಿಹಾಸದ ಅಪೂರ್ವ ಕುರುಹುಗಳನ್ನು ಈಗಲೂ ಇಲ್ಲಿ ನೋಡಬಹುದು.

ನಳಂದ (Nalanda)

ವಿಶ್ವದ ಅತ್ಯಂತ ಹಳೆಯ ವಸತಿ ವಿಶ್ವವಿದ್ಯಾಲಯ(Oldest residential university). ಪ್ರಸ್ತುತ ನಳಂದದ(Nalanda) ಬಹುತೇಕ ಭಾಗಗಳು ಅವಶೇಷಗಳಾಗಿದ್ದರೂ ಅದರ ಪ್ರತಿಯೊಂದು ಭಾಗವನ್ನು ವೀಕ್ಷಿಸಲು ಯೋಗ್ಯವಾಗಿದೆ.

Best places to visit in Bihar Nalanda

ಪಾಲ(Pala) ಮತ್ತು ಗುಪ್ತರ (Gupta) ಕಾಲದ ಬಗ್ಗೆ ತಿಳಿದುಕೊಳ್ಳುವುದಕ್ಕೂ ಇದು ಮಹತ್ವದ ತಾಣ. ಪ್ರಸಿದ್ಧ ಜೈನ ತೀರ್ಥಂಕರ ಮಹಾವೀರರು(Mahavir) 14 ಮಾನ್ಸೂನ್ ಅವಧಿಗಳನ್ನು ಇಲ್ಲಿ ಕಳೆದಿದ್ದಾಗಿ, ಗೌತಮ ಬುದ್ಧರು(Buddha) ನಳಂದದ ಮಾವಿನ ತೋಪಿನ ಬಳಿ ಉಪನ್ಯಾಸಗಳನ್ನು ನೀಡಿದ್ದಾಗಿಯೂ ಹೇಳಲಾಗುತ್ತಿದೆ.

ಗಯಾ (Gaya)

ಗಯಾ ಬಹಳ ಪ್ರಮುಖ ತಾಣ. ಬೌಧ ಯಾತ್ರಾ ಸ್ಥಳ. ಮಹಾಬೋಧಿ(Mahabodhi Temple) ದೇವಾಲಯಕ್ಕೆ ಹೆಸರಾಗಿದೆ. ಇಲ್ಲಿನ ಬೋಧಿ ವೃಕ್ಷದ ಕೆಳಗೆ ಗೌತಮ ಬುದ್ಧರು(Gautam Buddha) ಜ್ಞಾನೋದಯವನ್ನು ಪಡೆದಿದ್ದರು.

Best places to visit in Bihar Gaya

ಇದು ದೂರದೂರುಗಳಿಂದ ಬರುವ ಲಕ್ಷಾಂತರ ಪ್ರವಾಸಿಗರನ್ನು, ಭಕ್ತರನ್ನು ಸೆಳೆಯುವ ತಾಣ. ಬೋಧ್ ಗಯಾದ ಹೆಸರು ಯುನೆಸ್ಕೋ ಪಾರಂಪರಿಕ ತಾಣದ (World Heritage Site)ಪಟ್ಟಿಯಲ್ಲೂ ಇದೆ.

ವಿಕ್ರಮಶಿಲಾ (Vikramashila)

ಬಿಹಾರದ ವಿಕ್ರಮಶಿಲಾ ಅತ್ಯಂತ ಜನಪ್ರಿಯವಾದ ಸ್ಮಾರಕ, ನಳಂದ ವಿಶ್ವವಿದ್ಯಾಲಯದಂತೆ(Nalanda University) ಇದು ಕೂಡ ಕಲಿಕೆಯ ಕೇಂದ್ರವಾಗಿತ್ತು. ಇದೊಂದು ತಾಂತ್ರಿಕ ಬೌದ್ಧಧರ್ಮದ ಕೇಂದ್ರ ಕೂಡ ಹೌದು.

Best places to visit in Bihar Vikramashila

ಈ ಸುಂದರವಾದ ಸ್ಮಾರಕವು ಸೂಕ್ಷ್ಮವಾಗಿ(decorative attractions) ಕೆತ್ತನೆ ಮಾಡಿರುವ ಸ್ತಂಭಗಳು, ಟೆರಾಕೋಟಾ ಫಲಕಗಳಂತಹ ಅಲಂಕಾರಿಕ ಆಕರ್ಷಣೆಗಳನ್ನು ನೀವು ವೀಕ್ಷಿಸಬಹುದು. ಪಾಲ(Pala) ಸಾಮ್ರಾಜ್ಯದ ಅವಧಿಯಲ್ಲಿ ಭಾರತದಲ್ಲಿ ಕಲಿಕೆಯ ಎರಡು ಅತಿ ಮುಖ್ಯ ಕೇಂದ್ರಗಳಲ್ಲಿ ಒಂದಾಗಿತ್ತು.

ನೀವು ಇದನ್ನು ಓದಬಹುದು :ಗುಜರಾತಿನಲ್ಲಿ ನೋಡಬಹುದಾದ ತಾಣಗಳು

ರೋಹ್ತಾಗಢ್ ಕೋಟೆ (Rohtasgarh Fort)

ಭಾರತದ ಅತ್ಯಂತ ಪುರಾತನ ಕೋಟೆಗಳಲ್ಲಿ ರೋಹ್ತಾಗಢ್ ಕೋಟೆಯು ಒಂದಾಗಿದೆ. ಇದು ಬಿಹಾರದ ರೋಹ್ತಾಸ್(Rohats) ಎಂಬ ಸಣ್ಣ ಪಟ್ಟಣದಲ್ಲಿ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ.

Best places to visit in Bihar Rohtasgarh Fort

ಕೋಟೆಯ ಸಮೀಪದಲ್ಲಿ ಹಲವಾರು ಪ್ರೇಕ್ಷಣೀಯ ತಾಣಗಳಿವೆ. ಅವುಗಳಲ್ಲಿ ಗಣೇಶ್ ದೇವಾಲಯ(Ganesh Temple), ರೋಹ್ತಾಸನ್ ದೇವಸ್ಥಾನ, ಐನಾ ಮಹಲ್ ಸೇರಿದಂತೆ ಇನ್ನು ಅನೇಕ ಆಕರ್ಷಕ ತಾಣಗಳಿವೆ .

ವಿಶ್ವ ಶಾಂತಿ ಸ್ತೂಪ, ರಾಜಗೀರ್ (Vishwa Shanti Stupa, Rajgir)

ವಿಶ್ವ ಶಾಂತಿ ಸ್ತೂಪವನ್ನು ವಿಶ್ವ ಶಾಂತಿ ಪಗೋಡಾ(World Peace Pagoda) ಎಂದು ಕರೆಯಲಾಗುತ್ತದೆ, ಇದು ರಾಜಗೀರ್ನಲ್ಲಿದೆ(Rajgir)

ಇದು ಭಾರತದಲ್ಲಿ ನಿರ್ಮಿಸಲಾದ 7 ಶಾಂತಿ ಪಗೋಡಗಳಲ್ಲಿ (Peace pagodas) ಒಂದಾಗಿದೆ ಮತ್ತು ಇದು ನಿಜವಾಗಿಯೂ ಜಪಾನೀಸ್ ಶೈಲಿಯ ವಾಸ್ತುಶಿಲ್ಪದ ಉದಾಹರಣೆಯಾಗಿದೆ.

Vishwa Shanti Stupa, Rajgir

ಪಗೋಡಾವನ್ನು 1969 ರಲ್ಲಿ ನಿರ್ಮಿಸಲಾಯಿತು ಮತ್ತು ಬುದ್ಧನ (Buddha) ನಾಲ್ಕು ಪ್ರತಿಮೆಗಳನ್ನು ಹೊಂದಿದೆ, ಇದು ಬುದ್ಧನ ಜೀವನದ ನಾಲ್ಕು ಪ್ರಮುಖ ಹಂತಗಳನ್ನು ಪ್ರತಿನಿಧಿಸುತ್ತದೆ – ಜನನ, ಜ್ಞಾನೋದಯ, ಬೋಧನೆ ಮತ್ತು ಮರಣ. ಭೇಟಿ ನೀಡಲೇಬೇಕಾದದ್ದು.

ಸೋನೆಪುರ್ ಮೇಳ (The Sonepur Mela)

ಬಿಹಾರದ ವಾರ್ಷಿಕ ಸೋನೆಪುರ್ ಮೇಳವು(Sonepur Mela) ಆಧ್ಯಾತ್ಮಿಕತೆ, ಪ್ರಾಣಿ ವ್ಯಾಪಾರ ಮತ್ತು ವಿನೋದವನ್ನು ಸಂಯೋಜಿಸುವ ರೋಮಾಂಚಕ ಗ್ರಾಮೀಣ ಮೇಳವಾಗಿದೆ.

ಬೀದಿ ಮಾಂತ್ರಿಕರು, ಧಾರ್ಮಿಕ ಗುರುಗಳು ಮತ್ತು ತಂತ್ರಿಗಳು, ಯಾತ್ರಿಕರು, ತಿಂಡಿ ಮಳಿಗೆಗಳು, ಕರಕುಶಲ(Handicrafts) ವಸ್ತುಗಳು, ಸವಾರಿಗಳು, ಸರ್ಕಸ್ ಕಲಾವಿದರು, ಮಾರ್ಷಲ್ ಕಲಾವಿದರು ಮತ್ತು ನೃತ್ಯಗಾರರು ಎಲ್ಲರೂ ಕಾರ್ನೀವಲ್ ಅನ್ನು ರಚಿಸುತ್ತಾರೆ.

Sonepur Mela

ಇದು ಏಷ್ಯಾದಾದ್ಯಂತ (Asia)ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ನವೆಂಬರ್(November) ಮತ್ತು ಡಿಸೆಂಬರ್(Deecember) ತಿಂಗಳುಗಳಲ್ಲಿ ನಡೆಯುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button