Moreವಿಂಗಡಿಸದ

ಜಪಾನ್ ಮಾರ್ಚ್ ನಲ್ಲಿ ಆರು ತಿಂಗಳ “ಡಿಜಿಟಲ್ ಅಲೆಮಾರಿ ವೀಸಾ” ಪರಿಚಯಿಸಲಿದೆ

ಜಪಾನ್ (Japan) ಹಿಂದಿನಿಂದಲೂ ದೇಶಕ್ಕೆ ಬರುವ ಪ್ರವಾಸಿಗರ ಕ್ಷೇಮಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ.

ಅಂತೆಯೇ ಈಗ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಆರು ತಿಂಗಳ ಡಿಜಿಟಲ್ ಅಲೆಮಾರಿ ವೀಸಾವನ್ನು (Digital nomad visa) ಪರಿಚಯಿಸಲು ಮುಂದಾಗಿದೆ.

ಜಪಾನ್ ಈ ಯೋಜನೆಯನ್ನು ಮಾರ್ಚ್ 2024ರಿಂದ (March 2024) ಆರಂಭಿಸಲಿದೆ. ಇದು ಒಟ್ಟು 49 ದೇಶಗಳ ನಾಗರಿಕರಿಗೆ ಆರು ತಿಂಗಳವರೆಗೆ ಜಪಾನ್ ನಲ್ಲಿ ವಾಸಿಸಲು ಅನುವು ಮಾಡಿಕೊಡುತ್ತದೆ.

ಈ ವೀಸಾಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದ ದೇಶಗಳು:

ಜಪಾನ್‌ನ ಡಿಜಿಟಲ್ ಅಲೆಮಾರಿ ವೀಸಾ 49 ದೇಶಗಳು ಮತ್ತು ಆ ಪ್ರಾಂತ್ಯಗಳ ನಾಗರಿಕರಿಗೆ ಮಾತ್ರ ಲಭ್ಯವಿರುತ್ತದೆ.

ಈ ಅರ್ಹ ರಾಷ್ಟ್ರ ಗಳ ಪಟ್ಟಿಯಲ್ಲಿ ನಮ್ಮ ದೇಶ “ಭಾರತ” (India) ಸದ್ಯಕ್ಕೆ ಇಲ್ಲ. ಈ ಪಟ್ಟಿಯಲ್ಲಿ ಜಪಾನ್ ದೇಶದೊಂದಿಗೆ ತೆರಿಗೆ ಒಪ್ಪಂದಕ್ಕೆ ಸಹಿ ಹಾಕಿದ ಅಥವಾ ಜಪಾನ್‌ಗೆ ಭೇಟಿ ನೀಡಿದಾಗ ವೀಸಾ-ವಿನಾಯಿತಿ ಪಡೆದ ರಾಷ್ಟ್ರಗಳು ಮಾತ್ರ ಸೇರಿವೆ.

ಈ ಪಟ್ಟಿಯಲ್ಲಿ ಎಲ್ಲಾ EU ದೇಶಗಳು, ಅರ್ಮೇನಿಯಾ, ಬೆಲಾರಸ್, ಜಾರ್ಜಿಯಾ, ಐಸ್ಲ್ಯಾಂಡ್, ಲಿಚ್ಟೆನ್‌ಸ್ಟೈನ್, ಮೊಲ್ಡೊವಾ, ಮೊನಾಕೊ, ಉತ್ತರ ಮ್ಯಾಸಿಡೋನಿಯಾ, ನಾರ್ವೆ, ಸೆರ್ಬಿಯಾ, ಸ್ವಿಟ್ಜರ್ಲೆಂಡ್, ಟರ್ಕಿ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿವೆ ಎಂದು ಯುರೋನ್ಯೂಸ್ ವರದಿ ಮಾಡಿದೆ.

ಈ ವೀಸಾ ಮುಖ್ಯವಾಗಿ ಐಟಿ ವೃತ್ತಿಪರರು ಮತ್ತು ಹೆಚ್ಚು ನುರಿತ ಉದ್ಯೋಗಿಗಳು, ಯುಟ್ಯೂಬರ್‌ಗಳು ಮತ್ತು ಸಾಗರೋತ್ತರ ಜಾಹೀರಾತುದಾರರಿಂದ ಆದಾಯವನ್ನು ಗಳಿಸುವವರಿಗೆ ಹೆಚ್ಚು ಉಪಯೋಗವಾಗಲಿದೆ.

ಯುರೋನ್ಯೂಸ್ ವರದಿ ಪ್ರಕಾರ, ಈ ಅಲೆಮಾರಿ ವೀಸಾವನ್ನು ಪಡೆಯಲು ಅರ್ಜಿದಾರನು ವಾರ್ಷಿಕವಾಗಿ ಕನಿಷ್ಠ 10 ಮಿಲಿಯನ್ ಜಪಾನೀಸ್ ಯೆನ್ (€62,672) ಗಳಿಸಬೇಕು ಮತ್ತು ಖಾಸಗಿ ಆರೋಗ್ಯ ವಿಮಾ ರಕ್ಷಣೆಯನ್ನು ಸಹ ಹೊಂದಿರಬೇಕು.

ಇದಲ್ಲದೇ, ಇದು ಕೇವಲ ಅರ್ಜಿದಾರನಿಗೆ ಮಾತ್ರ ಸೀಮಿತ ಆಗದೆ, ಅವರ ಮಕ್ಕಳು ಮತ್ತು ಸಂಗಾತಿಗಳು ಸೇರಿದಂತೆ ಕುಟುಂಬದ ಸದಸ್ಯರು ಸಹ ತಮ್ಮ ವಾಸ್ತವ್ಯದ ಸಮಯದಲ್ಲಿ ಡಿಜಿಟಲ್ ಅಲೆಮಾರಿಗಳನ್ನು ಉಪಯೋಗಿಸಲು ಅವಕಾಶವಿದೆ. ಆದರೆ ಸದಸ್ಯರು ಖಾಸಗಿ ವೈದ್ಯಕೀಯ ವಿಮೆ ಹೊಂದಿರಬೇಕು.

ಪೋರ್ಚುಗಲ್, ಕೆನಡಾ ಮತ್ತು ಜರ್ಮನಿ ಸೇರಿದಂತೆ ವಿವಿಧ ದೇಶಗಳು ಡಿಜಿಟಲ್ ಅಲೆಮಾರಿ ವೀಸಾಗಳನ್ನು ಪರಿಚಯಿಸಿವೆ. ಈಗ ಈ ಪಟ್ಟಿಯಲ್ಲಿ ಈಗ ಜಪಾನ್ ಕೂಡಾ ಸೇರಲಿದೆ.

ನಾವೂ ಇನ್ ಸ್ಟಾಗ್ರಾolಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button