ದೂರ ತೀರ ಯಾನವಿಂಗಡಿಸದವಿಸ್ಮಯ ವಿಶ್ವ

ಹೊಸ ನಿಯಮಗಳನ್ನು ವಿಧಿಸಿ , ಭಾರತೀಯರ ಪ್ರವೇಶಕ್ಕೆ ಅಸ್ತುವೆಂದ ರಾಷ್ಟ್ರಗಳಿವು.

ಕೊರೋನಾ ವೈರಸ್ ಎರಡನೇ ಅಲೆಗೆ ಭಾರತ ಇದೀಗ ಕೊಂಚ ಸುಧಾರಿಸಿ ಕೊಳ್ಳುತ್ತಿದೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಇಳಿಕೆ ಕಾಣುತ್ತಿದೆ. ಇದು ಆಶಾದಾಯಕ ಬೆಳವಣಿಗೆ . ಹಲವು ದೇಶಗಳು ಕೊರೋನಾ ಕಾರಣದಿಂದ ಭಾರತೀಯರಿಗೆ ಪ್ರವೇಶ ನಿಷೇಧಿಸಿದ್ದವು.

ಕೆಲವು ದೇಶಗಳು ಇದೀಗ ಹೊಸ ನಿಯಮಗಳೊಂದಿಗೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ನೀವು ಈ ದೇಶಗಳಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದಲ್ಲಿ ಅಲ್ಲಿನ ಸರಕಾರವು ವಿಧಿಸಿರುವ ನಿಯಮವನ್ನು ತಪ್ಪದೇ ಪಾಲಿಸಿ.

  • ನವ್ಯಶ್ರೀ ಶೆಟ್ಟಿ

ಭಾರತದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಹಲವು ದೇಶಗಳು ಭಾರತೀಯರಿಗೆ ಪ್ರವೇಶವನ್ನು ನಿಷೇಧಿಸಿದೆ . ಆದರೆ ಇದೀಗ ಕೊರೋನಾ ಸಂಖ್ಯೆ ಕಡಿಮೆಯಾದ ಕಾರಣ ಹಲವು ದೇಶಗಳು ಭಾರತೀಯರಿಗೆ ಪ್ರವೇಶಕ್ಕೆ ಅಸ್ತು ಅಂದಿದೆ. ನೀವು ಈ ದೇಶಗಳಿಗೆ ಹೊರಡಲು ಸಿದ್ಧತೆ ಮಾಡಿಕೊಂಡಿದ್ದಲ್ಲಿ ಅಲ್ಲಿನ ದೇಶಗಳು ವಿಧಿಸಿರುವ ಹಲವು ನಿಯಮಗಳನ್ನು ತಪ್ಪದೇ ಪಾಲಿಸಿ.

ರಷ್ಯಾ (russia)

ರಷ್ಯಾ ದೇಶ ಭಾರತೀಯರಿಗೆ ತನ್ನ ದೇಶಕ್ಕೆ ಬರಲು ಅನುಮತಿ ನೀಡಿದೆ. ಆದರೆ ಭಾರತೀಯರು ರಷ್ಯಾ ದೇಶಕ್ಕೆ ಭೇಟಿಯನ್ನು ನೀಡಲು ಹಲವು ಹಂತಗಳನ್ನು ಪಾಲನೆ ಮಾಡಬೇಕು. ರಷ್ಯಾದ ಪ್ರವಾಸ ಕೈಗೊಳ್ಳುವ ಯೋಜನೆಯನ್ನು ನೀವು ಹಾಕಿ ಕೊಂಡಿದ್ದಲ್ಲಿ ಸರಕಾರಿ ಪ್ರವಾಸಿ ಸಂಸ್ಥೆಯ ಕೆಲವು ದಾಖಲಾತಿ ಗಳನ್ನು ಹೊಂದಿರಬೇಕು. ಇದರ ಜೊತೆ ೩೦ ದಿನಗಳ ಅವಧಿಯನ್ನು ಹೊಂದಿರುವ ಪ್ರವಾಸಿ ವೀಸಾ( tourist vissa) ನೀವು ಪಡೆದಿರ ಬೇಕು. ಕೋವಿಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ರಷ್ಯಾಕ್ಕೆ ಹೊರಡುವ ೭೨ ಗಂಟೆಗಳ ಹಿಂದೆ ನೀವು ಟೆಸ್ಟ್ ಕಡ್ಡಾಯವಾಗಿ ಮಾಡಿರಬೇಕು. ನೆಗೆಟಿವ್ ವರದಿ ಬಂದಲ್ಲಿ ಮಾತ್ರ ನಿಮಗೆ ಪ್ರಯಾಣಕ್ಕೆ ಅವಕಾಶ.

Russia Covid-19 Pandemic Negative report Indian Travellers

ಕೆಲವೇ ಕೆಲವು ವಿಮಾನಗಳು ಭಾರತದಿಂದ ರಷ್ಯಾಕ್ಕೆ ಸಂಚರಿಸಲಿದೆ. ಈ ಕಾರಣದಿಂದಾಗಿಯೇ ಪಯಣ ದರ ಕೊಂಚ ದುಬಾರಿ. ಇತ್ತ ರಷ್ಯಾ ದೇಶದಲ್ಲಿ ಕೂಡ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಭಾರತದಲ್ಲಿ ಕೊರೋನಾ ರೂಪಾಂತರಿ ಡೆಲ್ಟಾ ಪ್ರಕರಣಗಳ ಸಂಖ್ಯೆ ಕೂಡ ಏರಿಕೆ ಆಗುತ್ತಿದೆ. ಈ ಕಾರಣದಿಂದಾಗಿ ಪ್ರವಾಸಿಗರಿಗೆ ರಷ್ಯಾ ಮತ್ತೊಮ್ಮೆ ನಿಷೇಧ ಕೂಡ ಹೇರಬಹುದು. ಯಾವುದಕ್ಕೂ ನೀವು ಪಯಣ ಹೊರಡುವ ಮುನ್ನ ಎಲ್ಲವನ್ನೂ ಪರಿಶೀಲಿಸಿ ಹೊರಡಲು ಸಿದ್ಧರಾಗಿ.

ಟರ್ಕಿ (turkey)

ಭಾರತೀಯರಿಗೆ ಪ್ರವೇಶಕ್ಕೆ ಅನುಮತಿ ನೀಡಿರುವ ರಾಷ್ಟ್ರಗಳಲ್ಲಿ ಟರ್ಕಿ ಕೂಡ ಒಂದು. ಟರ್ಕಿ ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ೧೪ ದಿನಗಳ ಕಾಲ
ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಗೆ(institutional qurantain) ಒಳಗಾಗಿರಬೇಕು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಲ್ಲಿ ನೀವು ಕ್ವಾರಂಟೈನ್ ಮುಕ್ತ. ಆದರೆ ಟರ್ಕಿ ಪಯಣಕ್ಕೆ ಕೂಡ ವಿಮಾನ ದರ ದುಬಾರಿ ಆಗಲಿದೆ.

Turkey Covid-19 Pandemic Negative report Indian Travellers

ಈಜಿಪ್ಟ್ (Egypt)

ಈಜಿಪ್ಟ್ ದೇಶಕ್ಕೆ ಬರಲು ಇಚ್ಛಿಸುವ ಪ್ರವಾಸಿಗರಿಗೆ ಈಜಿಪ್ಟ್ ದೇಶ ಹಲವು ನಿಯಮಗಳನ್ನು ವಿಧಿಸಿದೆ. ಭಾರತದಲ್ಲಿ ಡೆಲ್ಟಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತವು ಸೇರಿದಂತೆ ಹಲವು ದೇಶಗಳ ಪ್ರವಾಸಿಗರಿಗೆ ಈಜಿಪ್ಟ್ ದೇಶ ಕೆಲವು ನಿಯಮ ವಿಧಿಸಿದೆ. ತನ್ನ ದೇಶಕ್ಕೆ ಬರುವ ಪ್ರವಾಸಿಗರಿಗೆ ರ‍್ಯಾಪಿಡ್ ಟೆಸ್ಟ್ (rypid test)
ಕಡ್ಡಾಯಗೊಳಿಸಿದೆ. ತನ್ನ ದೇಶಕ್ಕೆ ಬರುವ ಪ್ರವಾಸಿಗರಿಗೆ ೧೫ ನಿಮಿಷದ ID NOW ಎನ್ನುವ ಟೆಸ್ಟ್ ಕಡ್ಡಾಯಗೊಳಿಸಿದೆ ಈಜಿಪ್ಟ್ ಸರಕಾರ.

Egypt Covid-19 Pandemic Negative report Indian Travellers

ಐಸ್ಲ್ಯಾಂಡ್ (iceland)

ಯುರೋಪ್ ರಾಷ್ಟ್ರ ಐಸ್ಲ್ಯಾಂಡ್ ಕೂಡ ಭಾರತೀಯರ ಪ್ರವೇಶಕ್ಕೆ ಮುಕ್ತವೆಂದಿದೆ. ಆದರೆ ಐಸ್ಲ್ಯಾಂಡ್ ಲಸಿಕೆ (vaccine) ಮಾತ್ರ ಪಡೆದುಕೊಂಡವರಿಗೆ ಪೂರ್ಣ ಪ್ರಮಾಣದಲ್ಲಿ ತನ್ನ ದೇಶಕ್ಕೆ ಬರಲು ಅನುಮತಿ ನೀಡಿದೆ. ನೀವು ಎರಡು ಡೋಸ್ ಲಸಿಕೆಯನ್ನು ಪಡೆದುಕೊಂಡ ಸೂಕ್ತ ದಾಖಲಾತಿಯನ್ನು ಹೊಂದಿರಬೇಕು.

ನೀವು ಇದನ್ನು ಇಷ್ಟ ಪಡುಬಹುದು: ಭಾರತೀಯರಿಗೆ ಪ್ರವೇಶ ಮುಕ್ತವೆಂದ ಈ ನಾಲ್ಕು ರಾಷ್ಟ್ರಗಳು. ಆದರೆ, ನಿಯಮ ಪಾಲನೆ ಕಡ್ಡಾಯ.

ಲಸಿಕೆ ಪಡೆದ ದಾಖಲಾತಿ ನೀವು ಹೊಂದಿದ್ದಲ್ಲಿ ನಿಮಗೆ ಈ ರಾಷ್ಟ್ರಕ್ಕೆ ಅವಕಾಶ. ಲಸಿಕೆ ಪಡೆದ ಪ್ರಮಾಣ ಪತ್ರದ ಜೊತೆಗೆ ನೆಗಟಿವ್ ರಿಪೋರ್ಟ್ ನ್ನು ನೀವು ಪಡೆದು ಐಸ್ಲ್ಯಾಂಡ್ ದೇಶಕ್ಕೆ ಪಯಣ ಬೆಳೆಸಬಹುದು.ನೀವು ಈ ರಾಷ್ಟ್ರಕ್ಕೆ ಪ್ರವೇಶಿಸುವ ಮುನ್ನ ನಿಮಗೆ ಕೊರೋನಾ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗುತ್ತದೆ.

Island Covid-19 Pandemic Negative report Indian Travellers

ಈ ಎಲ್ಲ ನಿಯಮಗಳ ಜೊತೆಗೆ ಐಸ್ಲ್ಯಾಂಡ್ ರಾಷ್ಟ್ರಕ್ಕೆ ಪಯಣಕ್ಕೆ ಹೊರಡುವ ಮಕ್ಕಳು ಸೇರಿದಂತೆ ಎಲ್ಲ ಪಯಣಿಗರು ಸಂಬಂಧ ಪಟ್ಟ ಜಾಲತಾಣದಲ್ಲಿ ಮೊದಲೇ ನೋಂದಾವಣಿ ಮಾಡಿರಬೇಕು.

ಯು.ಕೆ (The U.k)

ಯು.ಕೆ ದೇಶ ಹಲವು ದೇಶಗಳನ್ನು ಕೆಂಪು ಪಟ್ಟಿಗೆ(red list) ಸೇರಿಸಿದೆ. ಕಾರಣ ಆ ದೇಶಗಳಲ್ಲಿ ಕೊರೋನಾ ಸಂಖ್ಯೆ ಹೆಚ್ಚಿದೆ . ಭಾರತ ಕೂಡ ಯು.ಕೆ ವಿಧಿಸಿರುವ ಕೆಂಪು ಪಟ್ಟಿಯ ಸಾಲಿನಲ್ಲಿದೆ . ನೀವು ಯು.ಕೆ ಪಯಣ ಬೆಳೆಸಬೇಕಾದರೆ ಐಸ್ಲ್ಯಾಂಡ್ ರಾಷ್ಟ್ರದಲ್ಲಿ ೧೦ಕ್ಕೂ ಹೆಚ್ಚು ದಿನಗಳನ್ನು ಕಳೆದಿರಬೇಕು. ನೀವು ಐಸ್ಲ್ಯಾಂಡ್ ನಲ್ಲಿ ೧೦ ದಿನ ತಂಗಿದ ಬಳಿಕ, ನಿಮ್ಮಲ್ಲಿ ಟೂರಿಸ್ಟ್ ವೀಸಾ ಇದ್ದರೆ ಮಾತ್ರ ನಿಮಗೆ ಯು.ಕೆ ದೇಶಕ್ಕೆ ಪ್ರವೇಶ.

The U.K Covid-19 Pandemic Negative report Indian Travellers

ಸೆರ್ಬಿಯಾ(serbia)

ಭಾರತೀಯರಿಗೆ ಪ್ರವೇಶಕ್ಕೆ ಅನುಮತಿ ನೀಡಿರುವ ರಾಷ್ಟ್ರಗಳಲ್ಲಿ ಸೆರ್ಬಿಯಾ ಕೂಡ ಒಂದು. ಸೆರ್ಬಿಯಾ ದೇಶಕ್ಕೆ ಹೊರಡಲು ಮನಸ್ಸು ಮಾಡಿರುವ ಪ್ರಯಾಣಿಕರು ಪ್ರಯಾಣ ಕೈಗೊಳ್ಳುವ ೪೮ ಗಂಟೆಗಳ ಮುನ್ನ ಕೊರೋನಾ ಪರೀಕ್ಷೆ ಮಾಡಿಸಿ, ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಭಾರತದಿಂದ ಸೆರ್ಬಿಯಾ ರಾಷ್ಟ್ರಕ್ಕೆ ಕೆಲವೇ ವಿಮಾನಗಳು ಸಂಚರಿಸಲಿದೆ. ನೀವು ಆ ವಿಮಾನಗಳಲ್ಲಿ ಸೆರ್ಬಿಯಾ ರಾಷ್ಟ್ರಕ್ಕೆ ಪಯಣ ಕೈಗೊಳ್ಳಬಹುದು.

Serbia Covid-19 Pandemic Negative report Indian Travellers

ನೀವು ಈ ಮೇಲಿನ ದೇಶಗಳಿಗೆ ಈ ಸಮಯದಲ್ಲಿ ಹೋಗುವ ಯೋಜನೆ ಹಾಕಿ ಕೊಂಡಿದ್ದಲ್ಲಿ ಅಲ್ಲಿನ ನಿಯಮಗಳನ್ನು ತಪ್ಪದೇ ಪಾಲಿಸಿ. ಆಯಾ ದೇಶಗಳು ವಿಧಿಸಿರುವ ನಿಯಮಗಳು ಕಾಲ ಕಾಲಕ್ಕೆ ಬದಲಾಗಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button