ಇವರ ದಾರಿಯೇ ಡಿಫರೆಂಟುಬಣ್ಣದ ಸ್ಟುಡಿಯೋವಿಂಗಡಿಸದಸ್ಫೂರ್ತಿ ಗಾಥೆ

ಮೊದಲ ಟ್ರಾನ್ಸ್ ವುಮೆನ್ ಫೋಟೋ ಜರ್ನಲಿಸ್ಟ್ ಜೋಯಾ ಥಾಮಸ್ ಲೋಬೋ

ತಂತ್ರಜ್ಞಾನ ಬೆಳೆದರೂ, ಅಭಿವೃದ್ಧಿ ಆಗುತ್ತಲಿದ್ದರೂ, ತೃತೀಯ ಲಿಂಗಿಗಳನ್ನು ನಾವು ನೋಡುವ ದೃಷ್ಟಿಕೋನ ಬದಲಾಗಿಲ್ಲ. ನಮ್ಮಂತೆ ಮನುಷ್ಯರು ಎಂಬ ಕನಿಷ್ಠ ಗೌರವವನ್ನೂ ಕೊಡದೆ, ಅವರನ್ನು ಸಮಾಜದಿಂದ ದೂರ ಇಡುತ್ತಲೇ ಬಂದಿದ್ದೇವೆ. ಆದರೂ ಅವರಲ್ಲಿ ಸಾಧನೆ ಮಾಡಿವರು ಇರುವುದು ವಿಶೇಷ. ಅಂತಹ ಒಬ್ಬ ಸಾಧಕಿಯ ಕಥೆ ಇದು.

ಮುಂಬೈನ ಸ್ಥಳೀಯ ರೈಲುಗಳಲ್ಲಿ ಒಂದು ದಶಕಗಳ ಕಾಲ ಭಿಕ್ಷೆ ಬೇಡಿ ಜೀವನೋಪಾಯ ಕಂಡುಕೊಂಡ ಜೋಯಾ ಥಾಮಸ್ ಲೋಬೋ, ಮೊದಲ ಟ್ರಾನ್ಸ್ ವುಮೆನ್ ಫೋಟೋ ಜರ್ನಲಿಸ್ಟ್ ಆಗಿ ಗುರುತಿಸಿಕೊಂಡ ಸ್ಫೂರ್ತಿ ಕಥೆ.

  • ಉಜ್ವಲ . ವಿ. ಯು.

ಕಷ್ಟ ಯಾರಿನ್ನೂ ಹೊರತಾಗಿಲ್ಲ. ಆದರೆ ಆ ಕಷ್ಟಗಳನ್ನು ಮೆಟ್ಟಿ , ಎಲ್ಲಾ ಕಟ್ಟುಪಾಡುಗಳನ್ನೂ ಮೀರಿ ತಮ್ಮ ಕನಸುಗಳಿಗೆ ಉತ್ಸಾಹ ಮತ್ತು ಆಸಕ್ತಿ ಎಂಬ ರೆಕ್ಕೆ ಅಂಟಿಸಿ ಎತ್ತರಕ್ಕೆ ಹಾರುವವರು ಲಕ್ಷಕ್ಕೊಬ್ಬರು ಮಾತ್ರ. ಅಂತಹ ಒಂದು ಸಾಧನೆಯನ್ನು ಮಾಡಿದವರು ಜೋಯಾ ಥಾಮಸ್ ಲೋಬೊ.

Pride Month Zoya Thomas Lobo
First Transgender PhotoJournalist Mumbai

ಬಾಲ್ಯದ ಬದುಕು:

ಮುಂಬೈನಲ್ಲಿ ಜನಿಸಿದ ಜೋಯಾ ಥಾಮಸ್ ಲೋಬೋ ಅವರಿಗೆ ತನ್ನ 11 ವರ್ಷದಲ್ಲಿಯೇ ತಾನು ಎಲ್ಲಾ ಹುಡುಗರಿಗಿಂತ ಭಿನ್ನ ಎಂಬ ಅರಿವು ಬಂದಿತ್ತು. ಅದೇ ಸಮಯದಲ್ಲೇ ತಂದೆಯ ಅಚಾನಕ್ ನಿಧನ ಮತ್ತು ತನ್ನ ಮತ್ತು ಅಕ್ಕನ ಜವಾಬ್ದಾರಿಯನ್ನು ಹೊತ್ತುಕೊಂಡ ಅಮ್ಮನಿಗೆ ಆ ವಿಚಾರವನ್ನು ತಿಳಿಸುವ ಧೈರ್ಯವನ್ನು ಜೋಯಾ ಮಾಡಲಿಲ್ಲ.

ಆದರೆ 17ನೇ ವಯಸ್ಸಿನಲ್ಲಿ ತನ್ನ ಗುರು ಸಲ್ಮಾ ಅವರನ್ನು ಭೇಟಿಯಾದ ಕ್ಷಣದಲ್ಲೇ, ಸಲ್ಮಾ ಅವರು ಜೋಯಾರ ವಿಭಿನ್ನತೆಯನ್ನು ಗುರುತು ಹಿಡಿದರು. ಹಾಗೇ ಅವರಿಗೆ ತಮ್ಮ ಮಂಗಳಮುಖಿ ಸಮುದಾಯವನ್ನೂ ಪರಿಚಯಿಸಿದರು.

ಇಷ್ಟು ದಿನ ಎಲ್ಲರಿಂದ ದೂರವೇ ಉಳಿದಿದ್ದ ಜೋಯಾಗೆ ಈ ಸಮುದಾಯ ಸಂಪೂರ್ಣವಾಗಿ ಒಪ್ಪಿಕೊಂಡಂತೆ ಭಾಸವಾಯಿತು. ಅವರಿಂದ ಮಂಗಳಮುಖಿ ಸಮುದಾಯದ ನಡೆ-ನುಡಿ, ಚಪ್ಪಾಳೆ ತಟ್ಟುವ ರೀತಿಗಳನ್ನು ಕಲಿತ ಜೋಯಾ, ತದನಂತರ ಮುಂಬೈನ ರೈಲು ನಿಲ್ದಾಣದಲ್ಲಿ ತನ್ನ ಭಿಕ್ಷಾಟನೆಯ ಬದುಕು ಆರಂಭಿಸಿದರು.

ಜೀವನೋಪಾಯಕ್ಕಾಗಿ ಭಿಕ್ಷೆ:

ಸಣ್ಣ ವಯಸ್ಸಿನಲ್ಲಿಯೇ ಸಮಾಜದ ಮಾನ-ಮರ್ಯಾದೆಗೆ ಅಂಜಿ ಕುಟುಂಬಗಳಿಂದ ಹೊರದೂಡಲ್ಪಡುವ ಮಂಗಳಮುಖಿಯರು ಹೊಟ್ಟೆಪಾಡಿಗಾಗಿ ಆಯ್ದುಕೊಳ್ಳುವುದು ಭಿಕ್ಷೆ. ಜೋಯಾ ಅವರೇ ಹೇಳುವಂತೆ, “ನಾನು ಹೊಟ್ಟೆಪಾಡಿಗಾಗಿ ಭಿಕ್ಷಾಟನೆಯನ್ನು ಆಯ್ದುಕೊಳ್ಳಬೇಕಾಯಿತು. ಮಂಗಳಮುಖಿಯರಿಗೆ ಈ ಸಮಾಜದಲ್ಲಿ ಯಾವುದೇ ಪ್ರತಿಷ್ಠಿತ ಕೆಲಸಗಳನ್ನು ಮಾಡಲು ಹಕ್ಕಿಲ್ಲ. ಆದ್ದರಿಂದ ನಾನು ಈ ಮಾರ್ಗವನ್ನು ಆಯ್ದುಕೊಂಡೆ” ಎಂದು.

Pride Month Zoya Thomas Lobo
First Transgender PhotoJournalist Mumbai

ಜೋಯಾ ಅವರು ಸುಮಾರು ಒಂದು ದಶಕಗಳ ಕಾಲ ಮುಂಬೈನ ರೈಲುಗಳಲ್ಲಿ ಭಿಕ್ಷೆ ಬೇಡಿ ಜೀವನ ನಡೆಸಿದ್ದಾರೆ. ಪುರುಷರ ಕೆಟ್ಟದೃಷ್ಠಿ ಹಾಗೂ ಕಠೋರ ಮಾತುಗಳಿಂದ ತಪ್ಪಿಸಿಕೊಳ್ಳಲು ಇವರು ಹೆಚ್ಚಾಗಿ ಲೇಡೀಸ್ ಕಂಪಾರ್ಟ್ ಮೆಂಟ್ ಗಳಲ್ಲಿ ಮಾತ್ರ ಭಿಕ್ಷೆ ಬೇಡುತ್ತಿದ್ದರು.

ಫೋಟೋಗ್ರಫಿ ಆಸಕ್ತಿಯನ್ನೇ ತನ್ನ ಗುರುತಾಗಿ ಮಾಡಿಕೊಂಡ ಜೋಯಾ ಲೋಬೋ

2018ರ ಯುಟ್ಯೂಬ್ ನಲ್ಲಿ ಹಿಜ್ರಾ ಶಾಪ್ ಕಿ ವರ್ದಾನ್  ಭಾಗ-1 ಕಿರುಚಿತ್ರವನ್ನು ವೀಕ್ಷಿಸುತ್ತಿದ್ದ ಜೋಯಾ ಅಲ್ಲಿಯ ಕಮೆಂಟ್ ನಲ್ಲಿ ಕಂಡ ತಪ್ಪುಗಳನ್ನು ಗುರುತಿಸಿದರು. ಇದು ಅವರನ್ನು ಕಿರುಚಿತ್ರದ ಭಾಗ-2 ದಲ್ಲಿ ನಟಿಸುವ ಅವಕಾಶವನ್ನು ತಂದುಕೊಟ್ಟಿತು. ಈ ಕಿರುಚಿತ್ರವು ಯೂಟ್ಯೂಬ್ ನಲ್ಲಿ  4 ಮಿಲಿಯನ್ ವೀಕ್ಷಣೆ ಗಳಿಸಿ, ಉತ್ತಮ ನಟನೆಗಾಗಿ ಜೋಯಾ ಅವರಿಗೆ ಪ್ರಶಸ್ತಿಯೂ ಒದಗಿಬಂದಿತು.

Pride Month Zoya Thomas Lobo
First Transgender PhotoJournalist Mumbai

ಆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅವರ ಭಾಷಣವನ್ನು ಮೆಚ್ಚಿಕೊಂಡ ಮಾಧ್ಯಮ ಕಂಪನಿಯೊಂದು ಅವರಿಗೆ ಜರ್ನಲಿಸ್ಟ್ ರಿಪೋರ್ಟ್ ಕಾರ್ಡ್ ಅನ್ನು ಒದಗಿಸಿತು.

ಆದರೆ ಆ ರಿಪೋರ್ಟ್ ಕಾರ್ಡನ್ನು ಹೇಗೆ ಬಳಸಬೇಕೆಂದು ತಿಳಿಯದ ಜೋಯಾ ಲೋಬೋ ಮತ್ತೆ ಸ್ಥಳೀಯ ರೈಲುಗಳಲ್ಲಿ ಭಿಕ್ಷೆ ಬೇಡಲು ಆರಂಭಿಸಿದರು. ಅದೇ ಸಮಯದಲ್ಲೇ ತನ್ನ ಭಿಕ್ಷಾಟನೆಯಿಂದ ಕೂಡಿಟ್ಟ ಸುಮಾರು 30,000 ರೂಪಾಯಿ ಹಣದಿಂದ ಮುಂಬೈ ಬಜಾರ್ ಒಂದರಲ್ಲಿ ಸೆಕೆಂಡ್ ಹ್ಯಾಂಡ್ ಕ್ಯಾಮೆರಾವನ್ನು ಖರೀದಿಸಿದರು.

ನೀವುಇದನ್ನುಇಷ್ಟಪಡಬಹುದು: ಫೋಟೋಗ್ರಫಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಗಳಿಸಿದ ಕುಡ್ಲದ ಹುಡುಗ ಫೋಟೋಗ್ರಾಫರ್ ಅಪುಲ್ ಆಳ್ವ ಇರಾ

2019 ರ ಮಂಗಳಮುಖಿ ರಕ್ಷಣೆ ಮತ್ತು ಸಮಾನ ಹಕ್ಕುಗಳನ್ನು ಕುರಿತಾದ ಪಿಂಕ್ ರ್ಯಾಲಿ ಅಲ್ಲಿ ಜೋಯಾ ಅವರು ಇಪಿಎ (ಯುರೋಪಿಯನ್ ಪ್ರೆಸ್ ಫೋಟೋ ಏಜೆನ್ಸಿ) ಯ ಹಿರಿಯ ಫೋಟೋ ಜರ್ನಲಿಸ್ಟ್ ಆದ ದಿವ್ಯಾಕಾಂತ್ ಸೋಲಂಕಿಯವರನ್ನು ಭೇಟಿಯಾದರು. ಜೋಯಾ ಅವರಿಂದ ಫೋಟೋಗ್ರಾಫಿಯ ಅನೇಕ ಸೂಕ್ಷ್ಮತೆಗಳನ್ನು ಕಲಿತರು.

ಆದರೂ ಸರಿಯಾದ ಅವಕಾಶಗಳು ಸಿಗದೇ ಭಿಕ್ಷಾಟನೆಯನ್ನೇ ಆಶ್ರಯಿಸಿದ್ದ ಜೋಯಾ ಅವರಿಗೆ 2020 ಹೊಸ ಬದುಕನ್ನೇ ಪರಿಚಯಿಸಿತು.

2020ರಲ್ಲಿ ಕೋವಿಡ್-19 ಕಾರಣದಿಂದ ಆದ ಲಾಕ್ಡೌನ್ ಭಿಕ್ಷಾಟನೆಯೇ ಗಳಿಕೆಯ ಆಧಾರವಾಗಿಸಿಕೊಂಡಿದ್ದ ಮಂಗಳಮುಖಿ ಸಮುದಾಯಕ್ಕೆ ಹೆಚ್ಚಿನ ಕಷ್ಟ ತಂದುಕೊಟ್ಟಿತ್ತು. ಈ ಕಷ್ಟದಿಂದ ಜೋಯಾ ಕೂಡಾ ಹೊರತಾಗಿರಲಿಲ್ಲ. ಆದರೆ ಹಿತೈಷಿಗಳ ಸಹಾಯದಿಂದ ಪಡಿತರ ಪಡೆಯುವ ಭರವಸೆ ಪಡೆದ ಜೋಯಾ ಅದನ್ನು ತರಲು ಹೋಗುತ್ತಿದ್ದಾಗ, ಬಾಂದ್ರಾ ಸ್ಟೇಷನ್ ನಲ್ಲಿ ಸುಮಾರು 2000 ವಲಸೆ ಕಾರ್ಮಿಕರು ತಮ್ಮ ಸ್ಥಳಗಳಿಗೆ ತಲುಪಲು ಪ್ರತಿಭಟನೆ ಮಾಡುತ್ತಿರುವುದನ್ನು ಕಂಡರು.

ಜೋಯಾ ತಕ್ಷಣ ತನ್ನ ಮನೆ ಓಡಿ, ತನ್ನ ಕ್ಯಾಮರಾ ತಂದು ಆ ದೃಶ್ಯ ವನ್ನು ಸೆರೆ ಹಿಡಿದರು. ಅವರು ತೆಗೆದ ಚಿತ್ರಗಳು ಸ್ಥಳೀಯವಾಗಿ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪತ್ರಿಕೆಗಳಲ್ಲಿ ಪ್ರಕಟವಾದವು. ಕೆಲವು ಪತ್ರಿಕಾ ಏಜನ್ಸಿ ಗಳು ಅವರನ್ನು ಗುರುತಿಸಿ ಅವರಿಗೆ ಫೋಟೋ ಜರ್ನಲಿಸ್ಟ್ ಕೆಲಸವನ್ನೂ ನೀಡಿದರು. ಇಂದು ಜೋಯಾ ಲೋಬೋ ಅವರು ಮೊದಲ ಟ್ರಾನ್ಸ್ ವುಮೆನ್ ಫೋಟೋ ಜರ್ನಲಿಸ್ಟ್ ಆಗಿ ಪ್ರಸಿದ್ಧರಾಗಿದ್ದಾರೆ.

Pride Month Zoya Thomas Lobo
First Transgender PhotoJournalist Mumbai

ಪ್ರಸ್ತುತ ಇನ್ಸ್ಟಾಗ್ರಾಮ್ ನಲ್ಲಿ 4200ಕ್ಕೂ ಅಧಿಕ ಅಭಿಮಾನಿಗಳನ್ನು ಹೊಂದಿರುವ ಜೋಯಾ ಕೋತಿ, ಪಕ್ಷಿಗಳಂತೆ ವನ್ಯಜೀವಿಗಳ ಜೊತೆಗೆ ಇತ್ತೀಚಿನ ಕೋವಿಡ್- 19 ಕಾಲದಲ್ಲಿ ಜನರ ಕಷ್ಟ, ಕೋರೋನಾ ವಾರಿಯರ್ಸ್ ಗಳ ಕೆಲಸ ಈ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ.

ಜೋಯಾ ಅವರ ಮುಂದಿನ ಗುರಿ:

ಜೋಯಾ ಅವರ ಭಿನ್ನತೆಯ ಕಾರಣ ತುಸು ದೂರವೇ ಉಳಿದಿದ್ದ ಅವರ ಅಕ್ಕ ಇಂದು ಅವರ ಕೆಲಸಗಳನ್ನು ಮೆಚ್ಚಿ ಅವರೊಂದಿಗೆ ಸಂತೋಷವಾಗಿದ್ದಾರೆ.

ಅವರ ಜೀವನದ ಏಕೈಕ ಗುರಿ ಎಂದರೆ ಈಗಾಗಲೇ ಬರೀ ಭಿಕ್ಷಾಟನೆಯೊಂದನ್ನೇ ಗಳಿಕೆಯ ಆಧಾರವಾಗಿಸಿಕೊಂಡಿರುವ ಮಂಗಳಮುಖಿಯರಿಗೆ ಫೋಟೋಗ್ರಾಫಿ ಕಲೆಯನ್ನು ಕಲಿಸಿ, ಅವರನ್ನು ನ್ಯಾಯಯುತ ಜೀವನವನ್ನು ನಡೆಸುವಂತೆ ಮಾಡುವುದು.

Pride Month Zoya Thomas Lobo
First Transgender PhotoJournalist Mumbai

ಹಾಗೇ ಅವರು ಈ ಸಮಾಜಕ್ಕೂ ಒಂದು ಕರೆ ನೀಡಲು ಬಯಸುತ್ತಾರೆ, “ಟ್ರಾನ್ಸ್ ಮಕ್ಕಳನ್ನೂ ತಮ್ಮ ಇತರ ಮಕ್ಕಳಂತೆ ವಿದ್ಯಾಭ್ಯಾಸ ನೀಡಿ ಪ್ರೀತಿಯಿಂದ ಸಾಕಿದರೆ, ಸ್ಥಳೀಯ ರೈಲು ಅಥವಾ ರಸ್ತೆಗಳಲ್ಲಿ ಭಿಕ್ಷಾಟನೆ ಮಾಡುವ ಸಂದರ್ಭ ಯಾವ ಮಂಗಳಮುಖಿಯರಿಗೂ ಬರುವುದಿಲ್ಲ. ಹಾಗಾಗಿ ಎಲ್ಲಾ ಕುಟುಂಬವೂ ತಮ್ಮ ಟ್ರಾನ್ಸ್ ಮಕ್ಕಳನ್ನು ಪ್ರೀತಿಸಿ ಪೋಷಿಸಬೇಕು” ಎಂದು.

ಮನಸ್ಸಿದ್ದರೆ ಮಾರ್ಗ ಎಂಬುದು ಎಷ್ಟು ನಿಜ ಅಲ್ವಾ? ಬಂದ ಕಷ್ಟಗಳನ್ನೆಲ್ಲಾ ಮೆಟ್ಟಿ ತನ್ನ ಫೋಟೋಗ್ರಾಫಿ ಆಸಕ್ತಿಯನ್ನೇ ತನ್ನ ಗುರುತಾಗಿ ಮಾಡಿಕೊಂಡ ಮೊದಲ ಟ್ರಾನ್ಸ್ ವುಮೆನ್ ಫೋಟೋ ಜರ್ನಲಿಸ್ಟ್ ಜೋಯಾ ಥಾಮಸ್ ಲೋಬೋ ಅವರು ನಮಗೊಂದು ಸ್ಪೂರ್ತಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

One Comment

Leave a Reply

Your email address will not be published. Required fields are marked *

Back to top button