ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

ಭಾರತದ ಅತಿ ದೊಡ್ಡ 10 ಮಸೀದಿಗಳು: ರಂಜಾನ್ ಹಬ್ಬದ ವಿಶೇಷ

ಇಂದು ರಂಜಾನ್ ಹಬ್ಬ. ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದಾದ ರಂಜಾನ್ ಹಬ್ಬವನ್ನು ಧಾರ್ಮಿಕವಾಗಿ ಈದ್-ಉಲ್-ಫಿತರ್ ಎಂತಲೂ ಕರೆಯುತ್ತಾರೆ. ಒಂದು ತಿಂಗಳ ಕಠಿಣ ವ್ರತಾಚರಣೆಯ ಬಳಿಕ ಈದ್-ಉಲ್-ಫಿತರ್ ಆಚರಿಸಲಾಗುತ್ತದೆ. ಈಗ ತಲೆ ಎತ್ತಿರುವ ಸಂಕಷ್ಟದಲ್ಲಿ ಮನೆಯಿಂದಲೇ ಪ್ರಾರ್ಥನೆಗಳನ್ನು ಸಲ್ಲಿಸಬೇಕಾಗಿದೆ. ಮನೆಯಲ್ಲಿಯೇ ಕುಳಿತು ದೇಶದ ಅತಿದೊಡ್ಡ ಮಸೀದಿಗಳನ್ನು ಸುತ್ತು ಹಾಕಿಕೊಂಡು ಬರಲು ಈ ಲೇಖನ.

  • ಆದಿತ್ಯ ಯಲಿಗಾರ

1. ಜಮಾ ಮಸೀದಿ, ನವದೆಹಲಿ

ಜಮಾ ಮಸೀದಿ(Jama Masjid) ಭಾರತ ಮತ್ತು ವಿಶ್ವದ ಅತ್ಯಂತ ಪ್ರಸಿದ್ಧ ಮಸೀದಿಗಳಲ್ಲಿ ಒಂದಾಗಿದೆ. ಸುಮಾರು 25 ಸಾವಿರ ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುವ,1956 ರಲ್ಲಿ ಷಹಜಹಾನ್ ನಿರ್ಮಿಸಿದ ಈ ಮಸೀದಿಯ ಪ್ರಮುಖ ಆಕರ್ಷಣೆ ಇಲ್ಲಿನ 135 ಅಡಿ ಎತ್ತರ ಇರುವ ಮಿನಾರ್, ಇದು ಕೆಂಪು ಮರಳುಗಲ್ಲು ಮತ್ತು ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ನವದೆಹಲಿಯ(New Delhi) ಜಮಾ ಮಸೀದಿ ಭಾರತದ ಅತಿದೊಡ್ಡ ಮಸೀದಿಯಾಗಿದೆ.

2. ಮೆಕ್ಕಾ ಮಸೀದಿ, ಹೈದರಾಬಾದ್

ಭಾರತದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಮಸೀದಿಗಳಲ್ಲಿ ಒಂದಾದ ಮೆಕ್ಕಾ ಮಸೀದಿ(Mecca Masjid) 1694 ರಲ್ಲಿ ಮೆಕ್ಕಾದಿಂದ ರಫ್ತು ಮಾಡಿದ ಮಣ್ಣು ಮತ್ತು ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ. 75 ಅಡಿ ಎತ್ತರದ ಮಸೀದಿಯು ಒಂದೇ ಸಮಯದಲ್ಲಿ 10,000 ಜನರಿಗೆ ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಮಸೀದಿಯ ಹಿಂದೊಂದು ದಂತಕಥೆ: ಈ ಮಸೀದಿಯು ಕೊಳದ ಹತ್ತಿರ ಒಂದು ಚಪ್ಪಡಿಯ ಬೆಂಚ್ ಇದೆ, ಯಾರಾದರೂ ಆ ಚಪ್ಪಡಿ ಮೇಲೆ ಒಮ್ಮೆ ಕುಳಿತುಕೊಂಡರೆ, ಮತ್ತೆ ಅದರ ಮೇಲೆ ಕುಳಿತುಕೊಳ್ಳಲು ಹಿಂತಿರುಗುತ್ತಾರೆ ಎಂದು ಜನ ನಂಬುತ್ತಾರೆ.

3.ತಾಜ್-ಉಲ್-ಮಸಜೀದ್, ಭೋಪಾಲ್

ಭಾರತದ ಅತಿದೊಡ್ಡ ಮಸೀದಿಗಳಲ್ಲಿ ಒಂದಾಗಿದೆ, ಇದನ್ನು “ಮಸೀದಿಗಳ ಕಿರೀಟ” ಎಂದೂ ಕರೆಯಲಾಗುತ್ತದೆ. ಇದು ಭಾರತದ ಎಲ್ಲಾ ಮಸೀದಿಗಳಲ್ಲಿ (100,000 ಕ್ಕಿಂತ ಹೆಚ್ಚು) ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಮತ್ತು ಭಾರತದ ಅತಿದೊಡ್ಡ ಮಸೀದಿಗಳಲ್ಲಿ ಇದು ಒಂದು.

ನೀವುಇದನ್ನುಇಷ್ಟಪಡಬಹುದು: ನಿಮ್ಮ ಗಮನದಲ್ಲಿರಬೇಕಾದ, ಪ್ರಸ್ತುತ ನಿರ್ಮಾಣವಾಗುತ್ತಿರುವ 5 ಬೃಹತ್ ದೇಗುಲಗಳು

4.ಜಾಮಿಯಾ ಮಸೀದಿ, ಶ್ರೀನಗರ

ಜಾಮಿಯಾ ಮಸೀದಿ ಶ್ರೀನಗರದಲ್ಲಿರುವ(Jamia Masjid, Srinagar) ಭಾರತದ ಅತ್ಯಂತ ಪವಿತ್ರ ಮಸೀದಿಗಳಲ್ಲಿ ಒಂದಾಗಿದೆ ಮತ್ತು ಒಂದು ಸಮಯದಲ್ಲಿ 33,000 ಜನರಿಗೆ ಸ್ಥಳಾವಕಾಶ ಕಲ್ಪಿಸಬಲ್ಲದು. ಇದು ಭಾರತದ ಅತಿದೊಡ್ಡ ಮಸೀದಿಗಳಲ್ಲಿ ಅಗ್ರ ಐದನೆಯ ಸ್ಥಾನದಲ್ಲಿದೆ.

5. ಬಾರಾ ಇಮಾಂಬರಾ, ಲಕ್ನೋ

1784ರಲ್ಲಿ ಅವಧ್ ನವಾಬ್ ನಿರ್ಮಿಸಿದ ಮತ್ತು ಹೆಸರೇ ಸೂಚಿಸುವಂತೆ (ಬಾರಾ – ದೈತ್ಯವಾದ),300,000 ಕ್ಕೂ ಹೆಚ್ಚು ಜನರು ಪ್ರಾರ್ಥನೆಗಾಗಿ ಮಸೀದಿಯಲ್ಲಿ ಸೇರುವ ಸಾಮರ್ಥ್ಯ ಈ ಮಸೀದಿಯನ್ನು ಭಾರತದ ಅತಿದೊಡ್ಡ ಮಸೀದಿಯನ್ನಾಗಿ ಮಾಡುತ್ತದೆ.

ಮಸೀದಿಯ ಹಿಂದೊಂದು ದಂತಕಥೆ: ಮಸೀದಿಯ ಕೆಳಗಿರುವ ಸುರಂಗವು ಗೋಮತಿ ನದಿಗೆ ಅಥವಾ ಫೈಜಾಬಾದ್, ಅಲಹಾಬಾದ್ ಮತ್ತು ದೆಹಲಿಯಂತಹ ಸ್ಥಳಗಳಿಗೆ ಕೂಡಬಹುದು. ಇದನ್ನು ಅನ್ವೇಷಿಸಲು ಪ್ರಯತ್ನಿಸಿದವರು ನಿಗೂಢ ಕಣ್ಮರೆಗಳ ಕಾರಣ ಇದನ್ನು ನಿರ್ಬಂಧಿಸಲಾಗಿದೆ.

6. ಚೋಟಾ ಇಮಾಂಬರಾ, ಲಕ್ನೋ(Lucknow)

ಬಾರಾ ಇಮಾಂಬರಾ ಬಳಿ ಇರುವ ಚೋಟಾ ಇಮಾಂಬರಾ 1838ರಲ್ಲಿ ನಿರ್ಮಿಸಲಾಗಿದೆ. ಭಾರತದ ಅತಿದೊಡ್ಡ ಮಸೀದಿಗಳಲ್ಲಿ ಒಂದಾದ ಈ ಮಸೀದಿಯನ್ನು ಅವಧ್‌ನ ಮೂರನೆಯ ನವಾಬ್ ಮತ್ತು ಅವರ ತಾಯಿಯ ಸ್ಮರಣಾರ್ಥ ನಿರ್ಮಿಸಲಾಗಿದೆ.

7. ಜಮಾ ಮಸೀದಿ, ಭಿಲಾಯಿ

ಭಾರತದ ಅತಿದೊಡ್ಡ ಮಸೀದಿಗಳಲ್ಲಿ ಒಂದಾದ ಜಮಾ ಮಸೀದಿ, ಛತ್ತೀಸಗಢ ರಾಜ್ಯದ ಭಿಲಾಯಿ ನಗರದಲ್ಲಿದೆ. ಈ ಮಸೀದಿಯು ಅರೇಬಿಕ್ ಲಿಪಿಯಲ್ಲಿ “ಯಾ ಅಲ್ಲಾ” ಆಕಾರದಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ಮಸೀದಿಯಾಗಿದೆ.

8. ನಾಗಿನಾ ಮಸೀದಿ, ಆಗ್ರಾ

“ಜೆಮ್ ಮಸೀದಿ” ಎಂದೂ ಕರೆಯಲ್ಪಡುವ ಶಹಜಹಾನ್ ನಿರ್ಮಿಸಿದ ನಾಗಿನಾ ಮಸೀದಿ ಆಗ್ರಾ(Agra Fort) ಕೋಟೆಯಲ್ಲಿದೆ, ರಾಜಮನೆತನದ ಮಹಿಳೆಯರಿಗಾಗಿ ಮೂರು ಗುಮ್ಮಟಗಳು ಮತ್ತು ಭವ್ಯವಾದ ಕಮಾನುಗಳನ್ನು ಈ ಮಸೀದಿಯಲ್ಲಿ ನಿರ್ಮಿಸಲಾಗಿದೆ.

9. ಜಮಾ ಮಸೀದಿ, ಆಗ್ರಾ

ಜಾಮಿ ಮಸೀದಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಮಸೀದಿಯನ್ನು ಶಹಜಹಾನ್ ಅವರ ಮಗಳು ಜಹನಾರಾ ಬೇಗಂಗಾಗಿ ನಿರ್ಮಿಸಲಾಗಿದೆ. ಭಾರತದ ಅತಿದೊಡ್ಡ ಮಸೀದಿಗಳಲ್ಲಿ ಒಂದಾದ ಈ ಮಸೀದಿಯಲ್ಲಿ 10,000 ಜನರಿಗೆ ಪ್ರಾರ್ಥನೆ ಮಾಡಲು ಅವಕಾಶವಿದೆ.

10. ಹಾಜಿ ಅಲಿ ದರ್ಗಾ, ಮುಂಬೈ

ಮುಂಬೈನ ಅತ್ಯಂತ ಜನಪ್ರಿಯ ಆಕರ್ಷಣೆ ಮತ್ತು ಭಾರತದ ಪ್ರಸಿದ್ಧ ಮಸೀದಿಗಳಲ್ಲಿ ಒಂದು ಹಾಜಿ ಅಲಿ ದರ್ಗಾ. ಮಸೀದಿಯನ್ನು ದ್ವೀಪವೊಂದರಲ್ಲಿ ನೀರಿನಲ್ಲಿ ನಿರ್ಮಿಸಲಾಗಿದೆ. ಇದು ಮುಂಬೈನ ಕರಾವಳಿ ಪ್ರದೇಶವಾದ ವರ್ಲಿಯಿಂದ 500 ಮೀಟರ್ ದೂರದಲ್ಲಿದೆ ಮತ್ತು ಮೆರೈನ್ ಡ್ರೈವ್‌ನಿಂದ ಎಲ್ಲಿ ಬೇಕಾದಲ್ಲಿ ನಿಂತು, ಯಾವಾಗ ಬೇಕಾದರು ಈ ಮಸೀದಿಯನ್ನು ಕಾಣಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button