ಇವರ ದಾರಿಯೇ ಡಿಫರೆಂಟುವಿಂಗಡಿಸದಸ್ಫೂರ್ತಿ ಗಾಥೆ

ಸಿದ್ಧಮಾದರಿಗಳನ್ನ ತೊರೆದು ಮಹಿಳಾ ಸಬಲೀಕರಣಕ್ಕೆ ಸ್ಫೂರ್ತಿಯಾದ ಚಾಲಕಿ ನ್ಯಾನ್ಸಿ

ಚಾಲಕಿಯಾಗುವ ತನ್ನ ಬಾಲ್ಯದ ಕನಸನ್ನ ನನಸಾಗಿಸಿಕೊಂಡು, ಹಿಮಾಚಲದ ಪರ್ವತಗಳ ನಡುವೆ ರೂಪಗೊಂಡ ದಾರಿಯಲ್ಲಿ ದೈತ್ಯ ಬಸ್ಸುಗಳನ್ನ ಚಲಾಯಿಸುತ್ತಾ, ಮುಂದೊಂದು ದಿನ ಭವಿಷ್ಯದಲ್ಲಿ ಭಾರತೀಯ ಸೇನೆಯಲ್ಲಿ ಸೇರಿ  ಸೈನ್ಯದ ಟ್ರಕ್ಗಳನ್ನು ಓಡಿಸುವ  ಕನಸ  ಕಂಡ, ಮಹಿಳಾ ಸಬಲೀಕರಣವನ್ನ ಜಗಕೆ ಸಾರಿದ ನ್ಯಾನ್ಸಿ ಎಂಬ ಅಪರೂಪದ ಸಾಧಕಿಯ ಕಥೆ.

  • ಆದಿತ್ಯ ಯಲಿಗಾರ

ನೀವು ಮುಂದೊಮ್ಮೆ ಪರ್ವತ ಶ್ರೇಣಿಗಳ ನಡುವಣ ಒಂದು ಪುಟ್ಟ ಊರಾದ ಹಮೀರಪುರದಲ್ಲಿ  ಸಂಚರಿಸುವ ಸ್ಥಳೀಯ ಬಸ್ಸುಗಳಲ್ಲಿ  ಮಹಿಳಾ  ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿರುವ ೨೧ ವರ್ಷದ ನ್ಯಾನ್ಸಿ ಅವರನ್ನು ನೋಡಿ ಬೆರಗುಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಹಿಮಾಲಯ  ಸಾರಿಗೆ ಸಂಸ್ಥೆಯ  ಹಮ್ಮಿರ್ಪುರ ಬಸ್ ಡಿಪೊದ ಮೊದಲ ಮಹಿಳಾ ಚಾಲಕಿಯಾಗಿ ನೇಮಕಗೊಂಡು ಮಹಿಳಾ ಸಬಲೀಕರಣದ ಎಲ್ಲ ದಾರಿಗಳನ್ನು ತೆರೆದಿದ್ದಾರೆ.   

ಹಿಮಾಚಲ ಪ್ರದೇಶದ ಹಮೀರಪುರ ಎಂಬ ಸಣ್ಣ ಹಳ್ಳಿಯಿಂದ ಬಂದ ಅವರು, ಮಹಿಳೆಯರ ವಿರುದ್ಧ ನಿಗದಿಪಡಿಸಿದ ಎಲ್ಲಾ ಏಕರೂಪದ ಸಿದ್ಧಮಾದರಿಗಳನ್ನು  ಮುರಿದು ಮಹಿಳಾ ಸಬಲೀಕರಣದ ಹಾದಿಯಲ್ಲಿ  ಮುನ್ನಡೆದಿದ್ದಾರೆ.

Nancy Only Women Driver Of HRTC

ಬಾಲ್ಯದ ಕನಸ ನನಸಾಗಿಸಿಕೊಂಡ ನ್ಯಾನ್ಸಿ  

ಭಾರವಾದ ದೈತ್ಯ ಬಸ್ಸುಗಳನ್ನ ಹಿಮಾಚಲದ  ಇಕ್ಕಟ್ಟಾದ ದಾರಿಗಳಲ್ಲಿ ಅಚಲವಾದ ಆತ್ಮವಿಶ್ವಾಸದಿಂದ ಓಡಿಸಿ, ನ್ಯಾನ್ಸಿ ಅವರು ಎಲ್ಲರನ್ನೂ ಧಿಗ್ಬ್ರಮೆಗೊಳಿಸಿದರು. ಈ ಸಾಧನೆಯನ್ನ  ಕೈಗೊಳ್ಳಲು , ನ್ಯಾನ್ಸಿ ಎರಡು ತಿಂಗಳ ಕಾಲ ಹಿಮಾಚಲ ರಸ್ತೆ ಸಾರಿಗೆ ನಿಗಮದೊಂದಿಗೆ (HRTC) ತರಬೇತಿ ಪಡೆದರು ಮತ್ತು 17 ವಿದ್ಯಾರ್ಥಿಗಳ ತರಗತಿಯಲ್ಲಿ  ಏಕೈಕ ಮಹಿಳೆ. ಚಾಲಾಕಿಯಾಗುವುದು ನ್ಯಾನ್ಸಿ ಅವರ ಬಾಲ್ಯದ ಕನಸು, ತಾಯಿಯಿಂದ ಪ್ರೇರಿತರಾಗಿ ಮತ್ತು ಅವರ ಕುಟುಂಬದ ಬೆಂಬಲದಿಂದ ನ್ಯಾನ್ಸಿ ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡರು.

ಮುಂದೊಂದು ದಿನ ಸೈನ್ಯವ  ಸೇರುವಾಸೆ

ಜೀವನೋತ್ಸಾಹಿಯಾದ  ನ್ಯಾನ್ಸಿ  ಬಿ.ಕಾಂ ಪದವಿಯನ್ನ ಪಡೆದಿದ್ದಾರೆ ಮತ್ತು ಭವಿಷ್ಯದಲ್ಲಿ ಭಾರತೀಯ ಸೇನೆಯಲ್ಲಿ ಸೇರಿ  ಸೈನ್ಯದ ಟ್ರಕ್‌ಗಳನ್ನು ಓಡಿಸುವ  ಕನಸ  ಕಂಡಿದ್ದಾರೆ.   ಪುರುಷರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವ  ಮೂಲಕ, ಪ್ರಸ್ತುತ ಶತಮಾನದ ಮಹಿಳೆಯರು ಎಲ್ಲ  ಕ್ಷೇತ್ರಗಳಲ್ಲೂ ಪುರುಷರೊಂದಿಗೆ ಸರಿಸಮಾನವಾಗಿ  ಬೆಳೆಯುತ್ತಿದ್ದಾರೆ ಎಂದು ನ್ಯಾನ್ಸಿ ಸಾಬೀತುಪಡಿಸಿದ್ದಾರೆ.

ಯಾವ  ಕ್ಷೇತ್ರದಲ್ಲಿಯೂ  ಹಿಂದೆಯಿಲ್ಲ  ಮಹಿಳೆಯರು 

ನ್ಯಾನ್ಸಿ ಅವರಿಗೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಕಾರಣವನ್ನು ಕೇಳಿದಾಗ, ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಹಿಂದುಳಿಯುವುದಿಲ್ಲ ಎಂದು ಸಾಬೀತುಪಡಿಸಲು ತಾನು ಈ ಕ್ಷೇತ್ರವನ್ನು ಆರಿಸಿದೆ ಎಂದು ನ್ಯಾನ್ಸಿ ಹೇಳುತ್ತಾರೆ.

ನೀವುಇದನ್ನುಇಷ್ಟಪಡಬಹುದು: ಬೈಕ್ ನಲ್ಲಿ 6 ದೇಶ ಸುತ್ತಿದ ಹೈದರಾಬಾದಿನ ಜೈಭಾರತಿ: ಈ ಶತಮಾನದ ಮಾದರಿ ಹೆಣ್ಣು

ಅವರ ತರಬೇತಿ ಬೋಧಕ ಶ್ರೀ ಅಜಯ್ ಕುಮಾರ್ ಅವರು “ಚಾಲನಾ ಶಾಲೆಯಲ್ಲಿ ತರಬೇತಿ ಪಡೆಯುವಾಗ ಬಸ್ ಚಾಲನೆ ಮಾಡುವ  ಮತ್ತು ಅದರ ಭಾಗಗಳನ್ನು ನಿರ್ವಹಿಸುವ ಪ್ರಕ್ರಿಯೆಗಳನ್ನ ಕಲಿತರು” ಎಂದು ಹೇಳುತ್ತಾರೆ.

ಮಹಿಳಾ ಬಸ್ ಚಾಲಕರನ್ನು ನೇಮಿಸಿಕೊಳ್ಳುವಲ್ಲಿ ಹಿಮಾಲಯ ರಸ್ತೆ ಸಾರಿಗೆ ಸಂಸ್ಥೆ  ಸವಾಲುಗಳನ್ನು ಎದುರಿಸುತ್ತಿದೆ ಮತ್ತು ನ್ಯಾನ್ಸಿಗೆ ತರಬೇತಿ ನೀಡುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಎಚ್‌ಆರ್‌ಟಿಸಿಯ  ಆರ್‌ಎಂ ವಿವೇಕ್ ಲಖನ್‌ಪಾಲ್ ತಿಳಿಸಿದ್ದಾರೆ.

Nancy Only Women Driver Of HRTC

ಮತ್ತೊಬ್ಬ ಚಾಲಕಿಗೆ  ಸ್ಫೂರ್ತಿಯಾದ  ನ್ಯಾನ್ಸಿ

ಶಿಮ್ಲಾ ಡಿಪೋದಲ್ಲಿ ಎಚ್‌ಆರ್‌ಟಿಸಿಯ ಮೊದಲ ಮಹಿಳಾ ಚಾಲಕಿ ಸೀಮಾ ಠಾಕೂರ್‌ಗಿಂತ ನ್ಯಾನ್ಸಿ ಮೊದಲಿಗರು. ಸೋಲನ್ ಮೂಲದ ಸೀಮಾ ಅವರಿಗೆ ಮೊದಲು  ರಾಜ್ಯದೊಳಗೆ ಬಸ್ಸುಗಳನ್ನು ಓಡಿಸಲು ಮಾತ್ರ ಅನುಮತಿ ನೀಡಲಾಯಿತು. ನ್ಯಾನ್ಸಿ  ಅವರ ಚಾಲನಾ ಕೌಶಲ್ಯದಿಂದ ಪ್ರಭಾವಿತರಾದ ಸೀಮಾಳನ್ನು ಅಂತರರಾಜ್ಯ ಶಿಮ್ಲಾ-ಚಂದೀಘರ್  ಮಾರ್ಗಕ್ಕೆ ಬಡ್ತಿ ನೀಡಲಾಯಿತು.

ನಗರದಲ್ಲಿಯೇ ಇರಲಿ ಅಥವಾ ಪರ್ವತಗಳಲ್ಲಿಯೇ ಇರಲಿ ಇಲ್ಲಾ ಜಗತ್ತಿನ ಅದಾವ ಮೂಲೆಯಲ್ಲಿಯೇ ಇರಲಿ ಮಹಿಳೆ  ಎಂದೂ ಹಿಂದೆ ಉಳಿಯುವುದಿಲ್ಲ. ಎಲ್ಲ ಕಷ್ಟಗಳನ್ನ ಸವಾಲುಗಳನ್ನು ಎದುರಿಸಿ ಸ್ಫೂರ್ತಿದಾಯಕ ಕಥೆಗಳ ರೂವಾರಿಯಾಗಿ ಸದಾ ಎಲ್ಲರನ್ನೂ ಸ್ಫೂರ್ತಿಗೊಳಿಸುತ್ತಲೇ ಇರುತ್ತಾಳೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button