ತುಂಬಿದ ಮನೆಮ್ಯಾಜಿಕ್ ತಾಣಗಳುವಿಂಗಡಿಸದಸ್ಮರಣೀಯ ಜಾಗ

ಅಜ್ಜಿಯ ಮನೆಯ ಬಾಡ ಸಮುದ್ರ ನನ್ನ ನೆಮ್ಮದಿ ತಾಣ: ಉತ್ತರ ಕನ್ನಡದ ಗುಡೇಅಂಗಡಿ ಎಂಬ ಸ್ವರ್ಗ

#ನನ್ನಿಷ್ಟದ ತಾಣ

ಉತ್ತರ ಕನ್ನಡದ ಕುಮಟಾ ತಾಲೂಕಿನ ಗುಡೇ ಅಂಗಡಿಯ ಬಾಡಸಮುದ್ರದ ಕತೆ ಇದು.

  • ಮಧುರಾ ಎಲ್ ಭಟ್

ಲಾಕ್ ಡೌನ್ ಆದಾಗಿನಿಂದ ಮನೆಯಲ್ಲಿಯೇ ಕುಳಿತು ಕುಳಿತು ಸಾಕಾಗಿ ಬಿಟ್ಟಿದೆ. ಮೊದಲೆಲ್ಲ ನಮಗೆ ಒಂದು ನಾಲ್ಕು ದಿನದ ರಜೆ ಸಿಕ್ಕರೆ ಅಜ್ಜಿಯ ಮನೆಗೆ ಹೋಗಲು ಕಾಲತುದಿಯಲ್ಲಿ ನಿಂತಿರುತ್ತಿದ್ದೆವು.

ಅದರಲ್ಲಿಯೂ ನಾನು ಬೇಸಿಗೆ ರಜೆ ಬಂತೆಂದರೆ ಸಾಕು ರಜೆ ಮುಗಿಯುವವರೆಗೂ ಅಜ್ಜಿಮನೆಯಲ್ಲಿಯೇ ಇದ್ದು ಬಿಡುತ್ತಿದ್ದೆ. ನಾನು ಮೊದಲು ನಿಮಗೆ ನನ್ನ ಅಜ್ಜಿ ಮನೆಯ ಬಗ್ಗೆ ಹೇಳುವೆ.

Gudeyangadi Beach Kumta
ಚಿತ್ರಕೃಪೆ : ಮಧುರಾ ಎಲ್ ಭಟ್

ಗುಡೇಅಂಗಡಿ ನನ್ನಜ್ಜಿ ಮನೆ

ನನ್ನ ಅಜ್ಜಿಯ ಮನೆ ಇರುವುದು ಉತ್ತರ ಕನ್ನಡ(Uttara Kannada) ಜಿಲ್ಲೆಯ ಕುಮಟಾ(Kumata) ತಾಲೂಕಿನ ಗುಡೇಅಂಗಡಿ(gudeangady) ಗ್ರಾಮದಲ್ಲಿ. ನನ್ನ ಅಜ್ಜಿ ಮನೆಯ ಸಮುದ್ರವನ್ನು ನಾವು ಬಾಡ ಸುಮುದ್ರ ಅಂತಲೆ ಕರೆಯುತ್ತಿದ್ದೆವು. ಅಲ್ಲಿ ನಾನು ನನ್ನ ಬೇಸಿಗೆ ರಜೆಯನ್ನು ಕಳೆಯಲು ಒಂದು ಕಾರಣವಿದೆ. ಅದೆ ಅಲ್ಲಿಯ ಸ್ಥಳಗಳು. ಇಲ್ಲಿ ನಮಗೆ ನೋಡಲು ಎಲ್ಲಾ ತರಹದ ಸ್ಥಳಗಳು ಇದ್ದವು.

Gudeyangadi Beach Kumta
ಚಿತ್ರಕೃಪೆ : ಮಧುರಾ ಎಲ್ ಭಟ್

ಸುಂದರ ಊರು

ಒಂದು ಕಡೆ ಕಡಲು ಇನ್ನೊಂದು ಕಡೆ ಗುಡ್ಡ ಒಂದು ಕಡೆ ಕಡಲು ಇನ್ನೊಂದು ಕಡೆ ಬೆಟ್ಟ ಮತ್ತೊಂದು ಕಡೆ ಎತ್ತರದ ಪ್ರದೇಶದ ಮೇಲಿರುವ ಕಂಚಿಕಾ ಪರಮೇಶ್ವರಿ ದೇವಸ್ಥಾನ.(kanchika parameshwari temple) ಹೀಗೆ ಇಲ್ಲಿ ಎಲ್ಲವೂ ಇದೆ.

ಆದರೆ ಇದೆಲ್ಲಕ್ಕಿಂತ ನನಗೆ ಮಾತ್ರ ಕಡಲು ಎಂದರೆ ಇಷ್ಟ. ಏಕೆಂದರೆ ನನ್ನ ಅಜ್ಜಿ ಮನೆಯಿಂದ ಬರಿ ಒಂದು 20 ಹೆಜ್ಜೆಗಳಲ್ಲಿ ಸಮುದ್ರವನ್ನು ತಲುಪಬಹುದಿತ್ತು. ಅಲ್ಲದೆ ಅಲ್ಲಿ ಯಾರ ಕಾಟವೂ ಇರುತ್ತಿರಲಿಲ್ಲ.

Gudeyangadi Beach Kumta
ಚಿತ್ರಕೃಪೆ : ಮಧುರಾ ಎಲ್ ಭಟ್

ಅಲ್ಲಿ ನಮಗೆ ಬೇಕಾದ ಸಮಯದಲ್ಲಿ ಬೇಕಾದ ಹಾಗೆ ಇರಬಹುದಿತ್ತು. ಅಲ್ಲದೆ ಅಲ್ಲಿ ಯಾವದೇ ಕೊಳಕುಗಳಾಗಲಿ ಪ್ಲಾಸ್ಟಿಕ್ ಗಳಾಗಲಿ ಇರುತ್ತಿರಲಿಲ್ಲ. ಅದು ತುಂಬಾ ಸ್ವಚ್ಛವಾಗಿತ್ತು. ಅದು ಅಲ್ಲಿಯ ವಿಶೇಷವೆಂದೇ ಹೇಳಬಹುದು. ನಾನು ಮತ್ತು ನನ್ನ ಸಂಬಂಧಿಕರು ಮುಸ್ಸಂಜೆಯ ವೇಳೆಗೆ ಸಮುದ್ರ ತೀರಕ್ಕೆ ಹೋದರೆ ಅಲ್ಲಿಂದ ಬರುವುದು ಸಂಪೂರ್ಣ ಕತ್ತಲಾದ ಮೇಲೆಯೇ.

ನೀವು ಇದನ್ನು ಇಷ್ಟಪಡಬಹುದು: ನನ್ನಿಷ್ಟದ ನೆಮ್ಮದಿಯ ತಾಣ ಧಾರವಾಡದ ಕೆಲಗೇರಿ ಕೆರೆ

Gudeyangadi Beach Kumta
ಚಿತ್ರಕೃಪೆ : ಮಧುರಾ ಎಲ್ ಭಟ್

ಬೇಸರ ತರಿಸದ ಬಾಡ ಸಮುದ್ರ

ನಾವು ದಿನ ದಿನವೂ ಅಲ್ಲಿಗೆ ಹೋಗುತ್ತಿದ್ದೆವಾದರೂ ಎಂದಿಗೂ ಆ ಸಮುದ್ರವನ್ನು ನೋಡುವುದು ನಮಗೆ ಬೇಸರವನ್ನು ತರಿಸುತ್ತಿರಲಿಲ್ಲ. ಅಲ್ಲಿ ಬರುವ ಅಲೆಗಳು ಒಂದೊಂದು ದಿನವೂ ಒಂದೊಂದು ಥರ ಕಾಣುತ್ತಿದ್ದವು. ಒಂದು ದಿನ ಅಲ್ಲಿ ಮುಳುಗುವ ಸೂರ್ಯ ದೊಡ್ಡದಾಗಿ ಕೆಂಪಾಗಿ ಕಂಡರೆ ಇನ್ನೊಂದು ದಿನ ಸಾಮಾನ್ಯವಾಗಿಯೇ ಕಾಣುತ್ತಿದ್ದ. ಸಮುದ್ರದಲ್ಲಿ ಕಾಲು ಜಾರಿ ಬಿದ್ದ ನೆನಪು.

Gudeyangadi Beach Kumta
ಚಿತ್ರಕೃಪೆ : ಮಧುರಾ ಎಲ್ ಭಟ್

ಬಾಲ್ಯದ ನೆನಪು

ಒಂದು ದಿನ ಹೀಗೆ ಸಮುದ್ರದ ಅಲೆಯಲ್ಲಿ(beach) ಆಟವಾಡಲು ಹೋಗಿ ಕಾಲು ಜಾರಿ ಬಿದ್ದು ಅಲೆಯ ಒಟ್ಟಿಗೆ ಬಳಿದುಕೊಂಡು ಹೋಗಿದ್ದು ಇದೆ. ಅಲ್ಲಿಂದ ಮನೆಗೆ ಬಂದಾಗ ವಿಷಯ ತಿಳಿದು ಬಾಸುಂಡೆ ಬರುವಷ್ಟು ಪೆಟ್ಟು ತಿಂದದ್ದನ್ನು ನೆನೆಸಿಕೊಂಡರೆ ಈಗಲೂ ಮೈ ಜುಮ್ ಎನ್ನುತ್ತದೆ.

Gudeyangadi Beach Kumta
ಚಿತ್ರಕೃಪೆ : ಮಧುರಾ ಎಲ್ ಭಟ್

ಮತ್ತೆ ಸಮುದ್ರಕ್ಕೆ ಕಾಲನ್ನೇ ಇಡುವುದಿಲ್ಲವೆಂದು ನಾನು ಆಗ ಪ್ರಮಾಣ ಮಾಡಿದ್ದು ಇದೆ. ಆದರೆ ಎಷ್ಟೆಂದರೂ ನಮ್ಮದು ಇಳೆ ವಯಸ್ಸಾಗಿದ್ದರಿಂದ ಬಿಸಿ ರಕ್ತ ಕುಳಿತಲ್ಲಿ ಕುಳಿತುಕೊಳ್ಳಲು ಮನಸ್ಸೇ ಬರುತ್ತಿರಲಿಲ್ಲ. ಕೊನೆಗೆ ಆ ಸುಡು ಬಿಸಿಲಿನಲ್ಲಾದರೂ ಎಲ್ಲರೂ ಮಧ್ಯಾಹ್ನದ ಊಟ ಮುಗಿಸಿ ಮಲಗಿದ ಮೇಲೆ ಎಲ್ಲರ ಕಣ್ಣು ತಪ್ಪಿಸಿಯಾದರೂ ಸಮುದ್ರದ ಭೇಟಿ ಮಾಡಿಯೇ ಮಾಡುತ್ತಿದ್ದೆವು.

Gudeyangadi Beach Kumta
ಚಿತ್ರಕೃಪೆ : ಮಧುರಾ ಎಲ್ ಭಟ್

ಆಟದ ಮೆರುಗು

ಸಾಮಾನ್ಯವಾಗಿ ನಾವು ಸಮುದ್ರಕ್ಕೆ ಹೋದಾಗ ಅಲ್ಲಿ ಸಿಗುವ ವಿಧವಿಧದ ಚಿಪ್ಪು, ಶಂಖ, ಕಲ್ಲು ಇತ್ಯಾದಿಗಳನ್ನು ಒಟ್ಟು ಹಾಕುವುದು ನಮ್ಮ ಸಮುದ್ರ ದಿನಚರಿಯಲ್ಲಿ ಒಂದಾಗಿತ್ತು. ಅಲ್ಲದೇ ನಾವು ಒಂದೊಂದು ದಿನವೂ ಒಂದೊಂದು ಆಟವನ್ನು ಆಡುತ್ತಿದ್ದೆವು. ಅಲ್ಲಿ ನಮ್ಮ ಆಟವನ್ನು ನೋಡಿ ಬೇರೆಯವರು ನಮ್ಮ ಜೊತೆಗೆ ಸೇರಿ ಆಟವಾಡುತ್ತಿದ್ದರು.

Gudeyangadi Beach Kumta
ಚಿತ್ರಕೃಪೆ : ಮಧುರಾ ಎಲ್ ಭಟ್

ಇದು ಹೊಸ ಸ್ನೇಹಿತರನ್ನು ಪಡೆಯಲು ಸಾಕ್ಷಿಯಾಗಿದ್ದು ಇದೆ. ಆದರೆ ಅಲ್ಲಿಂದ ತೆರಳುವ ಸಂದರ್ಭದಲ್ಲಿ ಒಂದಿಷ್ಟು ನಾವು ತೆಗೆದ ಛಾಯಾಚಿತ್ರದೊಂದಿಗೆ ಮನೆಗೆ ತೆರಳುತ್ತಿದ್ದೆವು. ಹೀಗೆ ನಮ್ಮ ಬೇಸಿಗೆಯ ರಜೆಯೆಲ್ಲ ಮೋಜು ಮಾಸ್ತಿಯಿಂದ ದಿನದ 3 ರಿಂದ 4 ತಾಸು ಸಮುದ್ರದಲ್ಲಿಯೇ ಕಳೆಯುತ್ತಿದ್ದೆವು. ಈಗ ಅದನ್ನೆಲ್ಲ ನೆನೆದುಕೊಂಡು ಆಗಿನ ಬಾಲ್ಯದ ಜೀವನ ಎಷ್ಟು ಸುಂದರವಾಗಿತ್ತು ಎನ್ನಬೇಕು ಅಷ್ಟೇ

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button