ತುಂಬಿದ ಮನೆದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆಸೂಪರ್ ಗ್ಯಾಂಗು

ಮಧ್ಯಪ್ರದೇಶದಲ್ಲಿ ನೋಡಬಹುದಾದ ತಾಣಗಳು

ವಾಸ್ತುಶಿಲ್ಪ, ರಾಷ್ಟ್ರೀಯ ಉದ್ಯಾನವನಗಳಿಂದ (National Park)ಮಧ್ಯಪ್ರದೇಶ (Madhya Pradesh) ಭಾರತದಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಇಲ್ಲಿನ ಕೆಲ ಪ್ರಸಿದ್ಧ ತಾಣಗಳ ಮಾಹಿತಿ ಇಲ್ಲಿದೆ.

ರ್ಚಾ (Orchha)

ಬೆಟ್ವಾ ನದಿ(Betwa) ದಡದಲ್ಲಿದೆ ಈ ಸುಂದರ ಪಟ್ಟಣ. 1501ರಲ್ಲಿ ಅಂಬರ್ನ ರಾಜ ರುದ್ರ ಪ್ರತಾಪ್ ಸಿಂಗ್(Pratap Singh) ಅವರು ಸ್ಥಾಪಿಸಿದ ಪಟ್ಟಣವಿದು.

Places to visit in Madhya Pradesh

ಟಿಕಮ್ಗಡ್ನಿಂದ (Tikamgarh)ಸುಮಾರು 80 ಕಿಮೀ ಮತ್ತು ಉತ್ತರ ಪ್ರದೇಶದ(Uttar Pardesh) ಝಾನ್ಸಿಯಿಂದ(Jhansi) ಸುಮಾರು 15 ಕಿಮೀ ದೂರದಲ್ಲಿರುವ ಈ ಪಟ್ಟಣವಿದೆ. ಹೀಗಾಗಿ, ಒಂದೊಮ್ಮೆ ಮಧ್ಯಪ್ರದೇಶದ ಪ್ರವಾಸ ಮಾಡುವ ಪ್ಲ್ಯಾನ್ನಲ್ಲಿ ನೀವಿದ್ದರೆ ಇಲ್ಲಿಗೊಮ್ಮೆ ಭೇಟಿ ನೀಡಬಹುದು.

ಖಜುರಾಹೊ ಸ್ಮಾರಕಗಳು (Khajuraho Group of Monuments)

ಭಾರತದ ಮಧ್ಯಪ್ರದೇಶದ ಚತಾರ್ಪುರ್(Chhatarpur) ಜಿಲ್ಲೆಯಲ್ಲಿರುವ ಖಜುರಾಹೊ ಸ್ಮಾರಕಗಳು ಭಾರತದ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಮಧ್ಯಯುಗ ಭಾರತದ ಹಿಂದೂ ಮತ್ತು ಜೈನ ದೇವಸ್ಥಾನಗಳನ್ನು(Hindu and Jain temples)ಹೊಂದಿದೆ.

Places to visit in Madhya Pradesh

ಖಜುರಾಹೊ ಸ್ಮಾರಕಗಳು ಯುನೆಸ್ಕೋ (UNESCO)ಪಟ್ಟಿಯಲ್ಲಿ ಸೇರಿದೆ. ಅಲ್ಲದೆ ಭಾರತದ ಏಳು ಅಚ್ಚರಿಗಳಲ್ಲಿ ಒಂದು.


ಸಾಂಚಿಯ ಬೌದ್ಧ ಸ್ಮಾರಕಗಳು (Sanchi Stupa)

ಸಾಂಚಿಯ ಬೌದ್ಧ ಸ್ಮಾರಕಗಳು ಭಾರತದ ಮಧ್ಯ ಪ್ರದೇಶ ರಾಜ್ಯದ ರಾಯ್ಸೇನ್ (Raisen)ಜಿಲ್ಲೆಯಲ್ಲಿವೆ. ಭೋಪಾಲದಿಂದ(Bhopal) 46 ಕಿ.ಮೀ. ದೂರದಲ್ಲಿರುವ ಸಾಂಚಿ ಗ್ರಾಮದಲ್ಲಿ ಹಲವು ಬೌದ್ಧ ಸ್ಮಾರಕಗಳಿದ್ದು ಇವುಗಳ ನಿರ್ಮಾಣಕಾಲವು ಕ್ರಿ.ಪೂ.

Places to visit in Madhya Pradesh

೩ನೆಯ ಶತಮಾನದಿಂದ(3rd century) ಕ್ರಿ.ಶ. ೧೨ನೆಯ ಶತನಮಾನದವರೆಗೆ. ಇಲ್ಲಿನ ಸ್ತೂಪಗಳಿಗೆ ಶಿಲಾತೋರಣಗಳಿದ್ದು ಅವು ಪ್ರೇಮ, ಶಾಂತಿ, ವಿಶ್ವಾಸ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತವೆ.

ಸಾಂಚಿಯ ಮಹಾಸ್ತೂಪವನ್ನು ಅಶೋಕ ಚಕ್ರವರ್ತಿಯು ನಿರ್ಮಿಸಿದನು. ‘ಗ್ರೇಟ್ ಸ್ತೂಪ'(Great Stupa) ಸಾಂಚಿಯಲ್ಲಿ ಪಾಚೀನಕಾಲದಲ್ಲಿ ಕಟ್ಟಲಾಗಿದೆ.ಚಕ್ರವರ್ತಿ ಅಶೋಕ(Ashoka) ಅವರು 3 ನೇ ಶತಮಾನದಲ್ಲಿ ಇದನ್ನು ಕಟ್ಟಿಸಿದರು.ಇದು UNESCO ವಿಶ್ವ ಪರಂಪರೆಯ ತಾಣ.

ಭೀಮೇಟ್ಕಾ ರಾಕ್ ಆಶ್ರಯಗಳು (Bhimbetka rock shelters)

ಭಿಂಬೆಟ್ಕಾ ಶಿಲಾ ಆಶ್ರಯಗಳು ಮಧ್ಯ ಭಾರತದಲ್ಲಿನ ಪುರಾತತ್ತ್ವ ಶಾಸ್ತ್ರದ(Archaeological) ತಾಣವಾಗಿದ್ದು, ಇದು ಪ್ರಾಚೀನ ಶಿಲಾಯುಗ ಮತ್ತು ಮಧ್ಯಶಿಲಾಯುಗದ ಅವಧಿಗಳು (Paleolithic and Mesolithic periods)ಮತ್ತು ಐತಿಹಾಸಿಕ ಅವಧಿಯನ್ನು ವ್ಯಾಪಿಸಿದೆ.

Places to visit in Madhya Pradesh

ಇದು ಭಾರತದಲ್ಲಿ ಮಾನವ ಜೀವನದ ಆರಂಭಿಕ ಕುರುಹುಗಳನ್ನು ಪ್ರದರ್ಶಿಸುತ್ತದೆ ಮತ್ತು ಅಚೆಲಿಯನ್(Acheulian) ಕಾಲದಲ್ಲಿ ಶಿಲಾಯುಗವು ಈ ಸ್ಥಳದಲ್ಲಿ ಪ್ರಾರಂಭವಾಯಿತು. ಇದು UNESCO ವಿಶ್ವ ಪರಂಪರೆಯ ತಾಣ.

ಅಮರ್ಕಂತಕ್ (Amarkantak)

ಮಧ್ಯಪ್ರದೇಶದ ಸುಂದರ ತಾಣಗಳಲ್ಲಿ ಅಮರ್ಕಂತಕ್ ಕೂಡಾ ಒಂದು. ಅನುಪ್ಪುರ್ನಲ್ಲಿರುವ (Anuppur), ಅಮರ್ಕಂತಕ್ ವಿಶಿಷ್ಟವಾದ ನೈಸರ್ಗಿಕ ಪರಂಪರೆಯ ಪ್ರದೇಶವಾಗಿದೆ.

ಇದು ವಿಂಧ್ಯಾ ಮತ್ತು ಸಾತ್ಪುರ ಶ್ರೇಣಿಗಳ ಸಂಗಮ ಸ್ಥಳ ಕೂಡಾ ಹೌದು. ಇದು ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿರುವ ಪುರಾತನ ಪಟ್ಟಣ ಕೂಡಾ ಆಗಿದೆ(Vindhya and the Satpura Ranges)

Places to visit in Madhya Pradesh

ನೀವು ಇದನ್ನೂ ಓದಬಹುದು: ರಾಜಸ್ಥಾನದಲ್ಲಿ ನೋಡಬಹುದಾದ ತಾಣಗಳು

ಅಮರ್ಕಂತಕ್ ಎಂದರೆ ಶಿವ(Shiva) ನೆಲೆಸಿರುವ ಜಾಗ. ಇದು ಆದಿ ಶಂಕರಾಚಾರ್ಯರು(Adi Shankaracharya) ನೀಡಿದ್ದ ಹೆಸರು ಎಂದು ನಂಬಲಾಗಿದೆ.

ಗ್ವಾಲಿಯರ್ ಕೋಟೆ (Gwalior Fort)

ಗ್ವಾಲಿಯರ್ ಕೋಟೆ (Gwalior Fort)ಭಾರತದ(India) ಗ್ವಾಲಿಯರ್ ಹತ್ತಿರವಿರುವ ಒಂದು ಗಿರಿಕೋಟೆಯಾಗಿದೆ.

Places to visit in Madhya Pradesh

ಈ ಕೋಟೆಯು ಕನಿಷ್ಠಪಕ್ಷ 1೦ ನೇ ಶತಮಾನದಿಂದ ಅಸ್ತಿತ್ವದಲ್ಲಿದೆ, ಮತ್ತು ಈಗ ಕೋಟೆ ಆವರಣವೆಂದೆನಿಸಿಕೊಳ್ಳುವುದರ ಒಳಗೆ ಕಂಡುಬರುವ ಶಾಸನಗಳು ಹಾಗೂ ಸ್ಮಾರಕಗಳು ಇದು 6ನೇ ಶತಮಾನದ ಆರಂಭದಷ್ಟು ಮುಂಚಿತವಾಗಿಯೇ ಅಸ್ತಿತ್ವದಲ್ಲಿದ್ದಿರಬಹುದೆಂದು ಸೂಚಿಸುತ್ತವೆ.

ಭೇದಘಾಟ್ (Bhedaghat)

ಭೇದಘಾಟ್ ತನ್ನ ಅದ್ಭುತವಾದ ನೈಸರ್ಗಿಕ ಸೌಂದರ್ಯ, ಅಮೃತಶಿಲೆಯ ಬಂಡೆಗಳು ಮತ್ತು ನರ್ಮದಾ ನದಿಯ ಎರಡೂ ಬದಿಗಳಲ್ಲಿ ರೂಪಗಳಿಗೆ ಹೆಸರುವಾಸಿಯಾಗಿದೆ.ಭೇದಘಾಟ್ ಪ್ರಸಿದ್ಧ ಧುಂಧರ್ ಜಲಪಾತದ(Dhuandhar Falls) ನೆಲೆಯಾಗಿದೆ. ಆದಾಗ್ಯೂ, ಭೇದಘಾಟ್ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ.

Places to visit in Madhya Pradesh

ಸಾತ್ಪುರ ಹುಲಿ ಸಂರಕ್ಷಿತ (Satpura Tiger Reserve)

ಸತ್ಪುರಾ ಹುಲಿ ಸಂರಕ್ಷಿತ ಪ್ರದೇಶವು ಮಧ್ಯಪ್ರದೇಶದ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳಲ್ಲಿ(National Park) ಒಂದಾಗಿದೆ.

Places to visit in Madhya Pradesh

ಇದು ವೈವಿಧ್ಯಮಯ ವನ್ಯಜೀವಿ ಜನಸಂಖ್ಯೆ(Wildlife population) ಮತ್ತು ಅತ್ಯಾಕರ್ಷಕ ಸಫಾರಿಗಳಿಗೆ ಹೆಸರುವಾಸಿಯಾಗಿದೆಇದು 1300 ಕ್ಕೂ ಹೆಚ್ಚು ಜಾತಿಯ ಸಸ್ಯಗಳೊಂದಿಗೆ ಶ್ರೀಮಂತ ಜೈವಿಕ ವೈವಿಧ್ಯತೆಯನ್ನು ಹೊಂದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button