ಕಾರು ಟೂರುತುಂಬಿದ ಮನೆದೂರ ತೀರ ಯಾನವಿಂಗಡಿಸದ

ನಮ್ಮ ರಾಜ್ಯದಲ್ಲಿರುವ ಚೆಂದನೆಯ ಜಲಪಾತಗಳಿವು

ಜಂಜಾಟದ ಬದುಕಿನಿಂದ ಕೊಂಚ ವಿರಾಮಬೇಕು ಅಂತ ಬಯಸುವವರು ಹೆಚ್ಚು ಆಯ್ಕೆ ಮಾಡಿಕೊಳ್ಳುವುದು ಪ್ರವಾಸ(Traveling).

ನಿಸರ್ಗ ,ನದಿ ತೊರೆಗಳು ,ಬೆಟ್ಟ(Hills) ಗುಡ್ಡ ಬಹುತೇಕರ ಆದ್ಯತೆ. ಆ ಪಟ್ಟಿಯಲ್ಲಿ ಫಾಲ್ಸ್(WaterFalls) ಕೂಡ ಇದ್ದೆ ಇರುತ್ತದೆ. ನಮ್ಮ ರಾಜ್ಯದಲ್ಲಿಯೂ ನಿಮ್ಮ ಕಣ್ಮನ ಸೆಳೆಯುವ ಫಾಲ್ಸ್ ಗಳಿವೆ.

ಅಬ್ಬಿ ಜಲಪಾತ(Abbi Falls)

ಕೊಡಗು ಕರುನಾಡಿನ ಕಾಶ್ಮೀರ. ಪ್ರವಾಸಿಗರ ಸ್ವರ್ಗ. ಈ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಮಳೆಗಾಲದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕರ್ನಾಟಕದ ಜಾಗಗಳಲ್ಲಿ ಕೊಡಗು(kodagu) ಕೂಡ ಒಂದು.

Must Visit Waterfalls in Karnataka

ಈ ಜಿಲ್ಲೆಯ ಚೆಂದದ ತಾಣವೇ ಅಬ್ಬಿ ಜಲಪಾತ(Abbi falls). ಇದು ಒಂದು ಅದ್ಭುತವಾದ ಜಲಪಾತ. ಕಾವೇರಿ ನದಿಯ 20 ಅಡಿ ಎತ್ತರದಿಂದ ಬಂಡೆಯ ಮೇಲೆ ಧುಮುಕುತ್ತದೆ.

ಕೊಡಗು ಜಿಲ್ಲೆಯ ಜೋಡುಪಾಲ(Jodupala) ಗ್ರಾಮದಲ್ಲಿದೆ. ಮಡಿಕೇರಿ(Madikeri) ಪಟ್ಟಣದಿಂದ ಕೇವಲ ಏಳರಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ. ಮಡಿಕೇರಿಯ ನಾಯಕನ ಮಗಳು ಜೆಸ್ಸಿಯಾ ನೆನಪಿಗಾಗಿ ಬ್ರಿಟಿಷರು ಇದಕ್ಕೆ ‘ಜೆಸ್ಸಿ ಜಲಪಾತ’ (Jessy WatrerFalls) ಎಂದು ಹೆಸರಿಟ್ಟಿದ್ದರು.

ಸಿರಿಮನೆ ಫಾಲ್ಸ್ (Sirimane Falls)

ಶೃಂಗೇರಿಯ(Shringeri) ಸಮೀಪದ ಕಿಗ್ಗಾದಿಂದ(Kigga) 5 ಕಿ.ಮೀ ದೂರದಲ್ಲಿದೆ ಒಂದು ಪ್ರಸಿದ್ಧ ಪ್ರವಾಸಿ ತಾಣ. ಪಶ್ಚಿಮ ಘಟ್ಟದ(Western Ghats) ಅರಣ್ಯದಲ್ಲಿರುವ ಜನಪ್ರಿಯ ಜಲಪಾತಗಳು.

Must Visit Waterfalls in Karnataka

ಬೆಂಗಳೂರಿನಿಂದ (Bangalore) 300 ಕಿ.ಮೀ ಮತ್ತು ಕಿಗ್ಗಾ ನಿಂದ 5 ಕಿ.ಮೀ ದೂರದಲ್ಲಿದೆ. ಶೃಂಗೇರಿ ದೇವಾಲಯ, ಹೊರನಾಡು(Hornadu) ಅಗುಂಬೆ(Agumbe) ಮತ್ತು ಇತರ ಸ್ಥಳದೊಂದಿಗೆ ಭೇಟಿ ನೀಡಲು ಸೂಕ್ತವಾಗಿದೆ. ಇದು 40 ಅಡಿ ಎತ್ತರದಲ್ಲಿದೆ.

ಸಾತೋಡಿ ಜಲಪಾತ (Sathodi Falls)

ಸಾತೋಡಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ(Uttar Kannada) ಯಲ್ಲಾಪುರ(Yallapur) ತಾಲೂಕಿನಲ್ಲಿರುವ ಒಂದು ಜಲಪಾತ. ಇದು ಸಿರ್ಸಿಯಿಂದ(Sirsi) 72 ಕಿಲೋಮೀಟರ್ ದೂರದಲ್ಲಿದೆ. ಈ ಜಲಪಾತವು ದಟ್ಟ ಕಾನನದ ನಡುವೆ ಸೇರಿಕೊಂಡಿದೆ.

Must Visit Waterfalls in Karnataka

ಜೋಗ(Jog Falls)

ಜೋಗ (Jog) ಅಥವಾ ‘ಗೇರುಸೊಪ್ಪಿನ ಜಲಪಾತ (Gerusoppa)ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಶಿವಮೊಗ್ಗ (Shivamogga)ಜಿಲ್ಲೆಯ ಸಾಗರ(Sagar )ತಾಲೂಕಿನಲ್ಲಿದೆ.

Must Visit Waterfalls in Karnataka

ಇದು ಒಂದು ಪ್ರಮುಖ ಪ್ರವಾಸಿ ತಾಣ. ಜೋಗ ಜಲಪಾತವು ಸುಮಾರು 292ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ(Sharavati ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ.

ಗೋಕಾಕ ಜಲಪಾತ (Gokak Falls)

ಕರ್ನಾಟಕದ ಎರಡನೆ ದೊಡ್ಡ ಜಲಪಾತ. ಬೆಳಗಾವಿ (Belgavi)ಜಿಲ್ಲೆಯ ಗೋಕಾಕದಿಂದ 6 ಕಿ.ಮಿ. ದೂರದಲ್ಲಿರುವ ಈ ಜಲಪಾತವು ಘಟಪ್ರಭ (Ghataprabha)ನದಿಯಿಂದ ಉಂಟಾಗುತ್ತದೆ.

Gokak Falls

ಗೋಕಾಕ್ ಜಲಪಾತವು ಅಮೇರಿಕ ದೇಶದ ನಯಾಗರ(Nayagar)ಜಲಪಾತವನ್ನು ಹೊಲುವುದರಿಂದ ಇದನ್ನು ಭಾರತದ ನಯಾಗಾರವೆಂದು ಕರೆಯಲಾಗುತ್ತದೆ.

ಗಗನಚುಕ್ಕಿ ಮತ್ತು ಭರಚುಕ್ಕಿ(Gaganachukki and Bharachukki)

ಗಗನಚುಕ್ಕಿ(Gaganachukki )ಮತ್ತು ಭರಚುಕ್ಕಿಗೆ(Bharachukki )ಭೇಟಿ ನೀಡಲು ಅತ್ಯುತ್ತಮವಾದ ಸಮಯವೆಂದರೆ ಅದು ಜೂನ್(June )ತಿಂಗಳಿನಿಂದ ಸೆಪ್ಟೆಂಬರ್(September )ತಿಂಗಳ ನಡುವೆ.

Gaganachukki and Bharachukk

ಗಗನಚುಕ್ಕಿಯು ದೊಡ್ಡ ಬಂಡೆಗಳ ಮೂಲಕ ಹಾಲಿನ ನೊರೆಯಂತೆ ಸುಮಾರು 90 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ.
ಇನ್ನು ಭರಚುಕ್ಕಿಯು(Bharachukki )ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ನೆಲೆಸಿರುವ ಈ ಜಲಪಾಯತವು ಪ್ರವಾಸಿಗರ ಫೇವರೆಟ್ ಆಗಿದೆ.

ಒಟ್ಟಾರೆ ಶಿವನ ಸಮುದ್ರ(Shivanasamudra )ಜಲಪಾತವು ಕಾವೇರಿ ನದಿ(Kaveri )ನೀರಾಗಿದ್ದು, ಜಲಪಾತವನ್ನು ರೂಪಿಸಲು ಹರಿದು ಹೋಗುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ..

Related Articles

Leave a Reply

Your email address will not be published. Required fields are marked *

Back to top button